ನನ್ನ ಡೋರ್ ನಂ ೧೪೨ ಕೃತಿಗೆ ಅಪಾರ ಮಾಡಿದ ಎರಡು ಮುಖಪುಟಗಳು ಇವು. ಅಪಾರನನ್ನು ಹೈದರಾಬಾದ್ ನಿಂದ ಸಂಪರ್ಕಿಸಿ ಹೀಗೆ ಮನೆಯೊಂದರ ಕಥೆ ಹೇಳ್ತಾ ಇದ್ದೀನಿ ಮುಖಪುಟ ಬೇಕು ಅಂದೆ. ಅಪಾರ ತಕ್ಷಣ ತನ್ನ ಆತ್ಮೀಯ ಗೆಳೆಯ ಡಿ ಜಿ ಮಲ್ಲಿಕಾರ್ಜುನ್ ಗೆ ಕರೆ ಮಾಡಿ ಹೀಗೀಗೆ.. ಅಂತ ಹೇಳಿ ಚಿತ್ರ ತೆಗೆಯಲು ಹೇಳಿದರು ಹಾಗೆ ತೆಗೆದ ಚಿತ್ರ ಇಲ್ಲಿ ಮುಖಪುಟವಾಗಿದೆ.
ಆದರೆ ನಾನು ಬರೆದದ್ದು ಒಂದು ಕಾಲದ ಮನೆಯ ಕಥೆಯಲ್ಲ. ಈಗಲೂ ಜೀವಂತವಾಗಿರುವ ಮನೆಯ ಕಥೆ. ಹಾಗಾಗಿ ಮುಚ್ಚಿದ ಬಾಗಿಲಿನ, ಈ ಹಳೆಯ ಮನೆಯನ್ನು ಹಿನ್ನೆಲೆಗೆ ಸರಿಸಿ ಏನು ಮಾಡುವುದು ಎಂಬ ತಲಾಶ್ ನಲ್ಲಿ ತೊಡಗಿದೆವು. ಆಗ ಸಿಕ್ಕಿದ್ದು ಪ ಸ ಕುಮಾರ್. ಅವರಿಗೆ ಅಪಘಾತವಾಗಿ ಬಲಗೈನಲ್ಲಿ ಕೆಲಸ ಮಾಡುವ ಹಾಗಿರಲಿಲ್ಲ. ಕಲಾವಿದನಿಗೆ ಬರೆಯುವ ಕೈಯೇ ಇಲ್ಲವಾದರೆ…? ಪ ಸ ಕುಮಾರ್ ಎದೆಗುಂದಲಿಲ್ಲ. ಎಡಗೈನಲ್ಲಿಯೇ ಬರೆಯಲು ಆರಂಭಿಸಿದರು. ಹಾಗೆ ಬರೆದ ಹಲವು ಚಿತ್ರಗಳಲ್ಲಿ ಇದೂ ಒಂದು.
ಇಲ್ಲಿಯ ಒಂದು ಸೂಕ್ಷ್ಮ ಗಮನಿಸಿದ್ದೀರಾ. ಇಲ್ಲಿ ಎಡಗೈ ಒಂದು ಮನೆಯಾಗಿದೆ. ಆ ಮನೆಯೊಳಗೇ ಸಂಸಾರವಿದೆ. ಪ ಸ ಕುಮಾರ್ ಹೇಗೆ ತನ್ನ ಎಡಗೈ ಇಡೀ ಬದುಕಿಗೆ ಸಂಸಾರಕ್ಕೆ ಆ ದಿನಗಳಲ್ಲಿ ಆಧಾರವಾಯಿತು ಎಂಬುದನ್ನು ಬಿಡಿಸಿಟ್ಟಿದ್ದಾರೆ.
ಈ ಚಿತ್ರ ನನಗೆ ಇಷ್ಟವಾಗಲು ಕಾರಣ ಇಲ್ಲಿ ಮನೆ ಬಾಗಿಲಿದೆ. ಸಂಸಾರವಿದೆ, ಅದು ಜೀವಂತವಿದೆ ಎನ್ನುವುದು . ಇದನ್ನು ಅಪಾರನಿಗೆ ಕಳಿಸಿದೆ. ಪ ಸ ಕುಮಾರ್ ನನ್ನ ಈ ಪುಸ್ತಕಕ್ಕೆ ಹತ್ತು ಹಲವಾರು ಚಿತ್ರ ಬರೆದರು. ಅದೆಲ್ಲವೂ ಒಳಪುಟದಲ್ಲಿದೆ. ಅಷ್ಟೇ ಅಲ್ಲ, ಈ ಪುಸ್ತಕಕ್ಕೆ ಚಿತ್ರ ಬರೆಯಲು ಕುಂಚ ಹಿಡಿದ ಪ ಸ ಕುಮಾರ್ ಪೆನ್ನನ್ನೂ ಹಿಡಿದು ಈ ಪುಸ್ತಕ ಹುಟ್ಟು ಹಾಕಿದ ಭಾವನೆಗಳನ್ನೆಲ್ಲಾ ಹೊರಗಿಟ್ಟರು. ಅದೂ ಈ ಪುಸ್ತಕದಲ್ಲಿದೆ . ಇದು ಒಂದು ರೀತಿಯಲ್ಲಿ ಸವಿ ಸವಿ ನೆನಪು.. ಸಾವಿರ ನೆನಪು..
ಈಗ ಹೇಳಿ ಈ ಮೇಲಿನ ಎರಡು ಮುಖಪುಟದಲ್ಲಿ ಯಾವುದು ಇಷ್ಟವಾಯಿತು..?








ಅಪಘಾತಗೊಂಡ ಸಮಯದಲ್ಲೂ ಎಡಗೈ ನಲ್ಲಿ ಚಿತ್ರ ಬರೆದ
ಕಲಾವಿದನ ಕ್ರಿಯಾಶೀಲತೆಗಾದರೂ ನಾವು ಮೆಚ್ಚಲೇಬೇಕು.
ಅಷ್ಟೇ ಅಲ್ಲ, ಕ್ಯಾಮರಾದಲ್ಲಿ ತೆಗೆದ ಚಿತ್ರಕ್ಕಿಂತಲೂ ಈ ರೇಖಾ ಚಿತ್ರವೇ
ಹೆಚ್ಚು ಜೀವಂತವಾಗಿದೆ.ನನ್ನ ಓಟು ಅದಕ್ಕೆ!
-ರಾಘವೇಂದ್ರ ಜೋಶಿ
ಮುಚ್ಚಿದ ಬಾಗಿಲ ಹಿಂದೆ ಬಚ್ಚಿಟ್ಟುಕೊಂಡ ಕಥೆ-ವ್ಯಥೆಗಳ ಸಂಕೇತವೆಂಬಂತಿದೆ ಮೊದಲ ಡಿಸೈನ್…!
ವಿಭಿನ್ನವಾದ ಮುಖಚಿತ್ರ ಎಂಬುದು ನನ್ನ ಅಭಿಪ್ರಾಯ.
ನಮಸ್ಕಾರ.
No doubt Pa,Sa. Kumar is great…
But I like DG Malli”photo… !
pa.sa.kumar avara rekha chitragaLu as usual super and apara has used it very creatively. But my choice is the locked door
🙂
ms
Best wishes on the occasion of book release G.N. Mohan avare!!!
malathi and Srikanth Shenoy
modhalaneya chitra kathe-ya kuthuhalavanu huthisuthade,
bagilanu teradhu kateyanu odduhudhake dari endu nana bhavane.
Sir, the design is superb…and no doubt its same with the content of the book of urs too..lets have it soon…congrats
ಮೋಹನ್ ಸಾರ್, ನನಗೆ ಮುಖಪುಟ ತುಂಬಾ ಇಷ್ಟವಾಯಿತು. ಒಳ್ಳೆಯ ಲೇಖಕರಿಗೆ ಯಾವತ್ತೂ ಒಳ್ಳೆಯ ವಿನ್ಯಾಸಕಾರರೇ ಸಿಗುತ್ತಾರೆ ಎಂಬುದು ತುಂಬ ಚೆಂದದ ವಿನ್ಯಾಸ ನೋಡಿ ಅನ್ನಿಸಿತು. ಖ್ಯಾತ ಲೇಖಕ ಖುಷ್ ವಂತ್ ಸಿಂಗ್ ಅವರು ತಮ್ಮಲ್ಲಿ ವಿಮಶೆ೯ಗೆ ಬರುತ್ತಿದ್ದ ನೂರಾರು ಪುಸ್ತಕಗಳ ಭವಿಷ್ಯವನ್ನು ಕಣ್ಣ ಅಳತೆಯಲ್ಲೇ ನಿಧ೯ರಿಸುತ್ತಿದ್ದರು. ಯಾವ ಪುಸ್ತಕವನ್ನು ವಿಮಶೆ೯ ಮಾಡಬೇಕೆಂದು ನಿಧ೯ರಿಸಲು ಅವರು ಕೆಲ ಮಾನದಂಡಗಳನ್ನು ಇಟ್ಟಕೊಂಡಿದ್ದರು. ಕೆಲವನ್ನು ಪುಸ್ತಕದ ವಿನ್ಯಾಸ ನೋಡಿ ತೆಗೆದಿಡುತ್ತಿದ್ದರು. ಮತ್ತೆ ಕೆಲವನ್ನು ಲೇಖಕನ ಹೆಸರು ನೋಡಿ ಪಕ್ಕಕ್ಕೆ ಇಡುತ್ತಿದ್ದರು. ನೂರಾರು ಪುಸ್ತಕಗಳಲ್ಲಿ ವಿಮಶೆ೯ಗೆ ಆಯ್ದುಕೊಳ್ಳುತ್ತಿದ್ದದ್ದು ಬೆರಳೆಣಿಕೆಯಷ್ಟನ್ನು ಮಾತ್ರ. ಇರಲಿ. ಮೊನ್ನೆ ನಿಮ್ಮ ಪ್ರಶ್ನೆಗಳಿರುವುದೇ ಶೇಕ್ಸ್ ಪಿಯರನಿಗೆ ಪದ್ಯ ಓದಿದೆ. ಇಷ್ಟವಾಯಿತು. ಪುಸ್ತಕ ಬಿಡುಗಡೆ ಸಮಾರಂಭ ಯಶಸ್ವಿಯಾಗಲಿ. ನಿಮಗೂ, ಜೋಗಿಗೂ ಅಭಿನಂದನೆಗಳು.
ಉಗಮ ಶ್ರೀನಿವಾಸ, ತುಮಕೂರು
ಎಡಗೈ ಕಥೆ ಕೆಳಿದ ಮೇಲೆ ಪ.ಸ ಅವರ ಚಿತ್ರ ಚೆನ್ನಾಗಿ ಕಾಣಿಸ್ತಿದೆ 🙂 ಅಪಾರ rocks!!!!
ವಸುಧೇಂದ್ರ ತಮ್ಮ ’ಹಂಪಿ ಎಕ್ಸ್ ಪ್ರೆಸ್’ ಗೆ ಮುಖಪುಟ ಸ್ಪರ್ಧೆ ಏರ್ಪಡಿಸಿದಾಗಲೂ ನನಗೆ ಬರೀ ರೈಲಿನ ಚಿತ್ರದ ಮುಖಪುಟಗಳೇ ಹೊಳೀತಿದ್ವು. ಆದ್ರೆ ಮುಖಪುಟಕ್ಕೂ ಶೀರ್ಷಿಕೆಗೂ ಸಂಬಂಧ ಇರಲೇ ಬೇಕು ಅಂತ ಇಲ್ಲ.
ಅಪಾರ ಅಂತೂ ಕೇಳೋದೇ ಬೇಡ ಏನೆ ಮಾಡಿದ್ರೂ ಶೃದ್ಧೆಯಿಂದ ಮಾಡ್ತಾರೆ,ಅದಕ್ಕೆ ಜೀನಿಯಸ್ ಅವರು ….
Sahityada babbe Hechenu Gottirad nan antvrigu Kuda istavagiddu Nimma ಮೊದಲ ಡಿಸೈನ್…! Yakndre Muka puta Nodida Takshna Book nu Kaige tegedukondu Putta tirugisuva ವಿಭಿನ್ನವಾದ ಮುಖಚಿತ್ರ ಎಂಬುದು ನನ್ನ ಅಭಿಪ್ರಾಯ Sir.
The drawings may say a lot, but i feel the first option with the locked door is simple and attractive and hence the first one….
ಪ.ಸ. ಕುಮಾರರ ಎಡಗೈಯಿಂದ ಮೂಡಿಬಂದ ಚಿತ್ರ ಅದರ ಹಿನ್ನೆಲೆಯನ್ನು ಅರಿತುಕೊಂಡು ನೋಡಿದಾಗ ಮನಕಲುಕುವಂತಿದೆ.
ಕಲಾವಿದರು ಅಪ್ರತಿಮರೆನೆಸಿಕೊಳ್ಳುವುದು ತಮ್ಮ ಇಂಥ ರಚನಾ ಕೌಶಲ್ಯದಿಂದ!
first design
Mucchida bagelna ende 100 kathegalu irruthe
both are good and meaningful–sunitha
Wow….. ! Aghaat mattu Anand Aaa eradannu Nibhayisuva Shakti A Kaigide……..
mucchida baagilE nanna aayke sir.