ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮೆಗಾ ಸೀರಿಯಲ್ಲುಗಳು ಮುಗಿಯುವುದಿಲ್ಲ..

ಅಪಾರ

ಸದಾ ಕತ್ತಿ ಮಸೆಯುತ್ತಾ, ಫೋನಿನಲ್ಲಿ ಇನ್ನೊಬ್ಬರನ್ನು ಸರ್ವನಾಶ ಮಾಡುತ್ತೇವೆಂದು ಸವಾಲು ಹಾಕುತ್ತಲೇ ಇರುವ ರೌಡಿ ಹೆಣ್ಣುಗಳು, ಕಣ್ಣು, ಕಿವಿ, ಮನಸ್ಸುಗಳನ್ನು ಏಕಕಾಲಕ್ಕೆ ತುಕುಡ ಮಾಡುವ ಸಂಕಲನಕಾರ ಮತ್ತು ಸಂಗೀತ ನಿರ್ದೇಶಕರು, ಪುಗಸಟ್ಟೆ ಸಿಕ್ಕರೆ ಏನನ್ನೂ ನೋಡುತ್ತೇವೆಂದು ಪಟ್ಟಾಗಿ ಟಿವಿ ಮುಂದೆ ಕೂತಿರುವ ನಾವು-ಇವಿಷ್ಟೂ ಸೇರಿದರೆ ನಮ್ಮ ಮೆಗಾ ಸೀರಿಯಲ್‌ಗಳು ಎಂಬ ವಿಷವರ್ತುಲ ಪೂರ್ಣವಾಗುತ್ತದೆ(ಒಂದೆರಡು ಅಪವಾದಗಳನ್ನು ಬಿಡಿ).
ಸೋ ಕಾಲ್ಡ್ ಕಮರ್ಶಿಯಲ್ ಸಿನಿಮಾ ಮಂದಿಯೂ ಬೇರೇನೂ ಹೊಳೆಯದಾದಾಗ ತಾಯಿ ತಂಗಿ ಸೆಂಟಿಮೆಂಟು ಅಥವಾ ಒಂದೆರೆಡು ಹೆಚ್ಚು ಹೊಡೆದಾಟದ ಸಿನಿಮಾಗಳನ್ನು ಮಾಡಿರಬಹುದೇ ಹೊರತು ಮೆಗಾಸೀರಿಯಲ್ಲುಗಳಂಥ ಅನರ್ಥಕಾರಿ, ಅಪಾಯಕಾರಿ ಕತೆಗಳಿಗೆ ಕೈ ಹಾಕಿಲ್ಲ. ಕಾರ್ಯಕ್ರಮದ ನಡುವೆ ಜಾಹೀರಾತು ಬಂದರೆ ಶಾಪ ಹಾಕುತ್ತಿದ್ದ ಕಾಲವೊಂದಿತ್ತು.
ಈಗ ಕೊಳಕು ಧಾರಾವಾಹಿಗಳ ದಾಳಿಯಿಂದ ನಮ್ಮನ್ನು ಕ್ಷಣಕಾಲವಾದರೂ ರಕ್ಷಿಸಬಲ್ಲವೆಂದರೆ ಅಡ್ವಟೈಸ್‌ಮೆಂಟುಗಳು ಮಾತ್ರ. ಮೆಗಾ ಸೀರಿಯಲ್ಲುಗಳು ಮುಗಿಯುವುದಿಲ್ಲ. ಅವುಗಳು ನೀಡುವ ಹಿಂಸೆಗೂ ಕೊನೆಯಿದ್ದಂತಿಲ್ಲ. ಸೀರಿಯಲ್ಲುಗಳಂತೆಯೇ ಆದಿ ಅಂತ್ಯವಿಲ್ಲದ ಭಗವಂತ ಮಾತ್ರ ವೀಕ್ಷಕನನ್ನು ಕಾಪಾಡಬಹುದು.

‍ಲೇಖಕರು G

23 March, 2013

11 Comments

  1. ಛಾಯಾ

    ಒಪ್ಪಿತ.
    … ಆದರೆ ನಾವೇ ಇದಕ್ಕೊಂದು ಪರಿಹಾರ ಕಂಡುಕೊಂಡೆವು!
    ಎರಡೂವರೆ ವರ್ಷದ ಹಿಂದೆ LCD ಟಿವಿ ನಮ್ಮ ಮನೆ ಗೋಡೆಗೆ ನೇತುಬಿತ್ತು. ಅದರಲ್ಲೂ ‘ಕಲರ್ಸ್’, ಸ್ಟಾರ್, ಸನ್ ನೆಟ್’ವರ್ಕ್ ಚಾನೆಲ್ ಅತಿ ಸ್ಪಷ್ಟ. ಎಷ್ಟೆಂದರೆ, ಆಕೆ ಮೂಗು ಮುರಿದಿದ್ದು ಎಷ್ಟು ತೀವ್ರ; ಆತ ಕಂಗಾಲಾಗಿ ನೋಡಿದಾಗ ಕಣ್ಣುಗುಡ್ಡೆ ಅರಳಿದ್ದು ಎಷ್ಟು ಅಗಲ ಎಂಬುದನ್ನು ಯಥಾವತ್ತಾಗಿ ತೋರಿಸುವಷ್ಟರ ಮಟ್ಟಿಗೆ!
    ಆರು ತಿಂಗಳ ಬಳಿಕ (ಅದೃಷ್ಟವಶಾತ್) ಮನೆ ಬದಲಾಯಿಸಿಬೇಕಾಗಿ ಬಂತು. ಆಗ ‘ಒಂದಷ್ಟು ದಿನ ಟಿವಿ ಇಲ್ಲದೇ ನೋಡೋಣ’ ಅಂತ ಕೇಬಲ್ ಸಂಪರ್ಕ ಪಡೆಯಲಿಲ್ಲ.
    ಈಗ ಈ ನಿರ್ಧಾರಕ್ಕೆ ಎರಡು ವರ್ಷ ಪೂರ್ಣಗೊಂಡಿವೆ. ಎಷ್ಟೊಂದು ಪುಸ್ತಕ ಓದಲು ಸಮಯ ಸಿಕ್ಕಿದೆ! ಪತ್ರಿಕೆಗಳ ಪುರವಣಿ ಓದು ಸಂಜೆಯ ಹೊತ್ತಿಗಾದರೂ ಮುಗಿದಿರುತ್ತವೆ; ಎಲ್ಲಕ್ಕಿಂತ ಹೆಚ್ಚಾಗಿ ಪಕ್ಕದ ಮೂರ್ನಾಲ್ಕು ಮನೆಯವರ ಜತೆ ಮಾತುಕತೆ ಸಾಕಷ್ಟು!
    ಹಾಗೆಂದು ಪೂರ್ಣ ಟಿವಿ ಬಂದ್ ಆಗಿಲ್ಲ. ಆಂಟೆನಾ ಇದೆ. ‘ರಂಗೋಲಿ’ ಸೇರಿದಂತೆ ಹಲವು ಒಳ್ಳೇ ಕಾರ್ಯಕ್ರಮ ಬರುತ್ತಿವೆ. ಅತ್ಯುತ್ತಮ ಸಿನೆಮಾಗಳು ಪ್ರಸಾರವಾಗುತ್ತವೆ. ದಿನಕ್ಕೊಂದು ತಾಸು ಎಂಬಂತೆ ಒಟ್ಟು ಮೂರು ದಿನ ಮೂರು ತಾಸುಗಳ ಕಾಲ ಸಿನಿಮಾ ವೀಕ್ಷಣೆಯ ವಿಚಿತ್ರ ವ್ಯವಸ್ಥೆಯೂ ಇದೆ!
    ಒಂದು ಮಾತನ್ನು ಸ್ಪಷ್ಟಪಡಿಸುವೆ. ಇದು ನನ್ನ ವೈಯಕ್ತಿಕ ಅನುಭವ. ಇದು ಎಲ್ಲರಿಗೂ ಒಪ್ಪಿಗೆಯಾಗಬೇಕೆಂದೇನೂ ಇಲ್ಲ; ಹಾಗೆಂದು ನಾನು ಬಯಸುವುದು ಸಾಧುವೂ ಅಲ್ಲ. ಬೇರೆ ಬೇರೆಯವರು ತಮ್ಮ ಪರಿಹಾರ ಹಂಚಿಕೊಂಡರೆ ಒಳ್ಳೆಯದಲ್ವೇ ?
    – ಛಾಯಾ

  2. Gopaal Wajapeyi

    ಕೆಲವರು ಸೀರಿಯಲ್ ನಿರ್ಮಾಪಕರು ಸೀರಿಯಸ್ ಆಗಿ ನಿಮ್ಮ ಮನೆಯ ವಿಳಾಸ, ನೀವು ತಿರುಗಾಡೋ ಜಾಗಗಳನ್ನ ಹುಡುಕ್ತಿದ್ದಾರಂತೆ, ಉಸಾರು…! 🙂

  3. samyuktha

    NIJVAGLU!!!
    illi mele kottiruva chitravannu actually nija madona annisuttade kelavomme!

  4. ಸುಧಾ ಚಿದಾನಂದಗೌಡ

    ಇದಕ್ಕೊಂದು ಪರಿಹಾರ ನಾವು ಹುಡುಕ್ತಲೇ ಇರ್ತೀವಿ.
    ಹೊಸ ಪುಸ್ತಕ ಬರೆಯುವ ಕಾಲಕ್ಕೆ ಟಿವಿ ಬಂದ್,
    ಹೊಸ ಓದು ಓದುವ ಕಾಲಕ್ಕೆ ಟಿವಿ ಬೇಡ,
    ಮಕ್ಕಲ ಪರೀಕ್ಷೆ ಇರೋದರಿಮದ ಟಿವಿ ಕಟ್ಟಿಟ್ಟುಬಿಡೊದು,
    ಯಾವ ನೆಪವೂ ಇಲ್ಲದಾಗ ನಿದ್ದೆ ಮಾಡೋಕೆ ಬಿಡೋಲ್ಲ ಈ ಸವಂಡೂ ಅಮತ ಆಫ್ ಮಾಡಿಬಿಡೋದು..
    ಅಂತು ನಮ್ಮನೇಲಿ ಯಾರು ನೋಡೋಲ್ಲ ಈ ಸೀರಿಯಲ್ಲುಗಳನ್ನು..
    ಎಷ್ಟಾದ್ರೂ ಬರ್ಲಿ ಬಿಡಿ..

  5. priya kervashe

    ನೀವೊಂದ್ಸಲ ಸೀರಿಯಲ್ ಸೆಟ್ಗೆ ಹೋಗಿ ನೋಡಿದ್ರೆ ಎಷ್ಟು ಜನ ಹೊಟ್ಟೆಹೊರ್ಕೊಳ್ತಾರೆ ಅನ್ನೋದು ಗೊತ್ತಾಗತ್ತೆ. ಕೆಟ್ಟ ಸೀರಿಯಲ್ ಕಂಡ್ರೆ ಮೈ ಉರಿದುಹೋಗತ್ತೆ ನಿಜ, ಆದ್ರೆ, ನಿರುದ್ಯೋಗಿ ಅಂತ ಹಣೆಪಟ್ಟಿ ಕಟ್ಟಿಕೊಂಡು ಡಿಪ್ರೆಸ್ ಆಗಿದ್ದ ಒಂದಿಷ್ಟು ಹುಡುಗ ಹುಡುಗಿಯರು ಇದ್ರಿಂದ ಮೇಲೆಬಂದದ್ದನ್ನೂ ನಾವು ಬಿಟ್ಹಾಕಬಾರ್ದು.

  6. bharathi bv

    Nammane tv on maadodu koodaa marthu bittidini

  7. Ganesh Shenoy

    The fact that the English movie “Lincoln” did miserably in India but these mega serials doing better than such great movies just reveals our intellectual bankruptcy.

  8. Shwetha Hosabale

    priya kervashe matige nanna sahamata ide; light boys, cameramens, art directors, dialogue writers, associate
    directors, schreenplay writers, artists…hige adeshto mandi serial industry yinda baduku kattikondiddre.
    pratiyondarallu olitu keduku eradu iratte…ayke madikondu nodo buddhi vikshakanige bittiddu…yavude programme jasti
    dina ulidukollodu nodugariddaga matra annodantu satya alve?

  9. Manjunath Bangar

    ಸ್ವಲ್ಪ ದಿನ ಮೇಘ ಸೀರಿಯಲ್ ನೋಡಿದೆ, ಅಬ್ಬ ಅಂಥಹ ಖಳ ಹೆಣ್ಣುಗಳು ಇರುತ್ತಾರೆ ಎಂದು ತುಂಬ ಬೇಜಾರು ಸಿಟ್ಟು ಬರುತ್ತಿತ್ತು, ನಂತರ ಹೊಳೆದಿದ್ದು ನಿರ್ಮಾಪಕರು ನಮ್ಮನ್ನು ತಿಳಿದು ಕೊಂಡಿದ್ದು ಏನು ತೋರಿಸಿದರು ನೋಡುತ್ತಾರೆಂದು. ಸಾಕು ನಿಮ್ಮ ಸಹವಾಸ,
    ಟಿವಿ ಒಂದು ತರಹ ಕೆಟ್ಟ ಚಟ, ಅದರಿಂದ ಪಾರದವನೇ ಪುಣ್ಯವಂತ

  10. sathyavathi

    ನನ್ನ ಯಜಮಾನರು ಪುಣ್ಯವಂತರು ನನಗೆ ಸೀರಿಯಲ್ ನೋಡೊ ಕೆಟ್ಟ ಅಬ್ಯಾಸ ಇಲ್ಲ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading