ಪ್ರತಿಷ್ಠಿತ ಬೆಸಗರಹಳ್ಳಿ ರಾಮಣ್ಣ ಕಥಾ ಸಂಕಲನ ಪ್ರಶಸ್ತಿಗೆ ಕೃತಿಗಳನ್ನು ಆಹ್ವಾನಿಸಲಾಗಿದೆ.
ಡಾ ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನ ನೀಡುವ ವಾರ್ಷಿಕ ಕಥಾಸಂಕಲನ ಪ್ರಶಸ್ತಿಗೆ 2015ನೇ ಸಾಲಿನಲ್ಲಿ ಪ್ರಕಟವಾದ ಕಥಾ ಸಂಕಲನಗಳನ್ನು ಕಳಿಸಬಹುದು.
ಪ್ರಶಸ್ತಿಯು ಇಪ್ಪತ್ತೈದು ಸಾವಿರ ರೂಪಾಯಿ ನಗದು ಬಹುಮಾನ, ಪ್ರಶಸ್ತಿ ಫಲಕ, ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ. ಪ್ರಶಸ್ತಿಯನ್ನು 2016 ಜೂನ್ ತಿಂಗಳ ಮೊದಲ ವಾರದಲ್ಲಿ ಮಂಡ್ಯದಲ್ಲಿ ಪ್ರದಾನ ಮಾಡಲಾಗುವುದು.
2015ನೇ ಸಾಲಿನಲ್ಲಿ ಪ್ರಕಟವಾದ ಮೊದಲ ಮುದ್ರಣದ ಕಥಾಸಂಕಲನಗಳ ಪ್ರಕಾಶಕರು ಅಥವಾ ಲೇಖಕರು ಕೃತಿಯ ಮೂರು ಪ್ರತಿಗಳನ್ನು
ಅಧ್ಯಕ್ಷರು
ಡಾ ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನ
1182/ಎ, ರಮ್ಯಲೋಕ, 2ನೇ ಅಡ್ಡರಸ್ತೆ, ಅಶೋಕನಗರ,
ಮಂಡ್ಯ- 571401,
ದೂ. 9980305837, 9449987678 ಇವರಿಗೆ ಕಳುಹಿಸಿಕೊಡುವಂತೆ ಪ್ರತಿಷ್ಠಾನದ ಡಾ ಕೆ ಪುಟ್ಟಸ್ವಾಮಿ ಅವರು ತಿಳಿಸಿದ್ದಾರೆ
ಕೃತಿಗಳನ್ನು ಕಳುಹಿಸಿಕೊಡಲು ಕೊನೆಯ ದಿನ 2016ರ ಮಾರ್ಚ್ 31





0 Comments