ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಂಗಶಂಕರದಲ್ಲಿ ’ಕಾರ್ಬನ್ ಕೇಕ್’

ಕಾರ್ಬನ್ ಕೇಕ್

ಇಂದು ನಾಳೆಗಳ ಕೌತುಕದ ಕಥನ


ಕ್ರಿಯೆಟಿವ್ ಥಿಯೇಟರ್ ನ ಹೊಸ ನಾಟಕ ಕಾರ್ಬನ್ ಕೇಕ್ ಇದೇ ನಿಟ್ಟಿನಲ್ಲಿ ಕೈಗೊಂಡಿರುವ ಪ್ರಯತ್ನವಾಗಿದ್ದು ಇಂದಿನ ಅತಿ ಪ್ರಮುಖ ಸಮಸ್ಯೆಗಳಾದ ಪರಿಸರ ಮಾಲಿನ್ಯ ಹಾಗೂ ಜಾಗತಿಕ ತಾಪಮಾನದ ಏರಿಕೆಗಳನ್ನು ಕುರಿತಂತೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶ ಹೊಂದಿದೆ. ವೈಜ್ಞಾನಿಕ ಸಂಶೋಧನೆ ಹಾಗೂ ಪರಿಸರ ತಜ್ಞರೊಂದಿಗೆ ನಡೆಸಿದ ವ್ಯಾಪಕ ಚಚರ್ೆಗಳ ಫಲವಾಗಿ ಹುಟ್ಟಿರುವ ಕಾರ್ಬನ್ ಕೇಕ್ ಈ ಸಮಸ್ಯೆಗಳು ನಮ್ಮ ಇಂದಿನ ಹಾಗೂ ನಾಳಿನ ಬದುಕನ್ನು ಹೇಗೆ ಪ್ರಭಾವಿಸುತ್ತವೆ ಎಂಬುದನ್ನು ಕುತೂಹಲ ಕೆರಳಿಸುವ ಕಥಾನಕದ ಮೂಲಕ ಬಿಚ್ಚಿಡುತ್ತದೆ. ಖಛಿಜಟಿಛಿಜ ಜಿಛಿಣಠಟಿ ಹಾಗೂ ಪತ್ತೇದಾರಿ ಅಂಶಗಳನ್ನೊಳಗೊಂಡಿರುವ ಇಂತಹ ನಾಟಕವೊಂದು ಕನ್ನಡದಲ್ಲಿ ಮೂಡಿ ಬರುತ್ತಿರುವುದು ಬಹುಶಃ ಇದೇ ಮೊದಲ ಬಾರಿ.

ಕ್ರಿಯೆಟಿವ್ ಥಿಯೇಟರ್ಗಾಗಿಯೇ ನಾಟಕವನ್ನು ರಚಿಸಿ ಕೊಟ್ಟವರು ನಟ, ನಿರ್ದೇಶಕ ಹಾಗೂ ನಾಟಕಕಾರ, ರಾಮನಾಥ, ರಂಗಾಯಣ ಅವರು.
ವಿನ್ಯಾಸ ಹಾಗೂ ನಿರ್ದೇಶನ ಇದೇ ತಂಡಕ್ಕಾಗಿ ಹೀಗಾದ್ರೆ ಹೇಗೆ?,  ಆದದ್ದೆಲ್ಲಾಒಳಿತೇ..!,  ಸಾಹೇಬರ ಸರ್ಕೀಟು ಮುಂತಾದ ಯಶಸ್ವಿ ನಾಟಕಗಳನ್ನು ನಿರ್ದೇಶಿಸಿರುವ ಪ್ರಮೋದ್ ಶಿಗ್ಗಾಂವ್ ಅವರದ್ದು.
ಕಲಾವಿದ ಜಯಸಿಂಹ ವಿನ್ಯಾಸಗೊಳಿಸಿರುವ ವಿಶಿಷ್ಟ ರಂಗಸಜ್ಜಿಕೆ, ಗಜಾನನ ನಾಯಕರ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರುವ ಮಂಕುತಿಮ್ಮನ ಕಗ್ಗದ ಸಾಲುಗಳು, ಮುದ್ದಣ್ಣ ರಟ್ಟೇಹಳ್ಳಿಯವರ ಬೆಳಕಿನ ವಿನ್ಯಾಸ ನಾಟಕಕ್ಕೆ ಮೆರಗು ನೀಡಿವೆ. ಮುಖ್ಯ ಭೂಮಿಕೆಯಲ್ಲಿರುವವರು ಖ್ಯಾತ ಕಲಾವಿದರಾದ ಸಾಯಿ ಪ್ರಕಾಶ್, ಲಕ್ಷ್ಮೀ ಚಂದ್ರಶೇಖರ್, ಶ್ರೀಪತಿ ಮಂಜನಬೈಲು, ಮೋಹನ್ ಕುಮಾರ್, ಸಂಪತ್, ಶಿಲ್ಪಾ ರುದ್ರಪ್ಪ, ರೇಖಾ ಚಕ್ರವರ್ತಿ, ಕಿರಣ್, ಗೌತಮ್ ಉಪಾಧ್ಯ, ಸಾಗರ್ ಮತ್ತು ಶ್ರೀಕಾಂತ್.
ರಂಗಶಂಕರದಲ್ಲಿ ಇದೇ ತಿಂಗಳ 6, 7 ಹಾಗೂ 8 ರಂದು ಪ್ರತಿದಿನ ಸಂಜೆ 7.30 ಕ್ಕೆ ಹಾಗೂ 7 ಮತ್ತು 8 ರಂದು 3.30 ಕ್ಕೆ ಮ್ಯಾಟಿನಿಯೂ ಸೇರಿ ನಾಟಕದ ಒಟ್ಟು 5 ಪ್ರದರ್ಶನಗಳಿವೆ.
 

‍ಲೇಖಕರು G

5 March, 2015

1 Comment

  1. Anonymous

    ಧನ್ಯವಾದಗಳು!!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading