ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಬೇಂದ್ರೆ ನೆನಪು…' – ಇದು ನೀವೆಲ್ಲ ಖಂಡಿತವಾಗಿ ಓದಲೇಬೇಕಾದ ಪುಸ್ತಕ

– ಗೋಪಾಲ ವಾಜಪೇಯಿ


ಕಳೆದ ವಾರವಷ್ಟೇ ‘ಅವಧಿ’ಯ ನನ್ನ ಅಂಕಣದ ಕೊನೆಯ ಕಂತಿನಲ್ಲಿ ‘ಕಸ್ತೂರಿ’ಯಲ್ಲಿ ಪ್ರಕಟಿಸಿದ್ದ ಬೇಂದ್ರೆ ನೆನಪುಗಳ ವಿಚಾರ ಪ್ರಸ್ತಾಪಿಸಿದ್ದೆ. ‘ಬೇಂದ್ರೆ : ಎಷ್ಟೊಂದು ನೆನಪುಗಳು…!’ ಎಂಬ ಶೀರ್ಷಿಕೆಯಲ್ಲಿ (ಪುಸ್ತಕ ವಿಭಾಗ) ಹಲವಾರು ಬೇಂದ್ರೆ ಅಭಿಮಾನಿಗಳ ಬರಹಗಳನ್ನು ಸಂಕಲಿಸಿಕೊಟ್ಟ ಬಗ್ಗೆಯೂ ಹೇಳಿದ್ದೆ. ಅಲ್ಲಿಯೇ ಮುಂದೆ ”ಇತ್ತೀಚಿಗೆ ಬೇಂದ್ರೆಯವರ ಬಗ್ಗೆ ಧಾರವಾಡದ ಬೇಂದ್ರೆ ಟ್ರಸ್ಟ್ ಪ್ರಕಟಿಸಿದ ಇಂಥವೇ ನೆನಪುಗಳ ಸಂಗ್ರಹ ಸಂಪುಟ ‘ಬೇಂದ್ರೆ ಅಂದದ್ದು ಆಡಿದ್ದು’ದಲ್ಲಿ ‘ಕಸ್ತೂರಿ’ಯ ಆ ಲೇಖನಗಳಲ್ಲಿ ಕೆಲವನ್ನು ಪ್ರಕಟಿಸಿದ್ದಾರಂತೆ…” ಎಂದೂ ಉಲ್ಲೇಖಿಸಿದ್ದೆ.
ಅಚ್ಚರಿ ಎಂಬಂತೆ, ಇವತ್ತು ಬೆಳಿಗ್ಗೆ, ಧಾರವಾಡದ ಬೇಂದ್ರೆ ಟ್ರಸ್ಟ್ ಪ್ರಕಟಿಸಿದ ‘ಬೇಂದ್ರೆ ಅಂದದ್ದು ಆಡಿದ್ದು’ ನನ್ನ ಮನೆಗೆಗೆ ಬಂದು ತಲಪಿತು. ಹಿಡಿದ ಕೆಲಸ ಬಿಟ್ಟು ಅದರ ಪುಟಗಳನ್ನು ತಿರುವಿ ಹಾಕಿದೆ. ಒಟ್ಟು 112 ಪುಟಗಳ (xiv + 98) ಈ ಪುಸ್ತಕದಲ್ಲಿ ಹಿರಿಯರಾದ ಜಿ.ಬಿ. ಜೋಶಿ, ಕವಿ ಚನ್ನವೀರ ಕಣವಿ, ಕಾದಂಬರಿಕಾರ ಬಸವರಾಜ ಕಟ್ಟೀಮನಿ, ಎನ್ಕೆ, ಎಚ್. ಕೆ. ರಂಗನಾಥ್, ಪತ್ರಕರ್ತ ಗರುಡನಗಿರಿ ನಾಗರಾಜ್, ಬಿ.ಎಸ್. ಕೇಶವರಾವ್, ಸುಮತೀಂದ್ರ ನಾಡಿಗ, ರಂಜಾನ್ ದರ್ಗಾ ಮತ್ತು ಖ್ಯಾತ ಪತ್ರಕರ್ತ ಡಾಮ್ ಮೊರೇಸ್ ಮುಂತಾಗಿ ಹಿರಿಯ ಕಿರಿಯ ಲೇಖಕರು ಬರೆದ ಒಟ್ಟು 36 ಲೇಖನಗಳಿವೆ. ಒಂದೊಂದೂ ಒಂದೊಂದು ರೀತಿಯಲ್ಲಿ ಬೇಂದ್ರೆ ವ್ಯಕ್ತಿತ್ವವನ್ನು ಅನಾವರಣಗೊಳಿಸುವ ವಿಶಿಷ್ಟ ಬರಹಗಳು. ಈ ಎಲ್ಲ ಹಿರಿಯರ ಜೊತೆಗೆ ಕಿರಿಯನಾದ ನನ್ನದೂ ಒಂದು ಲೇಖನವನ್ನು ಈ ಸಂಪುಟದಲ್ಲಿ ಸಂಪಾದಕರು (ಡಾ. ಎಚ್. ಬಿ. ಪೂಜಾರ್) ಸೇರಿಸಿಕೊಂಡಿದ್ದಾರೆ.
ಇದು ನೀವೆಲ್ಲ ಖಂಡಿತವಾಗಿ ಓದಲೇಬೇಕಾದ ಪುಸ್ತಕ.
 
 
 

‍ಲೇಖಕರು avadhi

20 May, 2013

3 Comments

  1. Sudha ChidanandaGowda

    yes.heard of this book before too.
    have to read.

  2. Vithal Dalawai

    Odenri GoVa sir. Tumba sogasada pustaka.

  3. Gundentti Madhukar

    Naanu obba bendre abhimani. avar sahityavendare nanage tumba ista.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading