ಸುಧಾ ಚಿದಾನಂದಗೌಡ
ಎಲಿನಾರ್ ಕ್ಯಾಟನ್ ಮತ್ತು ದಿ ಲ್ಯೂಮಿನರೀಸ್_
ಹಲವು ದಾಖಲೆಗಳ ಮೊತ್ತ.
ಎಂಟುನೂರಕ್ಕಿಂತ ಹೆಚ್ಚು ಪುಟಗಳ ಕಾದಂಬರಿ….
ಇಪ್ಪತ್ತೆಂಟೇ ವರ್ಷಗಳ ಕಾದಂಬರಿಕಾತರ್ಿ…
ಜಾಗತಿಕ ಸಾಹಿತ್ಯಾಸಕ್ತ ಮಹಿಳಾ ಲೋಕಕ್ಕೆ ರೋಮಾಂಚನದ ಸುದ್ದಿ…
ನಿರೀಕ್ಷೆಯಿದ್ದರೂ ನಿಜದ ಸಂಗತಿ ಹೊರಬೀಳುವವರೆಗೂ ಕಾತರವೇ…

ಪತ್ತೇದಾರಿ, ಐತಿಹಾಸಿಕ, ರೋಮಾಂಚಕ ಎಂದೆಲ್ಲ ಹೇಳಬಹುದಾದ ಕಾದಂಬರಿ ಲ್ಯೂಮಿನರೀಸ್ ಈ ವರ್ಷದ ಬೂಕರ್ ಪಡೆದುಕೊಳ್ಳುವ ಮೂಲಕ ಬಹುಪ್ರತಿಷ್ಟಿತ ಬುಕರ್ ಪ್ರಶಸ್ತಿ ಮತ್ತೊಮ್ಮೆ ಬರಹಗಾರ್ತಿಯ ಪಾಲಾಗಿದೆ. ನ್ಯೂಜಿಲೆಂಡಿನ 28 ವರ್ಷ ಹರೆಯದ, ಸೃಜನಶೀಲ ಸಾಹಿತ್ಯದ ಅಧ್ಯಾಪಕಿಯಾಗಿರುವ ಎಲಿನಾರ್ ಕ್ಯಾಟನ್ 50,000 ಪೌಂಡುಗಳ ಈ ಪ್ರಶಸ್ತಿ ಪಡೆದಿದ್ದಾರೆ. ಎಲಿಯನಾರ್ ಮಾತುಗಳಲ್ಲೇ ಹೇಳುವುದಾದರೆ ಈ ಪುಸ್ತಕ ಪ್ರಕಾಶಕರ ದು:ಸ್ವಪ್ನ ಆಗಿತ್ತು. ಅಷ್ಟು ಗಾತ್ರದ ಕಾದಂಬರಿಗೆ ಅಗತ್ಯವಿದ್ದ ವಸ್ತು, ವಿನ್ಯಾಸ, ಪಾತ್ರಗಳ ಲಯವಂತಿಕೆ, ಕಲಾತ್ಮಕತೆ, ಓದಿಸಿಕೊಂಡು ಹೋಗುವ ಗುಣ.. ಹೀಗೆ ಎಲ್ಲಾ ದಿಕ್ಕಿನಿಂದ ಅಳೆದೂ ಸುರಿದೂ ನೋಡಿ, ಚಚರ್ೆಗೊಳಪಟ್ಟು, ಕೆಲಸಲ ವಾದವಿವಾದಗಳೂ ನಡೆದ ಬಳಿಕವೆ ಆಯ್ಕೆಯಾಗುವ ಬುಕರ್ ಎಲ್ಲ ಇಂಗ್ಲಿಷ್ ಲೇಖಕರ ಜೀವಮಾನದ ಕನಸು. ಹಣ, ಹೆಸರು ಒಟ್ಟಿಗೆ ಮಡಿಲಿಗೆ ಬಂದುಬೀಳುವ ಈ ಪ್ರಶಸ್ತಿಗೂ ಮುಂಚೆಯೇ ಎಲಿನಾರ್ ಭರವಸೆಯ ಲೇಖಕಿ ಎನಿಸಿದ್ದು ತಮ್ಮ ಮೊದಲ ಕಾದಂಬರಿ ದಿ ರಿಹರ್ಸಲ್ ಮೂಲಕ. ಹಾಗಾಗಿ ಯಶಸ್ಸು ಹೊಸದಲ್ಲವಾದರೂ ಬುಕರ್ ನ ತೂಕವೇ ಬೇರೆ ಎಂಬುದೂ ಒಪ್ಪತಕ್ಕದ್ದೇ.
ಎಲಿನಾರ್ ಸೃಜನಶೀಲ ಸಾಹಿತ್ಯದ ವಿದ್ಯಾಥರ್ಿನಿಯೂ ಹೌದು, ಅಧ್ಯಾಪಕಿಯೂ ಹೌದು.

ಎಲಿಯನಾರ್ ಜನನ ಸಂದರ್ಭದಲ್ಲಿ ಆಕೆಯ ಕುಟುಂಬಸ್ತರು ಕೆನಡಾದಲ್ಲಿದ್ದರು. ನ್ಯೂಜಿಲೆಂಡ್ ಮೂಲದ ಲೈಬ್ರೆರಿಯನ್ ತಂದೆ ಸಾಹಿತ್ಯದ ಸಂಶೋಧಕರೂ ಹೌದು. ಎಲಿನಾರ್ ಎಂಟು ವರ್ಷಗಳ ಬಾಲೆಯಾಗಿದ್ದಾಗ್ತಂದೆಯೊಂದಿಗೆ ನ್ಯೂಜಿಲೆಂಡ್ ಗೆ ಮರಳಿದರು. ಓದಿದ್ದು ಇಂಗ್ಲಿಷ್ ಸಾಹಿತ್ಯವನ್ನು- ಕ್ಯಾಂಟರ್ಬರಿ ಯೂನಿವಸರ್ಿಟಿ ಕಾಲೇಜ್ ಮತ್ತು ವೆಲ್ಲಿಂಗ್ಟನ್ ನ ವಿಕ್ಟೋರಿಯಾ ಯೂನಿವಸರ್ಿಟಿಗಳಲ್ಲಿ. ಪ್ರಸ್ತುತ ಆಕ್ಲೆಂಡ್ ನ ವಿದ್ಯಾಲಯವೊಂದರಲ್ಲಿ ಸಾಹಿತ್ಯದ ಶಿಕ್ಷಕಿ.
ಲೋವಾ ಬರಹಗಾರರ ಕಮ್ಮಟದಲ್ಲಿ ಫೆಲೋಷಿಪ್ ಪಡೆಯುವ ಮೂಲಕ ಬರಹಗಾತರ್ಿಯಾಗಿ ಎಲಿನಾರ್ ಉಜ್ವಲ ಭವಿಷ್ಯ ತೆರೆದುಕೊಂಡಿತ್ತು. ಅಲ್ಲಿಯೇ ಭೇಟಿಯಾಗಿದ್ದ, ಇದೀಗ ಕಾವ್ಯದಲ್ಲಿ ಸಂಶೋಧನೆ ನಡೆಸುತ್ತಿರುವ ಸ್ನೇಹಿತ ಅಮೆರಿಕಾದ ಕವಿ ಸ್ಟೀವನ್ ಟಾಸ್ಸೇಂಟ್ ನೊಂದಿಗೆ ಆಕ್ಲೆಂಡ್ ನಲ್ಲಿರುವುದು ಎಲಿನಾರ್ ಳ ನಾಳೆಯ ಕನಸು.
ದಿ ರಿಹರ್ಸಲ್ 2008 ರಲ್ಲಿ ಪ್ರಕಟವಾದಾಗ ತುಂಬ ಒಳ್ಳೆಯ ಪ್ರತಿಕ್ರಿಯೆಗಳು ಬಂದಿದ್ದವು. ಅದು ವಯಸ್ಕ ಶಿಕ್ಷಕ ಮತ್ತು ವಿದ್ಯಾಥರ್ಿನಿಯ ಸುತ್ತ ನಡೆಯುವ ನೆಲೆಯಿಲ್ಲದ ಪ್ರೇಮದ ಚಿತ್ರಣ. ಶಾಲೆಯೊಂದರಲ್ಲಿ ನಡೆಯುವ ಲೈಂಗಿಕ ಹಗರಣದ ಸುತ್ತ ಹೆಣೆಯಲಾದ ಸೂಕ್ಷ್ಮ ಕಥಾನಕ. ಈ ಕಾದಂಬರಿಯೂ ಗಾಡರ್ಿಯನ್ ಫಸ್ಟ್ ಬುಕ್ ಅವಾಡರ್್ ಮತ್ತು ಆರೇಂಜ್ ಅವಾರ್ಡಗಳಿಗೆ ನಾಮಾಂಕಿತಗೊಂಡಿತ್ತು.

ದಿ ಲ್ಯೂಮಿನರೀಸ್ 2013ರಲ್ಲಿ ಗ್ರಾಂಟಾ ಪ್ರಕಾಶನ ಸಂಸ್ಥೆಯ ಮೂಲಕ ಪ್ರಕಟಗೊಂಡ ಕಾದಂಬರಿ. ಈ ಕಾದಂಬರಿಯನ್ನು ತಾನು 25 ವರ್ಷದವಳಾಗಿದ್ದಾಗಲೇ ಬರೆಯಲು ಶುರುಮಾಡಿದ್ದಳಂತೆ. ಅದರ ಮಧ್ಯೆಯೇ ದಿ ರಿಹರ್ಸಲ್ ಬರೆಯಲ್ಪಟ್ಟಿತ್ತು. ನಂತರವೂ ಮುಂದುವರಿದ ಬರವಣಿಗೆ 1860-66 ರ ಸಮಯದಲ್ಲಿ ನ್ಯೂಜಿಲೆಂಡಿನ ಸುವರ್ಣನಿಧಿಯಿರುವುದೆಂದು ಹೇಳಲಾದ ಸ್ಥಳದಲ್ಲಿ ಗಿರಕಿ ಹೊಡೆಯುವ ಕಥೆಯಲ್ಲಿ ಹನ್ನೆರಡು ಜನರ ಗುಂಪಿನೊಳಗೆ ಹದಿಮೂರನೆಯವನಾಗಿ ಸೇರಿಕೊಳ್ಳುವ ಮೂಡೀ ಹೆಸರಿನ ಕಥಾನಾಯಕನೊಂದಿಗೆ ಶುರುವಾಗಿ ಹನ್ನೆರಡೂ ಮಂದಿ ತಮ್ಮತಮ್ಮ ಭೂತಕಾಲವನ್ನು ಅಗೆಯುತ್ತಾ ಹೋಗುವುದರ ಮೂಲಕ ಮುಂದುವರಿಯುತ್ತದೆ. ಆ ಹನ್ನೆರಡು ವ್ಯಕ್ತಿಗಳು ಹನ್ನೆರಡು ರಾಶಿಗಳ ಸಂಕೇತವೆಂದು ಎಲಿನಾರ್ ಪ್ರತಿಪಾದಿಸುತ್ತಾಳೆ. ಮತ್ತೆ ಏಳು ಜನ ಸಂದಭರ್ಾನುಸಾರ ಕಥಾಹಂದರದ ಒಳಬರುತ್ತಾ, ಹೊರಹೋಗುತ್ತಾ ಇರುತ್ತಾರೆ. 19ನೆ ಶತಮಾನದ ಸಂದರ್ಭದ ಕೊಲೆರಹಸ್ಯ ನಿಧಾನವಾಗಿ, ಜ್ಯೋತಿಷ್ಯಶಾಸ್ತ್ರದ ಸಂಕೇತಗಳ ಮರೆಯಲ್ಲಿ ಅನಾವರಣಗೊಳ್ಳುತ್ತಾ ಹೋಗುತ್ತದೆ. ವಾಲ್ಟರ್ ಮೂಡಿ ಅವರೆಲ್ಲರ ಮಾತುಗಳನ್ನು ಆಲಿಸುತ್ತಾ, ಒಂದಕ್ಕೊಂದು ಸಂಬಂಧ ಸರಿಹೊಂದಿಸಲು ಆಸಕ್ತಿಯಿಂದ ಹೆಣಗುತ್ತಾನೆ.
ಖಗೋಳಶಾಸ್ತ್ರದ ಪ್ರಕಾರ ಲ್ಯೂಮಿನರೀಸ್ ಎಂದರೆ ಸ್ವಪ್ರಕಾಶವುಳ್ಳ ಕಾಯ ಎಂದರ್ಥ. ಜ್ಯೋತಿಷ್ಯದಲ್ಲಿ ಸೂರ್ಯ ಮತ್ತು ಚಂದ್ರ. ಮುಖಪುಟದಲ್ಲೂ ಕೂಡಾ ಬಿದಿಗೆ ಚಂದ್ರನಿಂದ ತಳಭಾಗದಿಂದ ಆರಂಭವಾಗುವ ಆಕಾರಗಳು ಮುಖಪುಟದ ಮೇಲ್ಭಾಗಕ್ಕೆ ಬರುವಷ್ಟರಲ್ಲಿ ಪೂರ್ಣಚಂದ್ರನ ಆಕಾರ ಪಡೆದುಕೊಂಡಿದೆ. ಇದನ್ನು ತಮಸೋಮ ಜ್ಯೋತಿರ್ಗಮಯ ವೆಂದೂ ಬಣ್ಣಿಸಬಹುದೆಂದೂ ತೋರುತ್ತದೆ. ಒಟ್ಟಾರೆ ಅರ್ಥದಲ್ಲಿ ಬೆಳಕಿನ ಮೂಲವೇ ಲ್ಯೂಮಿನರೀಸ್.
ಕಾದಂಬರಿ ಶುರುವಾಗುವುದು ನ್ಯೂಜಿಲೆಂಡಿನ ಹೊಕಿಟಿಕ ಪಟ್ಟಣದಲ್ಲಿ. ಈ ನಗರದ ತುಂಬಾ ಬಂಗಾರದ ನಿಧಿಯದೇ ಸುದ್ದಿ. ಈ ನಡುವೆ ಪಟ್ಟಣದ ನಿಧಿ ಹುಡುಕುತ್ತಿದ್ದ ಅಲೆಮಾರಿ ವ್ಯಕ್ತಿ ಮೃತಪಟ್ಟಿದ್ದಾನೆ. ಕೊಲೆಯಾಗಿರುವ ಊಹಾಪೋಹಗಳಿವೆ. ಮತ್ತೊಬ್ಬ ಎಲ್ಲಾ ರೀತಿಯಲ್ಲೂ ಬೆಳೆಯಬಲ್ಲವನಾಗಿದ್ದ ತರುಣ ಕಾಣೆಯಾಗಿದ್ದಾನೆ. ವೇಶ್ಯೆಯೊಬ್ಬಳ ಹೆಸರೂ ತಳುಕುಹಾಕಿಕೊಂಡಿದೆ. ಆಕೆ ಅಫೀಮು ವ್ಯಸನಿ. ಆತ್ಮಹತ್ಯೆಗೆ ಪ್ರಯತ್ನಿಸಿದ್ದಾಳೆ. ಇಂಥಾ ಸಂದರ್ಭದಲ್ಲಿ ಸ್ಕಾಟ್ಲೆಂಡ್ ನ ವ್ಯಕ್ತಿ ವಾಲ್ಟರ್ ಮೂಡಿ ಮೋಟೆಲ್ ಒಂದಕ್ಕೆ ಕಾಲಿಡುತ್ತಾನೆ. ನಿಗೂಢ ರಹಸ್ಯ ಬಿಚ್ಚಿಕೊಳ್ಳುತ್ತಾಹೋಗುವುದು ಅಲ್ಲಲ್ಲಿ ವಿಕ್ಟೋರಿಯನ್ ಕಾಲಘಟ್ಟದ ಕಥನನಿರೂಪಣೆಯ ಶೈಲಿಯನ್ನು ಹೋಲುತ್ತದೆಂದೂ ಹೇಳಲಾಗುತ್ತಿದೆ.
ಕಾದಂಬರಿಯಲ್ಲಿ ಮಾನವ ಕಲ್ಪನೆಯೂ, ಮಾನವಾತೀತ ಘಟನೆಗಳೂ ವಿಸ್ಮಯಕಾರಿ ರೀತಿಯಲ್ಲಿ ಹೆಣೆದುಕೊಂಡಿವೆ
ಎಂದು ಬುಕರ್ ನ ತೀಪರ್ುಗಾರರಲ್ಲೊಬ್ಬರಾದ ರಾಬಟರ್್ ಮ್ಯಾಕ್ ಫಲರ್ೇನ್ ಹಾಡಿ ಹೊಗಳಿದ್ದಾರೆ.
ಪ್ರಶಸ್ತಿ ಸ್ವೀಕಾರದ ಬಳಿಕ ಎಲಿನಾರ್ ಪತ್ರಿಕೆಗಳಿಗೆ, ಮುಖ್ಯವಾಗಿ ಲಂಡನ್ನಿನ ದಿ ಟೆಲಿಗ್ರಾಫ್ ಪತ್ರಿಕೆಗೆ ಕೊಟ್ಟ ಸಂದರ್ಶನಗಳಲ್ಲಿ.
ಪುರುಷ ಬರಹಗಾರರನ್ನು ನೀವೇನು ಯೋಚಿಸ್ತೀರಿ? ನಿಮ್ಮ ವಿಚಾರಗಳೇನು? ಎಂದು ಕೇಳಲಾಗುತ್ತದೆ. ಆದರೆ ಮಹಿಳಾ ಲೇಖಕರನ್ನು ನಿಮ್ಮ ಭಾವನೆಯೇನು? ನಿಮ್ಮ ಅನುಭವಗಳೇನು? ಎಂದು ಕೇಳಲಾಗುತ್ತದೆ.
ಎಂದಿದ್ದಾಳೆ. ಮಹಿಳೆಯೂ ವಿಚಾರ ಮಾಡಬಲ್ಲಳು. ಕೇವಲ ಭಾವನಾಜೀವಿಯಾಗಷ್ಟೇ ಮಹಿಳೆಯನ್ನು ನೋಡುವುದರ ವಿರುದ್ಧ, ಲಿಂಗಾಧಾರಿತ ಅನುಭವಗಳ ದೃಷ್ಟಿಕೋನದ ವಿರುದ್ಧ ಸೂಕ್ಷ್ಮವಾಗಿ ವಿರೋಧ ವ್ಯಕ್ತಪಡಿಸಿದ್ದಾಳೆ. ಯಶಸ್ವೀ ಮಹಿಳೆಯನ್ನು ಅದೃಷ್ಟಶಾಲಿಯೆಂದೇ ಪರಿಗಣಿಸಲಾಗುತ್ತದೆಯೇ ಹೊರತು ಪರಿಶ್ರಮದಿಂದ ಆ ಯಶಸ್ಸು ಗಳಿಸಿಕೊಂಡಿದ್ದಾಳೆಂದು ಸಂದರ್ಶನಕಾರರು ಎಣಿಸುವುದು ತೀರ ಕಡಿಮೆ ಎಂದೂ ಹೇಳಿದ್ದಾಳೆ.
ಸೃಜನಶೀಲ ಸಾಹಿತ್ಯದಲ್ಲಿ ನನ್ನನ್ನು ಮೋಹಗೊಳಿಸುವುದೇನೆಂದರೆ ಅದು ಮುಕ್ತಾಯಗೊಳ್ಳುವುದರಿಂದಲೇ ಮುಕ್ತವಾಗಿದೆ ಮತ್ತು ಅಸ್ತಿತ್ವ ಉಳಿಸಿಕೊಳ್ಳುತ್ತದೆ. ಓದುಗನಲ್ಲೊಂದು ನಿಶ್ಚಿತತೆ ಇದ್ದರೆ, ಒಂದರ್ಥದಲ್ಲಿ ಎನ್ಕೌಂಟರ್ ನಂತೆ, ಮನುಷ್ಯನೊಂದಿಗಿನ ಮುಖಾಮುಖಿಯಂತೆ ಎಂದೂ ಹೇಳುತ್ತಾಳೆ ಎಲಿನಾರ್.
ಹಣ ನಿಮ್ಮಲ್ಲಿ ಯಾವ ಮಾಪರ್ಾಡನ್ನೂ ತರಲಾರದು. ಆದರೆ ಪ್ರೀತಿ ನಿಮ್ಮನ್ನು ಖಂಡಿತ ಮಾರ್ಪಡಿಸಬಲ್ಲದು. ಎಂಬುದು ಆಕೆಯ ಇನ್ನೊಂದು ಎದೆತಟ್ಟುವ ಮಾತು.
ಇದೆಲ್ಲದರ ಹೊರತಾಗಿಯೂ 2013ರ ಬುಕರ್ ಹಲವು ವಿಶಿಷ್ಟಗಳ ಮೊತ್ತವಾಗಿರುವುದನ್ನು ಗಮನಿಸಬಹುದು.
852 ಪುಟಗಳ ದಿ ಲ್ಯೂಮಿನರೀಸ್ ಬುಕರ್ ನ 45 ವರ್ಷಗಳ ಇತಿಹಾಸದಲ್ಲೆ ಅತಿ ದೀರ್ಘ ಕೃತಿ.
ಎಲಿನಾರ್ ಅತೀ ಚಿಕ್ಕ ವಯಸ್ಸಿನ ವಿಜೇತೆ.
ನ್ಯೂಜಿಲೆಂಡಿನ ಬುಕರ್ ವಿಜೇತ ಎರಡನೆಯ ಬರಹಗಾತರ್ಿ. 1985 ನಲ್ಲಿ ತಮ್ಮ ದ ಬೊನ್ ಪೀಪಲ್ ಕೃತಿಗೆ ಬುಕರ್ ಪಡೆದಿದ್ದ ಕೆರ್ರಿ ಹ್ಯೂಂ ನ್ಯೂಜಿಲೆಂಡಿನ ಬುಕರ್ ವಿಜೇತ ಮೊದಲ ಮಹಿಳೆ.
ಇದುವರೆಗೂ ಮ್ಯಾನ್ ಬುಕರ್ ಕಾಮನ್ವೆಲ್ತ್ ದೇಶಗಳಿಗಷ್ಟೇ ಸೀಮಿತವಾಗಿತ್ತು. 2014ರಿಂದ ಈ ಪ್ರಶಸ್ತಿ ಪ್ರಪಂಚದ ಎಲ್ಲ ಇಂಗ್ಲಿಷ್ ಲೇಖಕರನ್ನು ಒಳಗೊಳ್ಳಲಿದೆ. ಅಥರ್ಾತ್ ಪ್ರಸ್ತುತ ಸೀಮಿತ ವ್ಯವಸ್ಥೆಯ ಪ್ರಶಸ್ತಿ ಪಡೆದವರಲ್ಲಿ ಎಲಿನಾರ್ ಕೊನೆಯ ಲೇಖಕಿ. ಆಕೆಗೊಂದು ಅಭಿನಂದನೆ.
ಇಷ್ಟೆಲ್ಲಾ ವಿಶೇಷತೆಗಳಿರುವ ಲ್ಯೂಮಿನರೀಸ್ ಕನ್ನಡಕ್ಕೆ ಯಾವ ಅನುವಾದಕರಿಂದ, ಯಾವ ಪ್ರಕಾಶನ ಸಂಸ್ಥೆಯಿಂದ, ಯಾವಾಗ, ಯಾವ ಶೀಷರ್ಿಕೆ ಹೊತ್ತು ಬರುತ್ತದೋ ಅತ್ಯಂತ ಕುತೂಹಲದಿಂದ ಕಾಯುವಂತಾಗಿದೆ.






dhnyavaadagaLu parichayisiddakke.