ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಲೆನಾಡ 'ವ್ಯಾಮೋಹಿ' ಬಿಳುಮನೆ ರಾಮದಾಸ್ ಇನ್ನಿಲ್ಲ

(ಸಹಿ ಸಂಗ್ರಹ ಚಿತ್ರ ಕೃಪೆ: ಡಿ ಜಿ ಮಲ್ಲಿಕಾರ್ಜುನ್ )
ಕುವೆಂಪು ನಂತರದಲ್ಲಿ ಬದಲಾದ ಮಲೆನಾಡಿನ ಬದುಕನ್ನು ಆಧರಿಸಿ ಕತೆ ಕಾದಂಬರಿಗಳನ್ನು ಬರೆದವರೆಂದೇ ಹೆಸರಾಗಿದ್ದ ಸಾಹಿತಿ ಬಿಳುಮನೆ ರಾಮದಾಸ್ ಅವರು ಇನ್ನಿಲ್ಲ.
ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಅಧಿಕಾರಿಯಾಗಿದ್ದ ಇವರು ತೀರ್ಥಹಳ್ಳಿಯ ಬಿಳುಮನೆಯವರು.
ತಂದೆಯ ಪಾರ ಓದಿನ ಆಸಕ್ತಿಯಿಂದಾಗಿ ಓದಿನ ಲೋಕಕ್ಕೆ ಬಂಡ ರಾಮದಾಸ್ ಅವರು ವಾಣಿಜ್ಯ ಇಲಾಖೆ   ಬರವಣಿಗೆಗೂ ಪಾದಾರ್ಪಣೆ ಮಾಡಿದರು.

ಜನಪ್ರಗತಿಯಲ್ಲಿ ಇವರ ಕಥೆ ಪ್ರಕಟವಾಯಿತು. ಶೂದ್ರ ಶ್ರೀನಿವಾಸ್ ಅವರು ಮಲೆನಾಡ ಅನುಭವಗಳನ್ನೇ ಇಟ್ಟುಕೊಂಡು ಬರವಣಿಗೆ ಮಾಡಲು ಒತ್ತಾಯಿಸಿದರು. ಅದರ ಫಲ ಕುಂಜ ಹಾಗೂ ವ್ಯಾಮೋಹ
ಆ ನಂತರ ಇವರು ಬರೆದ ಕಾದಂಬರಿ ತಲೆಮಾರು ಚಲನಚಿತ್ರವಾಯಿತು. ಖ್ಯಾತ ನಿರ್ದೇಶಕ ಸಿದ್ದಲಿಂಗಯ್ಯ ಅವರು ಪ್ರೇಮ ಪ್ರೇಮ ಪ್ರೇಮ ಎನ್ನುವ ಹೆಸರಿನಲ್ಲಿ ಈ ಕಾದಂಬರಿಯನ್ನು ಬೆಳ್ಳಿಪರದೆಗೆ ತಂದರು.
ಇವರ ಹುಲಿ ಮಾಡಿಸಿದ ಮಾಡುವೆ ಪ್ರಬಂಧ ಬರಹ ಸಾಕ್ಷ್ಟು ಹೆಸರು ಮಾಡಿತು.
ಇವರಿಗೆ ಕುವೆಂಪು ಶ್ರೀ, ಗೊರೂರು, ಎಲ್ ಬಸವರಾಜು ಹಾಗೂ ಹಾವನೂರು ಪ್ರಶಸ್ತಿ ಸಂದಿವೆ.

‍ಲೇಖಕರು avadhi

26 March, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading