ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮೇಘನಾ ಚಂದ್ರಮೌಳಿ ಜೊತೆ ‘ಫಟಾ ಫಟ್’

ಮೇಘನಾ ಚಂದ್ರಮೌಳಿ ಪ್ರದರ್ಶಕ ಕಲೆಯಲ್ಲಿ ಸ್ನಾತಕೋತ್ತರ ಪದವೀಧರೆ. ನೃತ್ಯ ಇವರ ಉಸಿರು. 3 ವರ್ಷದಿಂದಲೇ ನೃತ್ಯ ಮಾಡಲು ಆರಂಭಿಸಿದ ಇವರು ಇಲ್ಲಿಯವರೆಗೂ ಹಲವಾರು ನೃತ್ಯ ಪ್ರದರ್ಶನವನ್ನು ನೀಡಿದ್ದಾರೆ.

ಕನ್ನಡ ಕಾವ್ಯಕ್ಕೆ ಕೂಚಿಪುಡಿ ನೃತ್ಯವನ್ನು ಬೆಸುಗೆ ಹಾಕಿದ ಹಿರಿಮೆ ಇವರದ್ದು.

ತಾಯಿ ಸಂಗೀತ ಮತ್ತು ವೀಣೆ ನುಡಿಸುತ್ತಿದ್ದರಿಂದ ಈ ಕಲೆಯ ಮೇಲೆ ಆಸಕ್ತಿ ಬೆಳೆಯಿತು ಎನ್ನುತ್ತಾರೆ ಮೇಘನಾ ಚಂದ್ರಮೌಳಿ. ಭರತನಾಟ್ಯ, ಕೂಚಿಪುಡಿ, ಕಥಕ್, ಶಾಸ್ತ್ರೀಯ ಸಂಗೀತದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಇವರು ಸದ್ಯ ಚಿತ್ರಕೂಟ ಶಾಲೆಯಲ್ಲಿ ಡಾನ್ಸ್‌ ಇನ್ಸ್ಟ್ರಕ್ಟರ್ ಆಗಿ ಕೆಲಸಮಾಡುತ್ತಿದ್ದು, ನೃತ್ಯಕಲೆಯಲ್ಲಿ ಪಿ ಎಚ್ ಡಿ‌ ಮಾಡುವ ಆಶಯವನ್ನು ವ್ಯಕ್ತಪಡಿಸಿದ್ದಾರೆ.

ಕಣ್ಮನ ಸೆಳೆಯುವಂತ ಇವರ ನೃತ್ಯಾಭಿನಯದ ಕುರಿತು ʼಅವಧಿʼಯು ನಡೆಸಿದ ಫಟಾ ಫಟ್‌ ಸಂದರ್ಶನ ಇಲ್ಲಿದೆ.

ನೀವು ಮಾಡುವುದು ಅಭಿನಯವೋ ನಾಟ್ಯವೋ ?
 ನಾಟ್ಯ. ನೃತ್ಯದ ಟೆಕ್ನಿಕಲ್‌ ಟರ್ಮ್ಸ್‌ ಪ್ರಕಾರ ಹೇಳೋದಾದ್ರೆ ಎರಡೂ ಮಾಡ್ತೀನಿ.

ದೃಶ್ಯ ಕಲೆಯ ಪದವಿಯನ್ನೇ ಆಯ್ಕೆ ಮಾಡಿಕೊಂಡಿದ್ದು ಯಾಕೆ ?
 ನೃತ್ಯ ನನ್ನಲ್ಲಿ ಮೊದಲಿಂದಲೂ ಆಳವಾಗಿ ಬೇರೂರಿದ್ದರಿಂದ ನಾನು ಈ ಪದವಿಯನ್ನು ಆಯ್ಕೆ ಮಾಡಿಕೊಂಡೆ.

ನೃತ್ಯ, ನಟನೆ ನಿಮ್ಮಗೆ ಒಲಿದದ್ದು ಹೇಗೆ ?
 ಅದು ಅಮ್ಮನಿಂದ ರಕ್ತಗತವಾಗಿ ಬಂದದ್ದು. ಮೇಲಾಗಿ ನನ್ನ ಆಸಕ್ತಿ ಇದ್ದುದ್ದರಿಂದ .

ಕನ್ನಡ ಕಾವ್ಯಕ್ಕೆ ಕೂಚಿಪುಡಿ ಬೆಸುಗೆ ಹಾಕಬೇಕು ಅನಿಸಿದ್ದು ಯಾಕೆ ?
 ತುಂಬಾ ಅದ್ಭುತವಾದ ಕಲೆ ಕೂಚಿಪುಡಿ. ಆದರೆ ಇದು ಕನ್ನಡಿಗರಿಗೆ ಇನ್ನೂ ತಲುಪಿಲ್ಲ. ಅದನ್ನ ಕನ್ನಡಿಗರಿಗೆ ಮುಟ್ಟಿಸಬೇಕು ಎನ್ನುವುದು ನನ್ನ ಆಶಯ.

ನೀವು ನೀಡಿದ ನೃತ್ಯಾಭಿನಯದಲ್ಲಿ ನಿಮಗೆ ಅತ್ಯಂತ ಇಷ್ಟವಾದದ್ದು ಯಾವುದು ?
 ʼಸಖನೇ ಜೀವ ಸಖನೇʼ ಹಾಡಿನ ನೃತ್ಯಕ್ಕೆ ಎಚ್‌ ಎಸ್‌ ವೆಂಕಟೇಶಮೂರ್ತಿ ಸರ್‌ ಅಭಿನಂದನೆಗಳನ್ನ ತಿಳಿಸಿದ್ದರು. ಅದು ನನ್ನ ತುಂಬಾ ಇಷ್ಟವಾದ ನೃತ್ಯಾಭಿನಯ.

‍ಲೇಖಕರು Avadhi

1 October, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading