ಜುಲೈ 21 ರಂದು ಮೈಸೂರಿನಲ್ಲಿ ದಿನವಿಡೀ ಸಂಗೀತ ಹಬ್ಬ
‘ಇಂಪು’
ಉಜ್ವಲ ವ್ಯಕ್ತಿತ್ವದ ಬಹುಮುಖ ಪ್ರತಿಭೆಯ ಪಂಡಿತ ತಾರಾನಾಥರು ತೀರಿಹೋಗಿ ಏಳು ದಶಕಗಳು ಕಳೆದಿವೆ. ಆದರೆ ಅವರ ವ್ಯಕ್ತಿತ್ವದ ಪ್ರಭೆ ಇನ್ನೂ ಬೆಳಗುತ್ತಲೇ ಇದೆ. ಆಯುರ್ವೇದ, ಸಂಗೀತಶಾಸ್ತ್ರ, ಯೋಗವಿದ್ಯೆಗಳನ್ನು ತಲಸ್ಪರ್ಶಿಯಾಗಿ ತಿಳಿದಿದ್ದ, ಅನೇಕ ಭಾಷೆಗಳಲ್ಲಿ ನಿಜವಾದ ವಿದ್ವಾಂಸರಾಗಿದ್ದ ಪಂ.ತಾರಾನಾಥರು ಸ್ವತಂತ್ರ ಮನೋಭಾವದವರು; ಎಲ್ಲ ರೀತಿಯ ಮೌಢ್ಯಗಳಿಂದ ಮನುಷ್ಯನನ್ನು ಬಿಡುಗಡೆ ಮಾಡುವ ಹಂಬಲದ, ಪ್ರಖರ ವೈಚಾರಿಕ ನಿಲುವಿನವರು. ಮತಧರ್ಮಗಳನ್ನು ಮೀರಿ ಎಲ್ಲ ಮನುಷ್ಯರನ್ನು ಸಮಾನವಾಗಿ ಕಂಡವರು; ನೊಂದವರಿಗೆ, ಅಬಲರಿಗೆ ನಿರಂತರವಾಗಿ ಮಿಡಿದವರು. ಅವರ ಲೇಖನಗಳು, ಭಾಷಣಗಳು ಜನರಲ್ಲಿ ಮಿಂಚಿನ ಸಂಚಾರವಾಗುವಂತೆ ಮಾಡುವಷ್ಟು ಶಕ್ತಿಯುತವಾಗಿದ್ದವು. ತುಂಗಭದ್ರಾ ದಂಡೆಯ ಮೇಲೆ ಅವರು ಕಟ್ಟಿದ ‘ಪ್ರೇಮಾಯತನ’ ಆಶ್ರಮ ನೀಡುತ್ತಿದ್ದ ಚಿಕಿತ್ಸೆ, ‘ಹಮ್ದರ್ದ್ ಪಾಠಶಾಲೆ’ಯ ಶಿಕ್ಷಣ, ಗ್ರಾಮೀಣ ಜನತೆಯಲ್ಲಿ ಹೊಸ ಭರವಸೆಯನ್ನು ಮೂಡಿಸಿದ್ದವು. ದೇಶವಿದೇಶಗಳಿಂದಲೂ ಜ್ಞಾನ ಕುತೂಹಲಿಗಳು ಪಂ.ತಾರಾನಾಥರನ್ನರಸಿ ‘ಪ್ರ್ರೇಮಾಯತನ’ಕ್ಕೆ ಬರುತ್ತಿದ್ದರು.
ಪಂ.ತಾರಾನಾಥರ ಹೆಸರಿನಲ್ಲಿ ಬೆಂಗಳೂರಿನಲ್ಲಿ ಸ್ಥಾಪನೆಗೊಂಡ ‘ಪಂ.ತಾರಾನಾಥ ಫೌಂಡೇಷನ್’ ಸಂಗೀತ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಕೆಲವು ವರ್ಷ ಬಹಳ ಮುಖ್ಯ ಕಾರ್ಯಕ್ರಮಗಳನ್ನು ನಡೆಸಿತು. ಈ ಫೌಂಡೇಷನ್ ನಡೆಸುತ್ತಿದ್ದ ಅಹೋರಾತ್ರಿ ಸಂಗೀತ ಕಾರ್ಯಕ್ರಮಗಳಂತೂ ಜನಮನ್ನಣೆಯನ್ನು ಗಳಿಸಿದ್ದವು. ಪಂ.ತಾರಾನಾಥ ಅವರ ಪುತ್ರ, ಅಂತರ ರಾಷ್ಟ್ರೀಯ ಖ್ಯಾತಿಯ ಸರೋದ್ ವಾದಕ ಹಾಗೂ ಪಂ.ತಾರಾನಾಥ ಫೌಂಡೇಷನ್ನಿನ ಮ್ಯಾನೇಜಿಂಗ್ ಟ್ರಸ್ಟಿಯಾದ ಡಾ.ರಾಜೀವ ತಾರಾನಾಥ ಅವರು ತಮ್ಮ ನೆಲೆಯನ್ನು ಮೈಸೂರಿಗೆ ವರ್ಗಾಯಿಸಿದ ಮೇಲೆ ‘ಪಂ.ತಾರಾನಾಥ ಫೌಂಡೇಷನ್’ ಮೈಸೂರಿನಲ್ಲಿ ತನ್ನ ಚಟುವಟಿಕೆಗಳನ್ನು ಆರಂಭಿಸಿತು. ಶಾಸ್ತ್ರೀಯ ಸಂಗೀತವನ್ನು ಮೆಚ್ಚುವುದು ಹೇಗೆಂಬುದನ್ನು ಹೇಳಿಕೊಡುವ ಕಾರ್ಯಕ್ರಮಗಳು, ಸಂಗೀತ ಕಛೇರಿಗಳು, ಸಂಗೀತ ಸಂಬಂಧೀ ಮಾತುಕತೆಗಳು ಮೈಸೂರಿನಲ್ಲಿ ನಿರಂತರವಾಗಿ ನಡೆದುಕೊಂಡು ಬರುತ್ತಿವೆ.
ಇದೀಗ ಮೈಸೂರಿನಲ್ಲಿ ಮೊದಲ ಬಾರಿಗೆ ಜುಲೈ 21 ರಂದು ಇಡೀ ದಿನದ ಸಂಗೀತ ಹಬ್ಬವನ್ನು ಫೌಂಡೇಷನ್ ಏರ್ಪಡಿಸಿದೆ. ಈ ಹಬ್ಬಕ್ಕೆ ನೀಡಿರುವ ಹೆಸರು-‘ಇಂಪು.’ ಸರಸ್ವತಿಪುರದ ಜೆ.ಎಸ್.ಎಸ್.ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಅಂದು ಬೆಳಗ್ಗೆ 8.30ರಿಂದ ಆರಂಭವಾಗಿ ರಾತ್ರಿ 11ರ ವರೆಗೆ ಈ ಸಂಭ್ರಮದ ಹಬ್ಬ ನಡೆಯಲಿದೆ.
ಪಂ.ರಾಜೀವ ತಾರಾನಾಥ, ಪಂ.ಇಂದೂಧರ ನಿರೋಡಿ, ಉಸ್ತಾದ್ ಫಯ್ಯಾಜ್é್ ಖಾನ್, ಪಂ.ಪರಮೇಶ್ವರ ಹೆಗಡೆ, ಡಾ. ನರಸಿಂಹ ವಡವಾಟಿ, ಪಂ.ಪ್ರಬೀರ್ ಭಟ್ಟಾಚಾರ್ಯ, ಪೂರ್ಣಿಮಾ ಭಟ್ ಕುಲಕರ್ಣಿ, ಸಮೀರ್ ರಾವ್, ರವಿಶಂಕರ ಮಿಶ್ರ, ಸರ್ಫರೋಜ಼್ ಖಾನ್, ಸಂಜನಾ ಕೌಶಿಕ್, ನಿಶಾಂತ್, ಎಸ್. ಹಿರಣ್ಮಯಿ ಮೊದಲಾದ ಕಲಾವಿದರು ಭಾಗವಹಿಸುವರು. ಇವರ ಜೊತೆಯ ಕಲಾವಿದರಾಗಿ ಪಂ. ರವೀಂದ್ರ ಯಾವಗಲ್, ಡಾ.ರವೀಂದ್ರ ಕಾಟೋಟಿ, ವೀರಭದ್ರಯ್ಯ ಹಿರೇಮಠ, ಶ್ರೀರಾಮ ಭಟ್, ನಿತಿನ್ ರಾಜಾರಾಮ ಶಾಸ್ತ್ರಿ, ಪ್ರಭುರಾವ್, ರಮೇಶ್ ಧನ್ನೂರ್, ಭೀಮಾಶಂಕರ್, ಕಿರಣ್ ಯಾವಗಲ್, ಜಗದೀಶ್ ಡಿ.ಕುರ್ತಕೋಟಿ, ಸುದತ್ತ, ಮಿಲಿಂದ್ ಮೊದಲಾದವರು ಭಾಗವಹಿಸುತ್ತಾರೆ. ಮೈಸೂರಿನ ಕಲಾರಸಿಕರಿಗೆ ಇದೊಂದು ಅಪೂರ್ವ ಅವಕಾಶ.
ಪ್ರವೇಶ ಉಚಿತ.
ಕಾರ್ಯಕ್ರಮದ ವಿವರವನ್ನು ಇಲ್ಲಿ ಕೊಡಲಾಗಿದೆ:
ಪಂ.ತಾರಾನಾಥ ಫೌಂಡೇಷನ್, ಮೈಸೂರು
ಸಮರ್ಪಿಸುವ
ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಹಬ್ಬ
ಇಂಪು
2013 ಜುಲೈ 21 ಭಾನುವಾರ ಬೆಳಗ್ಗೆ 8.30 ರಿಂದ ರಾತ್ರಿ 11 ರ ವರೆಗೆ
ನಿರಂತರ ಸಂಗೀತ ಸಿಂಚನ
ಸ್ಥಳ: ನವಜ್ಯೋತಿ ಸಭಾಂಗಣ, ಜೆ.ಎಸ್.ಎಸ್.ಮಹಿಳಾ ಕಾಲೇಜು, ಸರಸ್ವತಿಪುರ, ಮೈಸೂರು
ಬೆಳಗಿನಿಂದ ಮಧ್ಯಾಹ್ನದವರೆಗೆ
ಅನೌಪಚಾರಿಕ ಆರಂಭ: ಗಣ್ಯ ಕಲಾವಿದರಿಂದ : 8.30 ರಿಂದ 8.50
ಕು.ಸಂಜನಾ ಕೌಶಿಕ್ – ಗಾಯನ 9 ರಿಂದ 9.30
ತಬಲಾ : ಶ್ರೀ ಮಿಲಿಂದ್
ಹಾರ್ಮೋನಿಯಂ : ಶ್ರೀ ನಿತಿನ್ ರಾಜಾರಾಮ ಶಾಸ್ತ್ರಿ
ಕು. ನಿಶಾಂತ್ – ಗಾಯನ 9.30 ರಿಂದ 10
ತಬಲಾ : ಶ್ರೀ ರಮೇಶ್ ಧನ್ನೂರ್
ಹಾರ್ಮೋನಿಯಂ: ಶ್ರೀ ಪ್ರಭುರಾವ್
ಶ್ರೀ ಸಮೀರ್ ರಾವ್ – ಬಾನ್ಸುರಿ 10 ರಿಂದ 11
ತಬಲಾ : ಶ್ರೀ ಮಿಲಿಂದ್
ಶ್ರೀಮತಿ ಪೂರ್ಣಿಮಾ ಭಟ್ ಕುಲಕರ್ಣಿ – ಗಾಯನ 11 ರಿಂದ 12
ತಬಲಾ : ಶ್ರೀ ಭೀಮಾಶಂಕರ ಬಿದನೂರು
ಹಾರ್ಮೋನಿಯಂ: ಶ್ರೀ ಶ್ರೀರಾಮ ಭಟ್
ಪಂ. ಇಂದೂಧರ ನಿರೋಡಿ – ಗಾಯನ 12 ರಿಂದ 1
ತಬಲಾ : ಶ್ರೀ ರಮೇಶ್ ಧನ್ನೂರ್
ಹಾರ್ಮೋನಿಯಂ : ಶ್ರೀ ವೀರಭದ್ರಯ್ಯ ಹಿರೇಮಠ
ಪಂ.ನರಸಿಂಹ ವಡವಾಟಿ – ಕ್ಲಾರಿಯೊನೆಟ್ 1 ರಿಂದ 2.15
ತಬಲಾ : ಶ್ರೀ ಜಗದೀಶ್ ಡಿ.ಕುರ್ತಕೋಟಿ
ಇಳಿಸಂಜೆಯಿಂದ ರಾತ್ರಿಯವರೆಗೆ
ಶ್ರೀ ಸರ್ಫರೋಜ಼್ ಖಾನ್ – ಸಾರಂಗಿ 3.30 ರಿಂದ 4.10
ತಬಲಾ : ಶ್ರೀ ಸುದತ್ತ
ಕು.ಎಸ್.ಹಿರಣ್ಮಯಿ – ಗಾಯನ 4.10 ರಿಂದ 4.40
ತಬಲಾ : ಶ್ರೀ ಭೀಮಾಶಂಕರ ಬಿದನೂರು
ಹಾರ್ಮೋನಿಯಂ : ಶ್ರೀ ಪ್ರಭುರಾವ್
ಶ್ರೀ ರವಿಶಂಕರ ಮಿಶ್ರ – ಬಾನ್ಸುರಿ 4.40 ರಿಂದ 5.20
ತಬಲಾ : ಶ್ರೀ ಕಿರಣ್ ಯಾವಗಲ್
ಉಸ್ತಾದ್ ಫಯ್ಯಾಜ್ ಖಾನ್ 5.20 ರಿಂದ 6.50
ತಬಲಾ : ಶ್ರೀ ಜಗದೀಶ್ ಡಿ.ಕುರ್ತಕೋಟಿ
ಸಾರಂಗಿ : ಶ್ರೀ ಸರ್ಫರಾಜ್ ಖಾನ್
ಹಾರ್ಮೋನಿಯಂ : ಡಾ. ರವೀಂದ್ರ ಕಾಟೋಟಿ
ಪಂ.ಪ್ರಬೀರ್ ಭಟ್ಟಾಚಾರ್ಯ – ಸಿತಾರ್ 6.50 ರಿಂದ 8.10
ತಬಲಾ : ಪಂ.ರವೀಂದ್ರ ಯಾವಗಲ್
ಪಂ.ಪರಮೇಶ್ವರ ಹೆಗಡೆ – ಗಾಯನ 8.10 ರಿಂದ 9.40
ತಬಲಾ : ಶ್ರೀ ಕಿರಣ್ ಯಾವಗಲ್
ಸಾರಂಗಿ : ಸರ್ಫರೋಜ಼್ ಖಾನ್
ಹಾರ್ಮೋನಿಯಂ : ಡಾ.ರವೀಂದ್ರ ಕಾಟೋಟಿ
ಪಂ. ರಾಜೀವ ತಾರಾನಾಥ್ – ಸರೋದ್ 9.40 ರಿಂದ 11
ತಬಲಾ : ಪಂ.ರವೀಂದ್ರ ಯಾವಗಲ್
ಪ್ರವೇಶ : ಉಚಿತ






0 Comments