ಶ್ರೀ ಸುಭಾಶ್ಚಂದ್ರ ಪಾಟೀಲ್ ಸ್ಮಾರಕ ಜನಕಲ್ಯಾಣ ಟ್ರಸ್ಟ್ರ್ ಪಾಳಾ ವತಿಯಿಂದ ಕೊಡಮಾಡುವ 3ನೇ ವರ್ಷದ ರಾಷ್ಟ್ರೀಯ, ರಾಜ್ಯ ಹಾಗು ಕಲ್ಯಾಣ ಕರ್ನಾಟಕ ವ್ಯಾಪ್ತಿಯ ‘ಬಸವ ಪುರಸ್ಕಾರಕ್ಕೆ’ (ಪುಸ್ತಕ) ಲೇಖಕರನ್ನು ಆಯ್ಕೆ ಮಾಡಲಾಗಿದೆ.
243 ಕೃತಿಗಳನ್ನು ಪ್ರಶಸ್ತಿಗೆ ಬಂದಿದ್ದವು.

ರಾಷ್ಟ್ರಿಯ ಬಸವ ಪುರಸ್ಕಾರಕ್ಕೆ: ಡಾ. ರಂಗಾರೆಡ್ಡಿ ಕೋಡಿರಾಂಪುರ ಅವರ ‘ಸಾಲು ಹೊಂಗೆಯ ತಂಪು’ ಡಾ. ಎಚ್.ಟಿ. ಪೋತೆ ಅವರ ‘ಬಯಲೆಂಬೋ ಬಯಲು’ ಸಿದ್ದರಾಮ ಹೊನ್ಕಲ್ ಅವರ ‘ನೂರೊಂದು ಅನುಭವ’ ಡಾ. ಪದ್ಮಾಕರ ಅಶೋಕ ಕುಮಾರ ಮಟ್ಟಿರವರ ‘ವಚನಕಾರ ಉರಿಲಿಂಗ ಪೆದ್ದಿ’ ಆಯ್ಕೆಯಾಗಿದೆ.
ಡಾ. ಅಜಿತ್ ಹರೀಶಿ ಅವರ ‘ಮೂಚಿಮ್ಮ’ ಲಿಂಗನಗೌಡ. ಹ.ದೇಸಾಯಿ ಅವರ ‘ಮಾನವಂತರ ಮಗಳು’ ಲಕ್ಷ್ಮಿಕಾಂತ ಮಿರಜಕರ ಅವರ ‘ಬಯಲೊಳಗೆ ಬಯಲಾಗಿ’ ಡಾ. ಗುರುದೇವಿ ಹುಲೆಪ್ಪನವರಮಠ ಅವರ ‘ಚಿತ್ಕಿರಣ ಚಿದ್ಬೆಳಗು’ ಎ.ಎನ್. ರಮೇಶ್ ಗುಬ್ಬಿ ಅವರ ‘ಕಾಡುವ ಕವಿತೆಗಳು’ ಕೃತಿಗಳು ರಾಜ್ಯ ಬಸವ ಪುರಸ್ಕಾರಕ್ಕೆ ಆಯ್ಕೆಯಾಗಿವೆ.
ಲಿಂಗಾರೆಡ್ಡಿ ಶೇರಿ ಅವರ ‘ಹರಿದ ಸೆರಗು’ ವೆಂಕಟೇಶ. ಕೆ. ಜನಾದ್ರಿ ಅವರ ‘ಎನ್ನಲ್ಲಿ ಏನುಂಟೆಂದು’ ಅಬ್ಬಾಸ್ ಅಲಿ ಎ. ನದಾಫ್ ಅವರ ‘ಭಾವ ಬಿಂದಿಗೆ’ ಶಿವರಂಜನ್ ಸತ್ಯಂಪೇಟೆ ಅವರ ‘ವಚನ ಹೃದಯ’ ಡಾ ಶರಣಮ್ಮ ಬಿ. ಪಾಟೀಲ ಅವರ ‘ಭೂಗರ್ಭ’ ಕೃತಿಗಳನ್ನು ಕಲ್ಯಾಣ ಕರ್ನಾಟಕ ಬಸವ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.






0 Comments