ಇಂದ:
ದೇವನೂರ ಮಹಾದೇವ.
53, 11ನೇ ಕ್ರಾಸ್, ನವಿಲು ರಸ್ತೆ, ಕುವೆಂಪುನಗರ, ಮೈಸೂರು – 23
ಗೆ,
ಶ್ರೀ. ಕೆ.ಆರ್.ರಾಮಕೃಷ್ಣ
ಆಯುಕ್ತರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು.
ಮಾನ್ಯರೆ,
ರಂಗಾಯಣದ ಕಲಾವಿದರು, ತಮ್ಮ ಆಯುಷ್ಯವನ್ನೇ ರಂಗಭೂಮಿಗೆ ತೆತ್ತುಕೊಂಡವರು, ತಮ್ಮ ವರ್ಗಾವಣೆಯನ್ನು ವಿರೋಧಿಸಿ ನಿನ್ನೆ ವಿಶ್ವರಂಗಭೂಮಿ ದಿನಾಚರಣೆಯನ್ನು ಕರಾಳ ದಿನವನ್ನಾಗಿ ಆಚರಿಸಿದ್ದಾರೆ. ಇದು ಅತ್ಯಂತ ಕರುಣಾಜನಕವಾದ ನೋವಿನ ಸಂಗತಿಯಾಗಿದೆ.
ರಂಗಾಯಣವು ಹುಟ್ಟುವ ಮುನ್ನ ಅದರ ಪಿತೃ ಬಿ.ವಿ. ಕಾರಂತರು ರಂಗಭೂಮಿಗೆ ಮುಡುಪಾದ ರೆಪರ್ಟರಿ ಘಟಕವೊಂದನ್ನು ಕಟ್ಟುವುದರ ಕನಸು ಕಂಡಿದ್ದರು. ಇಡೀ ರೆಪರ್ಟರಿ ಘಟಕದ ಕಲಾವಿದ ತಜ್ಞರನ್ನು ಒಂದೇ ದೇಹದ ಅವಯವಗಳಂತೆ ಭಾವಿಸಿದ್ದರು. ಕಾರಂತರು ಆ ಕನಸನ್ನು ನನಸು ಮಾಡಿದರು. ರಂಗಾಯಣವು ತನ್ನ ಏಳುಬೀಳುಗಳಲ್ಲಿ ಸಮಸ್ಯೆಗಳ ಸುಳಿಗಳಲ್ಲಿ ಬಸವಳಿದರೂ ಅದು ನೀಡಿದ ಪ್ರಯೋಗಗಳು, ಕಾಣ್ಕೆಗಳನ್ನು ನಾಡು ಕೃತಜ್ಞತೆಯಿಂದ ನೆನೆಪಿಸಿಕೊಳ್ಳಬೇಕಾಗಿದೆ. ಇಂಥದರಲ್ಲಿ ರಂಗಾಯಣದ ಒಂದೇ ದೇಹದ ರೆಪರ್ಟರಿ ಘಟಕವನ್ನು ತುಂಡಿರಿಸಿ ಎಸೆಯುವ ಕೃತ್ಯ ಜರುಗಿ ಬಿಟ್ಟದೆ. ಇದಾಗಬಾರದಿತ್ತು. ಸಕರ್ಾರ ಅಥವಾ ಅಧಿಕಾರಿಗಳು ‘ನಾಟಕ ಕರ್ನಾಟಕ, ರಂಗಘಟಕ, ಕಲಾಮಂದಿರ, ಮೈಸೂರು, ಎಂಬ ಮೂಲ ಪರಿಕಲ್ಪನೆ ನೋಡಿದ್ದರೆ ಅಥವಾ ರಂಗಾಯಣದ ಉದ್ಯೋಗ ಜಾಹಿರಾತಿನಲ್ಲಿ `ರಂಗಕಲೆಯ ಶ್ರೇಷ್ಠತೆಯ ಸಾಧನೆಗೆಂದು ಕರ್ನಾಟಕ ಸರ್ಕಾರವು ಯೋಜಿಸಿರುವ ಕರ್ನಾಟಕ ರಂಗಘಟಕಕ್ಕೆ, ಈ ಮುಂದಿನ ಹುದ್ದೆಗಳಿಗೆ ಅರ್ಜಿಯನ್ನು ಕರೆಯಲಾಗಿದೆ ‘ ಎಂಬ ಸರ್ಕಾರದ ಪ್ರಕಟಣೆಯನ್ನು ಗಮನಿಸಿದ್ದರೂ ಈ ಪ್ರಮಾದ ಜರುಗತ್ತಿರಲಿಲ್ಲ. ಅ & ಖ ರೂಲ್ನಲ್ಲೇ ಘಟಕ ಎಂದಿದೆ ಹಾಗೂ ಸ್ಥಳ ಕಲಾಮಂದಿರ ಮೈಸೂರು- ಎಂದಿದೆ, ಹಾಗಾಗಿ ಇದು ವರ್ಗಾವಣೆ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದಾಗುತ್ತದೆ. ಹಾಗಾಗಿ ಇದು ಕಣ್ತಪ್ಪಿನಿಂದ ಅಥವಾ ಎಚ್ಚರ ತಪ್ಪಿ ನಡೆದ ಕೃತ್ಯ ಎಂದು ನಾನು ಭಾವಿಸುತ್ತೇನೆ. ಇಲ್ಲದಿದ್ದರೆ ಇದು ಸೇಡಿನ ಕೃತ್ಯವಾಗಿಬಿಡುತ್ತದೆ.

ಸಕರ್ಾರವು ವಿಳಂಬ ಮಾಡದೆ ತಕ್ಷಣ ಕಾರ್ಯಪ್ರವೃತ್ತವಾಗಿ ರಂಗಾಯಣಘಟಕವನ್ನು ಉಳಿಸಿ ಮೂಲ ಆಶಯವನ್ನು ಕಾಪಾಡಬೇಕೆಂದು ವಿನಂತಿಸುತ್ತೇನೆ.
ಅಥವಾ ಸರ್ಕಾರವು ತನ್ನ ಮೂಲ ಪರಿಕಲ್ಪನೆ ರೆಫರ್ಟರಿ ಘಟಕವನ್ನು ಪುನರ್ಪರಿಶೀಲಿಸಿ ಹೊಸ ರೂಪ ಕೊಡುವುದಾದರೆ, ಅದನ್ನು ರಂಗಾಯಣದ ರೆಫರ್ಟರಿ ಘಟಕದ ಕಲಾವಿದರೊಡನೆ ಚರ್ಚಿಸಿಯೇ, ಅವರ ಅಭಿಪ್ರಾಯಗಳನ್ನು ಪರಿಗಣಿಸಿಯೇ ನಿರ್ಣಯ ತೆಗೆದುಕೊಳ್ಳಬೇಕಾಗುತ್ತದೆ ಎಂಬುದು-ಸೌಜನ್ಯಕ್ಕೂ ಅಲ್ಲ, ಮಾನವೀಯ ದೃಷ್ಟಿಕೋನವೂ ಅಲ್ಲ, ಕಾನೂನು ಪರಿಧಿಯಲ್ಲೇ ಇದು ಸಲ್ಲುತ್ತದೆ ಎಂದು ನಾನು ಭಾವಿಸುತ್ತೇನೆ.
ಪರಿಸ್ಥಿತಿಯು ದಿನೇದಿನೇ ಪ್ರಕ್ಷುಬ್ಧಗೊಳ್ಳುತ್ತಿರುವುದರಿಂದ ಕನ್ನಡ ಸಂಸ್ಕೃತಿ ಇಲಾಖೆಯೂ, ಕನ್ನಡ ಸಂಸ್ಕೃತಿ ಸಚಿವರೂ ಹಾಗೂ ಮುಖ್ಯಮಂತ್ರಿಗಳು ತುರ್ತು ಗಮನಕೊಡಬೇಕೆಂದು ವಿನಂತಿಸುತ್ತೇನೆ.
ವಂದನೆಗಳೊಡನೆ ತಮ್ಮ ವಿಶ್ವಾಸಿ
ದೇವನೂರ ಮಹಾದೇವ,
ಮೈಸೂರು,
28-03-2013







ದೇವನೂರು ಮಹಾದೇವ ಅವರ ಸಾಂಸ್ಕೃತಿಕ ಕಾಳಜಿ ಬಗ್ಗೆ ಯಾರಿಗೂ ಅನುಮಾನವಿಲ್ಲ. ಆದರೆ, ಅಂತಹವರ ಸಜ್ಜನಿಕೆಯನ್ನು ಬಳಸಿಕೊಂಡು, ಲಕ್ಷಾಂತರ ಜನರ ಮುಗ್ಧ ಜನರನ್ನು ತಮ್ಮ ಮೈಗಳ್ಳತನದಿಂದ ಯಾಮಾರಿಸುತ್ತಿರುವ, ಮತ್ತು ದಿಕ್ಕು ತಪ್ಪಿಸುತ್ತಿರುವ ರಂಗಾಯಣಪಡೆಯ ಹಠಮಾರಿತನಕ್ಕೆ ಏನನ್ನಬೇಕೋ ಅರ್ಥವಾಗುತ್ತಿಲ್ಲ.! ಒಟ್ಟಿನ ಬೆಳವಣಿಗೆ, ತೀರಾ ನೋವು ತರುವಂಥದ್ದು.
sir navu sarkara da adhikarashaiya viruddha horata maduthiruvudu e vishayavannu gamanavittu oodi pathrika madhyamagalu thappu arthavagi varadi maduthive kaleya mele sarkara ee rethi dhali madiddu nivu kandasi hagu vishayavannu spshtavagise kolli haga illi nimage samasyaya arivu aguthade konrgr sarkara yalla ranga thandada budake kai haka bahudu
vargavaneya vichara nantharaddu aa vishayavannu hiriya ranga karmigalu kulittu yogane rupisi vargavaneya prakriye kaigolali.egina ghatane aaluvvara hagu adhikari shaigala asamskruthika nithiyannu prathibimbisuthade horathu bere yanu alladiruvudu. modalu sarkarada,adhikarishaigala muda neethiyannu phrbalavagi virodisi samskruthiya swayattege bembalisi
Sir,
Rangayana’dha ittheechegina suddhi’gallannu keli, pathrikegalalli odhi thilidhiddhene.
Karanthara Moola aashaya’vannoo avaradhe ‘Athma-Kathe’yalli odhi arthaisikondiddhene.
Nanna prakara, Karantha’ra shishyaru Karnatakadhadhyaantha sancharisi, Hosa Hosa Ghataka prarambhisi hosa thalemaarige Ranga Preethi kalisi, matthe Ranga Kranthi ebbisabekhembudhu Karanthara Kanasagitthu.
Mangalore’nalli, kaledha halavaaru varsha’dhindha Ranga chatuvatike maaduthiddheve. Namma Mangalurinalli, Rangaayana Ghataka sthapane aagutthadheyendhu, Mangalore’na ithara Ranga premigalanthe, naaVoo chaathaka Pakshiyanthe kaayuthiddheVU. Aadhare, Rangayana’dha kela swartha kalavidhara sannathana matthu Nirdheshakara ola rajakeeya besara thandhidhe.
Vishwasadhondhige,
Shashiraj Rao Kavoor, Advocate, Mangalore,
President, Ranga Sangaathi (R.) Mangalore.