ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬೆಳಿಗ್ಗೆ ಏನು ಉಪ್ಪಿಟ್ಟಿನ ತಿಂಡಿ ಆಯ್ತಾ?

ಟಿವಿ ಚಾನಲ್ ವರದಿಗಾರರ ಶೈಲಿ (ತಮಾಷೆಗೆ)

ಸಿದ್ಧರಾಮ ಕೂಡ್ಲಿಗಿ

ಸುಭಾಶ್ ಪ್ರಶ್ನೆ : ಬೆಳಿಗ್ಗೆ ಏನು ಉಪ್ಪಿಟ್ಟಿನ ತಿಂಡಿ ಆಯ್ತಾ?

ವರದಿಗಾರರು : ಹೌದು ಸುಭಾಷ್. ಈಗ ನಾನೇನು ನಿಂತಿದೀನಿ ಈ ಜಾಗ ಅಡುಗೆ ಮನೆ. ಇಲ್ಲಿ ಎಲ್ಲ ವಿವಿಧ ಸಾಮಗ್ರಿಗಳನ್ನು ನೋಡಬಹುದು. ಅಲ್ಲದೆ ಅಡುಗೆ ಮನೆಯಲ್ಲಿರುವ ಗ್ಯಾಸ್ ಒಲೆಯನ್ನೂ ಸಹ ಗಮನಿಸಬಹುದಾಗಿದೆ. ಇಲ್ಲಿ ಕಾಣ್ತಾ ಇರೋ ಒಲೆಯ ಮೇಲೆಯೇ ಉಪ್ಪಿಟ್ಟನ್ನು ಮಾಡಿಕೊಳ್ಳೋದು.

ಮೊದಲಿಗೆ ಅಂಗಡಿಗೆ ಹೋಗಿ ರವೆಯನ್ನು ತರಬೇಕಾಗುತ್ತೆ. ಈ ರವೆಯನ್ನು ತರುವಾಗ ಅಂಗಡಿಯವನು ಎಷ್ಟು ಕೆ.ಜಿ ರವೆ ಬೇಕು ಅಂತ ಕೇಳ್ತಾನೆ. ಮತ್ತೆ ಅದರಲ್ಲೂ ಕೇಸರಿಬಾತ್ ಮಾಡೋಕಾ ಇಲ್ಲ ಉಪ್ಪಿಟ್ಟು ಮಾಡೋಕಾ ಅಂತಾ ಕೇಳ್ತಾನೆ. ನಾವಿಲ್ಲಿ ಇನ್ನೊಂದನ್ನು ಗಮನಿಸಬಹುದು ಸುಭಾಷ್, ಈ ರವೆ ತರೋ ಅಂಗಡಿಯ ಮಾಲಿಕ ಏನಿದಾನೆ ಪ್ರತಿ ಸಾರೀನೂ ಈ ಪ್ರಶ್ನೇನ ಕೇಳ್ತಿರ್ತಾನೆ. ಉಪ್ಪಿಟ್ಟು ಮಾಡೋ ರವೇ ಅಂತಾನೇ ಕೇಳ್ತೀವಿ. ಅಲ್ಲಿಂದ ನಮಗೆಷ್ಟು ಬೇಕೋ ಅಷ್ಟು ರವೆಯನ್ನು ತಂದು ಇಲ್ಲಿ ಕಾಣ್ತಾ ಇರೋ ಒಲೆಯ ಮೇಲೆ ಒಂದು ಕಡಾಯಿ ಅಂದ್ರೆ ಕಪ್ಪಗಿರುವ ದುಂಡಾದ ಪಾತ್ರೆ ಏನಿದೆ ಅದರಲ್ಲಿ ರವೆಯನ್ನು ಹುರಿದಿಟ್ಟುಕೊಳ್ಳಲಾಗುತ್ತೆ. ಅಲ್ಲದೆ ರವೆಯನ್ನು ಹುರಿಯಬೇಕಾದಾಗ ಇಲ್ಲಿ ಕಾಣ್ತಾ ಇರೋ ಒಲೆಯನ್ನು ಹಚ್ಚಬೇಕಾಗುತ್ತೆ.

ಹೀಗೆ ಒಲೆಯನು ಹಚ್ಚಿದ ನಂತರವೇ ಕಡಾಯಿಯನ್ನು ಇಟ್ಟು ರವೆಯನ್ನು ಹುರಿಯಬೇಕಾಗುತ್ತೆ. ಹೀಗೆ ಹುರಿಯುವಾಗ ರವೆ ಸೀದು ಹೋಗದಂತೆ ಎಚ್ಚರಿಕೆಯಿಂದ ಹುರಿಯಬೇಕಾಗುತ್ತೆ ಅಲ್ಲದೆ ಒಲೆ ಉರೀತಾ ಇದೆಯೋ ಇಲ್ಲವೋ ಅನ್ನೋದನ್ನೂ ನೋಡ್ಕೊಳ್ತಿರಬೇಕಾಗುತ್ತೆ. ಮತ್ತೆ ಸುಭಾಷ್ ಇಲ್ಲಿ ಏನು ನಾನು ನಿಂತ್ಕೊಂಡಿದೀನಿ ಈ ಅಡುಗೆ ಮನೆಯ ವಿಶೇಷ ಏನಂದರೆ, ಇದಕ್ಕೆ ನಾಲ್ಕು ಗೋಡೆಗಳಿದ್ದು, ಒಂದು ಕಿಟಕಿ ಇದೆ. ಅಲ್ಲದೆ ಬಂದು ಹೋಗೋದಕ್ಕೆ ಒಂದು ಬಾಗಿಲಿದೆ…

ಸುಭಾಶ್ : ಓಕೆ ಓಕೆ ನಾನು ಮತ್ತೊಮ್ಮೆ ನಿಮ್ಮನ್ನು ಸಂಪರ್ಕಿಸ್ತೀನಿ.

‍ಲೇಖಕರು Avadhi

6 May, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading