ವಿಚಿತ್ರ ಅ೦ದರೆ….
– ಸುಶ್ರುತಾ ದೊಡ್ಡೇರಿ

ವಿಶೇಷ ಅಂದ್ರೆ, ಒಬ್ಬ ಹುಡುಗಿಗೆ ಮದುವೆ ಆಗ್ತಿದ್ದ ಹಾಗೇ, ಅವಳ ಅಪ್ಪ-ಅಮ್ಮ ಸಹ ನೆಂಟರ ಥರ ಆಗಿಹೋಗೋದು! ಅಷ್ಟು ದಿನ ತವರಲ್ಲೇ ಒಟ್ಟಿಗೇ ಇದ್ದು ಬೆಳೆದ, ಒಂದು ದಿನವೂ ತಾನಾಗಿ ಅಡುಗೆ ಮಾಡದ ಹುಡುಗಿಯೂ, ಈಗ ಮನೆಗೆ ಬಂದ ಅಪ್ಪ-ಅಮ್ಮರಿಗೆ “ಟೀನಾ? ಕಾಫೀನಾ?” ಕೇಳ್ಬೇಕು, ಕೂತ್ಕೊಳಿ, ಸಂಕೋಚ ಮಾಡ್ಕೋಬೇಡಿ, ಎರಡೇ ದೋಸೇನಾ, ಇನ್ನೊಂದು ತಿನ್ನಿ, ಅಯ್ಯೋ ನೀವ್ ಕೆಲಸ ಮಾಡ್ಬೇಡಿ, ಆರಾಮ್ ಮಾಡಿ, ಅಂತೆಲ್ಲ ಉಪಚರಿಸಬೇಕು.. ಸದಾ ಅಮ್ಮನ ಮೇಲೆ ಸಿಟ್ಟು ಮಾಡ್ತಿದ್ದ ಹುಡುಗಿ ಈಗ ದೊಡ್ಡ ಮಾತೇ ಆಡೋಹಾಗಿಲ್ಲ.. ಗಂಡನ ಇಷ್ಟವಾಗದ ಗುಣಗಳನ್ನೂ ಮೆಚ್ಚಿದವಳಂತೆ, ಪರ-ವಹಿಸಿ ಮಾತಾಡ್ಬೇಕು.. ತೀರಾ ಮಗಳ ಮನೆಗೇ ಬಂದಿದ್ದರೂ ಎಲ್ಲಿ ಕೂರ್ಬೇಕು, ಏನು ಮಾಡ್ಬೇಕು, ಏನು ಮಾಡ್ಬಾರ್ದು ಅನ್ನೋ ಸಂಕಷ್ಟದಲ್ಲಿರೋ ಅವರ ಇರುಸು-ಮುರುಸು ಕಮ್ಮಿಯಾಗೋ ಹಾಗೆ ವರ್ತಿಸಬೇಕು.. ‘ಅಲ್ಲಿ ಹಾಗಿದ್ದ ಮಗಳು ಇವಳೇನಾ?’ ಎನಿಸಿದ ಅವರ ಕಣ್ಣಲ್ಲಿ ತುಂಬಿಕೊಂಡ ನೀರನ್ನು ನೋಡಿಯೂ ನೋಡದಂತೆ, ‘ಮದುವೆ ಫೋಟೋಸಲ್ಲಿ ನೀವು ಹೇಗ್ ಕಾಣ್ತಿದೀರಾ ಗೊತ್ತಾ? ತೋರಿಸ್ತೀನಿ ಬನ್ನಿ’ ಅಂತ ಕರೆದು ನಗಿಸಬೇಕು! ಆಹ್!]]>
Like this:
Like Loading...
Related
Picture abhi baki hei dost 🙂
howdalva?lifu ishte kanri…
Awesome, aadare eradu varsha kaLili.
ನಿಮ್ಮ ಸೂಕ್ಷ್ಮ ಮನೋಗ್ರಹಿಕೆಗೆ ಸಲಾಂ…