ಡಾ.ಸಿ. ನಾಗಣ್ಣ
ನಿರ್ದೇಶಕರು, ಪ್ರಸಾರಾಂಗ, ಮಾನಸಗಂಗೋತ್ರಿ, ಮೈಸೂರು ವಿಶ್ವ ವಿದ್ಯಾಲಯ, ಮೈಸೂರು

ರಘುನಂದನ ಈಗಾಗಲೇ ಪಳಗಿರುವ ಕವಿ. ಕವಿತೆಯನ್ನೇ ಮುಖ್ಯ ಅಭಿವ್ಯಕ್ತಿ ಮಾಧ್ಯಮವನ್ನಾಗಿ ಸ್ವೀಕರಿಸಿ ನಿರಂತರವಾಗಿ ಬರೆಯುತ್ತಿದ್ದಾರೆ. ಒಂದೆರಡು-ಮೂರು ವರ್ಷಗಳಲ್ಲೇ ಅವರು ನಾಲ್ಕು ಕವನ ಸಂಕಲನಗಳನ್ನು ಹೊರತಂದಿದ್ದಾರೆ (ಶ್ವೇತಪ್ರಿಯ, ;ಕನ್ನಡಿಮುಂದೆ ನಿಂತಾಗ, 2011, ಹಸುರು, 2012 ; ಕವಿಶೈಲದ ಕವಿತೆಗಳು, 2012)
ಕುವೆಂಪು ಧ್ಯಾನದಲ್ಲೇ ಬರೆದಿರುವ ಕವಿಶೈಲದ ಕವಿತೆಗಳು ಮತ್ತು ಹಸುರು ಕವನ ಸಂಕಲನಗಳು ರಘುನಂದನರ ಬಗ್ಗೆ ಗೌರವ ಹಾಗೂ ಭರವಸೆ-ಎರಡನ್ನೂ ಮೂಡಿಸುತ್ತದೆ.
‘ಕುವೆಂಪು ಧ್ಯಾನ’ ಎಂದರೆ ಅದು ನಮ್ಮ ಎಲ್ಲಾ ಉಪಾಧಿಗಳಿಂದ ಬಿಡುಗಡೆಗೊಳಿಸಿ ಹೊಸ ಮಾನವರನ್ನಾಗಿ ಮಾಡುವ ಒಂದು ಪವಾಡಸದೃಶ ಪ್ರಕ್ರಿಯೆ. ಕುವೆಂಪು ಅವರನ್ನು ಓದಿಯೂ ಅಲ್ಪಮಾನವರಾಗಿ ಉಳಿದರೆ ಅವರು ಅವರ ಕರ್ಮವೆಂದು ಸುಮ್ಮನಾಗಬೇಕಷ್ಟೆ. ಆ ತರಹದ ಪರಿವರ್ತನೆಯ ಶಕ್ತಿ ಕುವೆಂಪು ಚಿಂತನೆಗಿದೆ.
ವಚನ ಪ್ರಕಾರ ಕನ್ನಡ ಸಾಹಿತ್ಯ ಜಗತ್ತಿನಲ್ಲಿ ಎಂಥ ಕ್ರಿಯೆಗೆ ಕಾರಣವಾಯಿತು ಎಂದು ನಾವೆಲ್ಲ ಬಲ್ಲವರಾಗಿದ್ದೇವೆ. ಅದು ಕೇವಲ ಕಾವ್ಯ ಮಾಧ್ಯಮದಲ್ಲಾದ ಕ್ರಾಂತಿಯಲ್ಲ-ಒಂದು ಸಾಮಾಜಿಕ ಕ್ರಾಂತಿಯ ಕಹಳೆ. ಆ ಕಹಳೆಯ ಧ್ವನಿ ಇಂದಿಗೂ ಮಾರ್ದನಿಗೊಳ್ಳುತಿರುವುದು ಒಂದು ಸೋಜಿಗದ ಸಂಗತಿಯೇ ಸರಿ.
ಅಂದ ಮೇಲೆ ಇಂದು ಬರೆಯುತ್ತಿರುವ ರಘುನಂದನ ಅಂದಿನ ವಚನದಂತೆಯೇ ಬರೆದಿದ್ದಾರೆ ಎಂದು ನಾನು ಹೇಳುತ್ತಿಲ್ಲ. ಒಂದು ಶಬ್ದ ಬಾಯಿಯಿಂದ ಹೊರಟ ಮೇಲೆ ಮತ್ತೆ ಅದೇ ಶಬ್ದವನ್ನು ನಾವು ಉಚ್ಚರಿಸಲು ಹೇಗೆ ಸಾದ್ಯವಿಲ್ಲವೋ ಹಾಗೆ ಒಂದು ಕಾಲದ ಚಳುವಳಿಯ ಒಂದು ಭಾಗವಾಗಿ ಹೊರಟ ವಚನಗಳನ್ನು 21 ನೆಯ ಶತಮಾನದಲ್ಲಿ ಅದೇ ರೀತಿ ನಾವು ಪಡಿಮೂಡಿಸಲು ಸಾಧ್ಯವಿಲ್ಲ. ಏಕೆಂದರೆ ಕಾಲ ಬೇರೆ, ನಮ್ಮನ್ನು ಕಾಡುವ ಸಂಕಟಗಳು ಬೇರೆ. ಈ ಕಾಲದ ಕಂಟಕಗಳಿಗೆ, ಸಂಕಷ್ಟ ಪರಂಪರೆಗೆ ಮಾತು ಕೊಡಬೇಕಾದ ಇರಾದೆ ಇಂದಿನ ಕವಿಗಿದೆ.
ಆ ನಿಟ್ಟಿನಲ್ಲಿ ರಘುನಂದನ್ ಈ ನೂರೊಂದು ವಚನಗಳನ್ನು ಬರೆದಿದ್ದಾರೆ. ಒಂದರ್ಥದಲ್ಲಿ 19 ನೆಯ ಶತಮಾನದ ಷಣ್ಮುಕಸ್ವಾಮಿಯವರೇ ಕೊನೆಯ ಅಪ್ಪಟ ವಚನ ಕಾರರೆಂಬುದು ತಿಳಿದವರ ಅಭಿಪ್ರಾಯ. ಆದರೆ ಈ ವಚನರಚನೆಯ ಆಕರ್ಷಣೆ ಎಷ್ಟು ಗಾಢವಾದದ್ದೆಂದರೆ ಪ್ರತಿಯೊಬ್ಬ ಕವಿಗೂ ಈ ಪ್ರಕಾರದಲ್ಲಿ ವ್ಯವಹರಿಸಬೇಕಲ್ಲ ಎನ್ನಿಸುತ್ತದೆ. ಹಾಗೆಯೇ ಅನೇಕರು 20ನೆಯ ಶತಮಾನದಲ್ಲಿ ವಚನಗಳನ್ನು ಬರೆದಿದ್ದಾರೆ ಇಂದಿಗೂ ಬರೆಯುತ್ತಿದ್ದಾರೆ. ವಚನಗಳ ಸಾಮಾಜಿಕ ಕ್ರಿಯೆಯ ಅಸ್ತ್ರಗಳಾಗಿದ್ದವು ಎಂಬುದು ಒಂದು ಕಾರಣವಿರಬಹುದು; ಹಾಗೆಯೇ ಈ ಮಾಧ್ಯಮದಲ್ಲಿ ಹೆಚ್ಚು ಕಡಿಮೆ ಸ್ವಲ್ಪ ಅಭಿವ್ಯಕ್ತಿ ಸಾಧ್ಯ ಎಂಬ ಧೈರ್ಯ. ಭಾವಿಸಿ ನೋಡಿದರೆ ಆಧುನಿಕ ಕಾಲದಲ್ಲಿ ವಚನಗಳನ್ನು ಅಭಿವ್ಯಕ್ತಿ ಮಾಧ್ಯಮವಾಗಿ ಕೈಗೆತ್ತಿಕೊಳ್ಳುವುದೇ ಒಂದು ಸಾಹಸದ ಕೆಲಸ. ಏಕೆಂದರೆ 12 ನೆಯ ಶತಮಾನದ ಶಿವಶರಣರು ವಚನ ರಚನೆಯ ಎಲ್ಲ ಸಾಧ್ಯತೆಗಳನ್ನು ಕೊಳ್ಳೆಹೊಡೆದಿದ್ದಾರೆ. ಇನ್ನು ಆ ಮಾಧ್ಯಮದಲ್ಲಿ ಹೊಸದೇನನ್ನು ಹೇಳಲು ಸಾಧ್ಯ ಎಂಬ ಪ್ರಶ್ನೆ ನಮ್ಮ ಕಣ್ಣೆದುರಿಗಿದೆ.
ಈಗೇನಿದ್ದರೂ ವಚನದ ಹೊರರೂಪವನ್ನು ನಾವು ಕೈಗೆತ್ತಿಕೊಳ್ಳಬಹುದು; ನಮ್ಮ ಕಾಲದ ಸಂಗತಿಗಳನ್ನು ಹೂರಣವೆಂದು ತುಂಬಬಹುದು.
ರಘುನಂದನ್ ಈ ಅರಿವಿನಿಂದಲೇ ವಚನರಚನೆಗೆ ಕೈಹಾಕಿದ್ದಾರೆ. ಅನೇಕ ಆಧುನಿಕ ವಚನಕಾರರೂ ಇದೇ ಎಚ್ಚರಿಕೆಯಿಂದ ಮುಂದುವರಿದವರಾಗಿದ್ದಾರೆ. ವಚನದ ಫಾಮರ್್ನ್ನು ಎತ್ತಿಕೊಂಡು ರಘುನಂದನ ಎಲ್ಲೆಲ್ಲಿ ಗೆದ್ದಿದ್ದಾರೆ ಅದು ನಮ್ಮ ಗೆಲುವು; ಅವರು ಎಲ್ಲೆಲ್ಲಿ ಸೋತಿದ್ದಾರೆ ಅದು ನಮ್ಮ ಸೋಲು. ಏಕೆಂದರೆ ಕಾವ್ಯ ನಿಮರ್ಾಣ ಎಂಬುದು ಕೇವಲ ಕವಿಯೊಬ್ಬನ ಜವಾಬ್ದಾರಿಯಾಗಿರುವುದಿಲ್ಲ; ಸಹೃದಯನೂ ಅಲ್ಲಿ ಸಮಭಾಗಿ, ಆ ಕಾರಣದಿಂದ.
ಈ ನೂರೊಂದು ವಚನಗಳಲ್ಲಿ ಹಾದು ಹೋಗಿರುವುದನ್ನು ನೆನೆಯುವುದು ಕುತೂಹಲಕರ: ಹೆತ್ತತಾಯಿಯ ಮಹತ್ವ, ಜಾತಿ ಮೀರಿದ ಮಠಾಧೀಶರ ಡೌಲು, ಅಪ್ಪಟ ದಾಂಪತ್ಯದ ಅರ್ಥ, ಅಭಿವೃದ್ಧಿಯಲ್ಲಿ ಗ್ರಾಮನಗರಗಳ ತಾರತಮ್ಯ, ನಿಜ ಕಾಮದ ರಹಸ್ಯ, ಜನಸ್ತೋಮಕ್ಕೆ ಚೈತನ್ಯಕೊಡುವ ಬಗ್ಗೆ, ಮಾತಿನ ಸನ್ನಿಗೆ ಈಡಾಗದಿರಬೇಕಾದ ಎಚ್ಚರ, ಬರೇ ಕಣ್ಣಿಂದ ನೋಡುವ ಜಾಡ್ಯ, ಅಳುವುದನ್ನು ಬಿಟ್ಟು ಹೆಣ್ಣು ಅರಿವಿನ ದಾರಿ ಕಂಡುಕೊಳ್ಳಬೇಕಾದ ಅವಶ್ಯಕತೆ, ಅಂದಂದಿನ ಕೆಲಸ ಅಂದಂದೇ ಮಾಡಬೇಕಾದ ಅಗತ್ಯ, ಬೆವರು ಸುರಿಸಿ ದುಡಿಯುವ ಧನ್ಯತೆ, ಜ್ಞಾನ ಪಿತ್ರಜರ್ಿತವಲ್ಲ, ಸ್ವಯಾಜರ್ಿತ ಎಂಬ ತಿಳಿವಳಿಕೆ ಹೀಗೆ ನೂರೊಂದು ವಚನಗಳಲ್ಲಿ ಹಲವು ವಿಷಯಗಳನ್ನು ಕುರಿತು ರಘುನಂದನ ಧ್ಯಾನಿಸಿದ್ದಾರೆ.
ಈ ವಚನಗಳನ್ನು ಓದುವಾಗ ಕೆಲವು ವಚನಗಳನ್ನು Good ಎಂತಲೂ, ಇನ್ನು ಕೆಲವನ್ನು Very Good ಎಂತಲೂ, ಮತ್ತೆ ಕೆಲವನ್ನು Excellent ಎಂತಲೂ ಗುರುತು ಹಾಕಿಕೊಂಡಿದ್ದೇನೆ. ಇದಕ್ಕೆ ಕಾರಣ ಆ ವಚನಗಳಲ್ಲಿ ಸುಂದರ ಕವಿತೆಗಿರಬೇಕಾದ ಭಾಷೆಯ ಬಂಧ, ಸಂಕ್ಷಿಪ್ತತೆ, ಎಡಕ್ಕೆ ಬಲಕ್ಕೆ ನಮ್ಮ ಗಮನವನ್ನು ಕೇಂದ್ರೀಕರಿಸುವ ಗುಣ-ಇವೆಲ್ಲ ಇರುವುದು.
ಅಂಥ ವಚನಗಳಲ್ಲಿ ಮೊದಲು ನನ್ನ ಗಮನವನ್ನು ಸೆಳೆದ ವಚನವೆಂದರೆ ವಚನಕಾರರನ್ನೇ ಕುರಿತು ಧ್ಯಾನಿಸಿದ ರಚನೆ, ಅದು ಹೀಗಿದೆ.
ಅಕ್ಕನದೊಂದು ಮರ, ಅಲ್ಲಮನದೊಂದು ಮರ
ದಾಸಿಮಯ್ಯನ ಮರ, ಬಸವನದೊಂದು ಮರ
ಲಕ್ಕಮ್ಮನ ಮರ, ಸರ್ವಜ್ಞನ ಮರ
ಮರಗಳೆಲ್ಲಾ ಒಂದಾಗಿ ವನವಾಗಿ, ವನವೆಲ್ಲಾ ಮನವಾಗಿ
ಮನವೇ ಹಸುರಾಗಿ, ವನದೊಳಗೊಂದು ನನ್ನ ತನವ
ಎಳೆಗರಿಕೆಯ ನೀನೇ ಮಾಡಿದೆ ಶ್ವೇತಪ್ರಿಯಗುರುವೆ.
ಈ ವಚನ ವನವೆಲ್ಲಾ ನೀನೆ, ವನದೊಳಗಣ ದೇವತರುವೆಲ್ಲಾ ನೀನೆ ತನುವಿನೊಳಗಾಡುವ ಖಗ ಮೃಗವೆಲ್ಲಾ ನೀನೆ ಎಂಬ ಅಕ್ಕಮಹಾದೇವಿಯ ವಚನವನ್ನು ನೆನಪಿಗೆ ತರುತ್ತದೆ. ರಘುನಂದನರ ಈ ವಚನದ ಕಲ್ಪನೆ ಅದ್ಭುತವಾಗಿದೆ. ವಚನಕಾರರನ್ನೆಲ್ಲ ಆವರಿಸಿಕೊಂಡು ಅಂತರಂಗದಲ್ಲಿ ತುಂಬಿಸಿಕೊಳ್ಳುವ ತವಕ. ಒಬ್ಬೊಬ್ಬ ವಚನಕಾರರೂ ಒಂದು ಬ್ರಹ್ಮಾಂಡವೇ. ಅಂಥ ಹಲವು ಬ್ರಹ್ಮಾಂಡಗಳನ್ನು ತನ್ನ ಒಂದು ಶರೀರದೊಳಗೆ ತುಂಬಿಕೊಳ್ಳಲು ನುಡಿಯುವ ಕವಿಯ ಆಸೆ ದೊಡ್ಡದು. ಅವರೆಲ್ಲ ಒಳಗೆ ಕುಳಿತರೆ ಕವಿ ತಾನೆ ಇನ್ನೊಂದು ಬ್ರಹ್ಮಾಂಡವಾಗಿ ವಿಕಸಿಸಿಬಿಡುತ್ತಾನೆ. ‘ಆ ವನದಲ್ಲಿ ಎಳೆಗರಿಕೆಯ ಮಾಡಿದೆ’ ಎಂಬುದು ದೊಡ್ಡ ಮಾತು.
ಮೆಚ್ಚುಗೆಯಾದ ವಚನಗಳ ಪೈಕಿ ಇನ್ನೊಂದು ವಚನ ಹೀಗಿದೆ.
ಕಾಮಿ, ಕಾಮಿನಿಯರ ಕಾಮದ ಕಾವಿಗೆ
ಜಗವು ಕ್ಷಣಕ್ಷಣವೂ ಕಾಯುತ್ತಿದೆ ಗುರುವೆ.
ಕೊಟ್ಟು ತೆಗೆದುಕೊಳ್ಳುವ ಮಾಂಸದ ವ್ಯಾಪಾರಕ್ಕೆ
ಯಾಕಷ್ಟು ಬೇಡಿಕೆ, ಯಾಕಷ್ಟು ಕೋರಿಕೆ ಗುರುವೆ
ಮಾಂಸದ ಸರಕು ಸಿಕ್ಕ ಸಿಕ್ಕಲ್ಲಿ ಸರಬರಾಜಾದರೆ
ಮನುಜ ಕಾಯಿಲೆ ಕೋಳಿಯಂತಲ್ಲವೆ ?
ಶ್ವೇತಪ್ರಿಯಗುರುವೆ
ಇಂದಿನ ಕಾಲದಲ್ಲಿ ಮೇರೆ, ಮೀರಿರುವ ಅಸಂಯಮದ ಕಾರಣ ಎಂಥೆಂಥ ರೋಗಗಳ ಕಾಣಿಸಿಕೊಂಡಿವೆ ಎಂಬುವುದನ್ನು ತಿಳಿಸುವ ವಚನ ಇದು.
ಇನ್ನೊಂದು ವಚನದಲ್ಲಿ ಮಾಂಸವೆಂದರೆ ಬರಿಯ ಮಿದುವ ಗ್ರಂಥಿಯಲ್ಲ ಎಂಬ ಮಾತು ಬರುತ್ತದೆ. ಇದನ್ನು ಓದುವಾಗ ಆಸ್ಟ್ರೇಲಿಯನ್ ಕವಯತ್ರಿ ಜೂಡಿತ್ ರೈಟಳ “The arc of my flesh is my breast” ಎಂಬ ಸಾಲು ನೆನಪಾಗುತ್ತದೆ. (‘ಮಾಂಸದ ಆಟವೆಂದರೆ ಮಂಗಾಟವಲ್ಲ’) ಒಬ್ಬ ತಾಯಿಯಾದವಳಿಗೆ ಅರಿವಾಗುವ ಸತ್ಯ ಇದು. ಅಂದರೆ ಕುಚವೆಂಬುದು ಅರಿವಿಲ್ಲದವರಿಗೆ ಶೃಂಗಾರದ ಆಟಿಕೆ, ಅರಿವುಳ್ಳ ತಾಯಿಗೆ ಅದು ಸುಧೆಯ ಗಿಂಡಿ ಲೋಕಸುಂದರಿಯೆಂಬ ಪಟ್ಟಕಟ್ಟಿಸಿಕೊಂಡಿರುವ ಐಶ್ವರ್ಯರೈ ಸಹ ನನ್ನ ಕುಚವೆಂಬುದು ಮಾಂಸದ ಕಂಸ ಎಂದು ಸ್ವಗತ ನುಡಿಯಬಹುದು.
ಸೌಂದರ್ಯದ ಪರಿಕರಗಳನ್ನು ಈರೀತಿ ಕಾಣುವ ದೃಷ್ಟಿ ನಿಜವಾಗಿಯಾ ಪ್ರಬುದ್ಧ ದೃಷ್ಟಿ. ಈ ಕವಿ ಆಧುನಿಕತೆಯ ವಿರೋಧಿ ಅಲ್ಲ. ಆಧುನಿಕತೆ ಹೊತ್ತು ತಂದ ಸಂಗತಿಗಳನ್ನು ಕಂಡು ಬೆರಗಾಗಿದ್ದಾನೆ. ಕವಿ: ದೂರದರ್ಶನ, ಚಲನವಾಣಿ, ಮಿಂಚಂಚೆ, ಬಿಚ್ಚು ಪತ್ರ, ಅಂತರ್ಜಾಲ, ಜಾಲತಾಣ, ಹಣಕೊಡುವ ಯಂತ್ರ, ಸ್ಪರ್ಶಪರದೆ-ಇವೆಲ್ಲ ಕವಿಯ ಬೆರಗಿಗೆ ಕಾರಣಗಳು, ನಿಜ. ಆದರೆ ಈ ಎಲ್ಲ ಬೆಳವಣಿಗೆಯ ಹಿಂದೆ ಆತ ಹುಡುಕುತ್ತಿರುವುದು ನಮ್ಮ ಬದುಕನ್ನು ನೇರ್ಪಾಗಿ ನಡೆಸುವಂತ ದಿಕ್ಕುಗೆಡಿಸದ ಒಂದು ದಿಕ್ಸೂಚಿಯನ್ನು, ಕೈಹಿಡಿದು ನಡೆಸುವ ಮಾರ್ಗದರ್ಶಕರನ್ನು.
ಆಲಸ್ಯ, ಸೋಮಾರಿ ತನ, ಮೂಡನಂಬಿಕೆಗಳಂಥ ಜೀವವಿರೋಧಿ ನಡತೆಯನ್ನು ಕವಿ ಕಟುವಾಗಿ ವಿರೋಧಿಸಿ ಶ್ರಮ, ದುಡಿಮೆ, ಸತತ ಪ್ರಯತ್ನದಂಥ ಸಕಾರಾತ್ಮಕ ನಡತೆಯನ್ನು ಹೆಜ್ಜೆ ಹೆಜ್ಜೆಗೂ ಎತ್ತಿ ಹಿಡಿದಿದ್ದಾರೆ. ಲೋಕ ಬದುಕಬೇಕಾದರೆ ಅತ್ಯಗತ್ಯವಾದ ನಂಬಿಕೆಯ ಜೊತೆಗೆ ದೈನಂದಿಕದೊಡಲಿನಲ್ಲೇ ಮನೆ ಮಾಡಿರುವ ಜೀವಪೋಷಕ ಧರ್ಮವನ್ನು ಕಾಪಿಟ್ಟುಕೊಳ್ಳಬೇಕಾದ ಹೊಣೆಗಾರಿಕೆಯ ಮೇಲೆ ಒತ್ತು ನೀಡಿದ್ದಾರೆ.
ಇಲ್ಲಿನ ಕೆಲವು ವಚಗಳಲ್ಲಿ ಪೂರ್ವಾರ್ಧ ಚೆನ್ನಾಗಿದೆ; ಇನ್ನು ಕೆಲವರಲ್ಲಿ ಉತ್ತರಾರ್ಥ ಹಿತವಾಗಿದೆ ಹಲವು ವಚನಗಳಲ್ಲಿ ಸೂಕ್ತ ರೂಪದ ಮಾತುಗಳು ಮಿಂಚುತ್ತವೆ.
1) ಸುರಿದಷ್ಟು ಬಣ್ಣ, ತುಂಬಿದಷ್ಟು ಆಕೃತಿ
2) ಕಾಮದ ಕಿರು ಬಾಣಲೆಯಲ್ಲಿ ಕಾಮುಕರು ಬೇಯುತ್ತಿರುವಂತೆ
3) ಕಟ್ಟುವ ಕ್ರಿಯ ಬಹುಕಠಿಣ, ಮುರಿಯುವುದು ಕ್ಷಣ ಮಾತ್ರ
4) ಮರಗಳೆಲ್ಲಾ ಒಂದಾಗಿ ವನವಾಗಿ, ವನವೆಲ್ಲಾ ಮನವಾಗಿ
5) ಬುದ್ಧಿ, ಶುದ್ಧಿ, ವೃದ್ಧಿಗಳ ತ್ರಿಕೋನ ಲೆಖ್ಖದ ಅರಿವ ಜಗಕೆ ನೀಡಯ್ಯ
6) ಬಟ್ಟೆಯೊಂದು ಕಡೆ ಗಾಳಿ ಗಂಧ ಮತ್ತೊಂದುಕಡೆ
7) ನಮ್ಮ ಮುಖವಾಡಗಳು ಬರಿಯ ಬಣ್ಣದ ಗಡಿಗೆಗಳು
8) ಜಗತ್ತನ್ನೇ ಗೆದ್ದವರು ಪ್ರೀತಿಗೆ ಸೋತರಲ್ಲ ಗುರುವೆ
9) ಕಾಮದ ತೃಷೆಗೆ ಗೊಂಬೆ ಸಂಗಾತಿಯಾದರೆ
10) ಮಾಡುಣ್ಣದವನಿಗೆ ಕಾಯಕದ ರುಚಿ ತೋರಿಸಯ್ಯ
11) ಮೊಲೆಕೊಟ್ಟು ಬಲಕೊಟ್ಟು ಜೀವಕೆ ಪ್ರೀತಿ ಹರಿಸಿರಿ ನೀವು
12) ಸ್ನೇಹ ಹೆಚ್ಚಾದರೆ ಸದರದ ಹುಚ್ಚು
ಹೀಗೆ ರಘುನಂದನ್ ತಮ್ಮ ಮಾಮೂಲಿ ಕವನಗಳಲ್ಲಿ ಹೇಳಲಾಗದ ಸಂಗತಿಗಳನ್ನು ವಚನರಚನೆಯ ಮೂಲಕ ಹೇಳಲು ಪ್ರಯತ್ನಿಸಿದ್ದಾರೆ. ನಾನು ಆರಂಭದಲ್ಲೇ ಸೂಚಿಸಿದಂತೆ ನಮ್ಮ ವಚನಕಾರರು ಒಂದು ಕಾವ್ಯ ಪ್ರಕಾರದ ಸಾಧ್ಯತೆಗಳನ್ನು ಅನಾವರಣ ಮಾಡಿ ತೋರಿಸಿದ ಮೇಲೆ ಮತ್ತೆ ಆ ಪ್ರಕಾರವನ್ನು ಕೈಗೆತ್ತಿಕೊಂಡು ನಿಭಾಯಿಸುವುದು ಅತ್ಯಂತ ಸವಾಲಿನ ಕೆಲಸ. ರಘುನಂದನ್ ತಮ್ಮ ವಯಸ್ಸು ನೀಡಿದ ಧೈರ್ಯದಿಂದ ಈ ಪ್ರಕಾರವನ್ನು ಕೈಗೆತ್ತಿಕೊಂಡಿದ್ದಾರೆ ಅಷ್ಟೆ ಅಲ್ಲ, ಅದನ್ನು ಹಲವು ವಚನಗಳಲ್ಲಿ ಯಶಸ್ವಿಯಾಗಿಯೇ ನಿರ್ವಹಿಸಿದ್ದಾರೆ. ವಚನ ವಾಙ್ಞಯವನ್ನು ಇವರು ಎಷ್ಟು ಗಂಭೀರವಾಗಿ ತೆಗೆದುಕೊಂಡಿದ್ದಾರೆ ಎಂಬುವುದಕ್ಕೆ ಇದು ಸಾಕ್ಷಿಯಾಗಿದೆ.
ವಿಸ್ಮಯ ಅಥವಾ ನಿಗೂಢವನ್ನು ಅನುಮಾನದಿಂದ ನೋಡುವ ಕಾಲ ನಮ್ಮದು. ವಿಜ್ಞಾನ ಹಾಗು ತಂತ್ರಜ್ಞಾನದಿಂದ ಒದಗಿದ Audacity ಯ ಬಳುವಳಿ ಇದು. ನಿಗೂಢವನ್ನು ಧ್ಯಾನಿಸಬೇಕಾದ ಕಾಲ ಮತ್ತೆ ಬಂದಿದೆ. ಕವಿಯ ಹೊಣೆಗಾರಿಕೆ ಹೆಚ್ಚಾಗಿರುವುದರಿಂದ ಅವನು ಪದಗಳನ್ನು ಸುಮ್ಮನೆ ಗೀಚುವುದಕ್ಕಾಗುವುದಿಲ್ಲ, ಬದಲಾಗಿ, ಮಹಾತ್ಮ ಗಾಂಧಿಯವರು ಹೇಳಿದಂತೆ, ಆತ ಪ್ರಾರ್ಥನಾಪೂರ್ವಕವಾಗಿಯೇ ಬರೆಯಬೇಕಾಗುತ್ತದೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಒರಿಯಾ ಕವಿ ಸೀತಾಕಾಂತ ಮಹಾಪಾತ್ರ ಇತ್ತೀಚೆಗೆ ಬೆಂಗಳೂರಿನ ಸಾಹಿತ್ಸೋತ್ಸವದಲ್ಲಿ ಒಂದು ಮಾತು ಹೇಳಿದರು : “The modern day poet has to be fearless, courageous and above all he should be humble”.
ಈ ಗುಣಗಳನ್ನು ರಘುನಂದನ್ ಪಡೆದಿದ್ದಾರೆ. ನಿತ್ಯ ಬಳಕೆಯಲ್ಲಿ ಬಳಲುವ ಪದಗಳಿಗೆ ಹೊಸ ಚೈತನ್ಯವನ್ನು ಆವಾಹಿಸುವ ಪ್ರೌಢಿಮೆ ಹೊಂದಿರುವ ರಘುನಂದನ್ ಪ್ರತಿಭಾವಂತ ಕವಿ. ಇನ್ನು ಸಂಕಲನಗಳ ಸಂಖ್ಯೆಯ ಕಡೆಗೆ ಹೆಚ್ಚು ಗಮನ ಕೊಡದೆ ಗುಣದ ಬಗ್ಗೆ ಗಮನ ಹರಿಸಿ ಮುಂದುವರೆದರೆ ಇನ್ನು ಹೆಚ್ಚಿನ ರೀತಿಯ ಯಶಸ್ಸು ಅವರದಾಗುತ್ತದೆ ಎಂದುಕೊಳ್ಳುತ್ತೇನೆ.
“poetry is my first love” ಎಂದು ನಂಬಿ ನಡೆಯುವವರ ಸಂಖ್ಯೆ ಬಹಳ ಕಡಿಮೆ. ಅಂಥದರಲ್ಲಿ ರಘುನಂದನ್ ಹಾಗೆ ಶ್ರುತಪಡಿಸಿ ಮುಂದುವರೆಯುತ್ತಿದ್ದಾರೆ. ಇದು ಸ್ವಾಗತಾರ್ಹ. ಪ್ರತಿಭಾನ್ವಿತ ಕಲಾವಿದೆಯಾದ ಉಮಾಶ್ರೀಯವರು ರಘುನಂದನರ ಶ್ವೇತಪ್ರಿಯ ಕವನ ಸಂಕಲನಕ್ಕೆ ಬಲು ಸೊಗಸಾದ ಬೆನ್ನುಡಿಯನ್ನು ಬರೆದಿದ್ದಾರೆ. ಈ ಎಲ್ಲಾ ನೆಲೆಗಳಲ್ಲಿ ಬೇಲೂರು ರಘುನಂದನ ಕಾವ್ಯಲೋಕದಲ್ಲಿ ಬಲುದೂರ ಹೋಗಬಲ್ಲರು ಎಂಬುದರಲ್ಲಿ ಅನುಮಾನವಿಲ್ಲ. ಅವರಿಗೆ ಎಲ್ಲ ಶುಭಗಳನ್ನು ಕೋರುತ್ತೇನೆ.







It’s nice to have known Mr. Belur Raghunandan through a social networking site. His dedication to the kannada poetry and other litrary work is highly commendable.
As Mr Naganna rightly said, “The modern day poet has to be fearless, courageous and above all he should be humble” Mr Belur Raghunandan is embodied with all of the above qualities.
I wish him all the very best in his future endeavours.
Arun G Katapady,
San Francisco, California.
ಬೇಲೂರರ ಸಾಹಿತ್ಯ ರಚನೆ ವಿಶಿಷ್ಟ ಪ್ರಕಾರದ್ದು.
ಅದನ್ನು ಓದಲು ಒಂದು ಮನಸ್ಸಿನ ರಾಗದ ಅನಿವಾರ್ಯವಿದೆ, ಅವರ ವಚನಗಳ ಒಳಾರ್ಥಗಳನ್ನು ಅರಿಯುವುದೊಂದು ಧ್ಯಾನ.
ಪಕ್ವ ಮನಸಿನ ಭಾವನೆ ಮತ್ತು ಬದಲಾಗಬೇಕಾದ ವಿದ್ಯುನ್ಮಾನಗಳ ಸೂಕ್ಷ್ಮ ನಡಾವಳಿಗಳನ್ನು ಹೊಂದಿರುವ ಕಾವ್ಯ ಶೈಲಿ.
ನಾಗಣ್ಣನವರ ಈ ಲೇಖನ ಬೆಲೂರರ ಕೃತಿಗೆ ಕೊಟ್ಟ ಬಹುದು ದೊಡ್ಡ ಗೌರವ ಎಂದರೆ ನಿಜವಾಗುತ್ತದೆ.
ಬೇಲೂರು ರಘುನಂದನ್ ರವರು ಎಲ್ಲೆಡೆಗಳಲ್ಲೂ ಕಾವ್ಯವನ್ನೇ ಹುಡುಕುವ ಸೃಜನಶೀಲರು. ಕಾವ್ಯದ ಬಗೆಗಿನ ಆಳವಾದ ಧ್ಯಾನ ಮತ್ತು ‘ನವೀನ ಕಾಲಕ್ಕೆ ನವೀನ ಸಾಹಿತ್ಯ ಸೃಷ್ಟಿ’ಗಳು ಅವರ ಸಾಹಿತ್ಯ ಕೃಷಿಯ ಜೀವಾಳ. ನಾಗಣ್ಣನವರ ಪ್ರಶಂಸೆಯ ಮಾತುಗಳಲ್ಲೇ ಬೇಲೂರರ ಕಾವ್ಯ ಪ್ರಜ್ಞೆ ಮಾರ್ಧನಿಸುತ್ತದೆ. ನಾಗಣ್ಣನವರು ಮತ್ತು ಬೇಲೂರು ಇಬ್ಬರಿಗೂ ಅಭಿನಂದನೆಗಳು.
– ಪ್ರಸಾದ್.ಡಿ.ವಿ.
Its nice to have a friend like Mr.RaghuNandan who is so simple with very good command and love towards the poetry. who has love towards the Kannada and Kannada Poetry.
I wish him all the Very Best in his future career. Days are not far We see him as one of the legends of Kannada poets.
ಕವಿ ಮನಸಿನ ಕನಸುಗಾರ,
ಕಾವ್ಯದೊಡಲ ಕಾವಲುಗಾರ,
ಬರೆಯುತಿರೆ ಅದು ಶ್ರಂಗಾರ,
ಮನಸು ಪೂರ್ತಿ ಪದಗಳ ಭಂಡಾರ.
ಇದು ನನ್ನ ಪ್ರಕಾರ ರಘುನಂದನರವರ ವ್ಯಕ್ತಿ ಪರಿಚಯ.
ಶುಭವಾಗಲಿ ಗೆಳೆಯಾ. 🙂 🙂
ನಮ್ಮ ಪುಸ್ತಕದ ಬಗ್ಗೆ ಮತ್ತೊಬ್ಬರು ಒಳ್ಳೆಯ ಮಾತುಗಳನ್ನಾಡಿದಾಗ ಇನ್ನಿಲ್ಲದ ಖುಷಿಯಾಗುತ್ತದೆ. ಬೇಲೂರು ರಘುನಂದನ್ ಅಣ್ಣನ ಜೊತೆ ಮೊನ್ನೆ ಮೊನ್ನೆಯಷ್ಟೇ ಮಾತನಾಡಿದ್ದೆ. ಸಾಹಿತ್ಯದ ಬಗ್ಗೆ ಒಂದಷ್ಟು ಮಾರ್ಗದರ್ಶನಗಳನ್ನು ನೀಡಿದ್ದರು. ಅವರ ವಚನಗಳನ್ನು ಫೇಸ್ ಬುಕ್ ನಲ್ಲಿ ಓದುತ್ತಿರುತ್ತೇನೆ. ಕೂಡಲೇ ಪುಸ್ತಕವನ್ನೂ ಕೊಂಡುಕೊಳ್ಳುತ್ತೇನೆ. ವಚನಗಳು ಸರಳ ಪದಗಳಿಂದ ಕೂಡಿದ್ದರು ಗಂಭೀರಾರ್ಥ ಹೊಂದಿರುವವಾಗಿರುತ್ತವೆ. ಶೈಲಿ ‘ಹಿಂದಿನ ವಚನ ಸಾಹಿತ್ಯ’ದ ಅನುಕರಣೆಯಾಗದೆ ವಿಭಿನ್ನವಾಗಿ ನಿಲ್ಲುವುದಲ್ಲದೇ, ವಸ್ತು ವಿಚಾರಗಳು ಸಾರ್ವತ್ರಿಕವಾಗಿರುತ್ತವೆ. ವಚನದ ನೆಪದಲ್ಲಿ ವೈಯಕ್ತಿಕ ನಿಂದನೆ, ಅಲ್ಲಿ ಇಲ್ಲಿ ಕಂಡದ್ದನ್ನೆಲ್ಲಾ ವ್ಯಂಗ್ಯವಾಗಿ ತುರುಕುವ ಕೆಲಸವಾಗಿಲ್ಲವೆಂಬುದು ಮೆಚ್ಚುವಂತದ್ದು.
Preethiya Raghu Anna,
Raghu anna Maadiruva saadane bagge yaava reethi abhipraaya tilisabeku anta nanage tiliyuttilla. Ellaru Doddavaraadamele samaanyavaagi Doctor aagbeku, Engineer aagbeku anta yochane Maado ee kaaladalli, Raghu annana yochanegalu Vibhinnavaagide, Avaru hoguttiruva daari vibhinnavaagide, adaralli yashassannu kaanuttiddaare. Adarallu Raghu Anna “Namma BELUR” navaru ,Namma Shaaleyalli Odidavaru anta elikollodakku hemmeyaaguttade.
Raghu annana bagge elabeku andre, Naanu High School nalliruvaaga Raghu anna PUC Oduttiddaru.Naavella avaranna Raghu anna antane kareyuttiddevu. Aaginindalu avaru Prathibhaanvita Vidhyarthiyaagiddaru. Avaru PUC Oduttiruvaagale bere schoolnalli Shikshakaraagi kelasa maaduttiddaru. Avaru Oduvudaralli ashte alla, ella Sankritika Kaaryakramadallu Bhaagavahisuttiddaru. Innu Yaarigu tiliyada Vishaya enandre Raghu anna Tumba Channagi Dance Maaduttiddaru. Shaaleya Vaarshikotsavakke Namagella Dance Choreography maaduttiddaru. Nantara avaru Unnata Vyasangakkagi Hogi alliyu Mukhyavaagi Kannada Vishayavanne aaydukondu GOLD MEDALIST Aadru. Chikka vayassige Principle aagidru, Proffessor aadru. “YUVA KAVI” emba Birudanna galisidaru. Eega ‘BELUR RAGHUNANDAN’ aagi Hesaruvaasiyaagiddare. Avru ishtu varsha aadru nammannella nenpittukondiddare. Namgella Raghu annanaagiye iddaare. Avaru Namma Raghu anna anta elodakke nijavaaglu Hemmeyaagutte. Avaru innashtu Sadaneyannu maadali, Avaru itare Sahithigalanthe beleyali endu haaraisuttene.
Raghunandan thumba Olleya barahagaararu. Avara Vinaya matthu samskriti avara kavithegallalli kanabahudu. Avara vachanagalu 21 ne shatamaanadalli hosa peeligeya vidyarthigalige margadarshi. samajada Ore Koregala vishleshane adarallide. Raghunandan ravarige Abhinandanegalu.