ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಮೊದಲೀಗೆ ಅಪ್ಪ ಅಮ್ಮನಿಗೆ ಶರಣು'


.’ಮೊದಲೀಗೆ ಅಲ್ಲಮ ಪ್ರಭುವಿಗೆ ಶರಣಾರ್ಥಿ, ಕೂಡಿ ಕುಂತ ಜನಕೆಲ್ಲ ನಮ್ಮ ನಮನ’ ಎನ್ನುತ್ತಾರೆ ಕವಿ ಚಂದ್ರಶೇಖರ ಕಂಬಾರ ಅವರು.

ಆ ಗುರು ಅಲ್ಲಮನಿಗೆ ಮೊದಲ ಶರಣು ಹೇಳದೆ ಅವರಿಂದ ಮಾತು ಹೊರಡುವುದಿಲ್ಲ, ಒಂದಕ್ಷರವೂ ಹಾಳೆಗಿಳಿಯುವುದಿಲ್ಲ. ಇದು ಹೌದು ಹೌದು ಅನ್ನುವಂತೆ ಮತ್ತೆ ಮನವರಿಕೆ ಮಾಡಿಕೊಟ್ಟವರು ತೇಜಸ್ವಿನಿ ಹೆಗಡೆ.

ತಮ್ಮ ಕಥಾ ಸಂಕಲನ ‘ಸಂಹಿತಾ’ ಕೂಡಿ ಕುಂತ ಜನರ ಮುಂದೆ ಬೆಳಕು ಕಂಡದ್ದೇ ತಡ ಜಗಕ್ಕೆ ತಾವು ಕಣ್ಣು ಬಿಟ್ಟಾಗ ಯಾರು ತಮ್ಮ ಮುಂದೆ ಮೊದಲ ಬೆಳಕಾಗಿ ನಿಂತರೋ ಅವರನ್ನು ನೆನಸಿಕೊಂಡರು. ತಮ್ಮ ಆಪ್ಪ ಅಮ್ಮನನ್ನು ನೆನೆದು ಮೊದಲ ಪ್ರತಿ ಅವರ ಕೈಗಿತ್ತರು ‘ಮೊದಲೀಗೆ ಅಪ್ಪ ಅಮ್ಮನಿಗೆ ಶರಣು’ ಎಂದರು.

ತೇಜಸ್ವಿನಿಯ ಪುಸ್ತಕ ಹಿಗ್ಗು ಹಲವು ಹೆಜ್ಜೆ ಹಾಕಲಿ ಎನ್ನುವ ಹಾರೈಕೆ ನಮ್ಮದು. ಅದರ ಜೊತೆಗೆ ಕೂಡಿ ಕುಂತ ಒಂದಷ್ಟು ಮಂದಿಯ ಚಿತ್ರವೂ ಜೊತೆಗಿದೆ.

 

 

‍ಲೇಖಕರು admin

21 December, 2015

1 Comment

  1. tejaswini hegde

    Thanks a lot 🙂

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading