ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಯಾವುದು ಶಾಸ್ತ್ರೀಯ ಭಾಷೆ ?

ಕನ್ನಡ ಈಗ ಶಾಸ್ತ್ರೀಯ ಭಾಷೆ. ಶಾಸ್ತ್ರೀಯ ಭಾಷೆ ಎಂದರೇನು? ಶಾಸ್ತ್ರೀಯ ಭಾಷೆ- ಏನು ಪ್ರಯೋಜನ ? ಶಾಸ್ತ್ರೀಯ ಸ್ಥಾನ-ಮಾನ  ಪಡೆಯುವುದು  ಮೃತ ಭಾಷೆಯಷ್ಟೆ ? ಕನ್ನಡದ ಇತಿಹಾಸ, ಇದುವರೆಗೆ ತಮಿಳಿನಲ್ಲಿ ಆಗಿರುವುದೇನು ? ಈ ಪ್ರಶ್ನೆಗಳಿಗೆ ಅರವಿಂದ ನಾವಡರು ತಮ್ಮ ‘ಚೆಂಡೆ ಮದ್ದಳೆ‘ ಬ್ಲಾಗ್ನಲ್ಲಿ  ಉತ್ತರ ಕೊಟ್ಟಿದ್ದಾರೆ. ಅಲ್ಲಿಗೆ ಭೇಟಿ ಕೊಡಿ-

ಚಿತ್ರ: ಪ್ರಸನ್ನ
ಯಾವುದು ಶಾಸ್ತ್ರೀಯ ಭಾಷೆ ?
ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ಭಾಷಾ ವಿದ್ವಾಂಸ ಜಾರ್ಜ್ ಎಲ್.  ಹಾರ್ಟ್ ಎಂಬುವವರು ಶಾಸ್ತ್ರೀಯ ಭಾಷೆಗೆ ಈ ಕೆಳಕಂಡ ಚಹರೆಗಳನ್ನು ಗುರುತಿಸುತ್ತಾರೆ.
– ಭಾಷೆಯ ದಾಖಲಾದ ಇತಿಹಾಸ ಒಂದು ಸಾವಿರ ವರ್ಷಕ್ಕೂ ಪುರಾತನವಾಗಿರಬೇಕು(ತಮಿಳಿಗರ ಒತ್ತಾಯಕ್ಕೆ ಮಣಿದು ಈಗ ಒಂದೂವರೆ ಸಾವಿರ ವರ್ಷ ಎಂದು ಬದಲಿಸಲಾಗಿದೆ)
– ಪುರಾತನ ಸಾಹಿತ್ಯ ತಲೆ ತಲೆಮಾರುಗಳ ಜನರಿಂದ ಅತ್ಯಂತ ಮೌಲಿಕ ಪರಂಪರೆಯೆಂದು ಪರಿಗಣಿತವಾಗಿರಬೇಕು.
– ಸಾಹಿತ್ಯ ಪರಂಪರೆ ಸ್ವೋಪಜ್ಞವಾಗಿದ್ದು, ಬೇರೆ ಭಾಷೆ- ಸಮುದಾಯದಿಂದ ಸ್ವೀಕಾರವಾಗಿರಬಾರದು.
– ಕ್ಲಾಸಿಕಲ್ ಭಾಷೆ ಮತ್ತು ಅದರ ಸಾಹಿತ್ಯ , ಪ್ರಸ್ತುತ ಭಾಷೆ- ಸಾಹಿತ್ಯಕ್ಕಿಂತ ಭಿನ್ನವಾಗಿರಬೇಕು.

‍ಲೇಖಕರು avadhi

1 November, 2008

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading