
ಗಣಪತಿ ಅಗ್ನಿಹೋತ್ರಿ
ಕೊಚ್ಚಿ ಮುಜಿರಿಸ್ ಬಿನಾಲೆಯ 5ನೇ ಆವೃತ್ತಿಯಲ್ಲಿ ಬಹಳ ಇಷ್ಟವಾದ ಪ್ರತಿಷ್ಠಾಪನಾ ಕಲಾಕೃತಿ ಇದು!
ಸ್ನೇಹಿತರೊಬ್ಬರು ನಿಮಗೆ ಇಷ್ಟವಾಗಿದ್ದು ಯಾವುದು ಅದರ ಬಗ್ಗೆ ಬರೆಯಿರಿ… ಎಂದು ಮೂರು ಪುಟದಷ್ಟು ಉದ್ದದ WhatsApp ಪತ್ರ ಬರೆದಿದ್ದರು. ಸ್ವೀಕರಿಸಿದೆ, ಅಂತಹ ಕಲಾಕೃತಿ ಕುರಿತಾಗಿ ಮಾತ್ರ ಬರೆಯೋಣ. ಅವರ ಸಲಹೆ ಸರಿ ಅನಿಸಿತು. ಬರೆಯುತ್ತಿದ್ದೇನೆ.
“ಭೂಮಿ” “Bhumi” – (Earth)
A Story of Survival
ಬದುಕು ಕಟ್ಟಿಕೊಂಡ ಒಂದು ಕತೆ
Yes, ಪ್ರತಿಷ್ಠಾಪನಾ ಕಲಾಕೃತಿಯ ಶೀರ್ಷಿಕೆಯೇ ಹೇಳುವಂತೆ ಎಲ್ಲರನ್ನು ಒಳಗೊಂಡ, ಸಮೂಹ ಪರಿಕಲ್ಪನೆ ಅದು. ಅರ್ಥ ವಿಶಾಲ. ಬದುಕು ಕಟ್ಟಿಕೊಳ್ಳಲು ಒಂದುಗೂಡಿಸಿದ ಸಂದರ್ಭದ ಕತೆ. ಮೈಮರೆಸಿಬಿಡಬಹುದಾದ ಕಲಾಕೃತಿ.
ಕಲಾಕೃತಿಯಲ್ಲೇ ಇದರ ಹಿಂದಿನ ಶ್ರಮ ಕಾಣಿಸುತ್ತಿದೆ. ಪ್ರಾಮಾಣಿಕ ಪ್ರಯತ್ನ ಅನಾವರಣ ಆಗಿದೆ. ಒಂದು ಅದ್ಭುತ ಸಂದೇಶ ನೀಡುತ್ತಿದೆ. ಸಮುದಾಯದ ಒಳಗೊಳ್ಳುವಿಕೆಯ ಪ್ರಕ್ರಿಯೆ ಈ ಕಲಾಕೃತಿಯಲ್ಲಿ ಗೋಚರಿಸುತ್ತಿದೆ. ಒಂದೊಂದು ಬೆವರ ಹನಿಯ ಶಕ್ತಿ ಕಲಾಕೃತಿಯ ಶಕ್ತಿಯಾಗಿದೆ. ಇದು ವರ್ಣನೆ ಅಲ್ಲ. ಅತಿಶಯೋಕ್ತಿಯೂ ಅಲ್ಲ. “ಭೂಮಿ”ಯ ಶಕ್ತಿ. ಭಯಾನಕ ಪರಿಸ್ಥಿತಿಯಲ್ಲಿ ಬದುಕು ಕಟ್ಟಿಕೊಂಡ ಸಮಯದ ರೋಚಕ ಕತೆ.

ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ ಹುಟ್ಟಿಕೊಂಡ ಒಂದು ಅದ್ಭುತ ಪರಿಕಲ್ಪನೆ ಇದು. ಬಾಂಗ್ಲಾದೇಶದ ಠಾಕೂರ್ ಗಾಂವ್ (thakurgaon)ನ ಬಾಲಿಯಾ (balia) ಎಂಬ ಗ್ರಾಮದ ಮುಗ್ಧ ಜೀವಿಗಳ ಕೈಯಲ್ಲರಳಿದ ಸಮುದಾಯ ಕಲೆ. ದುರ್ಜೋಯ್ ಬಾಂಗ್ಲಾದೇಶ ಫೌಂಡೇಶನ್ (Durjoy Bangladesh Foundation) ಸಹಕಾರ ಪಡೆದು ಗಿಡ್ರೀ ಬಾವ್ಲೇ ಫೌಂಡೇಶನ್ ಆಫ್ ಆರ್ಟ್ಸ್ (Gidree Bawlee Foundation of Arts) ನಿರ್ವಹಣೆಯಲ್ಲಿ ರಚನೆಯಾದ ಕಲಾಕೃತಿ ಇದು. ಕೊಚ್ಚಿ ಬಿನಾಲೆ ಫೌಂಡೇಶನ್ ಆಹ್ವಾನಿತ ಕಲಾಯೋಜನೆಯಲ್ಲಿ ಅರಳಿದ ಕಲಾಕೃತಿ ಇದಾಗಿದೆ.
ಬಾಂಗ್ಲಾ ಕಲಾವಿದ ಕಮ್ರುಜ್ಜಮಾನ್ ಶಾಧೀನ್ (Kamruzzaman Shadhin) ಈ ಪ್ರತಿಷ್ಠಾಪನೆಯ ರೂವಾರಿ. ಪ್ರತಿಷ್ಠನಾ ಕಲೆಯಲ್ಲಿ ಪರಿಣಿತ ಕಲಾವಿದ.
ಅಷ್ಟಕ್ಕೂ ಈ ಶೈಲಿಯ ಗೊಂಬೆಗಳನ್ನೆ ಯಾಕೆ ಬಳಸಿಕೊಳ್ಳಲಾಗಿದೆ? ಕಾರಣ ಇಷ್ಟೆ, ಇದು ಬಾಂಗ್ಲಾದ ಸಂಪ್ರದಾಯಿಕ ಕೌಶಲ್ಯ ಕಲಾ ಪ್ರಕಾರಗಳಲ್ಲಿ ಒಂದು. ಒಂದು ಸಮುದಾಯದ ಕುಟುಂಬಗಳು ಸದಾಕಾಲ ಗೊಂಬೆಗಳು ಸೇರಿದಂತೆ ಇನ್ನಿತರ ವಸ್ತುಗಳ ತಯಾರಿಕೆಯಲ್ಲೇ ತೊಡಗಿಕೊಂಡಿರುತ್ತವೆ. ಕಮ್ರುಜ್ಜಮಾನ್ ಸ್ಥಳೀಯ ಕಲಾವಿದ ಆಗಿದ್ದರಿಂದ ಲಾಕ್ ಡೌನ್ ಸಮಯದಲ್ಲಿ ಕುಶಲಕರ್ಮಿಗಳನ್ನು ಒಟ್ಟುಗೂಡಿಸಿ ಈ ಕಲಾಕೃತಿಯ ಕಲ್ಪನೆ ಸಾಕಾರಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೊಚ್ಚಿ ಮುಜಿರಿಸ್ ಬಿನಾಲೆಯ ಪ್ರಮುಖ ಪ್ರದರ್ಶನ ಸ್ಥಳ ಟಿಕೆಎಂ ವೇರ್ ಹೌಸ್ (TKM Warehouse) ನಲ್ಲಿ ಪ್ರದರ್ಶನಗೊಂಡಿದೆ. ಎಪ್ರಿಲ್ 10ಕ್ಕೆ ಈ ಪ್ರದರ್ಶನ ಕೊನೆಗೊಳ್ಳಲಿದೆ.







ಕೆಲ ವಿಡಿಯೋ ತುಣುಕುಗಳ ಲಿಂಕ್ ನಿಮಗಾಗಿ
https://www.stirworld.com/see-features-bhumi-at-kochi…






0 Comments