ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬ್ರೇಕಿಂಗ್ ನ್ಯೂಸ್: ಮುರುಗೇಶ್ ನಿರಾಣಿ ಅವರಿಂದ ‘ಸಮಯ’ ಚಾನಲ್ ಖರೀದಿ

ಬ್ರೇಕಿಂಗ್ ವರದಿ: ಕುಮಾರ ರೈತ

‘ಸಮಯ’ ಚಾನಲ್ ಅನ್ನು ತಾವು ಖರೀದಿಸಿರುವುದಾಗಿ ಬೃಹತ್ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಘೋಷಿಸಿದ್ದಾರೆ.

ಇಂದು ಬೆಳಗಾವಿಯಲ್ಲಿ ಮಾತನಾಡಿದ ಅವರು ತಾವು ಅನಿವಾಸಿ ಭಾರತೀಯರೊಬ್ಬರ ಜೊತೆಗೂಡಿ ಚಾನಲ್ ಖರೀದಿಸಿರುವುದಾಗಿ ತಿಳಿಸಿದರು. ಸೋಮವಾರ ದಾಖಲೆಗಳನ್ನು ಅಂತಿಮಗೊಳಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಮಾಧ್ಯಮಗಳ ಕುರಿತು ನನಗೆ ತೀವ್ರ ಆಸಕ್ತಿಯಿದೆ. ಈ ಹಿನ್ನೆಲೆಯಲ್ಲಿ ‘ಸಮಯ ಟಿವಿ’ ಖರೀದಿಸುವ ವ್ಯವಹಾರ  ನಡೆಸಿರುವ ನನ್ನ ಸ್ನೇಹಿತ ಸಚಿನ್ ಗೆ ಸಹಕಾರ ನೀಡಿದ್ದೇನೆ. ಕೆಲಸಮಯದ ಬಳಿಕ ನೇರವಾಗಿ ನಾನೇ ನೇರವಾಗಿ ಮಾಧ್ಯಮ ಸಂಸ್ಥೆ ನಿರ್ವಹಿಸುವ ಸಾಧ್ಯತೆಯೂ ಇದೆ ಎಂದು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ತಿಳಿಸಿದರು

ಬೆಳಗಾವಿ ‘ವಿಶ್ವ ಕನ್ನಡ ಸಮ್ಮೇಳನದ’ ಮಾಧ್ಯಮ ಕೇಂದ್ರಕ್ಕೆ ಇಂದು ಸಂಜೆ ಮುರುಗೇಶ್ ನಿರಾಣಿ ಭೇಟಿ ನೀಡಿದರು. ಈ ಸಂದೆರ್ಭದಲ್ಲಿ ಅವರು ನನ್ನೊಂದಿಗೆ ಈ ವಿಷಯ ತಿಳಿಸಿದರು. ನೀವು ಬಂಡವಾಳ ಹೂಡುತ್ತಿದ್ದೀರಾ ಎಂಬ ಪ್ರಶ್ನೆಗೆ ಅವರು ಅನಿವಾಸಿ ಭಾರತೀಯ ಸಚಿನ್ ಬಂಡವಾಳ ಹೂಡುತ್ತಿದ್ದಾರೆ. ‘ಸಮಯ ಟಿವಿ ಖರೀದಿ ಸಂಬಂಧ ಸಂಸ್ಥೆ ಮಾಲೀಕರಾದ ಸತೀಶ್ ಜಾರಕಿಹೊಳೆ ಅವರೊಂದಿಗೆ ನಡೆಸಿರುವ ಮಾತುಕಥೆ ಅಂತಿಮ ಹಂತದಲ್ಲಿದೆ. ಬರುವ ಸೋಮವಾರ ಈ ಸಂಬಂಧದ ಪ್ರಕ್ರಿಯೆ ಅಂತಿಮಘಟ್ಟ ತಲುಪಲಿದೆ ಎಂದರು. ಸಚಿನ್ ಅವರು ಅಮೆರಿಕಾದಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದೂ ಇವರು ಮೂಲತಃ ಬೆಂಗಳೂರಿನವರು

ಮಾಧ್ಯಮಗಳ ಬಗ್ಗೆ ಮೊದಲಿನಿಂದಲೂ ನನಗೆ ಆಸಕ್ತಿ. ಈ ಹಿನ್ನೆಲೆಯಲ್ಲಿ ಸಚಿನ್ ಅವರಿಗೆ ಪೂರ್ಣ ಸಹಕಾರ ನೀಡಿದ್ದೇನೆ ಎಂದರು

 

 

‍ಲೇಖಕರು G

12 March, 2011

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading