
ಕಿರಣ್ ಭಟ್
ಮೋಹನಲಾಲ್ ಎಂಬ ಮಹಾನ್ನಟ
ಅದು 1982, ಆಗ ತ್ರಿವೇಂದ್ರಮ್ ಎಂದು ಕರೆಸಿಕೊಳ್ಳುತ್ತಿದ್ದ ತಿರುವನಂತಪುರಂ ನಲ್ಲಿ ಒಂದು ವರ್ಷ ಟ್ರೇನಿಂಗ್ ಗಾಗಿ ಇದ್ದ ಸಮಯ. ಅಲ್ಲಿ ಆಗ ತಾನೇ ಪ್ರಾರಂಭವಾದ ಅಥಿರಾ, ಅತುಲ್ಯಾ, ಟಾಕೀಸುಗಳೇ ನಮ್ಮ ಮನರಂಜನೆಯ ಮುಖ್ಯ ತಾಣಗಳು. ಬಿಡುವಾದಾಗಲೆಲ್ಲ ಸಿನಿಮಾಗೆ ದೌಡು.
ಆ ಕಾಲದಲ್ಲಿ ನೋಡಿದ ಒಂದು ಮಹಾನ್ ಚಿತ್ರ ‘ಪಡಯೋಟ್ಟಂ’.ಆ ಕಾಲದಲ್ಲಿ 70mm 6 ಟ್ರ್ಯಾಕ್ ಧ್ವನಿಯೊಂದಿಗೆ ಕ್ರಾಂತಿ ಮಾಡಿದ ಚಿತ್ರ ಅದು.ಪ್ರೇಮ್ ನಝೀರ್, ಮಮ್ಮೂಟಿ , ಮಧು, ಲಕ್ಷ್ಮಿ ಯಂಥ ಅತಿರಥ ಮಹಾರಥರ ನಡುವೆಯೂ ಅದ್ಭುತ ನಟನೆಯ ಮೋಹನಲಾಲ್ ತುಂಬ ಇಷ್ಟವಾದರು.
ಅಂದಿನಿಂದಲೂ ನಾನವರ ಫ್ಯಾನ್.ಅದರ ನಂತರ ನಾನು ಅವರ ಅದೆಷ್ಟೋ ಚಿತ್ರಗಳನ್ನು ನೋಡಿದ್ದೇನೆ. ಎಂಥ ಪಾತ್ರವನ್ನೂ ಸಮರ್ಥವಾಗಿ ನಿಭಾಯಿಸಬಲ್ಲ ನಟ ಮೋಹನಲಾಲ್. ‘ದೃಶ್ಯಂ’ ಅಂತೂ ಒಂದು ಅದ್ಭುತ. ಅವರಿಗೀಗ ‘ದಾದಾಸಾಹೇಬ್ ಫಾಲ್ಕೆ’ ಪ್ರಶಸ್ತಿ ಸಂದಿದೆ.
ಲಾಲೆಟ್ಟನ್ ಚಿತ್ರ : ‘ಪಡಯೋಟ್ಟಮ್ ’ನಲ್ಲಿ ಮೋಹನಲಾಲ್






0 Comments