
ಮಂಜುನಾಥ ಚಾಂದ್
ಮುಂಗಾರು!
ಅಲ್ಲಿನ ಪ್ರತಿ ಕ್ಷಣಗಳೂ ಅನನ್ಯ. ಪತ್ರಿಕೋದ್ಯಮದ ಅ.ಆ.ಇ. ಕಲಿಸಿದ ಸಂಸ್ಥೆ ಈಗ ಹೇಗಿರಬಹುದು?
ಮೊನ್ನೆ ತಾನೆ ಮಂಗಳೂರಿಗೆ ಹೋಗಿದ್ದಾಗ ನಾ ಕೆಲಸ ಮಾಡಿದ ಬೈಕಂಪಾಡಿ, ಉಳಕೊಂಡ ಚಿತ್ರಾಪುರದಲ್ಲಿ ಒಬ್ಬನೇ ಗಂಟೆಗಳ ಕಾಲ ಸುತ್ತಾಡಿದೆ. ನಿಜಕ್ಕೂ ಮನಸ್ಸು ಭಾರ! ಸುರಿದ ಮುಂಗಾರಿನ ಮಳೆಗೆ ಬೊಗಸೆ ಹಿಡಿದ ದಿನಗಳು ಜೀವನದಲ್ಲಿ ಶಾಶ್ವತ.
ಬರವಣಿಗೆ ಕಲಿಸಿದವರು, ವರದಿಗಾರಿಕೆ ಕಲಿತದ್ದು, ಮೊಳೆ ಜೋಡಿಸಿದ್ದು… ಬಾರೋ ತಮ್ಮಾ ಅನ್ನುತ್ತಿದ್ದ ವರಶೆ (ವಡ್ಡರ್ಸೆ ರಘುರಾಮ ಶೆಟ್ಟಿ)… ಜತೆಗೆ ಕೆಲಸ ಮಾಡುತ್ತಿದ್ದ Tk Ramesh Shetty, Dinesh Amin, Bellairu Mohammed Haneef, Keshava Vitla, Rajaram Tallur, ಬಿ.ಬಿ.ಶೆಟ್ಟಿಗಾರ್, ದಾಮೋದರ ಶೆಟ್ಟಿಗಾರ್, ಸುನಿಲ್ ನಟೇಕರ್, ಮಂಜುನಾಥ್ ಭಟ್, ಭೀಮ ಭಟ್, ವಿಜೂ ಪೂಣಚ್ಚ, ಎಚ್, ನಾಗವೇಣಿ, ಪ್ರಕಾಶ್ ಶೆಟ್ಟಿ, ವಿಶ್ವ ಕುಂದಾಪುರ… ಎಲ್ಲ ಕಣ್ಣ ಮುಂದೆ ನಿಂತರು.
ಶಂಕರ್ ಶೆಟ್ಟರ ಕ್ಯಾಂಟಿನ್ ದೋಸೆ ತಿಂದು ಲೆಕ್ಕ ಬರೀತಿದ್ದು….
ಕೊನೆಯ ದಿನಗಳಲ್ಲಿ ಬರುತ್ತಿದ್ದುದು ಆರನೂರು ರೂ. ಸಂಬಳ, ಆದರೆ ನೆಮ್ಮದಿ 100%….!




















i also worked near by Janavahini News paper, in 1998- 2000 as a copy Editor, The bus stop was Mungaru stop, some time walk to high way through Angara Gundi, travelling every day to kasaragod from Baikampady, catching last bus