ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೆ ನಲ್ಲತಂಬಿ ಕೃತಿ ಬಿಡುಗಡೆ…

ಕೆ ನಲ್ಲತಂಬಿ

ಕನ್ನಡದಿಂದ ತಮಿಳಿಗೆ ಸುಮಾರು 20 ಪುಸ್ತಕಗಳು, ತಮಿಳಿನಿಂದ ಕನ್ನಡಕ್ಕೆ ಸುಮಾರು 10 ಪುಸ್ತಕಗಳು ಈ 8 ವರ್ಷಗಳಲ್ಲಿ ಪ್ರಕಟವಾಗಿದ್ದರೂ, ಯಾವುದೂ ಸಮಾರಂಭ ಆಚರಿಸಿ ಅಧಿಕೃತವಾಗಿ ಬಿಡುಗಡೆಯಾಗಿರಲಿಲ್ಲ. ಇದೇ ಮೊದಲ ಬಾರಿ ನನ್ನ ಮೂರು ಕೃತಿಗಳು ಒಟ್ಟೊಟ್ಟಿಗೆ ಬಿಡುಗಡೆಯಾಗಲಿವೆ ಎಂಬುದು ಖುಷಿಯ ಸಂಗತಿ.

  1. ಮತ್ತೊಂದು ರಾತ್ರಿ-ಗಾಂಧಿಯ ಬಗ್ಗೆಯ ವಿವಿಧ ತಮಿಳು ಲೇಖಕರ ಕಾಲ್ಪನಿಕ 11 ಸಣ್ಣಕತೆಗಳ ಸಂಕಲನ. ಅಭಿರುಚಿ ಪ್ರಕಾಶನ , 9980560013 ₹ 140.
  2. ಬಾಪೂ ಹೆಜ್ಜೆಗಳಲ್ಲಿ , 15 ಗಾಂಧಿ ಅನುಯಾಯಿಗಳ ಕಿರು ಜೀವನ ಪರಿಚಯ. ತಮಿಳಿನಲ್ಲಿ ಪಾವಣ್ಣನ್. ಪಲ್ಲವ ಪ್ರಕಾಶನ 8880087235 ₹140.
  3. ಖ್ಯಾತ ತಮಿಳು ಲೇಖಕರಾದ ಟಿ.ಜಾನಕಿರಾಮನ್ ಅವರ 17 ಸಣ್ಣ ಕತೆಗಳು. ಲಡಾಯಿ ಪ್ರಕಾಶನ ₹ 180.
    ಈ ಮೂರು ಕೃತಿಗಳು 18 ಜೂನ್ 2022 ಶನಿವಾರ ಬೆಳಗ್ಗೆ 10.30ಕ್ಕೆ ಬಾಪೂ ಸಭಾಂಗಣ, ಗಾಂಧಿ ಭವನ, ಬೆಂಗಳೂರು, ಇಲ್ಲಿ ಲೋಕಾರ್ಪಣೆ ಆಗಲಿದೆ.
    ಈ ಮೂರೂ ಕೃತಿಗಳು ತಮಿಳುನಾಡು ಸರ್ಕಾರದ ಅನುವಾದ ಯೋಜನೆಯ ಅಡಿಯಲ್ಲಿ ಪ್ರಕಟವಾಗುತ್ತಿರುವ ಮೊದಲ ಸರಣಿಯ ಮೂರು ಪುಸ್ತಕಗಳು.
    ದಯಮಾಡಿ ಬಿಡುವು ಮಾಡಿಕೊಂಡು ಬನ್ನಿ.

‍ಲೇಖಕರು Admin

31 May, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading