ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಂಗಶಂಕರಕ್ಕೆ ಸೂರಿ ಕರೀತಿದಾರೆ

ಮಿಸ್ ಮಾಡ್ಕೋಬೇಡಿ!

–  ಸುರೇಂದ್ರನಾಥ್

ಬೌಲ್ ಗೀತೆಗಳು ಒಂದು ಅದ್ಭುತ ಅನುಭವ ಕೊಡುವ ಒಂದು ಪ್ರಾಕಾರ. ಬಾಂಗ್ಲಾ ಭಾಷೆಯ ಸೂಫಿ ಹಾಡುಗಳು ಇವು. ಹಾಡಿನಲ್ಲಿ ಇವರು ಕೇಳುವ ಪ್ರಶ್ನೆಗಳು ದೇವರನ್ನೂ ಕುರಿತಾಗಿರಬಹುದು, ಪ್ರೇಯಸಿಯನ್ನೂ ಕುರಿತಾಗಿರಬಹುದು. ನಾನು ಪ್ರೇಮಿ ಆಗಬಲ್ಲೆ ಹೇಗೆ ಅಂತ ಕೇಳುವುದು ಈ ಎರಡೂ ಅರ್ಥಗಳಲ್ಲಿ.
ಲಾಲನ್ ಫಕೀರ್ ಇಂತಹ ಒಬ್ಬ ಸೂಫಿ ಸಂತ. ಈತ 116 ವರ್ಷ ಬದುಕಿದ್ದ ಅಂತ ಹೇಳುತ್ತಾರೆ. ತನ್ನ ಹಾಡುಗಳಿಂದ, ತನ್ನ ತತ್ವ ಪದಗಳಿಂದ ತನ್ನ ಜೀವಿತ ಕಾಲದಲ್ಲೇ ಒಂದು ದಂತ ಕಥೆಯಾದವ ಈತ. ಈತನ ಬದುಕು ಮತ್ತು ಕೃತಿಗಳನ್ನು ಆಧರಿಸಿದ ಒಂದು ನಾಟಕ ರಂಗ ಶಂಕರದಲ್ಲಿ.
ಜನವರಿ 17 ಮತ್ತು 18ಕ್ಕೆ. ಬಂಗಾಳದ ಸುಪ್ರಸಿದ್ಧ ನಿರ್ದೇಶಕ ಸುಮನ್ ಮುಖೋಪಾಧ್ಯಾಯ ನಿರ್ದೇಶನದ ಈ ನಾಟಕದಲ್ಲಿ ಅಲ್ಲಿಯ ಸುಪ್ರಸಿದ್ಧ ನಟ ಸುದಿಪ್ತೋ ಚಟರ್ಜೀ ಲಾಲನ್ ಫಕೀರ್ ಆಗಿ ನಟಿಸಲಿದ್ದಾರೆ. ಒಂದು ಅಪರೂಪದ ಅನುಭವ ಪಡೆಯಲು ಬನ್ನಿ. ನೆನಪಿರಲಿ ಈ ಪ್ರಯೋಗಕ್ಕೆ ಭಾಷೆಯ ಹಂಗಿಲ್ಲ.

 
 

‍ಲೇಖಕರು G

11 January, 2013

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading