-ಈ ಕನಸು ಗ್ರಾಮೀಣ ಪ್ರತಿಭೆಗಳಿಗೆ ವೇದಿಕೆಯಾಗಿ ರೂಪುಗೊಂಡಿರುವ ‘ಚೈತ್ರರಶ್ಮಿ’ ಮಾಸಪತ್ರಿಕೆಯು ತನ್ನ 6ನೇ ವರ್ಷಾಚರಣೆ ಅಂಗವಾಗಿ ‘ಚೈತ್ರರಶ್ಮಿ ಪ್ರಕಾಶನ’ದ ವತಿಯಿಂದ ಹೊಸ ಕಥೆಗಾರರಿಗಾಗಿ ರಾಜ್ಯಮಟ್ಟದ ಸಣ್ಣ ಕಥಾ ಸ್ಪರ್ಧೆ ಯನ್ನು ಆಯೋಜಿಸಿದೆ.
ಗ್ರಾಮೀಣ ಹಾಗೂ ಹೊಸ ಅವಕಾಶಗಳ ಹುಡುಕಾಟದಲ್ಲಿರುವ ಯುವ ಕಥೆಗಾರರನ್ನು ಪ್ರೋತ್ಸಾಹಿಸುವುದು ಈ ರಾಜ್ಯಮಟ್ಟದ ಕಥಾ ಸ್ಪರ್ಧೆಯ ಉದ್ದೇಶ. ಆಯ್ಕೆಯಾದ ಉತ್ತಮ ಹತ್ತು ಕಥೆಗಳನ್ನು ಪುಸ್ತಕರೂಪದಲ್ಲಿ ಪ್ರಕಟಿಸಲಾಗುವುದು. ಕಥೆಗಳು ಸ್ವತಂತ್ರವಾಗಿರಬೇಕು. ಬೇರೆಲ್ಲೂ ಪ್ರಕಟವಾಗಿರಕೂಡದು. ಆಸಕ್ತ ಕಥೆಗಾರರು 3000 ಪದಗಳ ಮಿತಿಯಲ್ಲಿ ಇರುವ ತಮ್ಮ ಕಥೆಯನ್ನು ಅಂಚೆ ಅಥವಾ ಈ ಮೈಲ್ ಮೂಲಕ ಡಿಸೆಂಬರ್ 30 ರ ಒಳಗೆ ತಲುಪುವಂತೆ ಕಳುಹಿಸಬೇಕು. ಡಿಸೆಂಬರ್ 30 ಕೊನೆಯ ದಿನ. ಕಥೆಗಳನ್ನು ಕಳುಹಿಸಬೇಕಾದ ವಿಳಾಸ: ರಾಮಚಂದ್ರ ಹೆಗಡೆ.ಸಿ.ಎಸ್. ಸಂಪಾದಕರು, ಚೈತ್ರರಶ್ಮಿ ಮಾಸಪತ್ರಿಕೆ `ನೆನಪು’ ನಂ. 33(172/3) 3ನೇ ಸಿ ಅಡ್ಡರಸ್ತೆ, ಕತ್ರಿಗುಪ್ಪ ಮುಖ್ಯರಸ್ತೆ. ವಿವೇಕಾನಂದನಗರ, ಬೆಂಗಳೂರು 560085 editor@chaitrarashmi.com ಕಳುಹಿಸಬಹುದು.]]>ರಾಜ್ಯಮಟ್ಟದ ಕಥಾ ಸ್ಪರ್ಧೆ


0 Comments