ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಂಜುಳಾ 'ಗಾಥಾ'..

ಮತ್ತೆ ಭರತಗಾಥಾ..‌
ಮಂಜುಳಾ ಸುಬ್ರಹ್ಮಣ್ಯ
ನೃತ್ಯ ಕಲಾವಿದೆಯಾದ ನನಗೆ ತುಂಬಾ ಹಿಂದಿನಿಂದ ನನ್ನನ್ನು ಕಾಡುತ್ತಿರುವುದು ನೃತ್ಯದಲ್ಲಿ ಹೊಸ ವಿಚಾರಗಳನ್ನು ಹೇಳುವ ಬಗ್ಗೆ. ಹೊಸ ಬಗೆಯಲ್ಲಿ ಏನನ್ನು, ಹೇಗೆ ಪ್ರಸ್ತುತಪಡಿಸಬೇಕು ಎನ್ನುವ ಬಗ್ಗೆ ನಿತ್ಯ ಮಥಿಸುತ್ತಿರುತ್ತೇನೆ.
ಪರಿಣಾಮವಾಗಿ ಸುಮಾರು ಹದಿನೈದು ವರ್ಷಗಳ ಹಿಂದೆ ಹುಟ್ಟಿದ್ದು ‘ರಂಗಭಾಷ್ಯ ನೃತ್ಯರೂಪಕ ಭರತಗಾಥಾ’
ಹೇಗೆ ಮರೆಯಲಿ ಅಮೃತರು ನನಗಾಗಿ ಬರೆದದ್ದನ್ನು…
ಹೊಸ ಯೋಚನೆಗಳನ್ನಿಟ್ಟುಕೊಂಡು ಹಿರಿಯ ಸಾಹಿತಿಗಳೂ ಸಹೃದಯಿಯೂ ಆಗಿರುವ ಫ್ರೊ. ಅಮೃತ ಸೋಮೇಶ್ವರ ಅವರಲ್ಲಿ ನಾನು‌ ಹಾಗೂ ಶೀನ‌ ನಾಡೋಳಿ ಜತೆಗೂಡಿ ನನ್ನ ಪ್ರಯೋಗ ಪ್ರೀತಿ ಹಾಗೂ ಹಂಬಲಗಳನ್ನು ಮುಂದಿಟ್ಟು ಚರ್ಚಿಸಿದೆವು.
ಅವರು ಹಲವಾರು ಕಥೆಗಳನ್ನು ಹೇಳ್ತಾ ಹೋದ ರೀತಿ ನಿತ್ಯ ಸ್ಮರಣೀಯ. ಪ್ರಸ್ತುತಿಯನ್ನು ಪ್ರಚಲಿತದೊಂದಿಗೆ ಸಮೀಕರಿಸಬೇಕು, ಸಮಕಾಲೀನಗೊಳಿಸಬೇಕೆಂಬ ಆಸೆಯೂ ನಮ್ಮದಾಗಿತ್ತು.
ಆಗ ಅವರು ನನಗಾಗಿ ಬರೆದು ಕೊಟ್ಟಿರುವ ರೂಪಕ ‘ಭರತಗಾಥಾ’
ಏಕವ್ಯಕ್ತಿ ಪ್ರಯೋಗವಾಗಿ ಮಾಡುತ್ತಿದ್ದವಳು ನಂತರ ಗೆಳತಿ ಸಹನಾ ಪ್ರಸಾದ್ ಜೊತೆ ಸೇರಿ ತಂಡಕ್ಕೆ ಅಳವಡಿಸಿಕೊಂಡಿದ್ದೆ. ಹಲವಾರು ಪ್ರದರ್ಶನಗಳನ್ನು ಕಂಡಿತ್ತು ಕೂಡಾ.
*ಮತ್ತೆ ಸೆಟ್ಟೇರುತ್ತಿದೆ…*
ಸಂತಸದ ವಿಚಾರ ಏನೆಂದ್ರೆ..‌
ಈಗ ಮತ್ತೆ “ಭರತಗಾಥಾ” ಸೆಟ್ಟೇರಿದೆ, ನನ್ನದೇ ವಿದ್ಯಾರ್ಥಿಗಳ ಜೊತೆಯಲ್ಲಿ- ಹೊಸ ವಿನ್ಯಾಸದೊಂದಿಗೆ, ನವೀನ ಸಂಯೋಜನೆಯೊಂದಿಗೆ.
ಸುಬ್ರಹ್ಮಣ್ಯದಲ್ಲಿ ನಡೆಯುವ 22 ನೆಯ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ
06-03-2018 ರಂದು ಪ್ರದರ್ಶನಗೊಳ್ಳಲಿದೆ.
ವಿವೇಕಯುತ ಬದುಕು ಬಾಳಿಸುವ ಆಶಯದೊಂದಿಗೆ…
ಹಿಂಸೆ ಎನ್ನುವುದು ಅದೆಷ್ಟು ಕ್ರೂರ, ಯಾರನ್ನೂ ಹಿಂಸಿಸುವ ಅಧಿಕಾರ ಯಾರಿಗೂ ಇಲ್ಲ. ಮನದ ದುಷ್ಟ ಪ್ರವೃತ್ತಿಯನ್ನು ಹತ್ತಿಕ್ಕಲು ಸಾಧ್ಯವಿದೆ. ಅದರ ಒತ್ತಾಸೆಯಾಗಿ ಏನೋ ಸದ್ವಿಚಾರಗಳಲ್ಲಿ ತೊಡಗಿಕೊಂಡರಾಯಿತು. ವ್ಯರ್ಥ ಹಿಂಸೆಯಿಂದ ಅನರ್ಥ ಸಂಭವಿಸುವದಲ್ಲದೆ ಮತ್ತೇನು ಸಾಧ್ಯ?
ಹಿಂಸೆ ಎನ್ನುವುದು ಮನುಷ್ಯ ವಿಕೃತಿ. ಅದು ಈಗ ವಿಜೃಂಭಿಸುತ್ತಿದೆ, ಅದರ ಸ್ವರೂಪಗಳು ಹಲವು. ಅದೆಷ್ಟು ಅಪಾಯ ಎನ್ನುವುದನ್ನು ಹೇಳುವುದರೊಂದಿಗೆ ವಿವೇಕಯುತ ಬದುಕು ನಮ್ಮದಾಗಲಿ ಎಂಬ ಸಂದೇಶ ಹಾಗೂ ಆಶಯದೊಂದಿಗೆ “ಭರತಗಾಥಾ” ನೃತ್ಯ ರೂಪಕವನ್ನು ಪ್ರಸ್ತುತ ಪಡಿಸುತ್ತಿದ್ದೇವೆ.

ರಚನೆ: ಪ್ರೊ: ಅಮೃತ ಸೋಮೇಶ್ವರ
ಸಂಗೀತ: ಪ್ರವೀಣ್ ಗೋಡ್ಕಿಂಡಿ
ಪರಿಕಲ್ಪನೆ, ನಿರ್ದೇಶನ: ಮಂಜುಳಾ ಸುಬ್ರಹ್ಮಣ್ಯ.

‍ಲೇಖಕರು avadhi

5 March, 2018

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading