ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಿ.ಸುರೇಶ ಬರೆದ ಪ್ರತಿಭಟನೆ ಪತ್ರ

2285327-3-charlie-chaplin
ಈಚೆಗೆ ಆಗುತ್ತಿರುವ ಮತೀಯ ಘರ್ಷಣೆಗಳ ಬಗ್ಗೆ ತಾವು ಬಲ್ಲಿರಿ. ಈ ಘರ್ಷಣೆಗಳ ಮುಂದುವರಿದ ಅಧ್ಯಾಯ ಎಂಬಂತೆ ಚಾರ್ಲಿ ಚಾಪ್ಲಿನ್ ನ ವಿಗ್ರಹ ನಿರ್ಮಾಣ ಮಾಡಹೊರಟ ಚಿತ್ರತಂಡದವರನ್ನು ಮತ್ತು ಸ್ವತಃ ಚಾಪ್ಲಿನ್ ನಂತಹ ಮಹಾನ್ ಕಲಾವಿದನನ್ನು ಮತೀಯವಾದಿಗಳು ಅತ್ಯಂತ ಕೆಟ್ಟದಾಗಿ ನಡೆಸಿಕೊಂಡಿದ್ದಾರೆ. `ಯಾವುದೇ ಕಲಾವಿದನಿಗೆ ಜಾತಿ, ಮತ, ಭಾಷೆ, ದೇಶದ ಎಲ್ಲೆಗಳಿಲ್ಲ’ ಎಂದು ನಂಬಿರುವ ನಾವು ಈ ಘಟನೆಯನ್ನು ಖಂಡಿಸಿ, ಪ್ರತಿಭಟಿಸುತ್ತಿದ್ದೇವೆ.
ಮಾರ್ಚ್  20, ಶುಕ್ರವಾರ, ಸಂಜೆ 4.30 ಗಂಟೆಯಿಂದ ಬೆಂಗಳೂರಿನ ಮಹಾತ್ಮ ಗಾಂಧಿ ರಸ್ತೆಯಲ್ಲಿರುವ ಗಾಂಧೀಜಿಯವರ ಪ್ರತಿಮೆಯ ಎದುರು ಪ್ರತಿಭಟನಾ ಸಭೆ ನಡೆಯಲಿದೆ. ನಾಡಿನ ಪ್ರತಿಷ್ಠಿತ ಸಾಹಿತಿಗಳು, ಕಲಾವಿದರು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಪ್ರತಿಭಟನೆಯಲ್ಲಿ ಪಾಲ್ಗೊಂಡವರ ಪ್ರತಿನಿಧಿಗಳು ರಾಜ್ಯಪಾಲರನ್ನು ಭೇಟಿಯಾಗಿ ಮನವಿಯೊಂದನ್ನು ನೀಡಲಿದ್ದಾರೆ.

ಕರ್ನಾಟಕ ಸಾಹಿತಿ ಕಲಾವಿದರ ಒಕ್ಕೂಟದ ಪರವಾಗಿ
-ಬಿ.ಸುರೇಶ

‍ಲೇಖಕರು avadhi

19 March, 2009

1 Comment

  1. m.s.murthy

    ` nammanthaha samanya kalavidarooo mukyavagi irutthare..,pratistitha kalavidarinda enu prayojana…..?- `
    m.s.murthy-BHOOMI

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading