ಮಾನವ ತನ್ನ ಒಳಗಣ್ಣನ್ನು ತೆರೆದು ಸಾಮಾಜಿಕ ಬದುಕಿಗೆ ತೆರೆದುಕೊಳ್ಳುವಂತೆ ನಾಟಕವು ಪ್ರತಿ ಹಂತದಲ್ಲೂ ಸೂಚ್ಯವಾಗಿ ಸಲಹೆ ನೀಡುತ್ತಾ ಹೋಗುತ್ತದೆ. ರಂಗಮಂಟಪದಲ್ಲಿ ಜಂಗಮಯ್ಯನ ಆರ್ಭಟವಂತೂ ಧಾರ್ಮಿಕ ಅಂಧಕಾರದಲ್ಲಿ ಮುಳುಗಿದವರನ್ನು ಬಡಿದೆಬ್ಬಿಸುತ್ತದೆ. ವಯೋವೃದ್ಧನೂ, ಜ್ಞಾನವೃದ್ಧನೂ ಆದ ಜಂಗಮಯ್ಯನು ವೇದಿಕೆಯ ಅಷ್ಟೂ ದಿಕ್ಕುಗಳಲ್ಲಿ ತನ್ನ ಪಾರಮ್ಯ ಮೆರೆಯುತ್ತಾನೆ. ಅವನ ಕುಣಿತ, ನೆಗೆತ, ಆರ್ಭಟ, ಕೂಗಾಟ ಪ್ರೇಕ್ಷಕರನ್ನು ಸ್ಥಂಭೀಭೂತರನ್ನಾಗಿ ಮಾಡುತ್ತದೆ.
ನಾಟಕಕ್ಕೆ ಒಂದು ಚೌಕಟ್ಟು ಹಾಗೂ ತನ್ಮಯತೆ ಮೂಡಿಸಿದ್ದು ಹಿನ್ನೆಲೆ ಗಾಯನ. ಜನಪದ ಗೀತೆಗಳನ್ನು ನಾಟಕಕ್ಕೆ ಅಳವಡಿಸಿ, ಮನದುಂಬಿ ಹಾಡಿ, ಏಕತಾನತೆಯಿಂದ ಬಹುದೂರು ಸಾಗುವಂತೆ ಮಾಡುತ್ತದೆ. ಆ ಗೀತೆಗಳಲ್ಲಿರುವ ಲಾಲಿತ್ಯ ಎಂಥವರನ್ನೂ ತಲೆದೂಗಿಸಿತು. ಪ್ರತಿನಿತ್ಯದ ಗೊಂದಲಗಳಿಂದ ಕೊಂಚ ಬಿಡುಗಡೆ ನೀಡಿ, ಮನವನ್ನು ಮುದಗೊಳಿಸಿದ್ದು ಎಲ್ಲ ಸಹೃದಯರ ಮೊಗದಲ್ಲೂ ಎದ್ದು ಕಾಣುತ್ತಿತ್ತು. ಮಂಟೇಸ್ವಾಮಿ ಕಥಾಪ್ರಸಂಗವು ಸಾಂಸ್ಕೃತಿಕ ರಾಯಭಾರಿ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿತು.]]>






0 Comments