ಮಂಜುಳಾ ಸುಬ್ರಹ್ಮಣ್ಯ ಈಗಾಗಲೇ ನೃತ್ಯ, ರಂಗಭೂಮಿಯಲ್ಲಿ ಸಾಕಷ್ಟು ಹೆಸರು ಮಾಡಿದವರು. ಅಷ್ಟೇ ಅಲ್ಲ, ನೃತ್ಯ ಹಾಗೂ ರಂಗಭೂಮಿ ಎರಡನ್ನೂ ಬೆಸೆಯುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿರುವವರು. ಹೊಸ ಪ್ರಯೋಗಗಳಿಗೆ ಸದಾ ಇಂಬಾಗಿರುವ ಇವರು ಕೊಟ್ಟ ಮತ್ತೊಂದು ಕಾಣಿಕೆ ‘ರಾಧೆ’
ಪುತ್ತೂರಿನ ಈ ಹುಡುಗಿ ಹೈದರಾಬಾದ್ ನಲ್ಲಿ ‘ಈಟಿವಿ’ ಚಾನಲ್ ನಲ್ಲಿ ಆಂಕರ್ ಆಗಿದ್ದಾಕೆ. ಹಾಗಾಗಿ ತನಗೊಲಿದು ಬಂದ ಅಷ್ಟೂ ಮಾಧ್ಯಮಗಳನ್ನು ಕಸಿ ಮಾಡಿ ಹೊಸ ಬಗೆಯ ಅನುಭವವನ್ನು ದೊರಕಿಸಿಕೊಡುವ ಕಲೆ ಈಕೆಗೆ ಗೊತ್ತು.
ರಂಗಭೂಮಿಗೆ ಹೊಸ ವ್ಯಾಕರಣವನ್ನು ಕೊಡಲು ಸದಾ ಹಂಬಲಿಸುವ ಶ್ರೀಪಾದ್ ಭಟ್ ‘ರಾಧೆ’ಗೆ ಕಣ್ಣು ನೀಡಿದವರು. ಶ್ರೀಪಾದ್ ಭಟ್ ಅವರ ನಾಟಕಗಳು ಎಂದರೆ ಕನ್ನಡ ರಂಗಭೂಮಿಗೆ ಸದಾ ಕುತೂಹಲ. ಈ ರಾಧೆಯೂ ಅಷ್ಟೇ ಕುತೂಹಲ ಹುಟ್ಟಿಸುವ ಪ್ರಯೋಗ. ಮೋಹನ್ ಸೋನಾ ಸಹಾ ಇದಕ್ಕೆ ಜೊತೆಯಾಗಿರುವುದು ನಾಟಕ ಅಥವಾ ಈ ಪ್ರಯೋಗ ಮಿಸ್ ಮಾಡಿಕೊಳ್ಳಲೇಬಾರದು ಎನ್ನುವುದಕ್ಕೆ ಇರುವ ಕಾರಣಗಳು.







0 Comments