ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಂಗಾಯಣದ ಕಥೆ ಇಲ್ಲಿದೆ: ಪ್ರತಿಕ್ರಿಯೆಗೆ ಸ್ವಾಗತ

ಹೀಗೆ ಯಾಕಾಯ್ತು? ಯಾಕೆ ಹೀಗಾದರು?:
(ರಂಗಾಯಣ ಮೈಸೂರು- ರಂಗಸಮಾಜದ ಸದಸ್ಯರ ವಿವರಣೆ)


ಮಾನ್ಯ ರಾಮಕೃಷ್ಣ ಹೆಗಡೆಯವರು ಕನರ್ಾಟಕದ ಮುಖ್ಯಮಂತ್ರಿಗಳಾಗಿದ್ದಾಗ ರಂಗಜಂಗಮ ಬಿ.ವಿ.ಕಾರಂತರು ಮಹತ್ತರವಾದ ಧ್ಯೇಯವನ್ನಿರಿಸಿಕೊಂಡು ರಂಗಾಯಣವನ್ನು ಕಟ್ಟಿದರು. ಆಡಳಿತಾತ್ಮಕ ಹಾಗೂ ಆಥರ್ಿಕ ದೃಷ್ಟಿಯಿಂದ ಅದನ್ನು ಮುನ್ನಡೆಸುವ ಜವಾಬ್ದಾರಿ ಸರಕಾರದ್ದು. ಕಾರಂತರ ಕನಸುಗಳನ್ನು ಅನುಷ್ಠಾನಗೊಳಿಸುವ ಹಾಗೂ ರಂಗಾಯಣದ ಬೇಕುಬೇಡಗಳನ್ನು ಸರಕಾರಕ್ಕೆ ಶಿಫಾರಸು ಮಾಡುವ ಜವಾಬ್ದಾರಿ ರಂಗಸಮಾಜದ್ದು. ಆ ‘ಸಮಾಜ’ದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು, ಅಧಿಕಾರಿಗಳು, ಹಿರಿಯ ರಂಗಚಿಂತಕರು, ರಂಗಾಯಣದ ನಿದರ್ೇಶಕರು ಮೊದಲಾಗಿ ಸುಮಾರು ಇಪ್ಪತ್ತು ಮಂದಿ ಸದಸ್ಯರಿರುತ್ತಾರೆ.
ನಿಯೋಜನೆ ಯಾಕೆ?:
ರಂಗಾಯಣದ ಹಿರಿಯ ಕಲಾವಿದರು ರಾಜ್ಯದ ಇತರ ಕಡೆಗಳಲ್ಲಿ ಸ್ಥಾಪಿಸುವ ರಂಗಾಯಣದ ಪ್ರಾದೇಶಿಕ ಘಟಕಗಳಲ್ಲಿ ರಂಗಕೈಂಕರ್ಯ ಮಾಡಬೇಕೆಂದು ಕಳೆದ ಎಂಟು ವರ್ಷಗಳಿಂದ ರಂಗಸಮಾಜವು ಸರಕಾರಕ್ಕೆ ಹೇಳುತ್ತ ಬಂದಿದೆ. ಕಾರಣಾಂತರಗಳಿಂದ ಅದು ಮುಂದೂಡಲ್ಪಡುತ್ತಲೇ ಇತ್ತು. ಈ ಕ್ರಮ ಯಾಕೆ ಬೇಕು ಎಂಬ ಪ್ರಶ್ನೆ –
ಉತ್ತರ ನಮ್ಮದಲ್ಲ; ಸ್ವತಃ ಕಾರಂತರದೇ ಮಾತು:
ಇಲ್ಲಿ ಪಡೆವ ತರಬೇತಿ ಎಷ್ಟು ಪಕ್ಕಾ ಆಗಿರಬೇಕು ಅಂದರೆ ನಟ ರಂಗದ ಮೇಲೆ ಏನು ಮಾಡಿದರೂ ಕಲೆಯಾಗಬೇಕು. ಅದಕ್ಕಾಗಿ ಆರು ವರ್ಷ ಒಟ್ಟಿಗೇ ಇರಬೇಕು. ನಾಲ್ಕನೇ ವರ್ಷ ರೆಪರ್ಟರಿ ಹೊರಡಬೇಕು. ನಾಲ್ಕು ವರ್ಷದ ಮೇಲೆ ಮತ್ತೆ ಹೊಸ ಹುಡುಗರನ್ನು ತೆಗೆದುಕೊಳ್ಳಬೇಕು. ಅವರಿಗೆ ಎರಡು ವರ್ಷದ ಕಠಿಣ ತರಬೇತಿ. ಹಳೆಯ ವಿದ್ಯಾಥರ್ಿಗಳಲ್ಲೇ ಅತ್ಯುತ್ತಮರಾದವರನ್ನು ಪ್ರಾದೇಶಿಕ ರೆಪರ್ಟರಿಗೆ ಕಳಿಸಬೇಕು (‘ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ’ ಪು.421. ಪ್ರ.2003.).
ಈ ಕಾರಣಕ್ಕಾಗಿ ಮೈಸೂರಿನ ಹಿರಿಯ ಕಲಾವಿದರನ್ನು, ಹೊಸ ಕಲಾವಿದರಿಗೆ ತರಬೇತಿ ನೀಡಲು ನಿಯೋಜಿಸಲಾಗಿದೆಯೆ ಹೊರತು ವಗರ್ಾವಣೆಯಲ್ಲ. ಇದು ರಂಗ ಸಮಾಜದ ಆಶಯ ಹಾಗು ನಿಯಮಗಳಿಗೆ ಅನುಸಾರವಾಗಿದೆ.

ರಾಜ್ಯದ ಐದು ಕಡೆ ಯಾಕೆ ರೆಪಟರ್ಿಗಳಿರಬೇಕು?:
ಮೈಸೂರಿನ ನಡೆ ನುಡಿ ಬೇರೆ, ಮಂಗಳೂರಿನದೇ ಬೇರೆ, ಹೈದರಾಬಾದ್ ಕನರ್ಾಟಕ ಸೇರಿ-ಧಾರವಾಡ, ಬಳ್ಳಾರಿ ಕಡೆಗಳದೇ ಒಂದು ರೀತಿ ಬೇರೆ. ಎಂತಲೇ ಕರಾವಳಿ, ಬಯಲುಸೀಮೆ, ಗಡಿಭಾಗ, ಹಳೆಮೈಸೂರು-ಹೀಗೆ ನಾಲ್ಕು ಭಾಗ. ಬೆಂಗಳೂರು ರಾಜಧಾನಿಯಾಗಿರೋದರಿಂದ ಅದು ಇನ್ನೊಂದು ಭಾಗ.’ (ಅದೇ.ಪು.442)
ಇದು ಕಾರಂತರು ಕಂಡ ಕನಸು. ಇದೇ ನಮಗೆ ಆದರ್ಶ, ಆಶಯ ಮತ್ತು ಮಾರ್ಗಸೂಚಿ.
ನಿಯೋಜನೆ ಪ್ರಕ್ರಿಯೆ:
ಪ್ರಸನ್ನ ಅವರು ರಂಗಾಯಣದ ನಿದರ್ೇಶಕರಾಗಿದ್ದಾಗ ‘ಭಾರತೀಯ ಶಿಕ್ಷಣ ಕೇಂದ್ರ’ ಸ್ಥಾಪಿಸಿ, ಹೊಸ ಕಲಾವಿದರಿಗೆ ತರಬೇತಿ ನೀಡಲು ಕೆಲವರು, ರಂಗಾಯಣದ ನಾಟಕಗಳಲ್ಲಿ ಪಾತ್ರ ಮಾಡಲು ಇನ್ನುಳಿದವರು-ಹೀಗೆ ಕಲಾವಿದರನ್ನು ಎರಡು ವರ್ಗವಾಗಿ ವಿಂಗಡಿಸಲಾಗಿತ್ತು. ಚಿದಂಬರರಾವ್ ಜಂಬೆ ಅವರು ನಿದರ್ೇಶಕರಾಗಿದ್ದ ಕಾಲದಲ್ಲಿ ಮೊದಲಬಾರಿಗೆ ಕಲಾವಿದರ ವಗರ್ಾವಣೆಯ ಪ್ರಸ್ತಾವನೆ ಬಂದಿತ್ತು. ಶ್ರೀಮತಿ ಬಿ. ಜಯಶ್ರೀ ಅವರು ನಿದರ್ೇಶಕರಾಗಿದ್ದ ಕಾಲದಲ್ಲಿ ವಗರ್ಾವಣೆಯ ನಿರ್ಣಯವನ್ನು ಕೈಗೊಳ್ಳಲಾಗಿತ್ತು. ಅವರ ಕಾಲದಲ್ಲಿ ಆರಂಭಗೊಂಡ ಡಿಪ್ಲೊಮಾ ತರಗತಿಯ ಯೋಜನೆ ಲಿಂಗದೇವರು ಹಳೆಮನೆ ಅವರು ನಿದರ್ೇಶಕರಾಗಿದ್ದ ಕಾಲದಲ್ಲಿ ಮುಕ್ತ ವಿಶ್ವವಿದ್ಯಾಯದ ಸಹಯೋಗದೊಂದಿಗೆ ಜಾರಿಗೆ ಬಂತು. ರಂಗ ಸಮಾಜ ನಿರಂತರವಾಗಿ ಹೊಸ ಪ್ರತಿಭೆಗಳಿಗೆ ಮತ್ತು ತರಬೇತಿಗೆ ಗಮನ ಕೊಡುತ್ತಲೇ ಬಂದಿದೆ.
ಜಂಭೆಯವರ ಕಾಲದಿಂದ, ನಾಟಕ ಅಕಾಡೆಮಿಯ ಅಧ್ಯಕ್ಷರಾಗಿ ರಂಗಸಮಾಜದ ಸದಸ್ಯರಾಗಿದ್ದ ಬಿ.ವಿ. ರಾಜಾರಾಂ ಈ ಎಲ್ಲ ನಿರ್ಣಯಗಳನ್ನೂ ಅನುಮೋದಿಸಿದ್ದಾರೆ. ನಂತರ ಬಿ.ವಿ.ರಾಜಾರಾಂ ಅವರು ದಿನಾಂಕ.07.09.2011 ರಂದು ರಂಗಾಯಣದ ನಿದರ್ೇಶಕರಾಗಿ ಅಧಿಕಾರ ಸ್ವೀಕರಿಸಿದರು. ಒಂಉ ವಿಪಯರ್ಾಸವೆಂದರೆ ರಂಗಸಮಾಜ ನೀಡಿದ ಸಂಭಾವ್ಯ ನಿದರ್ೇಶಕರ ಪಟ್ಟಿಯಲ್ಲಿ ರಾಜಾರಾಂ ಅವರ ಹೆಸರನ್ನು ಸೂಚಿಸಿರಲಿಲ್ಲ. ದಿನಾಂಕ.13.06.2012ರ ರಂಗಸಮಾಜದ ಸಭೆಯಲ್ಲಿ ರಂಗಾಯಣದಲ್ಲಿರುವ ಹದಿನೆಂಟು ಕಲಾವಿದರಲ್ಲಿ ಆರು ಮಂದಿ ಧಾರವಾಡ ರಂಗಾಯಣದಲ್ಲೂ ಆರು ಮಂದಿ ಶಿವಮೊಗ್ಗ ರಂಗಾಯಣದಲ್ಲೂ ಮಿಕ್ಕ ಆರು ಮಂದಿ ಮೈಸೂರು ರಂಗಾಯಣದಲ್ಲೂ , ಹೊಸ ಪ್ರತಿಭೆಗಳಿಗೆ ತರಬೆೇತಿ ನೀಡಿ ರೆಪರೆಟರಿಯನ್ನು ಕಟ್ಟುವ ಕೆಲಸಗಳಿಗೆ ನಿಯೋಜಿಸಲು ತಿಮರ್ಾನಿಸಲಾಯಿತು. ಮುಂದುವರಿದ ಕ್ರಮವಾಗಿ ದಿನಾಂಕ.16.5.2012 ರ ಸಾರ್ವತ್ರಿಕ ಮಂಡಳಿಯ ಸಭೆಯಲ್ಲಿ ಮಂಡಿಸಿದ ಅನುಸರಣಾ ವರದಿಯಂತೆ ಕಲಾವಿದರ ವಗರ್ಾವಣೆ ಕುರಿತಂತೆ ಮೈಸೂರು ರಂಗಾಣ ನಿದರ್ೇಶಕರು, ಶಿವಮೊಗ್ಗ, ಧಾರವಾಡ ರಂಗಾಯಣಗಳಿಗೆ ತಲಾ 6 ಜನರಂತೆ ವಗರ್ಾವಣೆ ಮಾಡುವ ಬಗ್ಗೆ ಸಕರ್ಾರ ಹೊರಡಿಸಿದ ಆದೇಶದ ವಿಷಯವನ್ನು ಹಾಗೂ ಮಾನ್ಯ ಕಾರ್ಯದಶರ್ಿಗಳು ಮೌಖಿಕವಾಗಿ ಸದರಿ ವಿಷಯವನ್ನು ಕಲಾವಿದರಿಗೆ ತಿಳಿಸಿ, ಯಾವ ಕಲಾವಿದರು ಯಾವ ರಂಗಾಯಣದಲ್ಲಿ ಕೆಲಸ ಮಾಡಲು ಇಚ್ಚಿಸುತ್ತಾರೆ ಎಂಬ ಬಗ್ಗೆ ಮಾಹಿತಿಯನ್ನು ಪಡೆಯಲು ತಿಳಿಸಿದರು. ಅದರಂತೆ ದಿನಾಂಕ.22.03.2012 ರಂದು ಕಲಾವಿರೊಂದಿಗೆ ಈ ಕುರಿತು ಚಚರ್ಿಸಿಲಾಗಿದೆ ಎಂಬ ವಿಷಯವನ್ನು ನಿದರ್ೇಶಕರಾದ ಬಿ.ವಿ.ರಾಜಾರಾಂ ಸಭೆಯ ಗಮನಕ್ಕೆ ತಂದರು.

ಪತ್ರ ದಿನಾಂಕ.13.06.2012 ರ ಮುಖಾಂತರ ಕ್ರಮ ಕೈಕೊಳ್ಳಲು ಸಕರ್ಾರಒಪ್ಪಿಗೆ ನೀಡಿತು. ಆದರೆ ರಂಗಾಯಣದ ನಿದರ್ೇಶಕರು ಅದನ್ನು ಜಾರಿಗೆ ತರಲೇ ಇಲ್ಲ. ಅಥವಾ ಯಾಕೆ ಜಾರಿಗೆ ತರಲಿಲ್ಲ ಎಂದು ರಂಗಸಮಾಜಕ್ಕಾಗಲೀ ಸರಕಾರಕ್ಕಾಗಲೀ ತಿಳಿಸಲೂ ಇಲ್ಲ!
ಬಹುರೂಪಿಯ ಉತ್ಸವದ ನಂತರ, ಇನ್ನೊಮ್ಮೆ, ರಂಗಾಯಣ-25 ಕಾರ್ಯಕ್ರಮಗಳ ಬಳಿಕ ನಿಯೋಜನೆ ಮಾಡಲಾಗುವುದೆಂದು ಮೌಖಿಕವಾಗಿ ತಿಳಿಸಿದ್ದರು. ಅವರು ಎಂದೂ, ಯಾವ ಹಂತದಲ್ಲೂ ವಗರ್ಾವಣೆ/ನಿಯೋಜನೆಯನ್ನು ವಿರೋಧಿಸಿರಲಿಲ್ಲ ಅಥವಾ ವಗರ್ಾವಣೆಯ/ನಿಯೋಜನೆಯ ವಿಚಾರದಲ್ಲಿ ಯಾವ ಮಾಪರ್ಾಟನ್ನೂ ಸೂಚಿಸಿರಲಿಲ್ಲ. ಹೊಸ ನಾಟಕಗಳನ್ನೂ ಮಾಡಿಸದೆ, ವಗರ್ಾವಣೆ/ನಿಯೋಜನೆೆಯನ್ನೂ ಮಾಡಿಸದೆ ಇದ್ದ ಅವರ ವರ್ತನೆಗೆ ಬೇಸತ್ತ ಸರಕಾರ ಪತ್ರ ದಿನಾಂಕ.02.02.2013ರ ಮುಖಾಂತರ ಮಾನ್ಯ ನಿದರ್ೇಶಕರನ್ನು ಮತ್ತೊಮ್ಮೆ ಎಚ್ಚರಿಸುವ ತಿಳುವಳಿಕೆ ಪತ್ರ (ಶೋಕಾಸ್) ಜಾರಿ ಮಾಡಿತು. ಮಾನ್ಯ ನಿದರ್ೇಶಕರು ಆ ಪತ್ರದ ಬಗ್ಗೆಯೂ ದಿವ್ಯ ಮೌನ ವಹಿಸಿ ಅದನ್ನು ಕೂಡ ನಿರ್ಲಕ್ಷ್ಯ ಮಾಡಿದರು.
ಮಾಚರ್್ 16ರಂದು ಸಂಸ್ಕೃತಿ ಇಲಾಖೆಯ ಸಚಿವರೂ ಹಾಗೂ ರಂಗ ಸಮಾಜದ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ನಡೆದ ರಂಗಸಮಾಜದ ಸಭೆಯಲ್ಲಿ ನಿದರ್ೇಶಕರ ಅಸಡ್ಡೆಯನ್ನು ಗಮನಿಸಿ, ‘ಬಿ.ವಿ ಕಾರಂತರ ಐದು ಕಡೆಯ ರಂಗಾಯಣದ ಕನಸನ್ನು ಸಾಕಾರಗೊಳಿಸಲು ಕಲಾವಿದರಿಗೆ ಒದಗಿದ ಅವಕಾಶವನ್ನು ಯಾಕೆ ಜಾರಿಗೆ ತಂದಿಲ್ಲ? ಮುಂದಿನ ವರ್ಷಗಳಲ್ಲ್ಲಿ ಗುಲ್ಬರ್ಗ ಮತ್ತು ದಕ್ಷಿಣ ಕನ್ನಡ ರಂಗಾಯಣ ಪ್ರಾರಂಭವಾಗುವುದರಲ್ಲಿದೆ. ಸಕರ್ಾರದ ಇಷ್ಟೆಲ್ಲ ಯೋಜನೆಗಳಿಗೆ ಪೂರಕವಾಗಿ ಹಿರಿಯ ಕಲಾವಿದರ ಸಹಕಾರ, ಅನುಭವ ಮತ್ತು ಅವರ ಪ್ರತಿಭೆ ಅಗತ್ಯವಾಗಿ ಬೇಕಾಗಿದೆ. ಹೀಗಿರುವಾಗ ನೀವೆ ವಿಳಂಬಮಾಡುತ್ತ ಕಲಾವಿದರ ನಿಯೋಜನೆಯನ್ನು ತಡೆಹಿಡಿಯುತ್ತಿರುವುದರಿಂದ ರಂಗಾಯಣದ ಅಭಿವೃದ್ಧಿಗೆ ಸರಕಾರ ನಡೆಸುತ್ತಿರುವ ಪ್ರಯತ್ನಕ್ಕೆ ತಣ್ಣೀರೆರೆಚಿದಂತಾಗುವುದಿಲ್ಲವೆ? ಈ ಕ್ಷಣದಿಂದಲೇ ಕಲಾವಿದರ ನಿಯೋಜನೆಯ ಪ್ರಕ್ರಿಯೆ ತಕ್ಷಣ ಜಾರಿಗೊಳಿಸಿ’ ಎಂದು ಆಜ್ಞಾಪಿಸಿದರು. ವಿಶೇಷವೆಂದರೆ ಆ ಹಂತದಲ್ಲೂ ನಿದರ್ೇಶಕರಕರು ನಿಯೋಜನೆ ವಿಳಂಬಗೊಳಿಸುವಂತ ಸಬೂಬು ಹೇಳಿದರೆ ಹೊರತು ವಿರೋಧಿಸಲಿಲ್ಲ. ಸಕರ್ಾರ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕಲಾವಿದರ ನಿಯೋಜನೆಯ ಕಲಾವಿದರ ಆದೇಶವನ್ನು ಹೊರಡಿಸಿತು.
ನಿಯೋಜನೆ- ಮುಂದೇನು?
ಈಗಾಗಲೇ ಮೈಸೂರಿನಲ್ಲಿ ರಂಗ ಡಿಪ್ಲೋಮಾ ತರಬೇತಿ ನಡೆಯುತ್ತಿದೆ. ನಾಳಿನ ಕಲಾವಿದರತ್ತ ಗಮನ ಕೊಡಲಾಗುತ್ತಿದೆ. ಧಾರವಾಡ ಮತ್ತು ಶಿವಮೊಗ್ಗ ರಂಗಾಯಣಗಳಲ್ಲಿ ಹೊಸ ಪ್ರತಿಭೆಗಳಿಗೆ ತರಬೇತಿ ನೀಡಲು ಅಗತ್ಯವಾದ ಎಲ್ಲ ಸೌಲಭ್ಯಗಳೂ ಇವೆ. ತರಬೇತಿ ಆರಂಭವಾದ ನಂತರ ಅಗತ್ಯವಾದ ಹೆಚ್ಚುವರಿ ಸವಲತ್ತು ಒದಗಿಸಲು ಸಕರ್ಾರ ಸಿದ್ಧವಾಗಿದೆ. ಗುಲ್ಬಗರ್ಾ ಮತ್ತು ಮಂಗಳೂರು ರಂಗಾಯಣದ ರೂಪುರೇಷೆಗಳು ಸಿದ್ದವಾಗುತ್ತಿವೆ. ಆದರೆ ಪ್ರಮುಖವಾಗಿ, ವಿದ್ಯಾಥರ್ಿಗಳನ್ನು ಸೇರಿಸಿ ತರಬೇತಿ ಕೊಡುವ ಕೆಲಸವನ್ನು ಮೈಸೂರಿನ ಪರಿಣತ ಕಲಾವಿದರೇ ಮಾಡಬೇಕು. ಹೀಗೆ ಮಾಡಿದರೆ ಮಾತ್ರ ಕಾರಂತರ ಕನಸಿನ ರಂಗಾಯಣ ಸಮೃದ್ಧವಾಗಿ ಸದೃಡವಾಗಿ ಬೆಳೆಸಲು ಸಾಧ್ಯ.
ನಿಯೋಜನೆ-ಜವಾಬ್ದಾರಿ:
ಕಲಾವಿದರನ್ನು ನಿಯೋಜಿಸುವಾಗ ರಂಗಸಮಾಜ, ಕಲಾವಿದರಲ್ಲಿ ದಂಪತಿಗಳಿದ್ದು ಅವರು ನಿಯೋಜನೆಗೊಳ್ಳುವಾಗ ಪರಸ್ಪರ ಬೇರ್ಪಡದಂತೆ ಎಚ್ಚರಿಕೆ ವಹಿಸಲಾಗಿದೆ. ನಿಯೋಜನೆಗೊಂಡ ಪ್ರತಿ ಕಲಾವಿದರು ತರಬೇತಿಯಲ್ಲಿ ತೊಡಗಿಸಿಕೊಳ್ಳುವ ಕಾರಣವನ್ನು ಮನಗಂಡು, ಪ್ರತಿ ತಿಂಗಳು ತಲಾ ಎಂಟು ಸಾವಿರ ರೂಪಾಯಿಗಳ ಹೆಚ್ಚುವರಿ ಸಂಬಳವನ್ನು ಸರಕಾರ ಘೋಷಿಸಿದೆ. ಅಂದರೆ ಪ್ರತಿಯೊಬ್ಬ ಕಲಾವಿದರೂ ಅವರು ಪಡೆಯುವ ಸಂಬಳಕ್ಕಿಂತ ಎಂಟು ಸಾವಿರ ರೂಪಾಯಿಗಳಷ್ಟು ಹೆಚ್ಚಿಗೆ ಸಂಬಳ ಪಡೆಯುತ್ತಾರೆ
ಕಲಾವಿದರು ಮತ್ತು ಶಿಸ್ತು:
ರಂಗಾಯಣದ ಒಬ್ಬೊಬ್ಬ ಕಲಾವಿದರೂ ಕಾರಂತರು ನಿಭಾಯಿಸಿದ ರಂಗಕಾರ್ಯವನ್ನು ಯಶಸ್ವಿಯಾಗಿ ನಿಭಾಯಿಸಬಲ್ಲರು. ಮೈಸೂರಿನಲ್ಲಿ ಅವರ ಪ್ರತಿಭೆ ಎಲ್ಲರಿಗೂ ಮನವರಿಕೆಯಾಗಿದೆ. ಇನ್ನವರು ಮಾಡಬೇಕಾದ ಕೆಲಸವೆಂದರೆ ತಮ್ಮ ಪ್ರತಿಭೆಯನ್ನು ಇತರ ಕಡೆಗಳ ರಂಗಾಯಣಗಳ ಮೂಲಕ ಮುಂದಿನ ಪೀಳಿಗೆಗೆ ರವಾನಿಸುವುದು
ಅದಕ್ಕೆ ವಿರುದ್ಧವಾಗಿ ಕಲಾವಿದರು ಮನಸ್ಸು ಮಾಡಿದ್ದಾರೆಯೇ?
ಈ ಕಲಾವಿದರು, ಒಂದೊಮ್ಮೆ ತಮ್ಮ ತಂದೆ ಸಮಾನರಾದ ಕಾರಂತರನ್ನೇ ‘ನೀವು ಸುಮ್ಮನೆ ಕುಳಿತುಕೊಳ್ಳಿ ಸಾರ್'(ಅದೇ.ಪು.450)ಎಂದು ಬೆದರಿಸಿದ್ದರು. ಆಗ ಕಾರಂತರು ಮನಸಾರೆ ಅಂದುಕೊಂಡ ಮಾತು: ‘ಆಗಲೇ ನಾನಿಲ್ಲಿ ಮಿಸ್ಫಿಟ್ ಆಗಿದ್ದೇನೆ ಅನ್ನಿಸ್ತು, ಹುಡುಗರೆಲ್ಲ ಈ ತರಹ ಮಾತನಾಡೋವಾಗ! ಪೀಳಿಗೆಗಳ ಅಂತರದ ಅನುಭವವಾಯಿತು. ನನಗೊಂದು ಸಲ ಬಚಾಯಿಸಿ ಕೊಳ್ಳಬೇಕಾಗಿತ್ತು. ಬಚಾಯಿಸಿಕೊಳ್ಳೋದೆಂದರೆ ಸತ್ತ ಹಾಗೆ, ಆದರೂ. ನಾನು ಆದಷ್ಟು ಬೇಗ ಅಲ್ಲಿಂದ ಹೊರಡೋದೇ ಒಳ್ಳೆಯದೆನಿಸಿತು.’ (ಅದೇ.ಪು.450) ಕಾರಂತರ ಮನಸ್ಸು ಅದೆಷ್ಟು ನೊಂದಿರಬೇಕು. ಅಂದಿನ ದಿನಗಳಲ್ಲೇ ಕಾರಂತರನ್ನು ಧಿಕ್ಕರಿಸಿದ ಕಲಾವಿದರು ಇಂದು ಅವರ ಭಾವ ಚಿತ್ರ ಇಟ್ಟು ಮುಷ್ಕರ ಹೂಡಿರುತ್ತಾರೆ !
ಹೀಗೆ ಯಾಕಾಯ್ತು? ಯಾಕೆ ಹೀಗಾದರು?
ಕಾರಂತರ ಐದು ರಂಗಾಯಣಗಳ ಕನಸು ಸಾಕಾರಗೊಳ್ಳದಿರಬಹುದೆಂಬ ಸಂದೇಹ ಕಾರಂತರನ್ನು ಕಾಡುತ್ತಿತ್ತು. ಯಾಕೆಂದರೆ. ವಾಸ್ತವವಾಗಿ ರಂಗಾಯಣದಲ್ಲೀಗ ಎಲ್ಲರಿಗೂ ತಮ್ಮ ತಮ್ಮ ಕೆಲಸಗಳನ್ನು ಮಾಡುತ್ತಾ ಬೇರೆ ಬೇರೆ ರೀತಿಯಲ್ಲಿ ಹೆಸರು ಮಾಡುವುದು, ಬೇರೆ ಕಡೆ ನಾಟಕ ಮಾಡುವುದು ಮುಖ್ಯವಾಗಿದೆ. ರಂಗಾಯಣಕ್ಕೆ ಹೆಸರು ತರಬೇಕೂಂತ ಯಾರಿಗೂ ಇಲ್ಲ, ಒಬ್ಬರೂ ನಿತ್ಯ ಎಕ್ಸರ್ಸೈಸ್ ಮಾಡೋಲ್ಲ. ಎಲ್ಲ ಹತ್ತು ಗಂಟೆಗೆ ಬರ್ತಾರೆ. ಹಾಜರಿ ಹಾಕ್ತಾರೆ’ (ಅದೇ. ಪು.453).
ಕಲಾವಿದರ ಬಗ್ಗೆ ಅಂದೇ ನೊಂದು, ಪಶ್ಚಾತ್ತಾಪ ಪಟ್ಟು ನುಡಿದ ಕಾರಂತರ ಮಾತುಗಳು:
ನಿಜವಾಗಿಯೂ ರಂಗಾಯಣದ ಒಬ್ಬೊಬ್ಬರನ್ನೇ ನೆನೆದರೂ-ಹೀಗೆ ಯಾಕಾಯ್ತು? ಯಾಕೆ ಹೀಗಾದರು? ಯಾಕೆ ಹೀಗೆ ಮಾತಾಡಿದರು? ಮಾತಾಡ್ತಾರೆ?-ಅಂತ ಆಶ್ಚರ್ಯ. ಆಶ್ಚರ್ಯ ಅಂದೆ, ಶಾಕ್ ಅಲ್ಲ. ಅಥವಾ ಪ್ರೀತಿ ಕಡಿಮೆ ಆಗೋದೂ ಅಲ್ಲ. ಚೈಲ್ಡಿಶ್ ಎನ್ನಿ, ಚೈಲ್ಡ್ ಲೈಕ್ ಎನ್ನಿ..ಏನೆಂದರೂ ಸರಿಯೆ. ಹೆಸರಿಸಲಾಗದ ಆಶ್ಚರ್ಯವದು.(ಅದೇ. ಪು. 455)
ರಂಗಗೆಳೆಯ ಮತ್ತು ರಂಗಾಯಣ ನಿದರ್ೇಶಕ ಡಾ|| ರಾಜಾರಾಮ್:
ಕಲಾವಿದರು ಎಚ್ಚತ್ತುಕೊಂಡಿದ್ದರು. ಕಾರಂತರ ಕನಸನ್ನು ಸಾಕಾರಗೊಳಿಸಲು ಹೊರಟಿದ್ದರು. ‘ಮೂರು ರಂಗಾಯಣಗಳ ಮೂಲಕವಾದರೂ ಕಾರಂತರ ಋಣ ತೀರಿಸೋಣ ಎಂಬ ತವಕದಲ್ಲಿ ಕಲಾವಿದರಿದ್ದರು. ಆದರೆ ಡಾ. ರಾಜಾರಾಮ್, ಈ ಕಲಾವಿದರ ಆಲೋಚನೆಗಳಿಗೆ ಯಾವ ಮಾರ್ಗದರ್ಶನವನ್ನೂ ನೀಡಲಿಲ್ಲ. ಅಥವ ಯಾವ ನಿಧರ್ಿಷ್ಟ ಪಯರ್ಾಯ ಸೂತ್ರಗಳೂ ಬರಲಿಲ್ಲ. ಈ ನಿಯೋಜನೆಯನ್ನು ರದ್ದುಪಡಿಸಬೇಕೆಂದು ಅವರು ಎಂದೂ ಪ್ರಯತ್ನ ಪಟ್ಟಿಲ್ಲ. ಈ ಬಗ್ಗೆ ರಂಗ ಸಮಾಜಕ್ಕಾಗಲಿ ಸರಕಾರಕ್ಕಾಗಲೀ ಯಾವ ಪತ್ರವನ್ನೂ ಬರೆದಿಲ್ಲ. ಎಲ್ಲಾ ರಂಗಾಯಣ ಘಟಕಗಳ ಅಧಿಕಾರವೂ ತಮಗೆ ಬೇಕೆಂದು ಬಯಸಿದ್ದರು. ಒಂದೊಮ್ಮೆ ರಂಗಾಯಣಕ್ಕೆ ಕೀತರ್ಿತಂದ ‘ಮಲೆಗಳಲ್ಲಿ ಮದುಮಗಳು’ ಇಂದೀಗ ನಮ್ಮ ಕಣ್ಣೆದುರಿಗೇ ರಂಗಾಯಣದ ಕೈ ತಪ್ಪಲು ಅವರು ಅನುವು ಮಾಡಿ ಕೊಟ್ಟಿದ್ದಾರೆ. ರಂಗಸಮಾಜ, ರಂಗಾಯಣದ ಕಲಾವಿದರ ಪ್ರತಿಭೆ ಹಾಗೂ ಸಾಮಥ್ರ್ಯವನ್ನು ಮೆರೆಸಲು, ಅವಕಾಶ ನೀಡಿ, ಅವರಿಗೆ ಆದೇಶ ಕೊಟ್ಟಾಗ ಅದನ್ನು ಸಫಲಗೊಳಿಸುವಲ್ಲಿ ವಿಫಲರಾಗಿದ್ದಾರೆ. ಸರಕಾರದ ಭಾಗವೇ ಆಗಿದ್ದ ಬಿ ವಿ ರಾಜಾರಾಂ, ಸಕರ್ಾರದ ಆದೇಶದ ಪ್ರತಿಯನ್ನು ಹರಿದು ಸುಟ್ಟು ಹಾಕಿದ್ದು, ಕಲಾವಿದರನ್ನು ಮುಷ್ಕರಕ್ಕೆ ಪ್ರೇರೇಪಿಸಿದ್ದನ್ನು ವಿಷಾದದಿಂದ ಗಮನಿಸಿದ್ದೇವೆ.
ಕಾರಂತರ ಜೊತೆ ಎಂದೂ ಕೆಲಸ ಮಾಡಿರದ ಕಾರಣದಿಂದಾಗಿ, ಕಾರಂತರ ಕನಸನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದಿರುವದೇ ಅವರ ವಿಫಲತೆ ಕಾರಣ ಎಂಬುದು ನಮ್ಮ ಅನಿಸಿಕೆ.
ಮನವಿ:
ರಂಗಾಯಣಕ್ಕೆ ಮೂವತ್ತು ತುಂಬುವುದರಲ್ಲಿ ಭಾರತದಲ್ಲೇ ಅದ್ವಿತೀಯವಾದ ರಂಗಾಯಣ ರಂಗರೆಪರ್ಟರಿಗಳನ್ನು ಕಟ್ಟುವ ಕನರ್ಾಟಕ ಸಕರ್ಾರ ಮತ್ತು ರಂಗಸಮಾಜದ ಎಲ್ಲ ಪ್ರಯತ್ನಗಳಿಗೆ ನಾಡಿನ ಸಮಸ್ತರೂ ಬೆಂಬಲಿಸುವ ಮೂಲಕ ಕಾರಂತರ ಕನುಸುಗಳಿಗೆ ಸಾರ್ಥಕತೆ ತಂದುಕೊಡಬೇಕೆಂಬುದು ನಮ್ಮ ನಮ್ರ ವಿನಂತಿ.
ಟಿ.ಎಸ್. ನಾಗಾಭರಣ
ಶ್ರೀಪತಿ ಮಂಜನಬೈಲು
ಡಾ. ನಾ. ದಾಮೋದರ ಶೆಟ್ಟಿ
ನಾ. ಶ್ರೀನಿವಾಸ
ರಂಗಸಮಾಜದ ಸದಸ್ಯರು

‍ಲೇಖಕರು G

1 April, 2013

ನಿಮಗೆ ಇವೂ ಇಷ್ಟವಾಗಬಹುದು…

7 Comments

  1. Dhananjaya Kulkarni

    ರಂಗಾಯಣ…..ಸಾಕುಮಾಡಿ ರಾಮಾಯಣ!
    (ಪ್ರಸ್ತುತ ಲೇಖನವು ದಿನಾಂಕ ೦೯-೧೧-೨೦೦೯ ರ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾಗಿ ವಾಚಕರಿಂದ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದೆ.)
    ರಂಗಾಯಣದಲ್ಲಿ ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿ ನಾನು ಇದನ್ನು ಬರೆಯುತ್ತಿದ್ದೇನೆ. ನಾನೂ ಸಹ ರಂಗಭೂಮಿಯಲ್ಲಿ ಕಳೆದ ೨೫ ವರ್ಷಗಳಿಂದ ಕೆಲಸ ಮಾಡುತ್ತಿದ್ದು, ಅನೇಕ ಹಿರಿಯ ರಂಗ ಕರ್ಮಿಗಳೊಂದಿಗೆ ಹಾಗೂ ರಂಗತಂಡಗಳೊಂದಿಗೆ ಕಾರ್ಯ ನಿರ್ವಹಿಸಿರುವ ಸ್ವಲ್ಪ ಮಟ್ಟಿನ ಅನುಭವ ನನಗೂ ಇದೆ. ಆದ್ದರಿಂದ ಈ ಬೆಳವಣಿಗೆ ಕುರಿತು ಬರೆಯಲು ನಾನು ಅರ್ಹನೆಂದು ಭಾವಿಸಿದ್ದೇನೆ.
    ನನ್ನ ಅಭಿಪ್ರಾಯದಲ್ಲಿ ಹೇಳುವುದಾದರೆ ರಂಗಾಯಣದ ಕಲಾವಿದರನ್ನು ಸರಕಾರಿ ಕೃಪಾಪೋಷಿತ ಕಲಾವಿದರೆಂದು ಪಾಲನೆ ಮಾಡಿದ್ದೇ ಈ ಎಲ್ಲ ಆವಾಂತರಗಳ ಸೃಷ್ಟಿಗೆ ಕಾರಣ. ಯಾವುದೇ ವಿಶ್ವವಿದ್ಯಾಲಯವಾಗಲಿ ಅಥವಾ ಶೈಕ್ಷಣಿಕ ಸಂಸ್ಥೆಯಾಗಲಿ ತಮ್ಮಲ್ಲಿ ಬಂದ ಯಾವ ವಿದ್ಯಾರ್ಥಿಗೂ ಸಹ ಉದ್ಯೋಗ ಖಾತ್ರಿಯ ಭರವಸೆಯನ್ನು ನೀಡುವುದಿಲ್ಲ. ಒಂದು ವೇಳೆ ಹಾಗೆ ನೀಡಿದ್ದು ನಿಜವೇ ಆಗಿದ್ದಲ್ಲಿ ನಮ್ಮ ದೇಶದಲ್ಲಿ ನಿರೊದ್ಯೂಗ ಸಮಸ್ಯೆಗೆ ಎಂದೋ ಪರಿಹಾರ ಸಿಕ್ಕಿರುತ್ತಿತ್ತು. ಈಗ ರಂಗಾಯಣದ ಕಲಾವಿದರಿಗೆ ಸರಕಾರದ ಆಶ್ರಯ ಸಿಕ್ಕಿದೆ. ಸರಕಾರದ ಎಲ್ಲ ಸೌಲಭ್ಯಗಳನ್ನು ಅವರು ಅನುಭವಿಸುತ್ತಿದ್ದಾರೆ. ಕಲಾವಿದರಿಗೆ ಯಾವುದೇ ರೀತಿಯ ಕಟ್ಟಳೆ ಇರಬಾರದು, ಅವರು ತುಂಬಾ ಕ್ರಿಯಾಶೀಲರು, ಅವರನ್ನು ಯಾವುದೇ ರೀತಿಯ ಆಡಳಿತ ಚೌಕಟ್ಟಿನಲ್ಲಿ ಇಡಬಾರದು ಎಂಬ ರಂಗಾಯಣ ಕಲಾವಿದರ ವಾದ. ಹಾಗಿದ್ದಲ್ಲಿ, ಸರಕಾರದ ಎಲ್ಲ ಸೌಲಭ್ಯಗಳು ಇವರಿಗೆ ಬೇಕು ಆದರೆ, ಸರಕಾರಕ್ಕಿರುವ ನೀತಿ-ನಿಯಮಗಳನ್ನು ಪಾಲಿಸಲು, ಅಲ್ಲಿನ ಕನಿಷ್ಠ ಮಟ್ಟದ ಶಿಸ್ತನ್ನು ಪಾಲಿಸಲು ಇವರಿಂದ ಸಾಧ್ಯವಿಲ್ಲವೇ? ನಿಜವಾದ ಕಲಾವಿದನಾದವನು ಪರಸ್ಪರ ಒಬ್ಬರನ್ನೊಬ್ಬರು ಪ್ರೀತಿಸುವುದು, ಗೌರವದಿಂದ ಕಾಣುವುದು, ನಾವು ಶಿಸ್ತಿನಿಂದ ವರ್ತಿಸಿ ಉಳಿದವರಿಗೆ ಮಾದರಿಯಾಗುವಂತೆ ಇರುವುದು…… ಇವು ಒಬ್ಬ ಕಲಾವಿದನಿಗೆ ಇರಬೇಕಾದ ಕನಿಷ್ಠ ಮಟ್ಟದ ಗುಣಧರ್ಮಗಳು. ಅದನ್ನೇ ಮರೆತು ಸಾರ್ವಭೌಮರಂತೆ ವರ್ತಿಸುವುದು ಅವರು ಇಡೀ ರಂಗಭೂಮಿಯ ಶಿಸ್ತಿಗೆ ಮಾಡುತ್ತಿರುವ ಅವಮಾನ.
    ಶ್ರೀಮತಿ ಜಯಶ್ರೀ ಅವರು ರಂಗಾಯಣ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಈ ಎಲ್ಲ ರಂಪಾಟಗಳು ಬಯಲಿಗೆ ಬಂದಿವೆ ಅಷ್ಟೇ. ಕಾರಂತರು ನಿರ್ದೇಶಕರಾಗಿದ್ದಾಗಿನಿಂದ ಹಿಡಿದು, ಬಸವಲಿಂಗಯ್ಯ, ಪ್ರಸನ್ನ, ಜಂಬೆ ಇವರೆಲ್ಲರ ಅವಧಿಯಲ್ಲಿ ಸಹ ಅಲ್ಲಿನ ಕಲಾವಿದರು ತಮ್ಮ ಮನಸ್ಸಿಗೆ ಬಂದಂತೆ ವರ್ತಿಸಿ, ಈ ಎಲ್ಲ ಹೆಸರಾಂತ ರಂಗಕರ್ಮಿಗಳಿಗೆ ಇರುಸು-ಮುರುಸು ಉಂಟುಮಾಡಿದ್ದು ಬಹಿರಂಗ ಗುಟ್ಟು. ಕೇವಲ ಇವರಲ್ಲದೇ, ಬೇರೆ ಬೇರೆ ದೇಶಗಳಿಂದ ನಾಟಕಗಳನ್ನು ನಿರ್ದೇಶಿಸಲು ಬಂದ ನಿರ್ದೇಶಕರು ಸಹ ಈ ರಂಗಾಯಣ ಕಲಾವಿದರ ಗೂಂಡಾಗಿರಿಯ ಪ್ರಸಾದವನ್ನು ಸ್ವೀಕರಿಸಿರುವುದು ಮೈಸೂರಿನ ಎಲ್ಲ ರಂಗ ಕರ್ಮಿಗಳಿಗೆ ತಿಳಿಯದ ವಿಷಯವೇನಲ್ಲ. ರಂಗಾಯಣದ ಕಲಾವಿದರು ಕಳೆದ ೨೧ ವರ್ಷಗಳಲ್ಲಿ ತಮ್ಮಲ್ಲಿರುವ ಕ್ರಿಯಾತ್ಮಕತೆಯನ್ನು ತೋರಿಸುವುದು ಒತ್ತಟ್ಟಿಗಿರಲಿ, ಬೇರೆಯವರು ನಿರ್ದೇಶಿಸಿದ ನಾಟಕಗಳನ್ನು ನೋಡುವ ಸೌಜನ್ಯ ಸಹ ಇವರಲ್ಲಿಲ್ಲ. ಕೇವಲ ಗೂಂಡಾ ಪ್ರವೃತ್ತಿಯನ್ನು ಬೆಳೆಸಿಕೊಂಡು, ಇಡೀ ಕನ್ನಡ ರಂಗಭೂಮಿಗೆ ಕಳಂಕ ತರುವ ಕಾಯಕದಲ್ಲಿ ತೊಡಗಿದ್ದಾರೆ.
    ಈ ಕಲಾವಿದರೆಲ್ಲ ಸರಕಾರಿ ಸಂಬಳ ಪಡೆಯುತ್ತಿರುವುದರಿಂದ, ಸರಕಾರದ ಎಲ್ಲ ಸೌಲಭ್ಯಗಳನ್ನು ಪಡೆಯುತ್ತಿರುವುದರಿಂದ, ಅವರಿಗೂ ಸಹ ಇತರ ಸರಕಾರಿ ನೌಕರರಿಗೆ ಅನ್ವಯವಗುವ ಎಲ್ಲ ಕಾಯಿದೆ ಕಾನೂನುಗಳು ಅನ್ವಯವಾಗುತ್ತವೆ. ಇವರಾರೂ ಇದರಿಂದ ಹೊರತಲ್ಲ.
    ರಂಗಾಯಣ ಕೇವಲ ಮೈಸೂರಿಗೆ ಮಾತ್ರ ಸೀಮಿತವಾಗಬಾರದು. ಇದನ್ನು ನನ್ನಂತಹ ಅನೇಕ ಜನ ರಂಗಭೂಮಿಯಲ್ಲಿ ಆಸಕ್ತಿಯುಳ್ಳವರು ಮೊದಲಿನಿಂದಲೂ ಹೇಳುತ್ತ ಬಂದಿದ್ದಾರೆ. ಈಗ ನಾನೂ ಸಹ ಅದನ್ನು ಮತ್ತೊಮ್ಮೆ ಉಚ್ಛರಿಸುತ್ತೇನೆ.
    ಸಧ್ಯಕ್ಕೆ ರಂಗಾಯಣದಲ್ಲಿರುವ ೧೮ ಜನ ಕಲಾವಿದರನ್ನು ಆರು ಗುಂಪುಗಳನ್ನಾಗಿ ವಿಂಗಡಿಸಿ, ಅವರನ್ನು ಕರ್ನಾಟಕದ ಆರು ಪ್ರಮುಖ ನಗರಗಳಿಗೆ ವರ್ಗಮಾಡಿ ಅಲ್ಲಿ ರಂಗ ಭೂಮಿಗೆ ಸಂಬಂಧಿಸಿದ ಕೆಲಸ ಮಾಡಲು ಹೇಳಬೇಕು. ಹೊಸ ಪ್ರತಿಭೆಗಳನ್ನು ಗುರುತಿಸುವುದು, ರಂಗ ತರಬೇತಿ ಶಿಬಿರಗಳನ್ನು ನಡೆಸುವುದು, ಹೊಸ ನಾಟಕಗಳನ್ನು ತಯಾರಿಸುವುದು…ಹೀಗೆ ಅನೇಕ ಕೆಲಸಗಳನ್ನು ಮಾಡಲು ಅವರಿಗೆ ಜವಾಬ್ದಾರಿಯನ್ನು ನೀಡಬೇಕು.
    ಸಧ್ಯದ ಪಾರಿಸ್ಥಿತಿಯಲ್ಲಿ ರಂಗಾಯಣಕ್ಕೆ ಯಾವ ನಿರ್ದೇಶಕರನ್ನು ನೇಮಿಸುವ ಅಗತ್ಯವಿಲ್ಲ. ಸಧ್ಯ ಚಾಲ್ತಿಯಲ್ಲಿರುವಂತೆ ರಂಗಾಯಣವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಧೀನದಲ್ಲಿಯೇ ಇರಲಿ. ಇಲಾಖೆಯ ನಿರ್ದೇಶಕರು ರಂಗಾಯಣದ ಸಂಪೂರ್ಣ ಉಸ್ತುವಾರಿಯನ್ನು ನೋಡಿಕೊಂಡರೆ, ರಾಜ್ಯದ ಆರು ಪ್ರಮುಖ ನಗರ/ಪ್ರದೇಶಗಳಿಗೆ ತೆರಳುವ ತಂಡದ ಕಾರ್ಯ ಚಟುವಟಿಕೆಗಳನ್ನು ಆಯಾ ಪ್ರದೇಶದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕರ ಮೇಲ್ವಿಚಾರಣೆಯಲ್ಲಿ ನಡೆಸಬಹುದು. ಅದರ ಜೊತೆಗೆ ಪ್ರತಿ ಪ್ರದೇಶದಲ್ಲಿರುವ ರಂಗತಂಡಗಳಿಂದ ಒಬ್ಬ ಪ್ರತಿನಿಧಿಯಂತೆ ೫-೬ ಜನರ ಘಟಕವಾರು ರಂಗ ಸಮಾಜವನ್ನು ನಿರ್ಮಿಸಿ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ರಂಗಾಯಣದ ಕಲಾವಿದರು ಮತ್ತು ಆಯಾ ಘಟಕಗಳ ರಂಗ ಸಮಾಜದ ಸದಸ್ಯರು ಜೊತೆಗೂಡಿ ಸಮಾಲೋಚಿಸಿ ತಮ್ಮ ತಮ್ಮ ಪ್ರದೇಶಗಳಲ್ಲಿ ರಂಗಚಟುವಟಿಕೆಗಳನ್ನು ಮಾಡುವುದು.
    ಹೀಗೆ ಆರು ತಂಡಗಳನ್ನಾಗಿ ವಿಂಗಡಿಸಿ, ಬೇರೆ ಬೇರೆ ಪ್ರದೇಶಗಳಿಗೆ ರಂಗಾಯಣದ ಕಲಾವಿದರನ್ನು ಕಳುಹಿಸಿದ ನಂತರ ಸರಕಾರದಿಂದ ರಂಗಾಯಣದ ಕಲಾವಿದರ ಸಂಬಳವನ್ನು ಹೊರತು ಪಡಿಸಿ ಸಿಗುವ ಹಣವನ್ನು ಎಲ್ಲ ಆರು ಘಟಕಗಳಿಗೆ ವಿಂಗಡಿಸಿ, ಅದನ್ನು ಮೂಲಧನವನ್ನಾಗಿರಿಸಿಕೊಂಡು, ತಮ್ಮ ತಮ್ಮ ಪ್ರದೇಶಗಳಲ್ಲಿ ಸಿಗುವ ಸಂಪನ್ಮೂಲಗಳಿಂದ ರಂಗ ಚಟುವಟಿಕೆಗಳನ್ನು ಮಾಡಬೇಕು.
    ಆಯಾ ಪ್ರದೇಶದ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಉಪನಿರ್ದೇಶಕರು, ರಂಗ ಸಮಾಜದ ಸದಸ್ಯರು ಸೇರಿ, ತಮ್ಮ ತಮ್ಮ ಪ್ರದೇಶದಲ್ಲಿ ರಂಗಾಯಣದ ಕಲಾವಿದರು ಮಾಡಿದ ಕಾರ್ಯಚಟುವಟಿಕೆಗಳ ಕುರಿತು ಪ್ರತಿ ಆರು ತಿಂಗಳಿಗೊಮ್ಮೆ ಕಾರ್ಯ ಪರಿಶೀಲನೆ ನಡೆಸಿ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಕ್ಕೆ ವರದಿ ಕಳುಹಿಸಿಕೊಡುವುದು. ಅದನ್ನು ಇಲಾಖೆಯ ನಿರ್ದೇಶಕರು ವಿವರವಾಗಿ ಪರಿಶೀಲನೆ ನಡೆಸಿ, ಮುಂದಿನ ಮಾರ್ಗೋಪಾಯಗಳನ್ನು ಸೂಚಿಸುವುದು ಮತ್ತು ಅದರ ನಿರ್ದೇಶನದಂತೆ ರಂಗಾಯಣದ ಕಲಾವಿದರು ಕಾರ್ಯ ನಿರ್ವಹಿಸಬೇಕು.
    ಆರೂ ಘಟಕಗಳಿಂದ ವರ್ಷಕ್ಕೊಂದು ಹೊಸ ನಾಟಕ ತಯರಾಗಬೇಕು ಮತ್ತು ಎಲ್ಲ ಆರು ನಾಟಕಗಳನ್ನು ಒಂದು ಕೇಂದ್ರೀಕೃತ ಪ್ರದೇಶದಲ್ಲಿ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿ, ನಾಟಕೋತ್ಸವ, ವಿಚಾರ ಸಂಕಿರಣ ಮುಂತಾದ ರಂಗಭೂಮಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು.
    ಒಂದು ಬಾರಿ ಅಸ್ತಿತ್ವಕ್ಕೆ ಬಂದ ರಂಗ ಸಮಾಜದ ಅವಧಿ ಎರಡು ವರ್ಷಗಳ ವರೆಗೆ ನಿಗದಿ ಪಡಿಸಿ, ಎರಡು ವರ್ಷದ ಅವಧಿಯ ನಂತರ ಮತ್ತೆ ಹೊಸ ರಂಗ ಸಮಾಜವನ್ನು ನಿರ್ಮಿಸಬಹುದು.
    ರಂಗಾಯಣದ ಕಲಾವಿದರೆಲ್ಲ ಸರಕಾರದ ಸೌಲಭ್ಯಗಳನ್ನು ಅನುಭವಿಸುತ್ತಿರುವುದರಿಂದ, ಈ ಸಲಹೆಗಳಿಗೆ ಒಪ್ಪಿ ಕಾರ್ಯ ನಿರ್ವಹಿಸಬೇಕು. ಇಲ್ಲವಾದಲ್ಲಿ ಸರಕಾರ ಅವರ ಮೇಲೆ ಅಗತ್ಯ ಕ್ರಮ ಜರುಗಿಸಬೇಕು. ಏಕೆಂದರೆ ರಂಗಾಯಣದ ಈಗಿನ ಪರಿಸ್ಥಿತಿಯನ್ನು ನೋಡಿದಲ್ಲಿ ಅಲ್ಲಿನ ಕಲಾವಿದರಲ್ಲಿ ಎಂತಹ ಮೊಂಡುತನ ಬೆಳೆದಿದೆ ಎಂದರೆ ಅವರು ಯಾರ ಮಾತನ್ನೂ ಕೇಳುವ ಹಂತದಲ್ಲಿಲ್ಲ. ಎಲ್ಲವನ್ನೂ ಮೀರಿ ತಮ್ಮದೇ ಸಾರ್ವಭೌಮತ್ವವನ್ನು ಸಾಧಿಸಬೇಕೆಂಬ ಹಟದಲ್ಲಿದ್ದಂತೆ ತೋರುತ್ತದೆ. ಇತರ ಸರಕಾರಿ ನೌಕರರಿಗೆ ಅನ್ವಯವಾಗುವಂತೆ ಇವರಿಗೂ ಸಹ ಕಟ್ಟು ನಿಟ್ಟಿನ ಕಾಯಿದೆಗಳು ಜಾರಿಗೆ ಬರಲಿ. ಅದರ ಚೌಕಟ್ಟಿನಲ್ಲಿ ಅವರು ಅನಿವಾರ್ಯವಾಗಿ ಕೆಲಸ ಮಾಡಲಿ.

  2. ಅಶೋಕವರ್ಧನ

    ರಂಗಾಯಣ ಕೇವಲ ಮೈಸೂರಿನ ಸೊತ್ತಲ್ಲ, ಕನ್ನಡ ಜನತೆಯದ್ದು. ಅನ್ಯ ಸರಕಾರೀ ಇಲಾಖೆಗಳಲ್ಲಿ `ಅಧಿಕಾರಿಗಳು ಬೇರೂರದಂತೆ’ ನಡೆಯುವ ವರ್ಗಾವಣೆಯ ಕ್ರಮ ರಂಗಾಯಣದ್ದಲ್ಲ. ಮಾನ್ಯ ಪ್ರೊ| ಜಿಎಚ್ ನಾಯಕರಿಗೆ ಮುಷ್ಕರನಿರತರು ಬಿಂಬಿಸಿದಂತೆ ಇದು ಒಡೆಯುವ ಕೆಲಸ ಅಲ್ಲ,ಇದು ಬಲಿತ ಜೇನುಗೂಡನ್ನು ಪಾಲು ಮಾಡಿ, ಮಧುಕಟ್ಟುವುದನ್ನು ವೃದ್ಧಿಸುವ ಕ್ರಮ ಎನ್ನುವುದು ರಂಗಸಮಾಜದ ನಿವೇದನೆಯಲ್ಲಿ ಸ್ಪಷ್ಟವಾಗುತ್ತದೆ. ಸದ್ಯದ ಶಿವಮೊಗ್ಗ ಮತ್ತು ಧಾರವಾಡದಂತೆ ಬರಲಿರುವ ಮಂಗಳೂರೇ ಮೊದಲಾದ ರಂಗಕೇಂದ್ರಗಳು ಬಲಗೊಳ್ಳಲು ಈ ಕ್ರಮ ಅನಿವಾರ್ಯವೂ ಹೌದು. ಹಿರಿಯ ಕಲಾವಿದರು ವೈಯಕ್ತಿಕ ಅನನುಕೂಲಗಳನ್ನು ಬದಿಗೊತ್ತಿ, ಪೂರ್ವಸೂರಿಗಳ ಹಿರಿಯ ಆಶಯಕ್ಕೆ ದುಡಿಯುವಂತೆ ಹೊಸ ಜವಾಬ್ದಾರಿಗಳನ್ನು ವಹಿಸಿಕೊಳ್ಳಲಿ. ಅದನ್ನು ವರ್ಗಾವಣೆಯ ಶಿಕ್ಷೆ ಎಂದು ಭಾವಿಸದಿರಲಿ.

  3. prasad raxidi

    ರಂಗಾಯಣದ ಪ್ರಾರಂಭದಿಂದಲೂ ಅದನ್ನು ಗಮನಿಸುತ್ತ ನಾಟಕಗಳನ್ನು ನೋಡುತ್ತ ಅವರೊಂದಿಗೆ ಜಗಳ ಕಾಯತ್ತ ಬಂದ ಸಲಿಗೆ ಮತ್ತು ಕಾಳಜಿಗಳಿಂದ ಈಮಾತುಗಳನ್ನು ಬರೆಯುತ್ತಿದ್ದೇನೆ. ಈ ಮೇಲಿನ ಪ್ರತಿಕ್ರಿಯೆಗಳು ಸ್ವಲ್ಪ ತಪ್ಪು ತಿಳುವಳಿಕೆಯಿಂದ ಕೂಡಿದೆಯೆನಿಸುತ್ತದೆ. ರಂಗಾಯಣ ಪ್ರಾರಂಭವಾದಾಗ ಅಲ್ಲಿಗೆ ನೇಮಿಸಿಕೊಂಡ ಕಲಾವಿದರನ್ನು ಖಾಯಂ ಉದ್ಯೋಗಿಗಳೆಂದೇ ತಿಳಿಸಿ ನೇಮಿಸಿಕೊಳ್ಳಲಾಗಿತ್ತು. ಅವರನ್ನು ಕೆಲಕಾಲದ ನಂತರ ಬೇರೆ ಬೇರೆ ಕಡೆಗಳಿಗೆ ಅಂದರೆ ಕೇವಲ ನಾಲ್ಕು ರಂಗಾಯಣವಲ್ಲ ಪ್ರತಿ ಜಿಲ್ಲೆಗೂ ಇಬ್ಬರಂತೆ ಕಳುಹಿಸಿ ಅವರ ಅನುಭವವನ್ನು ನಾಡಿಗೆ ಒದಗಿಸುವ ಮಾತನ್ನು ಕಾರಂತರಾದಿಯಾಗಿ ಎಲ್ಲ ನಿರ್ದೇಶಕರೂ ಆಡಿದ್ದರು. ಆದೆರೆ ಇದುವರೆಗೂ ಕಲಾವಿದರಿಗೆ ಉದ್ಯೋಗ ನಿಯಮಾಳಿಯನ್ನು ಸಹ ರೂಪಿಸದೆ, ಕಾಲಹರಣ ಮಾಡುತ್ತ ಬಂದ ಸರ್ಕಾರಗಳು ಹಾಗೂ ಕಲಾವಿದರು ಕೋರ್ಟು ಮೆಟ್ಟಿಲೇರಿ ಅವರ ಪರವಾಗಿ ಆದೇಶ ಪಡೆದ ಮೇಲೂ ಅದನ್ನು ಜಾರಿಗೊಳಿಸದೆ ನ್ಯಾಯಾಂಗ ನಿಂದನೆ ಮಾಡುತ್ತಿರುವ ಸರ್ಕಾರಕ್ಕೆ ಬುದ್ದಿ ಹೇಳದೆ ಈಗ ಇದ್ದಕ್ಕಿದ್ದಂತೆ ಜ್ಙಾನೋದಯವಾದಂತೆ ವರ್ತಿಸುತ್ತಿರುವ ರಂಗಸಮಾಜ ಇಷ್ಟುದಿನ ಏನು ಮಾಡುತ್ತಿತ್ತು. ಕಲಾವಿದರಿರರಲಿ ಕನ್ನಡದ ಅತ್ಯುತ್ತಮ ಪ್ರತಿಭೆಗಳಿರುವ ರಂಗಾಯಣದ ಪ್ರಶಿಕ್ಷರಿಗೆ ಕೊಡುತ್ತಿರುವ ಸಂಬಳ ಸವಲತ್ತುಗಳೇನು ಎಂದು ನೋಡಿದರೆ ಅವರು ಯಾವುದಾದರೂ ಸಿನಿಮಾ ತೇಟರ್ ನಲ್ಲಿ ಗೇಟ್ ಕೀಪರುಗಳಾಗಿ ಕೆಲಸ ಮಾಡುತ್ತಿದ್ದರೆ ಸುಖವಾಗಿರುತ್ತಿದ್ದರು ಎನಿಸುತ್ತದೆ. ರಂಗ ಸಮಾಜದ ಗೆಳೆಯರೆ ಅತ್ತವೂ ಸ್ವಲ್ಪ ಕಣ್ಣು ಹಾಯಿಸಿಸ್ವಾಮಿ. ಕಾರಂತರು ಸಾಂಧರ್ಭಿಕವಾಗಿ ಅವರ ಆತ್ಮ ಚರಿತ್ರೆಯಲ್ಲಿ ಹೇಳಿಕೊಂಡು ಮಾತುಗಳನ್ನು ಗುರಾಣಿಯಂತೆ ಬಳಸಿಕೊಂಡು ಅವರನ್ನು ಹಣಿಯಲು ಪ್ರಯತ್ನಿಸುವ ನೀವು, ಇದೇಕಾರಂತರ ಆಡಳಿತದ ಬಗ್ಗೆ ಪೂರ್ಣಚಂದ್ರತೇಜಸ್ವಿಯವರು ಹೊಂದಿದ್ದೆ ಅಭಿಪ್ರಾಯವನ್ನೂ ಸ್ವಲ್ಪ ಗಮನಿಸಿ. (ಅವಧಿಯಲ್ಲೇ ಬಂದಿರುವ ನನ್ನ ಅಂಕಣ “ನಮ್ಮ ನಡುವಿನ ತೇಜಸ್ವಿ ನೋಡಿ)ಕಲಾವಿದರ ಅನುಭವವನ್ನು ಬೇರೆಕಡೆಗಳಲ್ಲಿ ಬಳಸಬಾರದೆಂದು ಕಲಾವಿದರೂ ಸೇರಿದಂತೆ ನಮ್ಮೆಲ್ಲರ ವಾದವಲ್ಲ, ಇಷ್ಟು ವರ್ಷದುಡಿದಿರುವ ಕಲಾವಿದ- ಶಿಕ್ಷಕರ ಬೇಡಿಕೆಗಳನ್ನು ಈಡೇರಿಸಿ ಅವರೇನು ಆಕಾಶವನ್ನು ತಂದು ಕೊಡಲು ಕೇಳುತ್ತಿಲ್ಲ. ರಂಗಾಯಣದ ನಿರ್ದೇಶಕ ಸ್ವಾತಂತ್ರ್ಯವನ್ನು ಕಿತ್ತುಕೊಂಡು ಗುಮಾಸ್ತರನ್ನಗಿಸಬೇಡಿ. ಕೊನೆಯದಾಗಿ– ರಂಗಾಯಣ ಕನ್ನಡದ ಕರ್ನಾಟಕದ ಹೆಮ್ಮಯಾಗಿ ಉಳಿಯಲಿ. ರಂಗಸಮಾಜದ -ಅಥವಾ ಇನ್ನರದೋ ಪ್ರತಿಷ್ಟೆಗಾಗಿ ರಂಗಾಯಣವನ್ನು ನಾಶಮಾಡುವ ಪ್ರಯತ್ನಮಾಡಬೇಡಿ.

    • ಅಶೋಕವರ್ಧನ

      ರಕ್ಷಿದಿಯವರು ಎತ್ತಿದ ಸಮಸ್ಯೆ ನನಗೆ ತಿಳಿದಿರಲಿಲ್ಲ. ಆಡಳಿತ ಕಲಾವಿದರು ಆರ್ಥಿಕ ಭದ್ರತೆಗೆ ಎರವಾಗಿ ಹೊಸ ಜವಾಬ್ದಾರಿಯನ್ನು ನಿರ್ವಹಿಸಬೇಕೆನ್ನುವುದನ್ನೇ ಲಕ್ಷ್ಯವಾಗಿಟ್ಟುಕೊಂಡಿರುವುದಾದರೆ ಖಂಡಿತವಾಗಿಯೂ ಅದು ತಿರಸ್ಕಾರಯೋಗ್ಯ.ನನ್ನ ಬೆಂಬಲ ಕಲಾವಿದರಿಗೇ.

  4. ಲಿಂಗರಾಜು ಬಿ.ಎಸ್.

    ಮೈಸೂರು ರಂಗಾಯಣದ ಇಂದಿನ ಸ್ಥಿತಿಗೆ ಕೆಲಸ ಮರೆತು ರಾಜಕೀಯ ಮಾಡಿದ್ದೇ ಕಾರಣ. ಇದು ರಂಗಸಮಾಜ ಹಾಗೂ ಮೈಸೂರು ರಂಗಾಯಣದಲ್ಲಿರುವ ಕಲಾವಿದರಿಗೂ ಅನ್ವಯಿಸುತ್ತದೆ. ನಾನು ಮೈಸೂರಲ್ಲಿ ಓದುತ್ತಿದ್ದಾಗಿನಿಂದಲೂ ನೋಡುತ್ತಿರುವಂತೆ ಅಲ್ಲಿ ರಂಗಸಂಬಂಧಿ ಕೆಲಸಗಳಿಗಿಂತಲೂ ಹೆಚ್ಚಾಗಿ ನಡೆದಿದ್ದು ರಾಜಕೀಯ. ಇದು ಮೈಸೂರಿನ ಎಲ್ಲಾ ರಂಗಪ್ರೇಮಿಗಳಿಗೂ ತಿಳಿದಿರುವ ವಿಷಯವೇ.
    ನನ್ನ ಅಭಿಪ್ರಾಯದಲ್ಲಿ ರಂಗಾಯಣದ ಇಂದಿನ ಸ್ಥಿತಿಗೆ ಮೊದಲ ಕಾರಣ ಎಂದರೆ ಕೇಂದ್ರೀಕರಣಗೊಂಡಿದ್ದು. ಕಾರಂತರು ಕಲಾವಿದರು ನಿಂತ ನೀರಾಗದಿರಲಿ ಎಂದೇ ತರಬೇತಿ ಮುಗಿದ ಮೇಲೆ ಎಲ್ಲಾ ಕಲಾವಿದರು ತಿರುಗಾಟ ನಡೆಸಿ ತಮ್ಮ ವ್ಯಾಪ್ತಿಯನ್ನು ಇತರ ಕಡೆಗೆ ವಿಸ್ತರಿಸಿ ಎಂದು ಸಲಹೆ ನೀಡಿದ್ದರು. ಆದರೆ ಇದನ್ನು ಕಲಾವಿದರು ಮರೆತರು ಎನ್ನುವುದಕ್ಕಿಂತ ರಂಗಸಮಾಜ ಮರೆಯಿತು ಎಂದು ಹೇಳುವುದೇ ಸೂಕ್ತ.
    ಎರಡನೇ ಕಾರಣ ಅಲ್ಲಿನ ಕಲಾವಿದರಿಗೆ ಇರುವ ಅಭದ್ರತೆ ಹಾಗೂ ಅದರಿಂದ ಅವರಲ್ಲಿ ಹುಟ್ಟಿಕೊಂಡಿರುವ ಕೀಳರಿಮೆ. ನಾವು ಮೈಸೂರಿನ ಕಲಾವಿದರು ಎಂದು ಹೇಳಿಕೊಳ್ಳುವ ಸ್ಥಿತಿಯಲ್ಲಿ ಅಲ್ಲಿನ ಯಾವ ಕಲಾವಿದರೂ ಇಲ್ಲ. ಅದಕ್ಕೆ ಸಕರ್ಾರ ಹಾಗೂ ಕಲಾವಿದರ ನಡುವೆ ಸಂಪರ್ಕ ಸೇತುವಾಗಿರುವ ರಂಗಸಮಾಜ ಎನ್ನದೆ ಬೇರೆ ಯಾರನ್ನೂ ಹೊಣೆಯಾಗಿಸಲು ಸಾಧ್ಯ. ತಮ್ಮ ಆಭದ್ರತೆ ಕಾರಣದಿಂದ ಕಲಾವಿದರಿಗೆ ಯಾರೂ ಏನೇ ಹೇಳಿದರೂ ಆವರು ಮೊದಲು ಪ್ರತಿಕ್ರಿಯಿಸುವುದೇ ನಕಾರಾತ್ಮಕವಾಗಿ. ಇಂದಿನ ಸ್ಥಿತಿಗೆ ಹಾಗೂ ಹಿಂದಿನ ನಿದರ್ೇಶಕರೊಂದಿಗೆ ಈ ಕಲಾವಿದರು ಒರಟಾಗಿ ನಡೆದುಕೊಂಡಿದ್ದರೆ ಅದಕ್ಕೆ ಈ ಭಾವನೆಯೇ ಕಾರಣ.
    ಮೂರನೇಯದು ಸಕರ್ಾರ ಇವರು ಕಲಾವಿದರು, ನಾಡಿನ ಸಂಸ್ಕೃತಿಯನ್ನು ಹರಡುವವರು ಎಂದು ಭಾವಿಸದೆ ಮನರಂಜನೆ ನೀಡುವ ತಾವುನೀಡುವ ಭತ್ಯೆಗೆ ಇರುವವರು ಎಂದು ಭಾವಿಸಿದ್ದು. ಈ ಭಾವನೆ ಈಗ ಅಧಿಕಾರ ನಡೆಸುತ್ತಿರುವ ಆಯುಕ್ತರ ಮಾತುಗಳನ್ನು ನೋಡಿದರೂ ತಿಳಿಯುತ್ತದೆ. ಬಹುಶಃ ಹಿಂದಿನ ಕೆಲ ನಿದರ್ೇಶಕರೂ ಕೂಡ ಹೀಗೆ ನಡೆದುಕೊಂಡಿರಬಹುದು. ಇದರಿಂದ ಮೈಸೂರು ರಂಗಾಯಣ ಎಂಬುದು ಗೊಂದಲದ ಗೂಡಾಯಿತು.
    ಸಮಸ್ಯೆಯನ್ನು ಮಾತುಕತೆ ಹಾಗೂ ಒಂದು ಸ್ನೇಹಮಯಿ ವಾತಾವರಣ ರೂಪಿಸುವ ಮೂಲಕ ಸರಿಪಡಿಸಬಹುದು. ಕಲಾವಿದರೂ ಕೂಡ ತಮ್ಮ ಮೊಂಡಾಟ ಬಿಟ್ಟು ಸಹಕರಿಸಬೇಕು. ಸಂಸ್ಕೃತಿ ಬಗ್ಗೆ ಏಕಮುಖಿ ಚಿಂತನೆ ಬೆಳೆಯುತ್ತಿರು ಈ ಹೊತ್ತಿನಲ್ಲಿ ಸಾಂಸ್ಕೃತಿಕ ಲೋಕದ ಸಾಕ್ಷಿಪ್ರಜ್ಣೆಯಾಗಿ ಬೆಳೆಯಬೇಕಾಗಿದ್ದ ರಂಗಾಯಣದ ಇಂದಿನ ಸ್ಥಿತಿ ತುಂಬಾ ದುಃಖಕರವಾದುದು.

    • prasad raxidi

      ಹೌದು ನಿಮ್ಮ ಅಭಿಪ್ರಾಯ ನೂರಕ್ಕೆ ನೂರು ಸರಿ ರಂಗಾಯಣದ ಕಲಾವಿದರು 26 ವರ್ಷಗಳನಂತರವೂ ಅಭದ್ರತೆಯಿಂದ ನರಳುವಂತಾಗಲು ರಂಗಸಮಾಜ ಮತ್ತು ಅಧಿಕಾರಿಗಳ ದೋರಣೆಗಳೇ ಕಾರಣ ..ಕೋರ್ಟು ಆದೇಶ ನೀಡಿದರೂ ಇನ್ನೂ ಇವರು ಎಚ್ಚರಾದಂತಿಲ್ಲ.

Trackbacks/Pingbacks

  1. ರಂಗಾಯಣದ ಬಗ್ಗೆ ಮತ್ತಷ್ಟು… « ಅವಧಿ / avadhi - [...] ಪ್ರಕಟವಾಗಿತ್ತು. (ಲೇಖನಕ್ಕಾಗಿ ಇಲ್ಲಿ ಕ್ಲಿಕ್ಕಿಸಿ). ಲೇಖನ ಓದಿ ಬಂದ ಪ್ರತಿಕ್ರಿಯೆಗಳು [...]

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading