ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚಂದ್ರು ಸೌಗಂಧಿಕ ಕಂಡಂತೆ ‘ದಡವ ನೆಕ್ಕಿದ ಹೊಳೆ’

ಚಂದ್ರು ಸೌಗಂಧಿಕ

ಅವರು ಮೈಸೂರಿನಿಂದ ಅಥವಾ ಉಡುಪಿಯಿಂದ ಹೊರಟಾಗ ನನಗೊಂದು ಸಂದೇಶವಿರುತ್ತದೆ “ನಾಳೆ ಬರುತ್ತೇನೆ”ಎಂದು. ನಾನು ಅವರ ದಾರಿ ನೋಡುತ್ತಿರುತ್ತೇನೆ. ಜೊತೆಗೆ ಒಂದು ಗುಟುಕು ಚಹಾ ಹೀರಲು. ಒಂದಷ್ಟು ಹೊತ್ತು ನಾಟಕ ರಂಗಭೂಮಿ ತುಸು ಹೊತ್ತು ಮೌನದಲ್ಲಿ ಮಾತಾಡಲು. ನಂತರ ಅವರು ಹೊರಟು ನಿಂತಾಗ ಅವರ ಕಂಗಳಲ್ಲಿ ತುಂಬಿದ ಪ್ರೀತಿಯನ್ನು ನಾನು ಹೃದಯದಲ್ಲಿ ತುಂಬಿಕೊಳ್ಳುತ್ತೇನೆ.

ಪ್ರತಿ ಬಾರಿಯೂ ನನಗದು ಹೊಸತು. ನಾಟಕ, ರಂಗಭೂಮಿ, ಸಂಗೀತಗಳಿಂದ ಅದು ಮಿಗಿಲು ಎನ್ನುವುದು ನನ್ನ ಅಭಿಮತ. ಹೃದಯಕ್ಕೆ ಹತ್ತಿರವಾದ ಸಂಬಂಧಗಳು ಬಂದವರು ಹೊರಟು ನಿಂತಾಗ ನನಗಾಗುವ ಭಾವ ತೀವ್ರತೆ ಇದು. ಬಹುರೂಪಿ ಮಗುಮ್ಮಾಗಿ ಕವರ್ ಪೇಜಿನಲ್ಲಿ ಈ ಪ್ರೀತಿ ತುಂಬಿದ ಕಣ್ಣೋಟವನ್ನು ಹಿಡಿದಿಟ್ಟುಕೊಂಡೇ ಪ್ರಕಟಿಸಿದ ಪುಸ್ತಕ ‘ದಡವ ನೆಕ್ಕಿದ ಹೊಳೆ’.

ಯಕ್ಷಗಾನ ಕಂಪನಿ ನಾಟಕಗಳ ಗುಂಗಿನಲ್ಲಿಯೇ ಕಳೆದ ಶ್ರೀ ಪಾದರ ಬಾಲ್ಯ ಮುಂದೆ ನಿರ್ದೇಶನ ಕೈಗೊಂಡಾಗ ಪ್ರೇಮಚಂದ ರ ‘ಹೆಣದ ಬಟ್ಟೆ’ಯನ್ನಾಗಲಿ ಸಾದತ್ ಹಸನ್ ಮಂಟೊನಾ “ಮಿಸ್ಟೇಕ್ “ನ ಸಂದರ್ಭದಲ್ಲಿ ಅಥವ ಬಾಪು ಗಾಂಧಿಯ ಆತ್ಮವೃತ್ತಾಂತದ ಅವತರಿಣಿಕೆಗಳಲ್ಲಿಯೆ ಆಗಿರಲಿ ಅಣು ಬಾಂಬ್ ದುರಂತದ ರೆಕ್ಕೆ ಕಟ್ಟುವ ಸಂದರ್ಭದಲ್ಲಿಯೇ ಇರಲಿ ರಾಧಾ- ಮಾಧವಿ-ಯಂತ ಹೆಣ್ಣಿನ ತಳಮಳಗಳ ಅನಾವರಣಗಳಲ್ಲಿ ಯೇ ಆಗಲಿ ತನ್ನ ಅಂತರಂಗದೊಳಗಿನ ಅಂತಕರಣದ ಧ್ವನಿಯನ್ನ ನಿರ್ದೇಶನವನ್ನಾಗಿಸಿದವರು.

ಬಾಲ್ಯದಲ್ಲಿ ನೋಡಿದ ಅಜ್ಜಿಯ ಕಪಾಟಿನಲ್ಲಿದ್ದ ಬಣ್ಣ ಬಣ್ಣದ ಸೀರೆಗಳು ಸದಾರಮೆ, ಸದಾರಮೆಯ ಕಳ್ಳ ಹೀಗೆ ಕನಸುಗಳ ಕುದುರೆಯನ್ನೇರಿ ಹೊರಟವರು ರಂಗಭೂಮಿಯಲ್ಲಿ ಒಂದು ಜೈತ್ರ ಯಾತ್ರೆಯನ್ನೇ ಕೈಗೊಂಡವರು. ಕಳೆದ ಸುಮಾರು 30 ವರ್ಷಗಳಿಂದ ಕರ್ನಾಟಕದ ಅಪ್ಪಟ ಗ್ರಾಮೀಣ ಪ್ರದೇಶವಾದ ಶೇಷ ಗಿರಿಯೂ ಸೇರಿದಂತೆ ಕನ್ನಡ ನಾಡಿನ 10 ಹಲವು ಹಳ್ಳಿಗಳಲ್ಲಿ ಇವರು ಸಲ್ಲಿಸಿದ ರಂಗ ಕಾರ್ಯಕ್ಕೆ ಆಭಾರಿಗಳಾಗಿ ಇರುವ ಅವರ ಶಿಷ್ಯವರ್ಗವೇ ಸಾಕ್ಷಿ.

ಓದದವನು ಬರೆಯಲಾರ ಎನ್ನುವ ನಾಣ್ನುಡಿ ಇದೆ
ಸ್ಪಷ್ಟ ಮತ್ತು ಕಾವ್ಯಮಯ ಸ್ಪುಟವಾದ ಬರಹ ಎಲ್ಲಿಯೂ ಉತ್ಪ್ರೇಕ್ಷೆ ಇಲ್ಲದ ಆಡಂಬರವಿಲ್ಲದ ಆಪ್ತತೆಯ

ಬರಹ ಇದೆಲ್ಲಿ ಅಡಗಿತ್ತು? ಮೊಗೆದಷ್ಟು ನೆನಪುಗಳ ಹರಿವು. ಇದು ದಾಖಲಾತಿ ಗೊಂಡಿರುವುದು ಹರ್ಷ ಚಿತ್ತ.
ಧನ್ಯವಾದಗಳು ರಂಗಭೂಮಿಯ ಬಹುರೂಪಿ ಶ್ರೀಪಾದರಿಗೆ. ಪುಸ್ತಕದ ಬಹುರೂಪಿ ಬಳಗಕ್ಕೆ.

ಕೃತಿ: ‘ದಡವ ನೆಕ್ಕಿದ ಹೊಳೆ’
ಪ್ರಕಾಶನ : ಬಹುರೂಪಿ
ಪುಟಗಳು : 168
ಬೆಲೆ : ರೂ 200

ಪ್ರತಿಗಾಗಿ ಸಂಪರ್ಕಿಸಿ : 70191 82729

ಅಥವಾ ಇಲ್ಲಿ ಕ್ಲಿಕ್ ಮಾಡಿ https://bit.ly/3lTMPVm

‍ಲೇಖಕರು avadhi

11 April, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading