ಅವನು ನಿಜಕ್ಕೂ ‘ಪುಂಟಿಲ’ನೇ! ಸಂತೋಷ, ಹೆಮ್ಮೆ, ಪ್ರೀತಿ, ಆತ್ಮೀಯತೆ, ದ್ವೇಷ, ಹತಾಷೆ, ಸಣ್ಣತನ, ದುರಹಂಕಾರ… ಮನುಷ್ಯ ಬದುಕಿನ ಭಾವನೆಗಳೆಲ್ಲವನ್ನೂ
ಅತ್ಯಂತ ತೀವ್ರವಾಗಿ ಅನುಭವಿಸುತ್ತಿದ್ದ ನಟರಾಜ ಏಣಗಿ ‘ರಂಗ’ದಷ್ಡೇ ಜೀವನವನ್ನೂ ಅತೀನಾಟಕೀಯಗೊಳಿಸಿಬಿಟ್ಟಿದ್ದ!
ಅಂತಃಕರಣಿ ಅಪ್ಪ ಬಾಳಪ್ಪಜ್ಜ, ಮಮತೆಯ ಮೂರ್ತಿ ಅವರವ್ವ, ಅಭಿಮಾನದ ಅಣ್ಣಂದಿರು… ಅಸಂಖ್ಯ ಆರಾಧಿಸುವ ವರ್ಗ ಎಲ್ಲರೂ ಇದ್ದು
‘ಇರದುದರೆಡೆಗೆ ತುಡಿಯುವ’ ಒಂಟಿತನದ ವಿಕ್ಷಿಪ್ತತೆಯ ನಿಜದ ನೆಲೆ ಕೊನೆಯವರೆಗೂ ನನಗರ್ಥವಾಗಲೇ ಇಲ್ಲ!
ಕೈಲಾಸಂ, ಕಾಳಿಂಗರಾಯರು, ಕಾರಂತರು, ರಾಜು ಅನಂತಸ್ವಾಮಿ… ಅದ್ವಿತೀಯರೆನಿಸಿದವರೆಲ್ಲರ ಅಂತಃಮುಖಿತನದ
ಅನೂಹ್ಯ ಅವಸಾನದ ಅರ್ಥದ ಅರಿವಾಗಿರುವುದು ನೋವಿನ ಅಚ್ಚರಿಯೂ ಹೌದು.!
ಅವನ ಹತ್ತಿರವೂ ಇಲ್ಲದ ಅಪರೂಪದ ಚಿತ್ರವೊಂದನ್ನು ಅಂಟಿಸಿದ್ದೇನೆ..!
ನಿಜ ರಮೇಶ್, ಈ ರಂಗಜೀವಿ ಇರಬೇಕಾಗಿತ್ತು ,ನನಗಿನ್ನೂ ಆತನ ತದ್ರೂಪಿ ನಟನೆಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ.”ಏನಾದ್ರೂ ಮಾಡಿ ನಟರಾಜ ನಿಗೊಂದು ನಮಸ್ಕಾರ ” ಕಾರ್ಯಕ್ರಮ ಹಮ್ಮಿಕೊಳ್ಳಿ ನಾನು ನಿಮ್ಮ ಜೊತೆ ಇರುವೆ .
ರವಿ ವರ್ಮ ಹೊಸಪೇಟೆ ೯೯೦೨೫೯೬೬೧೪
nijavagiyu tumba aparupada photo…..6 salugalalli nataraj ravara
badukanna teredittiddiri.. evathu avaru nammondige eilla,adare
avara nenapina navilugari sada nammondhige eruthe….
ಹೌದು ರಮೇಶ್ , ಕನ್ನಡ ರಂಗಭೂಮಿಯ ಇಬ್ಬರು ರಾಜರನ್ನು ಮರೆಯುಂತೆಯೇ ಇಲ್ಲ ಇಬ್ಬರೂ ನಮ್ಮೂರಿನಲ್ಲೂ ಅಭಿನಯಿಸಿದವರೆ, ನಮ್ಮೂರಿನ ಜನ ಇಬ್ಬರ ಅಬಿನಯ- ಹಾಗೂ ಬದುಕು (ಇವರಿಬ್ಬರ ಬದುಕೂ ಒಂದು ರಂಗಕೃತಿಗೆ ಆಧಾರವಾಗುವಂತಿದೆ) ಮರೆಯಲಾರರು, ಒಬ್ಬ ಧ್ರುವರಾಜ, ಇನ್ನೊಬ್ಬ ನಟರಾಜ ಇಬ್ಬರೂ ಉತ್ತರ ಕರ್ನಾಟಕದ ಪ್ರತಿಭೆಗಳೇ..