‘ವಿಜಯನಗರ ಬಿಂಬ’ ಶನಿವಾರ ರಂಗಶಾಲೆಯನ್ನು ಆರಂಭಿಸಿತು. ವಿಜಯನಗರ ಬಿಂಬದ ಈ ಶಾಲೆಗೇ ಸೇರಿಕೊಳ್ಳಲೇಬೇಕು ಎನ್ನುವ ಉತ್ಸಾಹ ಹುಟ್ಟಿಸಿದ್ದು ಉದ್ಘಾಟನೆ ನಡೆಸಿದ ರೀತಿಯಿಂದ. ಈಟಿವಿಯ ಮುಖ್ಯಸ್ಥ ಸೂರಿ, ಕಂತೀರವ ಸ್ಟುಡಿಯೋದ ಆಡಳಿತ ನಿರ್ದೇಶಕ ಎನ್ ಆರ್ ವಿಶು ಕುಮಾರ್, ಪತ್ರಕರ್ತೆ ಶ್ರೀದೇವಿ ಕಳಸದ ಸೇರಿ ಮಕ್ಕಳು ಹಿಡಿದುಕೊಂಡಿದ್ದ ಅಕ್ಷರಗಳ ಪದಬಂಧವನ್ನು ಬಿಡಿಸಿದರು. ಅದು ಇಲ್ಲಿದೆ.
ಬಿಂಬಕ್ಕೆ ಈಗ ೧೫ ವರ್ಷ. ಕಳೆದ ೧೫ ವರ್ಷಗಳಲ್ಲಿ ಅದು ಸಾಗಿ ಬಂದ ಹಾದಿಯನ್ನು ವರದಿ ಒಪ್ಪಿಸಿ ಬೋರು ಒಡೆಸದೆ ಅದನ್ನೂ ದೃಶ್ಯಕ್ಕೆ ಅಳವಡಿಸಿದ್ದು ಶೋಭಾ ವೆಂಕಟೇಶ್ ಅವರ ಕಲ್ಪನೆಗೆ ಕನ್ನಡಿ ಹಿಡಿಯಿತು. ಸುಷ್ಮಾ ಪ್ರಶಾಂತ್ ಈ ವರದಿಗೆ ರಂಗ ರೂಪ ನೀಡಿದರು. ಎಂದಿನಂತೆ ಉಳಿದದ್ದೆಲ್ಲವನ್ನ್ನೂ ನಿಭಾಯಿಸಿದ್ದು ಕಶ್ಯಪ್ ಆಚಾರ್.












0 Comments