ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬೇಂದ್ರೆಯವರ ಮಗ ನಾನು ನಿರ್ದೇಶನ ಮಾಡಿದರೆ ಪರ್ಮಿಶನ್ ಕೊಡೋದಿಲ್ಲ ಎಂದರಂತೆ..

mahadeva hadapada

ಮಹಾದೇವ ಹಡಪದ 

two faces sculptureಒಂದು ತಿಂಗಳ ಕಾಲ ನಟರೊಂದಿಗೆ ಒಡನಾಡಿ, ಅವರ ಬದುಕಿನ ನನ್ನ ಬದುಕಿನ ಹಿನ್ನೆಲೆ ಇಟ್ಟುಕೊಂಡು ಬೇಂದ್ರೆಯವರ ಆಯ್ದ ಕವಿತೆಗಳ ಮೇಲಿನ ವಿಮರ್ಶೆ ಇಟ್ಟುಕೊಂಡು ಧಾರವಾಡ ರಂಗಾಯಣ ರೆಪರ್ಟರಿಯ ನಟರಿಗೆ ಅಭ್ಯಾಸ ಮಾಲಿಕೆಗಾಗಿ ನಾಟವೊಂದನ್ನು ಮಾಡಿಸಿದ್ದೆ. ಕಟ್ಟಕಡೆಯ ಗಳಿಗೆಯಲ್ಲಿ ಬ್ರೋಶರ್ ನೋಡಿದಾಗ ತಿಳಿಯಿತು ನಾನು ಆ ನಾಟಕಕ್ಕೆ ಬರೀ ಕೋಚ್ ಆಗಿದ್ದೇನಷ್ಟೆ

ಸರಳವಾಗಿ ಹೇಳುವುದಾದರೆ ಬಹುಶಃ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದವರಿಗೆ ತಿಳಿಯುತ್ತದೆ ಪರಿಕಲ್ಪನೆಯೆಂದರೆ ನಿರ್ದೇಶನಕ್ಕೆ ನಿರ್ದೇಶನ ಎಂಬರ್ಥ. ಇಂಥವರ ನಾಟಕ ಮಾಡಿಸಿ ಎಂದು ಹೇಳುವುದು ಪರಿಕಲ್ಪನೆಯಾಗಲಾರದು ಎಂದುಕೊಳ್ಳುತ್ತೇನೆ…

ಈ ನಾಟಕ ಸ್ವತಃ ನನ್ನ ಪರಿಕಲ್ಪನೆಯಲ್ಲಿಯೇ ಮಾಡಿದ್ದರೂ ಬೇಂದ್ರೆಯವರ ಮಗ ನಾನು ನಿರ್ದೇಶನ ಮಾಡಿದರೆ ಪರ್ಮಿಶನ್ ಕೊಡೋದಿಲ್ಲ ಎಂದರಂತೆ ಆಗಲೇ ನಾನು ನಾಟಕ ಮಾಡಿಸುವುದನ್ನು ಬಿಟ್ಟುಬಿಡಬೇಕೆಂದುಕೊಂಡಿದ್ದೆ. ಆದರೆ ಪರಿಕಲ್ಪನೆ ಇನ್ನೊಬ್ಬರ ಹೆಸರಿಗೆ ಹಾಕಿದರೆ ನಡೆಯುತ್ತದೆಂಬ ಕಾರಣ ಹೇಳಿದಾಗ ಅವರ ಹೆಸರಿನಲ್ಲಿ ಪರಿಕಲ್ಪನೆಯೆಂದು ಹಾಕಿಕೊಳ್ಳಲು ಒಪ್ಪಿಗೆ ಕೊಟ್ಟೆ.

ಮಜವೆಂದರೆ ಇಂದು ನಾಟಕದ ಬ್ರೋಶರ್ ನಲ್ಲಿ ನಾಟಕದ ಕುರಿತು ನಾನು ಬರೆದುಕೊಟ್ಟದ್ದು ಬದಲಾಗಿದೆ… ನಾನು ಇನ್ನೊಬ್ಬರ ಸಹಾಯಕನಾಗಿ ಅವರು ಹೇಳಿದಂತೆ ನಾಟಕ ಮಾಡಿಸಿದ್ದೇನೆಂಬ ಅರ್ಥದಲ್ಲಿ ಕೋಚ್ ಎಂದು ತಮ್ಮ ಟಿಪ್ಪಣಿಯಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೆ ನನ್ನ ಟಿಪ್ಪಣಿಯನ್ನು ತಮಗೆ ಸರಿಕಂಡಂತೆ ತಿದ್ದಿಕೊಂಡಿದ್ದಾರೆ.

ಯಾರದೋ ಪ್ರತಿಭೆಯೊಂದಿಗೆ ಗುರುತಿಸಿಕೊಳ್ಳಲು ಬಯಸುವ ಇಂಥವರೂ ರಂಗಭೂಮಿಯಲ್ಲಿ ಇದ್ದಾರೆಂಬುದು ನೋವಿನ ಸಂಗತಿ. ಯಾಕೋ ಮನಸಿಗೆ ಘಾಸಿಯಾಯ್ತು ಬರೆದುಕೊಂಡೆ… ಇನ್ನುಮುಂದೆ ಅಂಥವರೊಂದಿಗೆ ಕೆಲಸ ಮಾಡುವುದು ಬೇಡವೆಂದು ನಿರ್ಧರಿಸಿದ್ದೇನೆ.

‍ಲೇಖಕರು admin

27 November, 2015

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading