ಹೊಸ ತಲೆಮಾರಿನ ದನಿಯನ್ನು ಬೊಗಸೆಯಲ್ಲಿ ಹಿಡಿದಿಡುವ ಪ್ರಯತ್ನವೊಂದು ಆರಂಭವಾಗಿದೆ. ಒಂದು ಒಳ್ಳೆಯ ದಿಕ್ಕಿನಲ್ಲಿ ಸಾಗುವ ಭರವಸೆಯನ್ನು ಆರಂಭದಲ್ಲೇ ಮೂಡಿಸಿದ್ದಾರೆ. ಅದರತ್ತ ನೀವೂ ಭೇಟಿ ಕೊಡಿ. ಇಲ್ಲಿ ಅವರ ಕಳಕಳಿಯ ಮನವಿ ಇದೆ.

ನಮ್ಮ ಸಮಕಾಲೀನ ಬರಹಗಾರರ ಬಗ್ಗೆ ನಮಗೆಷ್ಟು ಗೊತ್ತು? ನಮ್ಮ ತಲೆಮಾರಿನ ಸಾಹಿತಿಗಳು, ಸಾಹಿತ್ಯದ ಬಗ್ಗೆ ಎಷ್ಟು ಗೊತ್ತು? ನಾವು ಈ ತಲೆಮಾರಿನ, ತಲೆಮಾರಿನ ಹಿರಿಯರ ರಚನೆಗಳನ್ನು ಎಷ್ಟರಮಟ್ಟಿಗೆ ಓದಿಕೊಂಡಿದೇವೆ? ಈ ಪ್ರಶ್ನೆಗಳು ಎದುರಾದಾಗಿನಿಂದ, ಅದನ್ನೆಲ್ಲ ಅರಸಿ ತಂದು ಓದಬೇಕೆನ್ನುವ ಹಂಬಲ ಶುರುವಾಯ್ತು. ಆದರೆ ಹೀಗೆ ಎಲ್ಲರನ್ನೂ, ಎಲ್ಲವನ್ನೂ ಒಟ್ಟುಮಾಡುವುದು ಬಹಳ ಕಷ್ಟದ ಕೆಲಸ. ಅದಕ್ಕೆಂದೇ ಈ ವೇದಿಕೆ. ನನ್ನಲ್ಲಿರುವುದನ್ನು ಹಂಚಿಕೊಂಡು ನಿಮ್ಮಿಂದ ಪಡೆಯುವ, ಕೊಡುಕೊಳ್ಳುವಿಕೆಯ ಬೆಸುಗೆಗೊಂದು ತಾಣವಿದಾಗಲೆಂಬ ಉದ್ದೇಶ.
ಈ ನಡುವೆ ತಮ್ಮ ಬರಹಗಳನ್ನು ಅನುಮತಿಯಿಲ್ಲದ ಪ್ರಕಟಿಸಿದ ಆಕ್ಷೇಪ ಯಾರಿಗಾದರೂ ಉಂಟಾದರೆ ದಯವಿಟ್ಟು.hosatalemaaru@gmail.comಗೆ mail ಮಾಡಿ. ಮುಂಚಿತವಾಗಿ ನಿಮ್ಮ ಕ್ಷಮೆ ಕೇಳಿರುತ್ತೇನೆ. ಮತ್ತೆ ಕ್ಷಮೆ ಕೋರಿ ಗೌರವದಿಂದಲೇ ಅದನ್ನು ತೆಗೆಯಲಾಗುವುದು. ನಮ್ಮ ಜೊತೆಯ ಬರಹಗಾರರು ಏನೆಲ್ಲ ಬರೆಯುತ್ತಿದ್ದಾರೆ, ಹೇಗೆ ಚಿಂತಿಸುತ್ತಾರೆ, ಸಮಾಜದ ಆಗುಹೋಗುಗಳಿಗೆ ಹೇಗೆಲ್ಲ ಸ್ಪಂದಿಸುತ್ತಾರೆ ಎನ್ನುವುದನ್ನು ಅರಿಯಲು, ಹಂಚಿಕೊಳ್ಳಲು ಇದು ನೆರವಾಗಲೆನ್ನುವುದು ಈ ಬ್ಲಾಗ್ ನ ಮುಖ್ಯ ಕಾಳಜಿ.
ಜೊತೆಗೇ ತಲೆಮಾರಿನ ಹಿರಿಯರ ಬರಹಗಳೂ ಇದರಲ್ಲಿ ಪುನಃ ಪ್ರಕಟವಾಗಲಿವೆ. ಅವುಗಳನ್ನು ಯಾವ ಮೂಲದಿಂದ ಆರಿಸಿಕೊಂಡಿದೇನೆ ಅನ್ನುವುದನ್ನು ನಮೂದಿಸಲು ಮರೆಯುವುದಿಲ್ಲ. ದಯವಿಟ್ಟು ಸಹಕರಿಸಿ.
ಇವೆಲ್ಲದರ ಜೊತೆಗೆ ಹಿಂದಿನ ಲೇಖಕರ, ಚಿಂತಕರ ಬರಹ, ಅನುವಾದ ಇತ್ಯಾದಿಗಳನ್ನೂ ಇಲ್ಲಿ ಹಾಕುವ ಉದ್ದೇಶವಿದೆ.
ಯೋಜನೆಯೇನೋ ದೊಡ್ಡದೇ. ಬಹಳ ಪ್ರೀತಿಯಿಂದ ಶುರು ಮಾಡ್ತಿರುವಂಥದೇ. ನಿಮ್ಮ ಪ್ರತಿಕ್ರಿಯೆ ಮಾತ್ರವೇ ಇದನ್ನು ಪೂರ್ಣಗೊಳಿಸಬಲ್ಲದು ಎನ್ನುವ ನಂಬಿಕೆ ನನ್ನದು.
ಕಮೆಂಟ್ ಆಪ್ಷನ್ ಬ್ಲಾಗ್ ನ ಯಾವ ಪೋಸ್ಟ್ ಗೂ ಇರುವುದಿಲ್ಲವಾದ್ದರಿಂದ ನಿಮ್ಮ ಅನಿಸಿಕೆಗಳನ್ನು hosatalemaaru@gmail.comಗೆ mail ಮಾಡಬಹುದು.
ಪ್ರೀತಿಯಿರಲಿ.


ಯೋಚನೆಯೆನೋ ಚೆನ್ನಾಗಿದೆ.ಇದನ್ನೂ ಮುಖೇಡಿ ಬ್ಲಾಗುಗಳಿಗೆ ಹೋಲಿಸಲಾಗುತ್ತದೆಯೆ?!
ಅನಾನಿಮಸ್ ಕಮೆಂಟುಗಳ ಬಗ್ಗೆ ಮೋಹನ್ ಅವರ ಲೇಖನ ಬಂದಿದ್ದು, ನಾವೆಲ್ಲ ಪ್ರತಿಕ್ರಿಯಿಸಿದ್ದು, ಮತ್ತಷ್ಟು ಜನ ನಮ್ಮ ಜತೆ ದನಿಗೂಡಿಸಿದ್ದು ಸರಿಯಷ್ಟೆ? ಆದರೆ ಅದು ಹಲವು ತಪ್ಪು ತಿಳುವಳಿಕೆಗಳಿಗೆ ಎಡೆಮಾಡಿಕೊಟ್ಟಿರುವುದು ಬೇಸರದ ಸಂಗತಿ. ಇನ್ ಪರ್ಟಿಕ್ಯುಲರ್, ನಾನು ವಿರೋಧಿಸಿದ್ದು, ವಿರೋಧಿಸೋದು ಅನಾಮಿಕರ ವಿಕೃತಿಯನ್ನಷ್ಟೆ ಹೊರತು ಅನಾಮಿಕತೆಯನ್ನಲ್ಲ. ಪ್ರತಿಯೊಬ್ಬರಿಗೂ ತಮ್ಮ ಖಾಸಗಿತನವನ್ನು ಕಾಯ್ದಿಟ್ಟುಕೊಳ್ಳುವ ಹಕ್ಕು ಇದ್ದೇ ಇದೆ. ಆದರೆ ಅದರ ದುರುಪಯೋಗ ಆಗಬಾರದು ಎನ್ನುವುದಷ್ಟೆ ನನ್ನ ಕಳಕಳಿ. ಈಗಾಗಲೇ ಕಾಲೆಳೆದರೂ ಸ್ಪೈಸಿ ಅನಿಸುವ ನಗೆ ನಗಾರಿಯಂತಹ ಬ್ಲಾಗ್ ಗಳು ಕನ್ನಡದಲ್ಲಿ ಸಾಕಷ್ಟಿವೆ. ತಮ್ಮದು ಪೋರ್ನೋ ಆರ್ಟಿಕಲ್ಸ್ ಗಾಗಿಯೇ ಇರುವ ಬ್ಲಾಗ್ ಎಂದು ಘೋಷಿಸಿಕೊಂಡು ತಮ್ಮ ಪಾಡಿಗೆ ಬ್ಲಾಗ್ ನಡೆಸಿಕೊಳ್ತಿರುವ ಅನಾಮಿಕರೂ ಸಾಕಷ್ಟಿದ್ದಾರೆ. ಹಿಂದೆಯೂ ನೂರೆಂಟು ಸುಳ್ಳು ಥರದ ಬ್ಲಾಗ್ ಗಳಿದ್ದವು. ಬೊಗಳೆರಗಳೆ ಥರದವು ಸಭ್ಯವಾಗಿ ಕಾಲೆಳೆತದ ಸುಖವನ್ನು ಕೊಡುತ್ತಿವೆ. ಬಳಸುವ ಭಾಷೆಯೊಂದು ದುರಹಂಕಾರದ ಹೊರತಾಗಿ, ಸಭ್ಯವಾಗಿದ್ದರೆ, ಮತ್ತು ತಪ್ಪು ಮಾಹಿತಿಯಿರದಿದ್ದರೆ ಸಾಕಷ್ಟೆ. ಬಹುಶಃ ಅನಾನಿಮಸ್ ಕಮೆಂಟಿಂಗ್, ಬ್ಲಾಗಿಂಗ್ ವಿರುದ್ಧ ಮಾತನಾಡಿದ ಮೋಹನ್ ಅವರು ಕೂಡ ಇಂಥದೇ ಯೋಚನೆ ಹೊಂದಿರುವರು ಅಂದುಕೊಳ್ಳುವೆ.
ಮತ್ತು, ನನ್ನ ವಿರೋಧ ಅನಾಮಿಕ ಬ್ಲಾಗಿಂಗ್, ಕಮೆಂಟಿಂಗ್ ವಿರುದ್ಧ ಅಲ್ಲ, ಅವುಗಳ ದುರುಪಯೋಗದ ವಿರುದ್ಧ ಎಂದು ಸ್ಪಷ್ಟಪಡಿಸುವೆ.
ನಲ್ಮೆ,
ಚೇತನಾ ತೀರ್ಥಹಳ್ಳಿ