ಮೈತ್ರಿ ಪುಸ್ತಕ -2021 ಬಹುಮಾನಕ್ಕಾಗಿ ಹಸ್ತಪ್ರತಿಗಳನ್ನು ಆಹ್ವಾನಿಸುತ್ತಿದ್ದೇವೆ.
ಆಸಕ್ತರು ತಮ್ಮ 10 ಕತೆಗಳನ್ನು ಕೆಳಕಂಡ ವಿಳಾಸಕ್ಕೆ ಕಳಿಸಿಕೊಡಬೇಕು.
ಆಯ್ಕೆಯಾದ ಹಸ್ತಪ್ರತಿಗೆ ರೂ 7000 ಬಹುಮಾನ, ಫಲಕ ಹಾಗೂ ಪುಸ್ತಕ ಪ್ರಕಟಿಸಲಾಗುತ್ತದೆ.

ಈ ಕೆಳಗಿನ ಆಂಶಗಳನ್ನು ಗಮನಿಸಿ.
- ಇದುವರೆಗೂ ಒಂದೂ ಕತಾಸಂಕಲನ ಪ್ರಕಟಿಸದ ಕತೆಗಾರರಿಗೆ ಈ ಸ್ಫರ್ಧೆಯಲ್ಲಿ ಭಾಗವಹಿಸುವ ಅವಕಾಶವಿದೆ. ಸಾಹಿತ್ಯದ ಇತರೇ ಪ್ರಕಾರಗಳಲ್ಲಿ ಒಂದೆರಡು ಪುಸ್ತಕ ಪ್ರಕಟವಾಗಿದ್ದವರೂ ಸ್ಫರ್ಧೆಯಲ್ಲಿ ಭಾಗವಹಿಸಬಹುದು.
- ಕತೆಗಳನ್ನು ಕಡ್ಡಾಯವಾಗಿ ನುಡಿ/ಯುನಿಕೋಡ್ ಮೂಲಕ ಟಂಕಿಸಿ ಪ್ರಿಂಟ್ ರೂಪದಲ್ಲಿ ಕಳಿಸಬೇಕು. ಇಮೇಲ್ ಮೂಲಕ ಕಳಿಸಿದ ಕತೆಗಳನ್ನು ಸ್ವೀಕರಿಸುವುದಿಲ್ಲ.
- ಹಸ್ತಪ್ರತಿಯಲ್ಲಿ ಎಲ್ಲಿಯೂ ಲೇಖಕರ ಹೆಸರು ಇರಕೂಡದು. ಪ್ರತ್ಯೇಕ ಹಾಳೆಯಲ್ಲಿ ತಮ್ಮ ಹೆಸರು, ವಿಳಾಸ ಸ್ವವಿವರ ನಮೂದಿಸಿರಬೇಕು.
- ಕತೆಗಳು ಸುಮಾರು 1500-2000 ಪದ ಮಿತಿಯಲ್ಲಿರಲಿ. ನೀಳ್ಗತೆ, ನ್ಯಾನೊ ಕತೆಗಳು ಬೇಡ.
- ಕತೆ ಪೋಸ್ಟ್ /ಕೊರಿಯರ್ ಮೂಲಕ ಕಳಿಸಿಕೊಡಲು 31/01/2021 ಕೊನೆಯ ದಿನಾಂಕವಾಗಿರುತ್ತದೆ.
- ಹಸ್ತಪ್ರತಿಗಳನ್ನು ವಾಪಸ ಮಾಡಲಾಗುವುದಿಲ್ಲ.
- ಹೆಸರಾಂತ ಕತೆಗಾರರು ತೀರ್ಪುಗಾರರಾಗಿರುತ್ತಾರೆ ಅವರ ಆಯ್ಕೆಯೇ ಅಂತಿಮ.
ವಿಳಾಸ:
ಶ್ರೀಮತಿ ಅಂಜಲಿ ದೇಸಾಯಿ
ಮೈತ್ರಿ ಪ್ರಕಾಶನ
504, ಎರಡನೇ ಕ್ರಾಸ್,
ಎರಡನೇ ಬ್ಲಾಕ್
ಬಿ ಎಸ್ ಕೆ ಮೊದಲ ಹಂತ
ಬೆಂಗಳೂರು—560050
ಹೆಚ್ಚಿನ ಮಾಹಿತಿಗೆ: 83173 96164






0 Comments