ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಮಾಯಾವಿ ಸರೋವರ’ದಲ್ಲಿ ಮುಳುಗೆದ್ದ ಮೇಲೆ

– ಲಲಿತಾ ಕಲ್ಯಾಣಪುರ


ಶನಿವಾರ ೨೧-೬-೧೪, ಸಂಜೆ ಕೆ ಹೆಚ್ ಕಲಾಸೌಧದಲ್ಲಿ, ‘ಮಾಯಾವಿ ಸರೋವರ’ ನಾಟಕ ನೋಡಿ ಬಂದ ಮೇಲೆ ನನಗನಿಸಿದ್ದನ್ನು ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ.
ಸಂಜೆ ಏಳರಿಂದ ಎಂಟೂವರೆ ಅಂದರೆ ಸುಮಾರು ಒಂದೂವರೆ ಗಂಟೆಯಕಾಲ ಕಳೆದದ್ದೇ ತಿಳಿಯಲಿಲ್ಲ.
ಬಂದವರು ಅನುದಿನದ ಜಂಜಡಗಳನ್ನು ಮರೆತು ಮನಸಾರೆ ಒಂದಷ್ಟು ನಕ್ಕು ಹಗುರಾದರು. ಅಹಲ್ಯಾಬಲ್ಲಾಳರು ತಮ್ಮ ಚುರುಕಿನ ಸಂಭಾಷಣೆ, ಪಾದರಸದಂತೆ ಸ್ಟೇಜ್ ಮೇಲೆ ಒಡಾಡುತ್ತ,
ಅಲ್ಲಲ್ಲ, ನರ್ತಿಸುತ್ತಾ, ಅಭಿನಯ, ಆಂಗಿಕ, ವಾಯ್ಸ್ ಮಾಡ್ಯುಲೇಷನ್ ಎಲ್ಲದರಲ್ಲೂ ಸೈ ಎನಿಸಿದರು.

ಅಷ್ಟೇ ಅಲ್ಲ ಮಿಕ್ಕೆಲ್ಲರ ಅಭಿನಯವೂ ಪೂರಕವಾಗಿತ್ತು. ಅದರಲ್ಲೂ ರಾಜ ಹೆಣ್ಣಾಗಿ ಪರಿವರ್ತನೆಯಾಗಿ ನಟಿಸಿದ ನಟಿಯ ಅಭಿನಯ, ಮ್ಯಾನರಿಸಂಗಳಲ್ಲಿ ಒಳ್ಳೆಯ ಪ್ರಯತ್ನವಿತ್ತು.
ಖಂಡಿತವಾಗಿಯೂ ಒಂದು ಒಳ್ಳೆ ಮನರಂಜನೆಯ ನಾಟಕ.ಇದು ಶಬ್ಧಗುಚ್ಛ್ಹತಂಡದ ಮೊದಲ ನಾಟಕ ಎಂದು ಹೇಳುವಂತಿರಲಿಲ್ಲ. ಇಷ್ಟರಮಟ್ಟಿನ ತಯಾರಿಗೆ
ಅಹಲ್ಯಾ ಬಲ್ಲಾಳರ ಶ್ರಮ ಎಷ್ಟಾಗಿರಬೇಕು, ನಾವದನ್ನು ಊಹಿಕೊಳ್ಳ್ಳಬೇಕು.
ಅದೂ ಮುಂಬೈ ನಗರದ ಜಂಜಾಟದಲ್ಲಿರುವ ಕನ್ನಡ ಮನಸ್ಸುಗಳನ್ನು ಒಂದೆಡೆ ಸೇರಿಸಿ, ತಾಲೀಮು, ಇತ್ಯಾದಿ ಕಷ್ಟಗಳನ್ನು ಹೆಗಲಮೇಲೆ ಹೊತ್ತು, ಒಂದು ಒಳ್ಳೆಯ ನಾಟಕವನ್ನು
ನಮಗೆಲ್ಲಾ ನೋಡಿಸಿದ್ದಕ್ಕೆ, ನಿಜಕ್ಕೂ ಅಹಲ್ಯಾರಿಗೆ ಭೇಷ್! ಎನ್ನಲೇಬೇಕು.
ನಾಟಕದಲ್ಲಿ ಬರುವ ವಿಷಯ ಗಂಡು ಹೆಣ್ಣಾಗುವುದು, ಹೆಣ್ಣು ಗಂಡಿನ ಸಾಮ್ರಾಜ್ಯವನ್ನು ಹೊರುವುದು ಇಲ್ಲಿ ಉಂಟಾಗುವ ಸಮಸ್ಯೆ, ಮನಸ್ಥಿತಿಯ ಬಗ್ಗೆ ನಾಟಕಕಾರರು ಗಂಭೀರವಾಗಿ ಚಿಂತಿಸಿದ್ದರೆ ಇನ್ನೂ ಹೊಸ, ಹೊಸ ಆಯಾಮಗಳು ಹೊಳೆಯುತ್ತಿತ್ತೇನೋ? ಅಂತ್ಯವನ್ನು ಎಲ್ಲರಿಗೂ ಒಪ್ಪಿಗೆಯಾಗುವಂತೆ ಹೆಣ್ಣಾದ ರಾಜ ಮರಳಿ ರಾಜನಾಗುವ ಬದಲು, ಹೆಣ್ಣಾಗಿಯೇ ಉಳಿಯುವಂತೆ ಕೊನೆಗೊಳಿಸಿದ್ದರೆ, ನಾಟಕ ಇನ್ನೂ ಅರ್ಥಪೂರ್ಣವಾಗುತ್ತಿತ್ತು. ಇರಲಿ ಅದು ನಾಟಕಕಾರ ಸಾತಂತ್ರ್ಯ.
ಶನಿವಾರದ ಸಂಜೆ ಸವಿಯಾಗಿಸಿದ್ದಕ್ಕೆ ಜಯಲಕ್ಷ್ಮಿ ಪಾಟೀಲರಿಗೆ ನನ್ನ ಥ್ಯಾಂಕ್ಸ್.
 

‍ಲೇಖಕರು G

24 June, 2014

1 Comment

  1. Ahalya Ballal

    ಅರೆರೆ! ಇದನ್ನ ನಾನು ಈಗ ನೋಡಿದೆ. ನಿಮ್ಮೆಲ್ಲರ ಸಹೃದಯತೆಗೆ ಏನು ಹೇಳಲಿ?! …..ತೋಚುತ್ತಿಲ್ಲ.
    ಥ್ಯಾಂಕ್ಯೂ ಬೆಂಗಳೂರು, ಥ್ಯಾಂಕ್ಯೂ ಅವಧಿ,ಥ್ಯಾಂಕ್ಯೂ ಲಲಿತಾ ಅವರೇ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading