ಸುಚಿತ್ರ ಸಭಾಂಗಣದಲ್ಲಿ ಚಂದಿರನ ಚೂರುಗಳ ಮಿಣಿ ಮಿಣಿ ಬೆಳಕು. ಜಯಂತ ಕಾಯ್ಕಿಣಿಯವರ
‘ಅಮೃತ ಬಳ್ಳಿ ಕಷಾಯ’ ಕಥಾ ಸಂಕಲನ ಮತ್ತೊಮ್ಮೆ ನೆನಪು. ಸಂಕಲನದ ‘ಚಂದಿರನೇತಕೆ ಓಡುವನಮ್ಮಾ’ ಕಥೆಯ ನೋಟಕ ರೂಪವನ್ನು ರಂಗಕ್ಕೇರಿಸಿದ್ದು ಮೌನೇಶ ಎಲ್ ಬಡಿಗೇರ.
ಇವರ ವಿನ್ಯಾಸ ಮತ್ತು ನಿರ್ದೇಶನ ಪ್ರಯೋಗದ ಕಟ್ಟುವಿಕೆಯಲ್ಲಿ ಕಂಡುಕೊಂಡ ಕಥೆಯ ಹಲವು ಮಜಲುಗಳನ್ನು, ಅವು ಹೊರಡಿಸುತ್ತಿರುವ ವಿಶಾಲ ಅರ್ಥಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಪ್ರಯೋಗದ ಶೀರ್ಷಿಕೆಯನ್ನು ‘ಚಂದಿರನ ಚೂರು’ ಮಾಡಿದ್ದು ಸೂಕ್ತವಾಗಿತ್ತು. ಇಡೀ ವೇದಿಕೆಯಲ್ಲಿ ಚಂದ್ರನೊಟ್ಟಿಗೆ ಮಿನುಗಿದ್ದು ಮುದ್ದು ಮಗುವಿನ ಪಾತ್ರ. ಉಳಿದ ಪಾತ್ರಗಳ ನೆನಪು ನೋಡಿದವರೆದೆಯಲ್ಲಿ ಕತ್ತಲೇ ಕಾಣದ ಬೆಳದಿಂಗಳು..
ಈ ಪ್ರಯೋಗದ ಹಾಲದಿಂಗಳ ನೆನಪಿನ ಛಾಯಾಚಿತ್ರಗಳು ನಿಮಗಾಗಿ.
ಫೋಟೋಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ






missed it!!!!!