ಇದು ‘ಜುಗಾರಿ ಕ್ರಾಸ್’ ಅಂಕಣ. ಚರ್ಚೆ, ವಿಚಾರ ಮಥನ ಇಲ್ಲಿನ ಮುಖ್ಯ ಉದ್ಧೇಶ. ನಾ ದಿವಾಕರ್ ಅವರು ಬರೆದ ‘ಮಡೆ ಸ್ನಾನ’ದ ಬಗೆಗಿನ ಲೇಖನ ಇಲ್ಲಿ ಪ್ರಕಟವಾಗಿತ್ತು. ಆ ಲೇಖನ ಇಲ್ಲಿದೆ. ಇದಕ್ಕೆ ಪುರುಷೋತ್ತಮ ಬಿಳಿಮಲೆ ಪ್ರತಿಕ್ರಿಯೆ ನೀಡಿದ್ದಾರೆ. ಅದು ಇಲ್ಲಿದೆ. ಜಿ ಎನ್ ಅಶೋಕ ವರ್ಧನ ಅವರು ನೀಡಿದ ಪ್ರತಿಕ್ರಿಯೆ ಇಲ್ಲಿದೆ.
ಈ ಚರ್ಚೆಯನ್ನು ಇನ್ನಷ್ಟು ವಿಚಿತ್ರ ಮಡೆ ಸ್ನಾನಗಳ ಮೂಲಕ ಉಷಾ ಕಟ್ಟೇಮನೆ ಇಲ್ಲಿ ಚರ್ಚಿಸಿದ್ದಾರೆ. ಬನ್ನಿ ಚರ್ಚೆಯಲ್ಲಿ ನೀವೂ ಭಾಗವಹಿಸಿ
**
–ಉಷಾ ಕಟ್ಟೇಮನೆ
ದೇವಸ್ಥಾನದ ಒಳಗೆ ಬ್ರಾಹ್ಮಣರು ಉಂಡೆದ್ದ ಎಲೆಗಳ ಮೇಲೆ ಹರಕೆ ಹೊತ್ತ ಭಕ್ತರು ಉರುಳು ಸೇವೆ ನಡೆಸುವುದರ ಬಗ್ಗೆ ಮಾತ್ರ ಚರ್ಚೆ ನಡೆಯುತ್ತಿದೆ.
ಅಲ್ಲಿ ’ಬೀದಿ ಮಡೆ ಸ್ನಾನ’ವೆಂಬ ಇನ್ನೊಂದು ಪದ್ದತಿ ಇದೆ.ಬ್ರಾಹ್ಮಿ ಮುಹೂರ್ತದಲ್ಲಿ ಕುಮಾರಧಾರ ನದಿಯಲ್ಲಿ ಸ್ನಾನ ಮಾಡಿ ಅಲ್ಲಿಂದಲೇ ಬೀದಿಯಲ್ಲಿ ಉರುಳುತ್ತಾ ಎರಡು ಮೈಲ್ ದೂರದ ದೇವಸ್ಥಾನವನ್ನು ತಲುಪಬೇಕು. ಒರಟು ಬೀದಿಯಿಂದ ದೇಹಕ್ಕೆ ತರಚು ಗಾಯಗಳಾಗಿ, ತೊಟ್ಟ ಬಟ್ಟೆ ಅಸ್ತವ್ಯಸ್ತವಾದರೂ ಅವರ ಭಕ್ತಿಪರವಶತೆಯನ್ನು ನಾವು ಪ್ರಶ್ನಿಸುವಂತಿಲ್ಲ.
ತುಳು ಭಾಷೆಯಲ್ಲಿ ’ಮಡೆ’ ಅಂದರೆ ಎಂಜಲು. ಅಲ್ಲಿ ದೇವಸ್ಥಾನದ ಒಳಗೆ ನಡೆಯುವುದು ಬ್ರಾಹ್ಮಣರ ಊಟದ ಉಚ್ಛಿಷ್ಟ’ಮಡೆ ಸ್ನಾನ’ ಬೀದಿಯಲ್ಲಿ ನಡೆಯುವುದು ಅದಕ್ಕಿಂತಲೂ ಕಷ್ಟಕರವಾದ ಸಾರ್ವಜನಿಕರ ಸರ್ವ ಉಚ್ಛಿಷ್ಟ ’ಬೀದಿ ಮಡೆಸ್ನಾನ’ .ಅದು ಒಂದೆರಡು ಘಂಟೆಗಳಲ್ಲಿ ನಡೆದು ಹೋಗುತ್ತದೆ.ಇದು ಬಿರುಬಿಸಿಲಿನಲ್ಲಿಯೂ ಮುಂದುವರೆಯುತ್ತದೆ.
ಕುತೂಹಲದ ಸಂಗತಿಯೆಂದರೆ ನನಗೆ ತಿಳಿದಂತೆ ಈ ಮಡೆಸ್ನಾನವೆಂಬುದು ನಾಗರಾಧನೆಗೆ ಪ್ರಸಿದ್ಧವಾದ ತುಳುನಾಡಿನಲ್ಲಿ ಅದರಲ್ಲಿಯೂ ವಿಶೇಷವಾಗಿ ಸುಬ್ರಹ್ಮಣ್ಯ ದೇವಸ್ಥಾನಗಳಲ್ಲಿ ಮಾತ್ರ ನಡೆಯುತ್ತಿದೆ. ಬಹುಶಃ ’ನಿನ್ನ ಹಾಗೆ ನಾನು ಕೂಡಾ ಹೊರಳಾಡುತ್ತಾ ನಿನ್ನ ಸನ್ನಿದಿಗೆ ಬರುತ್ತೇನೆ’ ಎಂಬುದೇ ಈ ಆಚರಣೆಯ ಮೂಲವಿರಬಹುದೇ? ನಾನು ವಿದ್ಯಾರ್ಥಿಯಾಗಿದ್ದಾಗ ಜಾತ್ರೆ ಸಮಯದಲ್ಲಿ ಇದನ್ನು ನೋಡುತ್ತಲೇ ಬಂದಿದ್ದೇನೆ.
ದೇವಸ್ಥಾನದೊಳಗಿನ ಮಡೆಸ್ನಾನವನ್ನು ವಿರೋಧಿಸುವವರು ಬೀದಿ ಮಡೆಸ್ನಾನವನ್ನು ಯಾಕೇ ವಿರೋಧಿಸುವದಿಲ್ಲ? ಬದುಕಿಗೊಂದು ನಂಬಿಕೆ ಬೇಕು. ಆ ನಂಬಿಕೆಯೇ ದೇವರು.ಅದನ್ನು ಮೀರಲೆತ್ನಿಸುವ ಅಲ್ಪಸಂಖ್ಯಾತರು ಒಂದು ತುದಿಯಲ್ಲಿದ್ದರೆ ಬಹುಸಂಖ್ಯಾತರು ಇನ್ನೊಂದು ತುದಿಯಲ್ಲಿದ್ದಾರೆ. ಎಲ್ಲೋ ಒಂದು ಕಡೆ ಸಂದಿಸುತ್ತಾ ಮಾನವೀಯರಾಗಲು ಪ್ರಯತ್ನಿಸಬೇಕು. ’ಲಂಚ ಪಡೆಯುವುದು ಎಷ್ಟು ಅಪರಾಧವೋ ಲಂಚ ನೀಡುವುದು ಕೂಡ ಅಷ್ಟೇ ಅಪರಾಧ’! ಇದೆಲ್ಲಾ ಸಾಮಾಜಿಕ ಹೊಣೆಗಾರಿಕೆಗೆ ಸಂಬಂಧಪಟ್ಟ ವಿಷಯವೇ ಹೊರತು ಒಂದು ಜಾತಿಯ ನಿಂದನೆಗೆ ಸಂಬಂಧಿಸಿದ್ದಲ್ಲ
ಮರೆತದ್ದು; ಅಲ್ಲಿ ’ಮೂಲೆ ಮಡೆಸ್ನಾನ’ ವೆಂಬ ಇನ್ನೊಂದು ಪದ್ದತಿಯೂ ಇದೆ, ದೇವಸ್ಥಾನದ ಮೂಲೆ,ಮೂಲೆಗಳಲ್ಲಿ ಹೊರಳಾಡುವುದೇ ಮೂಲೆ ಮಡೆಸ್ನಾನ. ಇದು ಸ್ವಲ್ಪ ಅನುಕೂಲಕರ ಭಕ್ತಿ!







smt.usha avaru brahmanaru unda enjalu ele mele uruluvudannu viarodhisa
bedi, hondikondu baalabeku endu upadesha maaduttiddare. ondannu virodhisuvavarige innondannu torisi samaya saadakatana mereyuvudu
hindinindalu nadedu bandaddu. adanne purohitashaahi ennuvudu. jana purohhita shaahiya anarthagalannu virodhisuttiddareye horatu yaava jaatiyavarannu nindisuttilla idannu smt. usha avaru artha maadikolla beku.
kanam
ನನ್ನ ಪ್ರತಿಕ್ರಿಯಲ್ಲಿ ಹೊಂದಿಕೊಂಡು ಬಾಳಿ ಎಂಬ ಭಾವ ಸ್ಫುರಿಸುತ್ತಿದ್ದರೆ ನಿಜಕ್ಕೂ i am sorry. ಇನ್ನು ಕನಂ ಅವರೇ ನಿಮ್ಮ ಸಾಮಾಜಿಕ ಅನಿಷ್ಟಗಳ ವಿರುದ್ಧದ ನಿಮ್ಮ ಕೆಚ್ಚಿಗೆ ನನ್ನ ಸಹಸ್ಪಂದನವಿದೆ.
ಒಂದು ಕೆಲಸ ಮಾಡಿ ಕನಂ ಅವರೇ.ಮುಂದಿನ ವರ್ಷ ಜಾತ್ರೆ ಸಮಯಕ್ಕೆ ನೀವು ಬಾವುಟ ಹಿಡಿದುಕೊಂಡು ಕುಕ್ಕೆಗೆ ಬನ್ನಿ. ಅದು ನನ್ನೂರು. ಅಲ್ಲಿ ನನ್ನ ಸಹಪಾಠಿಗಳು ಅಂಗಡಿ , ಹೋಟೆಲುಗಳನ್ನಿಟ್ಟುಕೊಂಡಿದ್ದಾರೆ. ನನ್ನ ಗುರುವೃಂದವಿದೆ. ಸಹೋದ್ಯೋಗಿಗಳಾಗಿದ್ದ ಮೇಸ್ಟ್ರುಗಳಿದ್ದಾರೆ. ನಮ್ಮ ಕುಟುಂಬದ ಲಾಡ್ಜ್ ಗಳಿವೆ.
ಹೋಗುವ ಮೊದಲೊಮ್ಮೆ ನನಗೆ ತಿಳಿಸಬೇಕೆನಿಸಿದರೆ ನನ್ನ ಮೇಲ್ ವಿಳಾಸ ಇಲ್ಲಿದೆ;
ushakattemane@yahoo.com