ರಂಗಾಯಣ’ ಮೈಸೂರು ಪ್ರತೀ ವರ್ಷ ಆಯೋಜಿಸುವ ‘ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ’ದಲ್ಲಿ, ಈ ಬಾರಿ ಮುಂಬೈನ ಮಾಟುಂಗಾ ಕರ್ನಾಟಕ ಸಂಘದ ‘ಕಲಾಭಾರತಿ’ ತಂಡವು, ರಂಗಾಯಣದ ‘ವನರಂಗ’ದಲ್ಲಿ, ದಿನಾಂಕ 11-01-2013ರಂದು, ಡಾ. ಭರತ್‍ಕುಮಾರ್ ಪೊಲಿಪು’ ಅವರ ನಿರ್ದೇಶನದಲ್ಲಿ ಅಭಿನಯಿಸಿ ಪ್ರೇಕ್ಷಕರ ಶ್ಲಾಘನೆಗೆ ಪಾತ್ರವಾದ ನಾಟಕ: ‘ಇನ್ನೊಬ್ಬ ದ್ರೋಣಾಚಾರ್ಯ’.
.
ಮೂಲ ಹಿಂದಿ: ದಿ. ಶಂಕರ್ ಶೇಷ್
ಕನ್ನಡಕ್ಕೆ: ಡಾ. ಆರ್. ಲಕ್ಷ್ಮೀನಾರಾಯಣ
ಸಂಗೀತ: ಅವಿನಾಶ್ ಕಾಮತ್
ಬೆಳಕು: ಅರುಣ್ ಮೂರ್ತಿ
ರಂಗವಿನ್ಯಾಸ: ವಿಶ್ವೇಶ್ವರ ಪರ್ಕಳ
ಪ್ರಸಾದನ: ಮೋಹನ್
.
ಪಾತ್ರವರ್ಗ: ಮೋಹನ್ ಮಾರ್ನಾಡ್, ಅವಿನಾಶ್ ಕಾಮತ್, ಕೆ.ವಿ.ಆರ್.ಐತಾಳ್, ಸುರೇಂದ್ರಕುಮಾರ ಮಾರ್ನಾಡ, ಸುಧಾ ಶೆಟ್ಟಿ, ಪ್ರವೀಣ್ ಸುವರ್ಣ ಬೈಕಂಪಾಡಿ, ನಳಿನಿ ಪ್ರಸಾದ್, ಡಾ. ದೇವಾನಂದ್, ಆನಂದರಾಯ ಕಿಣಿ, ವಾಸುದೇವ ಮಾರ್ನಾಡ್, ಭರತ್ ರಾಜ್ ಜೈನ್, ಚಂದ್ರಾ ಆನಂದ ಮುತಾಲಿಕ ಮತ್ತು ಮಾ.ರೋಹಿತ್ ಚಂದ್ರಕಾಂತ್.
.
ನಾಟಕದ ಕೆಲವು ದೃಶ್ಯಗಳು ನಿಮಗಾಗಿ, ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :
.
ಚಿತ್ರ ಕೃಪೆ: ಪವಿತ್ರಾ ಹಂಚಗಯ್ಯ, ಓಂ ಶಿವಪ್ರಕಾಶ್ ಮತ್ತು ಜಯಲಕ್ಷ್ಮೀ ಪಾಟೀಲ್







ಮುಂಬೈನ ಧಾವಂತ ಬದುಕಿನಲ್ಲಿ ಕೆಲಸಕ್ಕೆ ಹೋಗಿ ಮನೆಗೆ ಮರಳುವುದೇ ದೊಡ್ಡ ಸಾಹಸವೆನಿಸುವಾಗ, ಅದರ ನಡುವೆಯೇ ಒಂದಿಷ್ಟು ಕ್ರೀಯಾಶೀಲ ಮನಸುಗಳು ಒಟ್ಟುಗೂಡಿ ನಾಟಕ ಮಾಡುವುದು, ನಾಟಕದೆಡೆಗಿನ ಅವರೊಳಗಿನ ಅದಮ್ಯ ತುಡಿತವನ್ನು ಸ್ಪಷ್ಟಪಡಿಸುತ್ತದೆ. ಈ ನಾಟಕದ ಪ್ರದರ್ಶನವನ್ನು ಇತ್ತೀಚಿಗಷ್ಟೇ ಮೈಸೂರಿನಲ್ಲಿ ‘ಬಹುರೂಪಿ ನಾಟಕೋತ್ಸವ’ದಲ್ಲಿ ನೋಡುವ ಅವಕಾಶ ನನಗೊದಗಿತ್ತು. ಪ್ರಸ್ತುತತೆಗೆ ನೇರ ಕನ್ನಡಿ ಹಿಡಿಯುವಂಥ ನಾಟಕವಿದು. ಅಭಿನಯದ ವಿಷಯದಲ್ಲಿ ಮುಂಬೈ ಕಲಾವಿದರು ಸದಾ ಎತ್ತಿದ ಕೈ. ಒಬ್ಬರಿಗಿಂತ ಒಬ್ಬರು ಮಿಗಿಲು.
ನಾಳಿನ ಪ್ರದರ್ಶನ ಯಶಸ್ವಿಯಾಗುವುದರಲ್ಲಿ ಅನುಮಾನವಿಲ್ಲ. ಶುಭ ಹಾರೈಕೆ ಕಲಾವಿದರೆಲ್ಲರಿಗೂ.