ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬೆಸಗರಹಳ್ಳಿ ರಾಮಣ್ಣ ಕಥಾ ಪ್ರಶಸ್ತಿ- ಪೋಟೋ ಆಲ್ಬಂ

ಜಯಶಂಕರ ಹಲಗೂರು

ನೆನ್ನೆ ಮಂಡ್ಯದ ಕಲಾ ಮಂದಿರದಲ್ಲಿ ಬೆಸಗರಹಳ್ಳಿ ರಾಮಣ್ಣ ಕಥಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು. ಈ ಬಾರಿ ಕಾಸರಗೋಡಿನಲ್ಲಿರುವ ಅನುಪಮ ಪ್ರಸಾದ್ ಅವರ ದೂರ ತೀರ ಸಂಕಲನಕ್ಕೆ ಪ್ರಶಸ್ತಿ ಕೊಡಲಾಯಿತು. ಮಂಡ್ಯದಂಥ ಜಿಲ್ಲಾ ಕೇಂದ್ರವೊಂದರಲ್ಲಿ ಸಾಹಿತ್ಯ ಕಾರ್ಯಕ್ರಮಕ್ಕೆ ನೆರೆದಿದ್ದ ಸಾಹಿತ್ಯಾಸಕ್ತರನ್ನು ಕಂಡು ಬೆರಗಾದೆ. ಕಲಾಮಂದಿರದ ಒಳಗೆ ಕಿಕ್ಕಿರಿದು ಸೇರಿದ್ದ ಜನರಷ್ಟೇ ಹೊರಗೂ ಸೇರಿದ್ದ ಕಂಡು ಬೆಂಗಳೂರಿನಂಥ ಬೆಂಗಳೂರಿನಲ್ಲೂ ಇಷ್ಟು ಜನ ಬರಲಾರರು ಮಾರಾಯ ಅನ್ಕೊಂಡೆ. ವೇದಿಕೆಯ ಮೇಲೆ ರಾಜಮ್ಮ ರಾಮಣ್ಣ, ಕೃಷ್ಣಮೂರ್ತಿ ಹನೂರು, ಕುಂ.ವಿ., ರಾಮಲಿಂಗಪ್ಪ ಟಿ. ಬೇಗೂರು, ಕೆ. ಪುಟ್ಟಸ್ವಾಮಿ, ಅನುಪಮ ಪ್ರಸಾದ್ ಇದ್ದರು. ವೇದಿಕೆ ಸಿದ್ದತೆ ವಿಶೇಷವಾಗಿತ್ತು.

ವೇದಿಕೆ ಮತ್ತು ಹೊರ ಆವರಣವನ್ನು ಹೆಣ್ಣು -ಕೃಷಿ ಎಂಬ ಥೀಮಿನಿಂದ ನಿರ್ಮಿಸಿದ್ದ ಪರಿ ಹೊಸತನದಿಂದ ಕೂಡಿತ್ತು. ಇಂಥ ಜನಸಾಗರ, ಅದ್ಭುತ ವೇದಿಕೆ, ಹಿರಿಯ ಬರಹಗಾರರು ಬೇರೆ ಬೇರೆ ವಲಯಗಳಲ್ಲಿ ಹೆಸರು ಮಾಡಿರುವ ಸೃಜನಶೀಲರು, ಹಿರಿಯರು ಗೆಳೆಯರು- ಒಂಥರಾ ಆಪ್ತವೆನಿಸುವ, ವಾತಾವರಣವನ್ನು ಕಂಡು ಸರ್ಕಾರದ ಅಕಾಡೆಮಿಗಳ ಬಹುಮಾನ ಕಾರ್ಯಕ್ರಮಗಳಿಗಿಂತ ಇದು ತನ್ನದು ಮಾತ್ರವಾದ ವಿಶೇಷ ಭಿನ್ನ ಅನುಕರಣೀಯ ಅನ್ನಿಸಿತು. ಕರ್ನಾಟಕದಲ್ಲಿ ಕಥೆಗಾರರು ಪಡೆದರೆ ಬೆಸಗರಹಳ್ಳಿ ರಾಮಣ್ಣ ಪ್ರಶಸ್ತಿಯನ್ನು ಪಡೆಯಬೇಕು, ಉಳಿದ ಯಾವ ಬಹುಮಾನಗಳೂ ಸಾಟಿಯಾಗಲಾರದು ಅಂದುಕೊಂಡರೆ ಅದು ಸುಳ್ಳಲ್ಲ ಎಂಬಂತೆ ಅನ್ನಿಸಿತು. ಈ ಸನ್ನಿವೇಶ ಅನುಪಮಾ ಅವರಿಗೆ ಇನ್ನೆಷ್ಟು ಸಂತಸವನ್ನು ಉಂಟು ಮಾಡಿರಬಹುದು ಅಲ್ಲವೆ? ಈ ಕಾರ್ಯಕ್ರಮದ ಕೆಲವು ಸ್ಮರಣೀಯ ಕ್ಷಣಗಳು ನಿಮಗಾಗಿ…

ಪೋಟೋಗಳು :ಜಯಶಂಕರ ಹಲಗೂರು

ಪೋಟೋಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :

 

‍ಲೇಖಕರು avadhi

11 June, 2013

1 Comment

  1. gururaj katriguppe

    year by year ‘Ramanna’ award getting prestigious status . Ramanna live forever in the ‘pen’ of new story writers.Thanks to Jayashankar for nice photos.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading