ಕಠಿಣ ಹಾದಿಯ ಒಂಟಿ ನಡಿಗೆ
ಮಹಾಭಾರತದ ಆದಿಪರ್ವದಲ್ಲಿ ಒಂದೆರಡು ಪದ್ಯಗಳಲ್ಲಿ ಸ್ಥಾನ ಪಡೆದುಕೊಳ್ಳುವ ಮಾದ್ರಿ ,ಪಾಂಡುರಾಜನ ಸಾವಿಗೆ ನಿಯುಕ್ತಿಗೊಂಡವಳಂತೆ ಬರುತ್ತಾಳೆ.
ನಿಯೋಗದಿಂದ ಅಶ್ವಿನಿ ದೇವತೆಗಳಿಂದ ಮಕ್ಕಳು ಪಡೆಯುತ್ತಾಳೆ. ಆದರೆ ಸಹಗಮನವನ್ನು ಆಕೆ ಒಪ್ಪಿಕೊಳ್ಳುವಾಗ ಅವಳ ಮನಸ್ಥಿತಿ ಏನಾಗಿರಬಹುದು. ಅದು ಯಾರ ನಿರ್ಧಾರ, ಅವಳು ಆ ಸಂದರ್ಭದಲ್ಲಿ ಎತ್ತಿರಬಹುದಾದ ಪ್ರಶ್ನೆಗಳು ಏನಾಗಿರಬಹುದು.
ಅವು ಕೇವಲ ಧರ್ಮ, ಸಂಪ್ರದಾಯದ ಕಟ್ಟುಪಾಡುಗಳೆ ಅಥವಾ ಅದನ್ನು ಮೀರಿದ ರಾಜಕೀಯ ಅಧಿಕಾರದ ಪ್ರಶ್ನೆಗಳು ಇರಬಹುದಲ್ಲವೆ. ಹಲವು ಆಯಾಮಗಳಲ್ಲಿ ವರ್ತಮಾನದ ತಿಳುವಳಿಕೆಯಲ್ಲಿ ಪರಿಶೀಲಿಸುವ ಪ್ರಯತ್ನ ಈ ರಂಗಪ್ರಯೋಗದಲ್ಲಿ ಮಾಡಿದ್ದೇವೆ.
ನಿಮ್ಮ ಸಮಕ್ಷಮದಲ್ಲಿ ನಮ್ಮ ನಾಟಕ ಪ್ರಸ್ತುತಪಡಿಸಲು ಉತ್ಸುಕರಾಗಿದ್ದೇವೆ
-ಅನಲ

ಮಾದ್ರಿಯ 'ಸಹಗಮನ'
ನಿಮಗೆ ಇವೂ ಇಷ್ಟವಾಗಬಹುದು…





0 Comments