ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಯುದ್ಧ ಮತ್ತು ಅಪರಾಧ – ದೇವನೂರು ಬರೀತಾರೆ

ಯುದ್ಧ ಮತ್ತು ಅಪರಾಧ

– ದೇವನೂರು ಮಹಾದೇವ

  ಚಕ್ರವರ್ತಿಯೊಬ್ಬನಿಗೆ ಇಡೀ ಭೂಮಂಡಲವನ್ನೆಲ್ಲಾ ಗೆದ್ದು ತನ್ನ ಚಕ್ರಾಧಿಪತ್ಯ ಸ್ಥಾಪಿಸಬೇಕೆಂಬ ಬಯಕೆ. ಅದರಂತೆ ತನ್ನ ಪಕ್ಕದ ರಾಜ್ಯದ ಮೇಲೆ ದಂಡೆತ್ತಿ ಹೋದ. ಘೋರ ಯುದ್ಧ ನಡೆದು ಲಕ್ಷಾಂತರ ಸೈನಿಕರು ಮಡಿದರು. ಚಕ್ರವರ್ತಿ ತಾನು ಗೆದ್ದ ಹಮ್ಮಿನಲ್ಲಿ ಯುದ್ಧಭೂಮಿಯಲ್ಲಿ ಮಡಿದುರುಳಿದ ಸೈನಿಕರ ಶವಗಳತ್ತ ನೋಟ ಬೀರಿದ. ಅವನಿಗೆ ದಿಗ್ಭ್ರಮೆಯಾಗುವ ದೃಶ್ಯವೊಂದು ಕಂಡಿತು. ಆ ನಾಡಿನ ಆದಿವಾಸಿಯೊಬ್ಬ ಹೆಣವೊಂದನ್ನು ಕಿತ್ತು ಗಬಗಬ ತಿನ್ನುತ್ತಿದ್ದ. ಚಕ್ರವರ್ತಿಯನ್ನು ಕಂಡು ಭಯಗೊಂಡ ಆ ಆದಿವಾಸಿ ಅವನನ್ನು ಕುರಿತು ‘ಕ್ಷಮಿಸು ದೊರೆಯೇ, ಹಸಿವನ್ನು ತಾಳಲಾರದೆ ನೀನು ಹೊಡೆದುರುಳಿಸಿದ ಸೈನಿಕನ ಹೆಣವನ್ನು ತಿನ್ನುತ್ತಿದ್ದೇನೆ. ಇದು ನಿನ್ನ ಆಹಾರ. ನಿನ್ನ ಅಪ್ಪಣೆಯಿಲ್ಲದೆ ನಾನು ತಿನ್ನುತ್ತಿರುವುದಕ್ಕೆ ಕ್ಷಮಿಸು’ ಎಂದ. ಅದಕ್ಕೆ ಚಕ್ರವರ್ತಿ ‘ಇಲ್ಲ ನಾನು ನರಮಾಂಸ ಭಕ್ಷಕನಲ್ಲ’ ಎಂದ. ಆದಿವಾಸಿ ಹೇಳುತ್ತಾನೆ ‘ನೀನು ನರಮಾಂಸ ಭಕ್ಷಕನಲ್ಲದಿದ್ದರೆ ಇಷ್ಟೆಲ್ಲಾ ಸೈನಿಕರನ್ನು ಏಕೆ ಕೊಂದೆ. ನಾನಾದರೋ ಹಸಿವಾದಾಗ ಮಾತ್ರ ಅಗತ್ಯಕ್ಕೆ ತಕ್ಕಂತೆ ತಿನ್ನುತ್ತೇನೆಯೇ ಹೊರತು ಹೀಗೆ ಯಾರನ್ನು ಸಾಮೂಹಿಕವಾಗಿ ಕೊಲ್ಲುವುದಿಲ್ಲ’ ಎಂದ. ಚಕ್ರವರ್ತಿಗೆ ಮುಂದೇನು ಮಾತನಾಡಬೇಕೆಂದು ತೋಚದೆ ಬಾಯಿಕಟ್ಟಿತು.  ]]>

‍ಲೇಖಕರು G

13 June, 2012

2 Comments

  1. D.RAVI VARMA

    ಸಾರ್, ತುಂಬಾ ಅರ್ಥಪುರ್ನವಾಗಿದೆ, ನನಗೆ ದಿವಂಗತ ಏನ್,ಟಿ,ಆರ್, ಅದ್ಬುತಾಗಿ ನಟಿಸಿದ ” ಸಾಮ್ರಾಟ್ ಅಶೋಕ” ಸಿನಿಮಾದ ಒಂದು ದೃಶ್ಯ ನೆನಪು ಬರುತ್ತಿದೆ ಅದು ಆತನ ಕೊನೆಯ ಯುದ್ಧ .ಯುದ್ಧವೆಲ್ಲ ಮುಗಿದನಂತರ ಲಕ್ಷಾಂತರ ಜನರ ಮಾರಣಹೊಮವಾಗಿರುತ್ತದೆ, ಆಗ ಅಶೋಕ ಒಂದುಕ್ಷಣ ಯುದ್ಧಬುಮಿಯಲ್ಲಿ ನಿಂತಿರುತ್ತಾನೆ, ಒಬ್ಬ ಹಣ್ಣು ಹಣ್ಣಾದ ಕುರುಡು ಮುದುಕಿ ಅಲ್ಲಿ ಕಳೆಬರ್ಹಗಳನ್ನು ಮುಟ್ಟಿ ಮುಟ್ಟಿ ನೋಡಿ ಹುದುಕುತಿದ್ದಾಳೆ ಆಗ ಅಶೋಕ ಆಕೆಯನ್ನು ಏನು ಹುಡುಕುತ್ತಿದ್ದೀಯ ಎಂದು ಕೇಳುತ್ತಾನೆ ತನ್ನ ಇದ್ದ ಒಬ್ಬನೇ ಮಗನನ್ನು ಆ ಯುದ್ದದಲ್ಲಿ ಕಳೆದುಕೊಂಡು ಆ ಆಜಿ ಆತನ ಹೆಣವನ್ನು ಹುದುಕುತ್ತಿದ್ದೆನೆಂದು , ಇದಕ್ಕೆ ಕಾರಣ ವಾದ ಅಶೋಕನ್ನು ಹಿಗ್ಗ ಮುಗ್ಗ ಶಪಿಸುತ್ತಾಳೆ. ಆ ಕ್ಷಣದಲ್ಲಿ ಆಕೆಗೆ ತಾನು ಅಶೋಕನ ಜೊತೆ ಮಾತದುತಿದ್ದೆಂದು ಗೊತ್ತಿಲ್ಲ . ತನ್ನನ್ನು ಅನಾಥಳನ್ನಗಿಸಿದ ಅಶೋಕನನ್ನು, ಆ ಯುದ್ದವನ್ನು ಶಪಿಸುತ್ತ ಗೊಗರೆಯುವುದನ್ನು ,ಮಮ್ಮಲ ಮರಗುವುದನ್ನು ಕಂಡು ,ಅಶೋಕನಿಗೆ ದಿಗ್ಬ್ರಮೆ ಆಗುತ್ತದೆ, ತನ್ನ ತಪ್ಪಿನ ಅರಿವಾಗಿ ಆತ ಮನಪರಿವರ್ತನೆಗೊಂದು ಬೌದ್ಧ ಧರ್ಮದ ಅನುಯಾಯಿ ಆಗುತ್ತಾನೆ , ನಟನಾನಿಕೆ ನಟಸಾಮ್ರಾತ್ ಎನಿಸಿಕೊಂಡ ದಿವಂಗತ ಏನ್,ಟಿ ,ರಾಮರಾವ್ ಅವರ ಅದ್ಬುತ ನಟನೆ ನನಗಿನ್ನೂ ಕಣ್ಣ ಮುಂದಿದೆ. ನಿಮ್ಮ ಯುದ್ಧದ ಬರಹ ನನಗೆ ಇದನ್ನು ನೆನಪು ಮಾಡಿ ಒಂದಿಸ್ತು ಕಾಡಿತು
    ರವಿ ವರ್ಮ ಹೊಸಪೇಟೆ

  2. nempedevaraj

    devanuuru aparuupakkomme heeluttare. heeliddella styavee agiruttade.allade heeluva matinalliruva taytana ardrate nadina athma mattu ghanateyagabeeku.himse,luuti,rakthapata embudu prabhutvada kelasa ,janasamanyaraddalla.kadime heeli jasti parinama biiruv mahadevaru pdee padee matadabeeku. illadiddare karnataka anatha sthitige barttade. nempe devaraj. tiirthahalli.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading