ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮೋಹದ ಪ್ರೇಮದ ಕಲೆಗಳಿಲ್ಲ

Sandeep Ishanyaಸಂದೀಪ್ ಈಶಾನ್ಯ

ಇರಲಿ ಹೀಗೇ ನಿನ್ನ ಮುಖ ಆ ದಿಕ್ಕಿಗೆ
ಅದ ನೀ ಇತ್ತ ತಿರುಗಿಸಿದರೆ
ನಾನು ಕಳೆದುಹೋಗಬಹುದು
ಕರಗಿ ಹೋಗಬಹುದು
ಕಂಗಾಲಾಗಿಯೂ ಬಿಡಬಹುದು
ನೀನು ನನ್ನತ್ತ ತಿರುಗಿ ಹೊರಡಿಸುವ
ದಿಟ ನೋಟವನ್ನು ಉಳಿಸಿಕೊಳ್ಳುವುದು ಹೇಗೆ
ನೆಲಕ್ಕೆ ಬಿದ್ದು ಒಡೆದು ಚೂರಾದ ನಕ್ಷತ್ರದ ಅಲುಗಿನಿಂದ ಇರಿಯುವುದಿಲ್ಲ ಎನ್ನುವುದ ನಂಬುವುದು ಹೇಗೆ
ಇಲ್ಲಿ
ಸತ್ಯ ನುಡಿಯುವುದು ಸುಲಭ
ಅದ ನಂಬಿಸುವುದು
ನಂಬಿ ಜತೆ ಬದುಕಿಸುವುದು ತ್ರಾಸು
ಅದಕ್ಕೆ ದಯವಿಟ್ಟು ನೀ ನನ್ನತ್ತ ತಿರುಗದಿರು
ಹುಡುಗಿ
ಹಾಗಿದ್ದಾಗ ಮಾತ್ರ ನಿನ್ನ ನೀಳ ಜಡೆಯ
ಆಕಾರದ ಆಧಾರವನ್ನಿಟ್ಟುಕೊಂಡು ಬರೀ ಕನಸಿನೊಳಗಿನ ಕುಸುರಿ ಕೆಲಸ ಆರಂಭಿಸಬಹುದು
ಅವಳ ಮುಖದಲ್ಲಿ ಸಿಡುಕಿಲ್ಲ
ಸುಳ್ಳಿನ ಗೆರೆಗಳಿಲ್ಲ
ಲಜ್ಜೆಯ ಕುರುಹುಗಳಿಲ್ಲ
ಮೋಹದ ಪ್ರೇಮದ ಕಲೆಗಳಿಲ್ಲ ಎಂದೂ
ಎಲ್ಲಾ ಬಲ್ಲವನಂತೆ ನಾನೇ ಘೋಷಿಸಿ ಹಿಗ್ಗಬಹುದು
ನಿನ್ನ ದೂಷಿಸಿ ಕುಗ್ಗಿಸಬಹುದು
ಬಹುತೇಕ ಕವಿಗಳಂತೆ ಊಹೆಯ ಮನೆಯೊಳಗೆ ಛಾವಣಿಯಿಲ್ಲದೆ ಬದುಕಿಬಿಡಬಹುದು
ಅದೇ
ನೀ ಇತ್ತ ತಿರುಗಿದರೆ?

‍ಲೇಖಕರು Admin

3 September, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading