ಸುಧಾ ಆಡುಕುಳ

ಸನಾತನ ಆಸ್ತಿಯೆಂಬಂತೆ ಮನೆಯಲ್ಲಿರುವ ಈ ಮಾಯಕದ ಮದ್ದಲೆಯೊಳಗೆ ಎಷ್ಟೊಂದು ಚೆಂದದ ಕಥೆಗಳು ಅಡಗಿವೆ. ಅಪ್ಪನ ಸಂಗಾತಿಯಾಗಿ ಇದು ಅರ್ಧಶತಮಾನಗಳನ್ನು ಕಳೆದಿದೆ.
ಇನ್ನೇನು ಜೀರ್ಣವಾಗಿ ಹೋಗುವುದೆಂಬ ಗಳಿಗೆಯಲ್ಲಿ ಮೊಮ್ಮಗನ ಯಕ್ಷಗಾನಕ್ಕಾಗಿ ಅಪ್ಪ ಮತ್ತೆ ಅದನ್ನು ಹೊಸದಾಗಿಸಿಟ್ಟು ಹೋಗಿದ್ದಾರೆ.
ಎಪ್ಪತ್ತೈದರ ಹರೆಯದಲ್ಲಿಯೂ ಗೆಜ್ಜೆಕಟ್ಟಿ ರಂಗಕ್ಕೇರಿದ ಅಪ್ಪನ ಉತ್ಸಾಹಕ್ಕೆ ಸಾಕ್ಷಿಯಾಗುಳಿದಿದೆ ಈ ಮದ್ದಳೆ. ಮುಟ್ಟಿದಾಗಲೆಲ್ಲ ಮತ್ತೆ ಅಪ್ಪನ ಬೆಚ್ಚನೆಯ ವಾತ್ಸಲ್ಯದ ನೆನಪು ಉಕ್ಕಿಸುತ್ತದೆ.








0 Comments