ಚಿತ್ರ: ನರೇಂದ್ರ ಪೈ
ಅವಧಿಯ ನಿನ್ನೆಯ ಸಂಚಿಕೆ ಗಾಂಧಿಬಜಾರ್ ಇನ್ನಿಲ್ಲ ಎನ್ನುವ ಸುದ್ದಿಯನ್ನು ಹೊತ್ತು ಹೊರಬಂದಿತ್ತು.
ಬಾ ಕಿ ನ ಎಂದೇ ಹೆಸರಾದ ಕಿಳಿಂಗಾರು ನಡುಮನೆ ಬಾಲಕೃಷ್ಣ ಅವರು ಗಾಂಧಿಬಜಾರ್ ಪತ್ರಿಕೆ ಹೊರತರುತ್ತಿದ್ದರು.
ಈಗ ಆ ಪತ್ರಿಕೆ ಹಾಗೂ ಅಷ್ಟೇ ಹೆಸರಾದ ಅವರ ಲಿಪಿ ಮುದ್ರಣ ಇನ್ನಿಲ್ಲ.
ಅದಕ್ಕೆ ನಾಡಿನ ಪ್ರಮುಖರ ಪ್ರತಿಕ್ರಿಯೆ ಇಲ್ಲಿದೆ.
ವಿಷಯ ತಿಳಿದು ದುಃಖವಾಯಿತು, ಅದರಲ್ಲಿ ಎಷ್ಟೋ ಕೃತಿಗಳು ಜೀವ ತಳೆಯುತ್ತಿದ್ದವು, ನನ್ನ ಅರಮನೆ ಕುರಿತ ಲೇಖನ ಗಾಂಧಿ ಬಜಾರದಲ್ಲಿ ಪ್ರಕಟವಾದಾಗ ಅದೇ ಒಂದು ಪ್ರಶಸ್ತಿ ಎಂದು ಸಂಭ್ರಮಿಸಿದ್ದೆ. ಹೆಂಗೆಂಗೆ ತಿಳೀತದೋ ಹಂಗಂಗೆ ಹಣಾನು ಕಳಿಸ್ತಿದ್ದೆ, ಕನ್ನಡದ ಬಹುಮುಖ್ಯ ಲೇಖಕರೆಲ್ಲರ ಪೂರ್ವಾಶ್ರಮ ಗಾಂಧಿ ಬಜಾರ್ , ಬಾಕಿನ ಅವರಿಗೆ ವಯಸ್ಸಾಗಬಾರದಿತ್ತು, ಅದರ ಸಾರಥ್ಯಾನ ಯಾರಾದರು ವಹಿಸಬಹುದಲ್ಲವೆ?
ಕುಂವೀ

ಮುಂಜಾನೆಯೇ ಇದೆಂಥಾ ಆಘಾತಕಾರಿ ಸುದ್ದಿ! ನಾನು ಖಂಡಿತಾ ಬಾ.ಕಿ.ನ. (ಕಿಳಿಂಗಾರು ನಡುಮನೆ ಬಾಲಕೃಷ್ಣ)ರ ಜೊತೆ ಮಾತಾಡುವೆ. `ಗಾಂಧಿ ಬಜಾರ್ ಪತ್ರಿಕೆ’ಯ ಒಬ್ಬ ಆಜೀವ ಚಂದಾದಾರ ನಾನು. ಹೆಚ್ಚು ಹಣವಲ್ಲ, ಕೇವಲ ಐನೂರು ರೂಪಾಯಿ. ಪ್ರತಿ ತಿಂಗಳೂ ನಾನು ಈ ಪತ್ರಿಕೆಗೆ ಕಾಯುತ್ತಿದ್ದೆ. ಈಗಿನ್ನು ಇಲ್ಲ ಎಂದರೆ ಏನು ಹೇಳಲಿ? ಇಲ್ಲದಾಗಲೇ ಇದ್ದುದರ ಮಹತ್ವ ಅರಿವಾಗುವುದು, ಅಲ್ಲವೇ?
ಕೆ.ವಿ. ತಿರುಮಲೇಶ್
ಐದು ವರ್ಷದ ಸಂಚಿಕೆಗಳತ್ತ ಒಂದು ನೋಟ ಹರಿಸಿದರು ಸಾಕು, ಈ ಮುಖಪುಟಗಳೇ ಕನ್ನಡದ ಹಿರಿಮೆ ಗರಿಮೆ ಕಣ್ಣಿಗೆ ಕಟ್ಟುವಂತೆ ಮಾಡುತ್ತವೆ. ಬಾ.ಕಿ.ನ. ಸರ್, ನಿಮಗೆ ಸಾಟಿಯಿಲ್ಲ. ನಿಮ್ಮ ಬಗ್ಗೆ, ನಿಮ್ಮ ಪತ್ರಿಕೆಯ ಬಗ್ಗೆ ಆಡುವ ಹಕ್ಕು ಕಳೆದುಕೊಂಡಿದ್ದೇವೆ. ನಮ್ಮನ್ನು ಕ್ಷಮಿಸಿ.
ನರೇಂದ್ರ ಪೈ
I know BA.KI. NA for last 40 years.There are very few people like him in Bangalore who refused to prosper and remained absolutely honest and simple and more importantly dedicated to the cause of Good literature. One has to salute him with highest reverence.
K Satyanarayana



`who refused to prosper’ — apt description of Ba.Ki.Na. and a lesson for others.
KVTirumalesh
ಬಾ.ಕಿ.ನ. ಅವರು ಕಳೆದ ಇಪ್ಪತ್ತೈದು ವರ್ಷಗಳಿಂದ ಲಿಪಿ ಮುದ್ರಣವನ್ನೂ, ಗಾಂಧಿ ಬಜಾರ್ ಪತ್ರಿಕೆಯನ್ನೂ ನಡೆಸಿಕೊಂಡು ಬಂದಿದ್ದು ನಮಗೆಲ್ಲ ಕೇಳಿ ಗೊತ್ತು ಅಷ್ಟೆ. ಎಸ್.ಆರ್.ವಿಜಯಶಂಕರ್, ಕೆ ಸತ್ಯನಾರಾಯಣ, ಜಯಂತ ಕಾಯ್ಕಿಣಿ ಅವರೆಲ್ಲ ನನಗೆ ಗಾಂಧಿ ಬಜಾರ್ ಗಮನಿಸುವಂತೆ ಹೇಳಿದ ನೆನಪು. ಮುಂದೆ ಗಾಂಧಿ ಬಜಾರ್‌ಗೆ ನಾನೂ ಪುಸ್ತಕಗಳ ಬಗ್ಗೆ ಬರೆದಿದ್ದನ್ನು ಕಳಿಸಿದಂತೆಲ್ಲ ಅವರದನ್ನು ಪ್ರಕಟಿಸುತ್ತ ಬಂದಿದ್ದರು. ಅವರನ್ನು ನಾನು ನೋಡಿದ್ದು ಒಮ್ಮೆ ಮಾತ್ರ. ತೀರ ಈಚೆಗೆ, ಎಸ್ ದಿವಾಕರ್ ಅವರ ಪುಸ್ತಕ ಬಿಡುಗಡೆಗೆ ಬೆಂಗಳೂರಿಗೆ ಬಂದಿದ್ದಾಗ ಅವರು ಅಲ್ಲಿಗೆ ಬಂದಿದ್ದರು. ಕಾರ್ಯಕ್ರಮವೆಲ್ಲ ಮುಗಿದ ಬಳಿಕ ನೀಳಕಾಯದ ಈ ಸ್ಫುರದ್ರೂಪಿ ಯುವಕ ನಿಧಾನಕ್ಕೆ ಬಂದು “ನಾನು ಬಾ.ಕಿ.ನ.” ಎಂದು ಪರಿಚಯಿಸಿಕೊಂಡರು. ಆ ವಿನಯ, ಆ ಪ್ರೀತಿ ಮತ್ತು ಕಣ್ಣಲ್ಲೇ ತುಳುಕುತ್ತಿದ್ದ ಕನ್ನಡದ ಬರಹಗಾರರ ಮೇಲಿನ, ಸಾಹಿತ್ಯದ ಮೇಲಿನ ಪ್ರೀತಿಗೆ ಮಾತೇ ಇಲ್ಲದಂತೆ ಮೂಕನಾಗಿದ್ದೆ. ನಾವು ಬಹಳ ಹೊತ್ತು ಕೈ ಹಿಡಿದೇ ಒಬ್ಬರನ್ನೊಬ್ಬರು ನೋಡುತ್ತ ನಿಂತಿದ್ದೆವು. ಏನು ಆಡುವುದಿತ್ತೋ, ಏನು ಆಡಿಕೊಂಡೆವೋ ಗೊತ್ತಿಲ್ಲ. ಆದರೆ ತುಂಬಾ ಮಾತನಾಡುತ್ತಿದ್ದಂತಿತ್ತು. ಕೆ ಸತ್ಯನಾರಾಯಣರು ಹೇಳಿದರಲ್ಲ, ಅದು ನಿಜ. ಅವರು ಮುಂದೊತ್ತಿ ಹೋಗಿ ಸೆಳೆದುಕೊಳ್ಳದೆ ಹಿಂದೆ ಸರಿದು ನಿಂತು ಬಿಡಲು ನಿರ್ಧರಿಸಿದ್ದ ಸಜ್ಜನ. ಬದುಕು ಒಂದು ಸ್ಪರ್ಧೆ ಎಂದು ಒಪ್ಪಿಕೊಂಡು ಬಿಟ್ಟಿರುವ ನಮ್ಮ ಕಾಲಕ್ಕೆ ಅವರು ಅರ್ಥವಾಗುವುದು ಕಷ್ಟ. ಅದೇ ದಿನ ಸರಿಸುಮಾರು ಇದೇ ಬಗೆಯಲ್ಲಿ, ಕೊನೆಯ ಕ್ಷಣ ಭೇಟಿಯಾದ ಇವರಂಥವರೇ ಇನ್ನೊಬ್ಬ ವ್ಯಕ್ತಿ ಪ್ರಹ್ಲಾದ್ ಡಿ. ವಿ. ಸಂಚಯದ ಮೂಲಕ ಇವರು ಕನ್ನಡಕ್ಕೆ ಅರ್ಪಿಸುತ್ತ ಬಂದ ಸ್ವಂತದ ಸಮಯ, ಶ್ರಮ ಮತ್ತು ಹಣ ಯಾವುದೂ ಸಣ್ಣದಲ್ಲ. ಇವರ ಈ ವ್ರತದ ಹಿಂದಿನ ಪ್ರೇರಣೆ, ಸ್ಫೂರ್ತಿ ಮತ್ತು ಉತ್ಸಾಹವನ್ನು ಅದ್ಯಾವ ಶಕ್ತಿ ಪೋಷಿಸುತ್ತಿದೆಯೋ ಅದು ಚಿರಾಯುವಾಗಲಿ!
ಇದೆಲ್ಲ ಯಾಕೆ ನೆನಪಾಗುತ್ತದೆ ಎಂದರೆ, ಬಾಕಿನ ಅವರು ಅಡಿಗರ ಸ್ನೇಹಿತರಾಗಿದ್ದವರು. ಅಡಿಗರ ಕಾಲದ ವಿದ್ಯಾರ್ಥಿಭವನದ ಚರ್ಚಾಕೂಟಕ್ಕೆ ಗಾಂಧಿ ಬಜಾರ್ ಮತ್ತು ಲಿಪಿ ಮುದ್ರಣದ ಕೊಡುಗೆಯೂ ಇದೆ ಎಂದು ಕೇಳಿದ್ದೇನೆ. ಒಂದು ಕಾಲದ ಸಾಹಿತಿ ದಿಗ್ಗಜರಲ್ಲಿ ಹಲವರಿಗೆ ಅದೊಂದು ಕೂಡುತಾಣವಾಗಿತ್ತಂತೆ. ಕೆ ಎಸ್ ನರಸಿಂಹಸ್ವಾಮಿ ಅವರ ಜನ್ಮಶತಮಾನೋತ್ಸವ ಆಚರಿಸುತ್ತ ಅವರ ಸಮಗ್ರದ ಬಗ್ಗೆ ಇವತ್ತು ನಾವು ಓಡಾಡುತ್ತಿದ್ದೇವಲ್ಲ, ಅದನ್ನು ಮೊದಲು ಪ್ರಕಟಿಸಿದ್ದು ಲಿಪಿ ಮುದ್ರಣ. ಕೇಂದ್ರ ಸಾಹಿತ್ಯ ಅಕಾಡಮಿಯ ಪ್ರಶಸ್ತಿ ಪಡೆದ ಗೋಪಾಲಕೃಷ್ಣ ಪೈಯವರ ಮೊದಲ ಕಥಾಸಂಕಲನ (ಬೆರಳ ಗುರುತು) ತಂದಿದ್ದು ಲಿಪಿ ಮುದ್ರಣ. ಇಂಥ ಇನ್ನಷ್ಟು ಮೊದಲ ಹೆಜ್ಜೆಗಳನ್ನು ಬಾ.ಕಿ.ನ. ಇಟ್ಟಿರುವುದು ಸಾಧ್ಯವಿದೆ, ನಮಗೆ ಗೊತ್ತಿಲ್ಲ. ಅವರ ಪ್ರಕಾಶನದ ಹೆಚ್ಚಿನ ಪುಸ್ತಕಗಳು ಇವತ್ತು ಸಿಗುತ್ತಲೂ ಇಲ್ಲ.
ಈ ಬಾ.ಕಿ.ನ. ಅವರು ಗಾಂಧಿ ಬಜಾರ್ ಸುರು ಮಾಡಿದ ಹಿಂದಿನ ಪ್ರೇರಣೆಗಳೇನಿದ್ದಿರಬಹುದು, ಅದನ್ನು ಅವರು ನಡೆಸುತ್ತಾ ಪಡೆದ ಅನುಭವಗಳೇನಿರಬಹುದು, ಅವರ ನಿಕಟವರ್ತಿಗಳಾಗಿದ್ದು ಇದನ್ನೆಲ್ಲ ಕಂಡವರು ಸ್ವಲ್ಪ ಹೇಳಿದರೆ ಅದರಿಂದ ಎಲ್ಲರಿಗೂ ಅನುಕೂಲ. ನಡುವೆ ಗಾಂಧಿಬಜಾರ್ ಪತ್ರಿಕೆಯನ್ನು ಕೊಂಚ ದೊಡ್ಡ ಗಾತ್ರ ಮತ್ತು ಹೆಚ್ಚು ಪುಟಗಳಲ್ಲಿ ಹೊರತರಬೇಕೆಂಬ ಒಂದು ಉತ್ಸಾಹವೂ ಅವರಲ್ಲಿ ಮೂಡಿದ್ದುಂಟು. ಇದೆಲ್ಲ ಕುತೂಹಲಕರ ಮತ್ತು ಕನ್ನಡ ಸಾಹಿತ್ಯ ಪತ್ರಿಕೆಯಗಳ ಹುಟ್ಟು, ಬೆಳವಣಿಗೆ, ಸಾಧನೆ ಮತ್ತು ಅವಸಾನದ ಕುರಿತು ದಾಖಲಾಗಬೇಕಾದ ವಿವರಗಳು. ಇಲ್ಲವಾದಲ್ಲಿ ಗಾಂಧಿಬಜಾರ್ ಬಗ್ಗೆ ಎಲ್ಲಿಯೂ ಯಾವ ವಿವರವೂ ಇಲ್ಲದ ಸ್ಥಿತಿ ಉಳಿಯುತ್ತದೆ.
ಕನ್ನಡದ ಸಾಹಿತ್ಯ ಪತ್ರಿಕೆಗಳು ಯಾವತ್ತೂ ಸಾಂಸ್ಥೀಕರಣಗೊಳ್ಳಲಿಲ್ಲ. ಯಾರೋ ಒಬ್ಬಿಬ್ಬರು ತಳೆದ ಉತ್ಸಾಹವೇ ಅದರ ಯಾವತ್ತೂ ಸ್ಫೂರ್ತಿಯಾಗಿದ್ದುಕೊಂಡು ಬಂದಿದೆ. ಹಾಗಾಗಿಯೇ ಅವು ಯಾವಾಗ ನಿಲ್ಲುತ್ತವೋ, ಪ್ರಕಟವಾಗುತ್ತಿದ್ದರೆ ಯಾವಾಗ ಯಾವ ತಿಂಗಳಿನ ಸಂಚಿಕೆ ಹೊರಬರುತ್ತೋ ಅನಿಶ್ಚಿತವೇ. ಆದರೆ ನನಗೆ ತಿಳಿದ ಮಟ್ಟಿಗೆ ಗಾಂಧಿಬಜಾರ್ ಪ್ರತಿ ತಿಂಗಳ ಕೊನೆಯ ದಿನ ಕೈತಲುಪುತ್ತಿತ್ತು. ವಿಳಾಸದ ಬದಲಾವಣೆಯಾದಾಗಲೆಲ್ಲ ನಾನು ಒಂದೆರಡು ಸಂಚಿಕೆಗಳನ್ನು ಕಳೆದುಕೊಂಡಿದ್ದೇನೆಯೇ ಹೊರತು ಪತ್ರಿಕೆ ನಿಗದಿತವಾಗಿ ಬಂದಿದೆ. ಆದರೆ ಎರಡು ತಿಂಗಳ ಹಿಂದೆ ಗಾಂಧಿ ಬಜಾರ್ ಬಗ್ಗೆ ಮಾತೆತ್ತಿದಾಗ ನಾ ಮೊಗಸಾಲೆಯವರು ಅದೂ ನಿಲ್ಲುತ್ತದೆ ಮಾರಾಯ ಎಂದಿದ್ದರು. “ನಿನ್ನೆ ಮಾತನಾಡಿದ್ದೇನೆ ಅವರ ಜೊತೆ, ಇನ್ನು ಆಗಲ್ಲ, ನಿಲ್ಲಿಸುತ್ತಿದ್ದಾರೆ” ಎಂದು ಬಿಟ್ಟಿದ್ದರು.
ಅದರ ಚಂದಾ ತೀರ ಸಣ್ಣಮೊತ್ತವಾಗಿತ್ತು, ಈಗಲೂ ವಾರ್ಷಿಕ ನೂರ ಇಪ್ಪತ್ತೈದು ರೂಪಾಯಿಗಳಷ್ಟೇ. ಆರೂವರೆ ಕೋಟಿ ಕನಡಿಗರ ನಡುವಿಂದ ಕನಿಷ್ಠ ಐನೂರು ಮಂದಿ ಚಂದಾದಾರರು ಕನ್ನಡಕ್ಕಾಗಿ ಕೈ ಎತ್ತಲಿ, ಅವರು ಕಾಲಕಾಲಕ್ಕೆ ಚಂದಾ ನವೀಕರಿಸಲಿ ಎಂದೆಲ್ಲ ಇವತ್ತು ಹಾರೈಸಬಹುದು, ಯಾಕೆಂದರೆ ನಾವೇ ಆ ಐನೂರರಲ್ಲಿ ಒಬ್ಬರಾಗಲು ಸೋತೆವು ಎಂಬುದು ನಮಗೆಲ್ಲ ಗೊತ್ತಿರುವುದರಿಂದಲೇ. ಆದರೆ ಬಾಕಿನ ಅವರು ಚಂದಾ ನಂಬಿಕೊಂಡು ಪತ್ರಿಕೆ ನಡೆಸಲಿಲ್ಲ ಎನ್ನುವುದು ಸ್ಪಷ್ಟ. ಸಹಜವಾಗಿಯೇ ಅವರಿಗೆ ಇದು ಈಗ ಕಷ್ಟ, ಈ ಹೊಣೆಗಾರಿಕೆ ತಮ್ಮ ಹೆಗಲಿಗೆ ಭಾರ ಅನಿಸಿರಬೇಕು. ಅವರಿಂದಲೇ ನಾವಾದರೂ ಎಷ್ಟನ್ನೆಲ್ಲ ನಿರೀಕ್ಷಿಸುವುದು, ಕೇವಲ ಫಲಾನುಭವಿಗಳಾಗಿದ್ದು ಬಿಡುವುದು ಸರಿ? ಇನ್ನೆಲ್ಲೊ, ಇನ್ಯಾವುದೋ ರೂಪದಲ್ಲಿ ಗಾಂಧಿಬಜಾರ್ ಮರುಹುಟ್ಟು ಪಡೆಯಬಹುದು, ಸಾಹಿತ್ಯ ವಿಮರ್ಶೆ, ಪುಸ್ತಕ ಪರಿಚಯ, ಪುಸ್ತಕಗಳ ಬಗ್ಗೆ ಮಾತನಾಡುವುದು ಎಲ್ಲ ಕನ್ನಡದ ಜಾಯಮಾನಕ್ಕೆ ಬೇಕು ಅನಿಸಿದರೆ. ಅದು ಕಾಲಕ್ಕೆ ಬಿಟ್ಟ ವಿಚಾರ. ಆದರೆ ಬಾಕಿನ ಸಾಧನೆಯ ಕುರಿತು ಈಗ ಅವರ ಒಡನಾಡಿಗಳು ವಿವರವಾಗಿ ಬರೆಯಬೇಕೆಂದು ಅಪೇಕ್ಷೆ. ಕರ್ತ್ಯವ್ಯ ಕೂಡ ಅಲ್ಲವೆ? ಇದು ಬಹುಷಃ ಬಾಕಿನ ಅವರ ಎಲ್ಲ ಲಕ್ಷಾಂತರ ಅಭಿಮಾನಿಗಳ ನಿರೀಕ್ಷೆ ಕೂಡ ಎಂದು ಭಾವಿಸುತ್ತೇನೆ. ಅವಧಿ ಮನಸ್ಸು ಮಾಡಲಿ.
Many claim-rightly so-credit for bringing out Samagrakavya 1975 of Gopalakrishna Adiga. But it was BA KI NA who did all the ground work on daytoday basis in the press. By nature he is deeply introvert but unlike many introverts who are self obsessed here was BA KI NA who use to understand silence of others. He had that rare gift of understanding what was going in Adigas mind without he even murmuring,Cover page was also done by him.
More than 50 percent of my critical articles were published by him and i am always personally beholden.
Narendra pai has a sense of occasion to write about him and it is this sense of occasion that kept Gandhi bazar relevant without belonging to any writers group.
ನನಗೂ ಇದು ಬಹಳ ನೋವು ತಂದ ಸಂಗತಿ. ಅದೊ ಮೊದಲಾದಾಗಿನಿಂದ ‘ಗಾಂಧಿಬಜಾರ್’ ಓದಿರುವವನು ನಾನು. ಬಾ.ಕಿ.ನ, ಅವರ ಸರಳತೆ ಮತ್ತು ಪ್ರೀತಿಗಳು ಬಹುಕಾಲದಿಂದ ಮನಸ್ಸಿನಲ್ಲಿ ಉಳಿದಿವೆ. ಒಳ್ಳೆಯದೆಲ್ಲ ನಾಶವಾಗುವ, ಪಡಪೋಶಿಗಳು ಮಾತ್ರ ಉಳಿಯುವ ಈ ನಮ್ಮ ಕಾಲ ಕೆಟ್ಟ ಕಾಲ. ಪುಸ್ತಕ ಪ್ರಕಾಶನ ಮತ್ತು ಪತ್ರಿಕಾ ಪ್ರಕಟಣೆಗೆ ಮಾದರಿಯಾದ ಲಿಪಿ ಪ್ರಕಾಶನ, ಬಾ.ಕಿ.ನ. ಇಬ್ಬರಿಗೂ ವಂದನೆಗಳು. ಭಾವನಾ, ದೇಶ-ಕಾಲ, ಅತ್ರಿ, ಪ್ರಿಮಿಯರ್, ಹರಿಹರಪ್ರಿಯರ ಪತ್ರಿಕೆ…… ಇದು ನಿರ್ಗಮನಗಳ ಕಾಲ……..
ಎಚ್.ಎಸ್.ಆರ್.
YNK yondige aarambhavad Gandhi Bazar jote nannadu prarambhada nantu ; putta putta lekhana/chutua/ vidambane ranga varthegallannu breyutta YNK/ Ba Ki Na sneha saviyutta Patrike Nelesutta – chanda daararannu maadutta – kalakshetradallii patrike maarutta todagikondavanu naanu ; mundeyaoo aagaag vimarshe/lekhana baredaddoo ide ; Udaya Vani yalli Patikeya bagge vistrata lekhana barediddanenapoo marakalisuttide ; Moovattu varsha nintidda patrike eega” Nintu”
hogiruva suddi noovu tandide ; kaaya tasmai namaha…- Narayan Raichur