ರಶ್ಮಿ ತೆಂಡೂಲ್ಕರ್
ಖುಷಿಯ ಕ್ಷಣ…ಖುಷಿಯ ಹಣ…

ಆರಾಮ ಇಲ್ಲದಿರುವಾಗ ನೆಗೆಟಿವ್ ಯೋಚನೆಗಳು ಬರುವುದು ಸಹಜ. ಕೆಲದಿನದ ಹಿಂದೆ ನನಗೂ ಹಾಗೆ ಅನಿಸ್ತಾ ಇತ್ತು. ಆ ಹೊತ್ತಲ್ಲೇ ನಾವು ನಮ್ಮನ್ನು ಆದಷ್ಟು ಪಾಸಿಟಿವ್ ಆಗಿರಿಸೋಕೆ ಪ್ರಯತ್ನಿಸುವುದು ಕೂಡಾ…ಆ ಹೊತ್ತಲ್ಲಿ ನಮಗಾಗುವ ಪುಟ್ಟ ಪುಟ್ಟ ಖುಷಿಯನ್ನೂ ನಾವು ಎಂಜಾಯ್ ಮಾಡ್ತೀವಿ. ಆ ರೀತಿ ಖುಷಿಯಾಗುವಾಗ ಏನ್ಮಾಡ್ಬೇಕು ಗೊತ್ತಾ? ಡಬ್ಬದಲ್ಲಿ ಇದು ಖುಷಿಯ ಹಣ ಅಂತ ಹಾಕಿಡ್ಬೇಕು. ಇವತ್ತು ನಮಗಿಷ್ಟವಾದವರ ಜತೆ ಮಾತಾಡಿದೆ…ಡಬ್ಬಕ್ಕೆ ಒಂದೆರಡು ರುಪಾಯಿ, ಕ್ರಶ್ ಸ್ಮೈಲ್ ಕೊಟ್ಟ ..ತಗೋಳಪಾ..10 ರುಪಾಯಿ ಡಬ್ಬಕ್ಕೆ…ಒಂದೊಳ್ಳೆ ಪುಸ್ತಕ ಓದಿದ್ವಿ…20 ರುಪಾಯಿ ಡಬ್ಬಕ್ಕೆ!
ತಿಂಗಳ ಅಂತ್ಯದಲ್ಲಿ ಪಾಕೆಟ್ ಖಾಲಿಯಾಗಿ ವ್ಯಾಲೆಟ್ನಲ್ಲಿ ನೋಟಿಗಿಂತ ಜಾಸ್ತಿ ಎಟಿಎಂ ಮಿನಿ ಸ್ಟೇಟ್ಮೆಂಟ್ನ ಕಾಗದ ತುಂಬಿಕೊಂಡಾಗ ಹೀಗೆ ಸಂಗ್ರಹಿಸಿ ಹಣವನ್ನು ಎಣಿಸಿ ನೋಡಿ..ಸಂಬಳ ಬಂದಾಗ ಆಗುವ ಖುಷಿಗಿಂತ ಡಬ್ಬದಲ್ಲಿ ಕೂಡಿಟ್ಟ ಹಣ ನೀಡುವ ಸಂತೃಪ್ತಿ ಬೇರೆಯೇ ಇರುತ್ತೆ. ಅದನ್ನು ಎಣಿಸುವಾಗ ಖುಷಿ ಕೊಟ್ಟ ಕ್ಷಣಗಳು ಮತ್ತೊಮ್ಮೆ ನೆನಪಿಗೆ ಬಂದು ಡಬ್ಬಲ್ ಖುಷಿಯಾಗುತ್ತದೆ. ದುಡ್ಗೆ ದುಡ್ ತಾನೇ ಬೇಕು ಎಂದು ಚಿಂತಿಸುವ ಹೊತ್ತಲ್ಲಿ ಬದುಕು ಈಗ ಸುಲಭ ಅಂತ ಹೇಳೋಕೆ…ಇಷ್ಟು ಸಾಕಲ್ವಾ…






ಚೆನ್ನಾಗಿದೆ ನಿಜವಾಗಲು ಈ ಐಡಿಯಾ