ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಮಿನುಗೆಲೆ ಮಿನುಗೆಲೆ ನಕ್ಷತ್ರ’ – ಇದು ನಡೆದಾಡುವ ನಕ್ಷತ್ರಗಳಿಗಾಗಿ!!

ಅನೇಕಾ ಸಾಂಸ್ಕೃತಿಕ ಸಂಘಟನೆಯು ಅಂಟಾರಿಸ್ ಟೆಕ್ನಾಲಜಿಸ್ ಸಂಸ್ಥೆಯ ಸಹಯೋಗದೊಂದಿಗೆ ಕಿರಿಯರಿಗಾಗಿ `ಮಿನುಗೆಲೆ ಮಿನುಗೆಲೆ ನಕ್ಷತ್ರ- ಮಕ್ಕಳ ಬೇಸಿಗೆ ಶಿಬಿರ – 2013` ವನ್ನು ಆಯೋಜಿಸಿದೆ . ಎಳೆಯರ ಮನೋವಿಕಾಸ ಹಾಗೂ ಸುಪ್ತ ಪ್ರತಿಭೆಯ ಪ್ರಕಾಶಕ್ಕೆ ವೇದಿಕೆ ಒದಗಿಸುವ ಉದ್ದೇಶವನ್ನು ಈ ಶಿಬಿರ ಹೊಂದಿದೆ. ನಾಟಕ ತಯಾರಿ ಹಾಗೂ ಕಿರು ಚಲನಚಿತ್ರ ನಿರ್ಮಾಣವನ್ನು ಒಳಗೊಂಡ ಈ ಶಿಬಿರದಲ್ಲಿ ಸಮೂಹ ನೃತ್ಯ , ಸಮೂಹ ಗಾಯನ , ಚಿತ್ರಕಲೆ , ಮೂಕಾಭಿನಯ , ಮುಖವಾಡ ತಯಾರಿ , ಗೊಂಬೆತಯಾರಿ , ಭಾಷಣ ಕಲೆ , ಕಥೆ ಕವಿತೆಗಳ ರಚನೆ , ಇತ್ಯಾದಿಗಳ ತರಬೇತಿ ನೀಡಲಾಗುವುದು. ಖ್ಯಾತ ರಂಗಕರ್ಮಿ ಸುರೇಶ ಆನಗಳ್ಳಿಯವರ ಮಾರ್ಗದರ್ಶನದಲ್ಲಿ ನಡೆಯುವ ಈ ಶಿವಿರದಲ್ಲಿ ನಾಡಿನ ಶ್ರೇಷ್ಠ ತಜ್ಙರು ತರಬೇತಿನೀಡಲಿದ್ದಾರೆ.

ಎಪ್ರಿಲ್ 20 ರಿಂದ ಮೇ 9 ರ ತನಕ ನಡೆಯುವ ಈ ಶಿಬಿರ ನಡೆಯಲಿದೆ. ಸ್ಥಳ :-ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿರುವ ತಾಲೀಮು ಕೊಠಡಿ.ಸಮಯ ಪ್ರತಿದಿನ ಬೆಳಿಗ್ಗೆ 10 .30 ರಿಂದ ಸಂಜೆ 5 ರತನಕ.ವಯೋಮಿತಿ : 9 -15 ವರ್ಷ.ನಗರದ ಕೆ.ಎಚ್ ಕಲಾಸೌಧದಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಶಿಬಿರದಲ್ಲಿ ತಯಾರಾದ ನಾಟಕ ಹಾಗೂ ಮಕ್ಕಳೇ ನಿರ್ಮಿಸಿದ ಕಿರುಚಿತ್ರಗಳ ಸಾರ್ವಜನಿಕ ಪ್ರದರ್ಶನವಿರುತ್ತದೆ. ಇಪ್ಪತ್ತೈದು ಶಿಬಿರಾರ್ಥಿಗಳಿಗೆ ಮಾತ್ರ ಅವಕಾಶವಿರುವ ಈ ಶಿಬಿರದಲ್ಲಿ ಮೊದಲು ಬಂದವರಿಗೆ ಮೊದಲ ಆದ್ಯತೆ ಇರುತ್ತದೆ.ನೋಂದಣಿಗೆ ಕೊನೆಯ ದಿನಾಂಕ 18 .04 .2013.

‍ಲೇಖಕರು avadhi

9 April, 2013

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading