ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಂಗಶಂಕರದಲ್ಲಿಂದು ತುಘಲಕ್


ಕಾರ್ನಾಡರ ‘ತುಘಲಕ್’ ಭಾರತದ ಶ್ರೇಷ್ಠ ನಾಟಕಗಳಲ್ಲೊಂದು.
ಐತಿಹಾಸಿಕ ಭಿತ್ತಿಯಲ್ಲಿ ಸಮಕಾಲೀನ ಧ್ವನಿಗಳನ್ನು ಹೊರಡಿಸುವ ಈ ನಾಟಕ ಹಲವು ವ್ಯಾಖ್ಯಾನಗಳ ಸಾಧ್ಯತೆಯನ್ನುತನ್ನ ಒಡಲೊಳಗಿರಿಸಿಕೊಂಡಿದೆ.
ರಾಜಕೀಯದ ಮೇಲಿರುವ ಧರ್ಮದ ಹಿಡಿತ, ತನ್ನರಾಜ್ಯದ ಭವ್ಯ ಭವಿತವ್ಯದ ಕನಸು ಕಂಡ ‘ತುಘಲಕ್’ ನಿಗೆ ಅಡ್ಡಿ ಎನಿಸುತ್ತದೆ. ಧರ್ಮಕ್ಕೂರಾಜಕಾರಣಕ್ಕೂ ಏನು ಸಂಬಂಧಎಂದು ಪ್ರಶ್ನಿಸುತ್ತಾ, ಧರ್ಮದ ಮೂಲಕ ತನ್ನ ಆಡಳಿತದ ಮೇಲೆ ಹಿಡಿತ ಸಾಧಿಸಲು ಹುನ್ನಾರ ನಡೆಸುವ ಪ್ರತಿಧರ್ಮಾಂಧರನ್ನೂ ಧಿಕ್ಕರಿಸುತ್ತಾ ಹೊರಡುವ ‘ತುಘಲಕ್’   ಧರ್ಮದ್ವೇಷದಿಂದ ಒಡೆದು ಚೂರಾಗಿರುವ ನಮ್ಮ ರಾಜ್ಯದಲ್ಲಿ ಇದೊಂದು ಅವಿಸ್ಮರಣೀಯ ದಿನ. ನನಗೆ ರಾಜ್ಯದಲ್ಲಿ ಸಮತೆ ಬೇಕು. ಪ್ರಗತಿ ಬೇಕು. ತರ್ಕಶುಧ್ಧ ನ್ಯಾಯ ಬೇಕು. ಶಾಂತಿಯಿದ್ದರೆ ಸಾಲದು, ಜೀವಕಳೆ ಬೇಕು. ಎಂದು ಕನಸು ಕಾಣುತ್ತಾನೆ.
ಮನುಷ್ಯ ಮಾಡಿದ ಕೊಳೆಯನ್ನು ತೊಳೆಯಲು ದೇವರನ್ನೇಕೆಕರೆಯಲಿ ಎಂಬ ಸಾಲುಗಳು, ಇಂದಿನ ಸಮಕಾಲೀನ ರಾಜಕಾರಣಿಗಳಿಗೆ ಸವಾಲಾಗುತ್ತವೆ. ಧರ್ಮದ ಮತ್ತುರಾಜಕಾರಣದ ನಡುವಿನ ಅಂತರವನ್ನರಿತು ಮಾಡಬೇಕಾದ ಆಡಳಿತದ ಅಡಿಪಾಯವಾಗುತ್ತಾನೆ ‘ತುಘಲಕ್’.   ತನ್ನಕಾಲಕ್ಕಿಂತ ನೂರಾನು ವರ್ಷಗಳ ಮುಂದಿನ ಸುಧಾರಣ ಮುನ್ನೋಟವನ್ನುಇಟ್ಟು, ಸಮತೆ , ಸಾಮರಸ್ಯದಿಂದ ರಾಜ್ಯಾಡಳಿತ ಮಾಡಬೇಕೆಂದು ಹಂಬಲಿಸಿದ ತುಘಲಕ್ಒಂದುಧರ್ಮದದರ್ಶನಕ್ಕೆ ಮಾತ್ರ ಸೀಮಿತವಾಗದೇ ಸೊಕ್ರಟೀಸ್, ಟಾಲ್ಸ್ಟಾಯ್ ಮುಂತಾದ ವಿಶ್ವದ ಇನ್ನಿತರ ಜೀವನ ದರ್ಶನಗಳನ್ನು ಅಧ್ಯಯನದ ಮೂಲಕವೇ ಪ್ರಗತಿ ಮತ್ತು ಸಾಮರಸ್ಯ ಸಾಧ್ಯಎಂದು ನಂಬಿದ್ದ.
ಇಂತಹಉಜ್ವಲ ಭವಿಷ್ಯದ ಕನಸು ಕಂಡ ತುಘಲಕ್ ನ ಸಾಮ್ರಾಜ್ಯದ ಅವನತಿಯ ರಾಜಕಾರಣ ಮತ್ತು ಧರ್ಮಕಾರಣಗಳ ಎತ್ತಿ ಹಿಡಿವ ಈ ಒಂದುಅಪ್ಪಟರಾಜಕೀಯ ನಾಟಕವಾಗಿ ರೂಪುಗೊಂಡಿದೆ.

‍ಲೇಖಕರು G

15 March, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading