ಕಂಡಿದ್ದುಕಾಡಿದ್ದು-
–ನಿರಂಜನ ವಾನಳ್ಳಿ
ಕಿಂಗ್ಫಿಷರ್ ಮತ್ತು ಜೆಟ್ ಏರ್ವೆàಸ್ ಮಾಲಕರು, ಖಾಸಗಿ ವಿಮಾನಯಾನ ಸಂಕಷ್ಟದಲ್ಲಿದೆ. ಪೆಟ್ರೋಲ್ ಹಾಕಿಸಲು ಕಾಸಿಲ್ಲ. ಸಾಲ ತಂದರೆ ಮಾತ್ರ ವಿಮಾನ ಓಡಿಸೋಕೆ ಸಾಧ್ಯ. ಕೇಂದ್ರ ಸರ್ಕಾರ ಸಹಾಯಕ್ಕೆ ಬರಬೇಕು. ಕನಿಷ್ಠ 10,000 ಕೋಟಿ ಪ್ಯಾಕೇಜ್ ಕೊಡಬೇಕೆಂದು ಧಮಕಿ ಹಾಕಿದ್ದಾರೆ. ಅಲ್ಲಾರೀ, ಲಾಭ ಬಂದಾಗ ಯಾರಿಗಾದ್ರೂ ಹಂಚಿದ್ದಾರಾ? ಕೃಷಿ ಕ್ಷೇತ್ರ ಸಂಕಷ್ಟದಲ್ಲಿ ಇದೆಯಪ್ಪಾ ಅವರ ನೆರವಿಗೆ ಧಾವಿಸೋಣ ಎಂದಿದ್ದಾರಾ…?
ನನ್ನ ಸುತ್ತಲಿನ ಅನೇಕರು ನನ್ನನ್ನು ವಿಚಿತ್ರವಾಗಿ ನೋಡುತ್ತಿದ್ದಾರೆ, ನನ್ನ ಮನೆಯವರು ಯಾಕೋ ಇವನು ನಾರ್ಮಲ್ ಇದ್ದಂಗೆ ಕಾಣಾ¤ಯಿಲ್ಲ ಅಂದೊRಂಡಿದ್ದಾರೆ. ಮತ್ತೆ ಕೆಲವರು ಗೌಡ್ರು ರೈಲ್ ಬುಡ್ತಾವರೆ ಅಂತ ಒಳಗೊಳಗೆ ನಗ್ತಾ ಇದಾರೆ. ಮತ್ತೆ ಕೆಲವರು ಹೌದಾ, ಏನ್ ಬುಕ್ ಬರೆದಿದ್ದೀಯಾ ಅಂತ ಕೇಳಿಸಿಕೊಂಡು “ಹೌದಾ’ ಅಂತ ಹುಬ್ಬೇರಿಸುತ್ತಾ ಇದ್ದಾರೆ. ಇದೆಲ್ಲಕ್ಕೂ ಕಾರಣ ನನ್ನಂಥ ನಾನೂ ಒಂದು ಪುಸ್ತಕ ಬರೆದಿದ್ದೀನಲ್ಲಾ ಎಂಬ ವಿಚಿತ್ರ ಸತ್ಯ. ಪುಸ್ತಕ ಎಂಬುದು ನನಗೂ ಒಂದು ಥರಾ ಪರಲೋಕದ ಸಂಗತಿಯೇ ಸರಿ ಅನ್ನಿ. ನನ್ ಮನಸ್ಸು ಇನ್ನೂ ನಾನು ಪುಸ್ತಕ ಬರೆದೆ ಅದು ಪ್ರಕಟಗೊಳ್ತಾ ಇದೆ ಎಂಬುದನ್ನ ಪದೇ ಪದೇ ನೆನಪಿಸಿಕೊಂಡು ಕಳವಳಕ್ಕೊಳಗಾಗಿದೆ.’
ಈ ಪುಸ್ತಕದ ಮಾತುಗಳು ತೆರೆದುಕೊಳ್ಳುವುದೇ ಹೀಗೆ. ತಾನು ಎಸ್ಎಸ್ಎಲ್ಸಿ ಒಂದೇ ಬಾರಿಗೆ ಸೆಕೆಂಡ್ ಕ್ಲಾಸಿನಲ್ಲಿ ಪಾಸಾದೆ ಎಂಬ ಒಂದೇ ಒಂದು ಕಾರಣಕ್ಕೆ ಪಿಯುಸಿಗೆ ಪ್ರವೇಶ ಪಡೆದೆ. ಇಲ್ಲದಿದ್ದಲ್ಲಿ 407 ಟೆಂಪೋ ತೆಗೆದುಕೊಂಡು ಊರಿನಿಂದ ಕಲಾಸಿಪಾಳ್ಯಕ್ಕೆ ತರಕಾರಿ ಮೂಟೆ ಸಾಗಿಸಬೇಕಾಗಿತ್ತು ಎಂದು ತಮ್ಮ ಬಗ್ಗೆ ನಿರ್ಭಿಡೆಯಿಂದ ಹೇಳಿಕೊಳ್ಳುತ್ತ, ತಮ್ಮನ್ನೂ ಗೇಲಿ ಮಾಡಿಕೊಳ್ಳುತ್ತ ಕನ್ನಡಕ್ಕೆ ಮಾಧ್ಯಮ ಲೋಕದ ತಾಜಾ ಉದಾಹರಣೆಗಳ ಗಂಟು ಬಿಚ್ಚುವ ಶ್ರೀನಿವಾಸ ಗೌಡ ಕೋಲಾರದವರು. ಮಾನಸ ಗಂಗೋತ್ರಿಯಲ್ಲಿ ನನ್ನ ವಿದ್ಯಾರ್ಥಿಯಾಗಿದ್ದ ಈ ಹುಡುಗನ ಬಗ್ಗೆ ಈಗಲೂ ಪ್ರೀತಿ ಯಾಕೆಂದರೆ… ಹೃದಯದೊಳಗೆ ಆತ ಕಾಪಾಡಿಕೊಂಡ ಸೂಕ್ಷ್ಮತೆ ಯಿಂದಾಗಿ. ತನ್ನ ಸರೀಕರಿಗಿಂತ ಎತ್ತರ, ದಪ್ಪ, ಪಟಪಟ ಮಾತಾಡುವ, ತಮಾಷೆ ಮಾಡುವ, ಹುಟ್ಟು ಸೋಮಾರಿಯಂತಿದ್ದರೂ ಬರವಣಿಗೆಗೆ ಇಳಿದರೆ ವಿಲಕ್ಷಣ ಪ್ರತಿಭೆಯೆನಿಸುವ, ಪಡ್ಡೆ ಹುಡುಗರ ಗುಂಪಿಗೆ ಸದಾ ನಾಯಕನೆನಿಸುವ, ನಿರ್ಭಿಡೆಯಿಂದ ಯಾರನ್ನೂ ಎದುರು ಹಾಕಿಕೊಳ್ಳುವ, ಆದರೆ ಚಾಲಾಕುತನದಿಂದ ಎಲ್ಲರನ್ನೂ ಸಂಭಾಳಿ ಸುವ… ಈ ಮುಂತಾದ ವಿಲಕ್ಷಣ ಗುಣಗಳಿಂದ ಶ್ರೀನಿವಾಸ ಗೌಡ ನನಗೆ ಹತ್ತಿರವಾದ.
ಅವನ ತರಗತಿಯ ವಿದ್ಯಾರ್ಥಿಗಳನ್ನು ಕರೆದುಕೊಂಡು ನಾವು ಹೈದರಾಬಾದಿಗೆ ಟೂರಿಗೆ ಹೋಗಿದ್ದೆವು. ಒಂದು ಕ್ರಿಶ್ಚಿಯನ್ ಸಂಸ್ಥೆ ಯಲ್ಲಿ ಉಳಿದಿದ್ದೆವು. ರಾತ್ರಿ ಎಲ್ಲರೂ ಮಲಗಿರುವಾಗ ಹುಡುಗರ ರೂಮಿಂದ ಭಾರೀ ಗಲಾಟೆ. ಗ್ಲಾಸುಗಳು ಫಳ್ಳನೆ ಒಡೆದ ಸದ್ದು. ಇನ್ನು ಸುಮ್ಮನಿದ್ದರೆ ಮೈಮೇಲೆ ಬಂದೀತೆಂದು ಎದ್ದು ಹೊರಟೆ. ಗಲಾಟೆಯಾದ ರೂಮಿಗೆ ನುಗ್ಗಿದೆ. ರಣಕ್ಷೇತ್ರದ ನಡುವಿನಲ್ಲಿ ನನ್ನ ಪ್ರವೇಶ ಆದೀತೆಂದು ಅವರ್ಯಾರೂ ನಿರೀಕ್ಷಿಸಿರಲಿಲ್ಲ. ಎಲ್ಲರೂ ಅವಾಕ್ಕಾಗಿರುವಾಗ ಶ್ರೀನಿವಾಸ ಎದ್ದು ನಿಂತ. ನಾನಿದ್ದೀನಿ ಸರ್ ಶ್ರೀನಿವಾಸ ಗೌಡ, ನಾನು ನಿಭಾಯಿಸ್ತೀನಿ, ದಯಮಾಡಿ ನೀವು ಹೋಗಿ ಸರ್ ಅಂತ ನನ್ನನ್ನು ಕೆಳ ಅಂತಸ್ತಿನವರೆಗೂ ಒತ್ತಾಯದಿಂದ ತಳ್ಳಿಕೊಂಡು ಬಂದ. ಅದೇ ಹುಡುಗ ಈಟಿವಿಗಾಗಿ ಹೈದರಾಬಾದ್, ಹಾಸನ, ಬೆಂಗಳೂರು, ಹೊಸದಿಲ್ಲಿಗಳಲ್ಲಿ ಕೆಲಸ ಮಾಡಿ ಅಲ್ಲಿ ಬರೆದ ಮೀಡಿಯಾ ಡೈರಿ ಓದುವಾಗ ರೋಮಾಂಚನವಾಯ್ತು. ಪುಸ್ತಕಕ್ಕೆ ಮೊನ್ನೆ ಮೊನ್ನೆ ಸೇಡಂನ “ಅಮ್ಮ’ ಪ್ರಶಸ್ತಿಯೂ ಬಂತು. ಮೇಷ್ಟ್ರುಗಳ ಪುಣ್ಯ ಇನ್ನೇನು. ಒಂದೊಂದು ತರಗತಿಯಲ್ಲಿ ಒಬ್ಬನಾದರೂ ಸ್ಮರಿಸಿಕೊಳ್ಳುವ ವಿದ್ಯಾರ್ಥಿ ಸಿಕ್ಕುವುದಕ್ಕಿಂತ ಭಾಗ್ಯ ಯಾವುದು?
ತರಗತಿಯಲ್ಲಿ ಮಹಾ ಸೋಮಾರಿಯಾದರೂ ಜವಾಬ್ದಾರಿ ಬಂದಾಗ ಗೌಡ ಚುರುಕಾದ. ಮಾಧ್ಯಮದಲ್ಲಿ ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಅಥವಾ ಅದನ್ನು ದಕ್ಕಿಸಿಕೊಂಡು ಪಟಪಟನೆ ಮೆಟ್ಟಿಲೇರಿದ. ದೇಶದ ರಾಜಧಾನಿಯಲ್ಲಿ ಎಲೆಕ್ಟ್ರಾನಿಕ್ ಮೀಡಿಯಾಕ್ಕೆ ವರದಿ ಮಾಡುವ ಅವಕಾಶ ಎಲ್ಲರಿಗೂ ಸುಲಭವಾಗಿ ಸಿಕ್ಕುವುದಿಲ್ಲ. ಅದನ್ನು ಚೆನ್ನಾಗಿ ಬಳಸಿಕೊಂಡ ಗೌಡ, ಅಲ್ಲಿಂದ ತನ್ನ ಬ್ಲಾಗಲ್ಲಿ ಮೀಡಿಯಾ ಡೈರಿ ಬರೆಯುತ್ತಿರುವುದಾಗಿ ತಿಳಿಸಿದ್ದ. ಕೆಲವನ್ನು ಆಗಲೇ ಓದಿದ್ದೆ ಕೂಡ. ಜೀವನದಲ್ಲಿ ವೈಯಕ್ತಿಕ ಸಮಯವನ್ನೇ ಕಸಿದುಕೊಳ್ಳುವ ಮಾಧ್ಯಮದ ಸಂತೆಯ ನಡುವೆಯೂ ಸಂತನಂತೆ ತನ್ನೊಳಗಿನ ಸೂಕ್ಷ್ಮತೆಯನ್ನು ಕಾದುಕೊಂಡ ಈ ಹುಡುಗ ಹೊರ ತಂದಿರುವ ಮಿಡಿಯಾ ಡೈರಿ ಸಮಕಾಲೀನ ಪತ್ರಿಕೋದ್ಯಮ ಹಾಗೂ ರಾಜಕಾರಣದ ಒಳಗಿನದನ್ನು ಢಾಳಾಗಿ ತೆರೆದು ತೋರುವ ಪುಸ್ತಕ. ಗೌಡ ನಮ್ಮೆದುರು ಕುಳಿತು ಹರಟುವಂತೆಯೇ ಇರುವ ವಿಚಿತ್ರ ಭಾಷೆಯಿಂದಾಗಿ ಇದು ಆಪ್ತವೆನಿಸುತ್ತದೆ. ವರ್ಣಿಸುವ ಕುತೂಹಲಕಾರಿ ಘಟನೆಗಳು, ನಾವು ದಿನ ಬೆಳಗಾದರೆ ಓದುವ ವ್ಯಕ್ತಿಗಳ ಕುರಿತು ನೀಡುವ ಚಿತ್ರಣಗಳು ಹೊಸತಾಗಿವೆ. ಕಚಗುಳಿಯಿಡುವಂತಿವೆ.

ಮೀಡಿಯಾ ಡೈರಿಯಲ್ಲಿ ಗೌಡ ಪ್ರಸ್ತಾಪಿಸಿರುವ ಎರಡು ವಿಚಾರಗಳು ನನ್ನನ್ನು ದಂಗು ಮಾಡಿಬಿಟ್ಟವು. ಹೀಗೂ ನೋಡುವುದು ಸಾಧ್ಯವೇ ಎಂದು ಹೌಹಾರಿದೆ. ಇವೆರಡೂ ನಮ್ಮ ಸಮಕಾಲೀನ ವಸ್ತುವಿಗೆ ಸಂಬಂಧಪಟ್ಟವು ಅವನ್ನು ಅವರ ಮಾತುಗಳಲ್ಲೇ ಕೇಳಿ:
“ಯಾರಾದರೂ ಉದ್ಯಮಿಗಳ ಮಕ್ಕಳು ಪತ್ರಕರ್ತರಾಗಿದ್ದಾರಾ? ರಾಜಕಾರಣಿಗಳ ಮಕ್ಕಳು ಪತ್ರಕರ್ತರಾಗಿದ್ದಾರಾ? ತುಂಬಾ ಹೆಸರು ಮಾಡಿದ ಸಿನೆಮಾ ನಟರ ಮಕ್ಕಳು ಪತ್ರಕರ್ತರಾಗಿದ್ದಾರಾ? ಕೈತುಂಬಾ ಹಣ ದುಡಿಯುವ ವ್ಯಾಪಾರಿಗಳ ಮಕ್ಕಳು ಆಗಿದ್ದಾರಾ? ಸರ್ಕಾರದ ಆಯಕಟ್ಟಿನ ಉದ್ಯೋಗದಲ್ಲಿ ಇದ್ದವರ ಮಕ್ಕಳು, ಖಾಸಗಿ ಕ್ಷೆೇತ್ರದಲ್ಲಿ ಸಾಕಷ್ಟು ಸಂಪಾದನೆ ಇರುವ ನೌಕರಿಯಲ್ಲಿ ಇರುವವರ ಮಕ್ಕಳು ಪತ್ರಕರ್ತರಾಗಿದ್ದಾರಾ? ಕಟ್ಟಕಡೆಗೆ ಹಣವಂತರ ಮಕ್ಕಳು ಯಾರಾದರೂ ಪತ್ರಿಕಾ ನೌಕರಿಯನ್ನು ಸೀರಿಯಸ್ಸಾಗಿ ತೆಗೆದು ಕೊಂಡಿದ್ದಾರಾ? ಎಂಬ ಪ್ರಶ್ನೆಯನ್ನು ನನಗೆ ನಾನೇ ಕೇಳಿಕೊಂಡೆ.’
“ಯಾಕೆ ಹೀಗೆ? ಪತ್ರಕರ್ತ ವೃತ್ತಿ ಎಂದರೆ ಕೇವಲ ಬಡವರು, ಮಧ್ಯಮ ವರ್ಗದವರು, ರೈತರ ಮಕ್ಕಳು ಮಾಡೋ ಕೆಲಸವಾ? ಬೇರೆಯವರಿಗೆ ಯಾಕೆ ವ್ಯವಸ್ಥೆಯ ಮೇಲೆ ಕೋಪ ಬರೋದಿಲ್ಲ? ಈ ಸಮಾಜ ಎಲ್ಲರಿಗೂ ಸೇರಿದ್ದಲ್ಲವಾ? ರಾಜಕಾರಣಿಯ ಮಗ, ಉದ್ಯಮಿಯ ಮಗ ಯಾಕೆ ಪತ್ರಕರ್ತರಾಗಿ ಅವರ ಅಪ್ಪಂದಿರನ್ನು ಪ್ರಶ್ನೆ ಮಾಡಬಾರದು? ಪತ್ರಕರ್ತರಾಗದ ಇದೇ ಶ್ರೀಮಂತರು ಉದ್ಯಮಿಗಳು, ರಾಜಕಾರಣಿಗಳು, ಪತ್ರಿಕೋದ್ಯಮಿಗಳಾಗುತ್ತಾರೆ ಯಾಕೆ? ಯಾವಾಗ ರಾಜಕಾರಣಿಯ ಮಗ, ಉದ್ಯಮಿಯ ಮಗ, ವ್ಯಾಪಾರಿಯ ಮಗ, ಶ್ರೀಮಂತನ ಮಗ ಪತ್ರಕರ್ತರಾಗಿ ನಮ್ಮೊಂದಿಗೆ ನಿಂತು ಪ್ರಶ್ನೆಗೆ ಉತ್ತರ ಕೇಳುವ ಪ್ರಸಂಗ ಬರುತ್ತದೋ ಆವತ್ತು ಮಾಧ್ಯಮ ವೃತ್ತಿಯನ್ನು ಆದರ್ಶದ ವೃತ್ತಿ ಅಂತ ಒಪ್ಪಬಹುದೇನೋ!’ (ಉಳ್ಳವರು ಆಗುವರೇನಯ್ನಾ ಲೇಖನದಲ್ಲಿ, ಪುಟ: 31-33)
ಶ್ರೀನಿವಾಸ ಗೌಡ ಕೇಳಿದ ಪ್ರಶ್ನೆಯಲ್ಲಿ ಸತ್ಯವಿದೆ. ಕಳೆದ ಇಪ್ಪತ್ತು ವರ್ಷಗಳಿಂದ ನೋಡುತ್ತಿದ್ದೇನೆ. ಮಾಧ್ಯಮ ತರಗತಿಗೆ ಬರುವವರು ಗ್ರಾಮೀಣ ಭಾಗದ ಬಡ, ಮಧ್ಯಮ ಅಥವಾ ಉನ್ನತ ಮಧ್ಯಮ ವರ್ಗದವರೇ ವಿನಾ ಶ್ರೀಮಂತರ ಮಕ್ಕಳು ಬರೋದಿಲ್ಲ. ಅವರು ಬೇಕಾದರೆ ಮಾಧ್ಯಮ ಪತಿಗಳಾಗುತ್ತಾರೆ! ಈ ಸತ್ಯವನ್ನು ಯಾರಿಂದಾದರೂ ಅಲ್ಲಗಳೆಯಲಾದೀತೇ?

ಇಂಥದೇ ಕಂಪನದ ಅಲೆ ಗಳನ್ನೇಳಿಸುವ ಸತ್ಯವನ್ನು ಇನ್ನೊಂದು ಕಡೆ ಗೌಡ ಕೆದಕುವುದು “ಮಲ್ಯನ ಆತ್ಮಕ್ಕೆ ಶಾಂತಿ ಸಿಗಲಿ’ ಎನ್ನುವ ಲೇಖನದಲ್ಲಿ.
ಶ್ರೀನಿವಾಸ ಗೌಡ ಬರೆದಿರುವ ಈ ಡೈರಿಗಳು ಮೂರು ನಾಲ್ಕು ವರ್ಷ ಹಿಂದಿನವು. ಈಚೆಗೆ ಅವರು ಡೈರಿ ಬರೀತಿಲ್ಲವಾ ಅಂತ ಕೇಳಬೇಕು. ಸಾಮಾನ್ಯ ಪತ್ರಕರ್ತರಲ್ಲಿ ಕಾಣದ ಸೂಕ್ಷ್ಮತೆ ಗೌಡರಿಗೆ ಈ ಡೈರಿ ಬರೆಯಲು ಪ್ರೇರೇಪಿಸಿದೆ. ಅವರಿಗೆ ಸಹಜವಾಗಿರುವ ಹುಡುಗಾಟಿಕೆ ಇವರ ಬರಹಗಳಿಗೂ ಚಿಂತನೆಗಳಿಗೂ ಶಕ್ತಿ ಕೊಟ್ಟಿದೆ. ಇದೀಗ ಬೆಂಗಳೂರಿನ ಸುದ್ದಿ ವಾಹಿನಿಯೊಂದರಲ್ಲಿ ಕೆಲಸ ಮಾಡುವ ಗೌಡರು ಬೆಂಗಳೂರಿನ ಟ್ರಾಫಿಕ್ಕುಗಳಲ್ಲಿ, ಇನ್ನೋವಾದ ಶ್ರೀಮಂತಿಕೆಯಲ್ಲಿ ಹಾಗೂ ಸದಾ ಮುತ್ತಿಕೊಳ್ಳುವ ದೋಸ್ತಿಗಳನ್ನು ಮೆಚ್ಚಿಸುವ ಹವ್ಯಾಸಗಳಲ್ಲಿ ಕಳೆದು ಹೋಗದಿರಲಿ.
—
‘ಮೀಡಿಯಾ ಡೈರಿ’
-ಎಂ ಬಿ ಶ್ರೀನಿವಾಸ ಗೌಡ
ಪ್ರಕಾಶಕರು- ಅಂಕಿತ ಪುಸ್ತಕ ‘ಮೀಡಿಯಾ ಮಾಲಿಕೆ’ ಸರಣಿಯಡಿ
ಸರಣಿ ಸಂಪಾದಕರು- ಜಿ ಎನ್ ಮೋಹನ್
—
ಕೃಪೆ -ಉದಯವಾಣಿ







ತುಂಬಾ ಹಿಂದೆ (೯೫ರಲ್ಲಿ ಇರಬಹುದು) ಮಯೂರದಲ್ಲಿ ವಾನಳ್ಳಿಯ ಎಮ್ಮೆಗಳ ಬಗ್ಗೆ ನಿರಂಜನ ವಾನಳ್ಳಿ ಬರೆದ ಲಘು ಪ್ರಭಂಧ ಓದಿದ್ದೆ. ಅದಾದ ನಂತರ ಇದೇ ಮೊದಲ ಸಲ ಅವರ ಹೆಸರು ಓದುತ್ತ ಇರೋದು. ಇಂತ ಲೇಖನ ಆರಿಸಿ ಪ್ರಕಟಿಸಿದ್ದಕ್ಕೆ ಅವಧಿಗೆ thanks 🙂
ಪುಸ್ತಕದ ಬಗ್ಗೆ ಇರೋ ಲೇಖನದ ಜೊತೆಗೆ ಪುಸ್ತಕದ ಪೂರ್ತಿ ಹೆಸರು, ಪ್ರಕಾಶನ ಇತ್ಯಾದಿ ಹಾಕಿದ್ರೆ ಚೆನ್ನಾಗಿರೋದು.
ಡಾ. ನಿರಂಜನ ವಾನಳ್ಳಿ ಅವರು ಯಾವಾಗಲೂ ಬರೀರಿ ಬರೀರಿ ಎನ್ನುತ್ತಾ ವಿದ್ಯಾಥಿ೯ಗಳು ಎಷ್ಟೇ ತಪ್ಪು ಬರೆದರೂ ಅದಕೊಂದು ರೂಪ ಕೊಡುತ್ತಾ, ಸೋಮರಿಗಳನ್ನು ಬಿಡದೆ ಬರೆಸುತ್ತಾರೆ. ಬರೆಯುವವರಿಗೆ ಮತ್ತಷ್ಟು ಪ್ರೊತ್ಸಾಹ ನೀಡುತ್ತಾರೆ. ಅಂತೆ ಅವರು ಸಹ ಬರೆಯುತ್ತಾರೆ. ಅವರ ಹೆಸರು ಕಂಡಾಗಲೆಲ್ಲಾ ಒಂದಷ್ಟು ಹೊತ್ತು ಬಿಡುವು ಮಾಡಿಕೊಂಡು ನಾನು ಓದಿಯೇ ಮುಂದಕ್ಕೆ ಹೆಜ್ಜೆಯಾಕುತ್ತೇನೆ. ಬುಧವಾರ ಉದಯವಾಣಿಯಲ್ಲಿ ಬರೆದ ಪತ್ರಕತ೯ರ ಕುರಿತಾದ ಲೇಖನ ತುಂಬಾ ಚೆನ್ನಾಗಿತ್ತು. ಕಾಯ೯ಕ್ರಮ ಆಯೋಜಕರು ಸರಿಯಾದ ಸಮಯಕ್ಕೆ ಕಾಯ೯ಕ್ರಮ ಆರಂಭಿಸದಿದ್ದರೆ ನಾನು ಅವರ ಮೇಲೆ ಬಹಳಷ್ಟು ಸಲ ರೇಗಿ ಬಿಡುತ್ತೇನೆ. ಮೇಸ್ಟ್ರುರ ಲೇಖನ ಓದಿ ಛೇ…! ನಾನು ಈ ರೀತಿ ಮಾಡಬಾರದಿತ್ತು ಅನಿಸಿತು. ಮತ್ತೊಮ್ಮೆ ಯೋಚಿಸಿದರೆ ನಾವು ರೇಗದಿದ್ದರೆ ಜನ ಸಮಯ ಪ್ರಜ್ಞೆಯನ್ನೇ ಮರೆತು ಬಿಡುತ್ತಾರೆ
ನಾವು ಸುದ್ದಿಯನ್ನು ನಿಗಧಿತ ಸಮಯಕ್ಕೆ ಕಳುಹಿಸಲು ಸಾಧ್ಯವಾಗಲೇ ನಾವು ರೇಗಿಸಿಕೊಳ್ಳಬೇಕಾಗುತ್ತದೆ. ಸುದ್ದಿ ನಮಗೆ ಅನಿವಾಯ೯ವಾದರೂ ಸುದ್ದಿಗಾಗಿ ವ್ಯಥ೯ ಕಾಯುವುದು ನನಗೆ ಸರಿ ಕಾಣಿಸುತ್ತಿಲ್ಲ.
ಮತ್ತೇ ಅವಧಿಯಲ್ಲಿ ಶ್ರೀನಿವಾಸಗೌಡರ ಮೀಡಿಯಾ ಡೈರಿ ಬಗ್ಗೆ ಗುರುಗಳು ಬರೆದಿದ್ದ ಲೇಖನ ಓದಿ ನನಗೆ ತುಂಬಾ ಖುಷಿಯಾಯಿತು. ಅದಕ್ಕಾಗಿ ನಾನು ಒಂದೆರಡು ಮಾತು ಬರೆದೆ.
niranjanara ondu ankana Avadhi yallu
mudi barali.
ಲೇಖನ ಓದಿ ನನಗೆ ತುಂಬಾ ಖುಷಿಯಾಯಿತು.
sir….its surprise that iam reading u on avadhi..writeup is very nice and balansive .gowda should remember ur words ” gowdaru bangalorena trafficnalli,innovada srimantiheyalli,frinds khushi padisuvadaralli kaledu hogadirali”….but baddi maga tammanna duddinalli meritidane.noduvavarige gowda srimantana tara kantane…….let us wish him d d d best…