ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಬಾರದ ಮಳೆ ಬಂದು' – ಸಣ್ಣ ಕಥೆ

ತಿರುಪತಿ ಭಂಗಿ

ಆ ವರ್ಷ ನಿಸರ್ಗ ದೇವಿ ಮುನಿಸ್ಕೊಂಡಿದ್ಳು. ಮಳೆ ಮಿತಿಮೀರಿ ಸುರಿದು ಹಳ್ಳ-ಕೊಳ್ಳ , ಬಾವಿ,ಕೆರೆ ಕಟ್ಟೆ ತುಂಬಿ ದೇವರ ಹಳ್ಳಿ ಸುತ್ತಲೂ ನೀರು ಸುತ್ತುವರೆದಿತ್ತು. ಮನೆ ಅಂಗಳದಲ್ಲಿ ಮನಕಾಲ ಮಟಾನೀರು , ಈ ಊರಿನ ಸಹಾಯಕ್ಕೆ ಸರಕಾರ ಮನಸು ಮಾಡಲಿಲ್ಲ. ಅನೇಕರು ಮನೆ ಕುಸಿದು ಜೀವಂತ ಶವವಾದ್ರು , ಅನೇಕರಿಗೆ ವಿಪರೀತ ಜಡ್ಡು ಬಡೆಯಿತು. ಹಿಂತಾ ಮಳಿ ಜನ್ಮದಾಗ ಕಂಡಿರಲಿಲ್ಲ ಅಜ್ಜಿ ವಬ್ಬಾಕಿ ಮೊಮ್ಮಕ್ಕಳಿಗೆ ಹೇಳ್ತಿದ್ಳು. ದನಕರುಗಳು ಕುಳಿಲ್ಲಕ.ನೆಲಾಹಿಡಿದಿದ್ವು ಕೆಲವು ಮಳಿ ಗಾಳಿಗೆ ಚಾಟಿಲ್ದ ನಡಗಿ ಸತ್ತಿದ್ವು. ದೇವರಳ್ಳಿ ಅಷ್ಟ ಅಲ್ದೆ ಅನೇಕ ನೂರಾರ ಹಳ್ಳಿ ಜನರ ಪರಸ್ಥಿತಿ ಹಿಂಗ ಆಗಿತ್ತು. ಭೂಮ್ಯಾಗಿರೊ ಬೆಳಿ ಕೊಚ್ಚಿ ನೀರ್ಗೂಡಿತ್ತು, ಜನರಿಗೆ ತಿನ್ನಾಕ ಕಾಳ ಕಡಿ ಇಲ್ದ ಪರದಾಡೋ ಸ್ಥಿತಿ ಬಂತು, ಬ್ಯಾರೆ ಊರಾಗಿರು ತಮ್ಮ ಸಂಬಂದಿಕರ,ಬೀಗ್ರು , ಬಿಜ್ಜುರು ತಂದ ಕೊಟ್ಟ ಕಾಳ ಕಡಿಯಾಗ ಹೆಂಗೋ ಜೀವ್ನಾ ಸಾಗಿಸಿದ್ರು.
ರೈತರು , ಕಂಗಾಲಾದ್ರು ನಾಂವ ಇಷ್ಟೆಲ್ಲ ಕಳಕೊಂಡ್ರು ಸರಕಾರ ತಮ್ಮ ಸಹಾಯಕ ಬಾರದಿದ್ದನ್ನ ನೆನಸ್ಕೊಂಡ , ಸರಕಾರ್ಕ ಬುದ್ದಿ ಕಲಸಬೇಕು ಅಂತ ರೈತ್ರು ಆಲ್ಲಲ್ಲ್ಲಿ ಜಮಾಯಿಸಿದ್ರು.
ಊರಗೌಡ ದೇವಪ್ಪ ಊರಿಗೆ ಹಿಂತಾ ಕುತ್ತ ಬಂದಿದ್ರು ಯಾರಿಗೂ ಒಂದ ಮುಕ್ಕ ಕಾಳ ಕೊಟ್ಟಿರಲಿಲ್ಲ. ಕಾಲ್ಮರಿ ಹೋಲಿವಾರೆಲ್ಲ ರೈತ್ರ ಆದ್ರ ಭೂತಾಯಿ ಸುಮ್ಮ ಇರತಾಳೇನ, ಅವಳ್ಗೂ ಮುಟ್ಟು-ಚಟ್ಟ ಎಲ್ಲಾ ಇರ್ತೈತಿ. ಈಗ ನೋಡ ಅವರ ಪಜಿತಿ ಹೆಂಗ ಆಗೀತ ಅಂತ ತನ್ನ ಮೂರ ಅಂತಸ್ತಿನ ಬಂಗ್ಲೇದಾಗ ಕುಂತ ನಗತಿದ್ದ. ಮಾದರ ಮುದ್ದಪ್ಪಗ ಗೌಡನ ಹಕ್ಕಿಕ್ಕತ್ತ ಗೊತ್ತಿತ್ತು. ಕಾನೂನು, ಆಡಳಿತ,ಕಛೇರಿ ಬಗ್ಗೆ ತಿಳವಳಿಕೆ ಇತ್ತು. ರೈತ ಸಂಘದ ಸದಸ್ಯ ಆಗಿದ್ದ. ತನ್ನ ಜ್ಯಾತಿ ಮಂದಿಮ್ಯಾಗ ಬಾಳ ಕಾಳಜಿ ಇತ್ತು ಮುದ್ದಪ್ಪಗ. ಹೆಂಗಾರ ಮಾಡಿ ನಮ್ಮರ್ನ ಉದ್ದಾರ ಮಾಡ್ಬೇಕು ಅನ್ನು ಛಲಾ ಅವನ ಎದಿಯಾಗಿತ್ತು. ಕಾಲ ತುಳಿಯು ಮಂದಿ ಕಾಲ ಮುರಿಬೇಕು ಅಂತ ಹಠಾ ತೊಟ್ಟಿದ್ದ. ಮುದ್ದಪ್ಪ ಮಾಡು ದಿಮಾಕಿಗೆ ಊರಗೌಡ ಕ್ಯಾರೆ ಅಂತಿರಲಿಲ್ಲ. ‘ಹೆಸಗಿಮ್ಯಾಲ ಕಲ್ಲ ವಗದ ಮ್ಯಾಲ ಸಿಡಸ್ಕೋ ಬಾರು’್ದ ಅಂತ ತನ್ನ ಹಿಂಬಾಲಕನಿಗೆ ಗೌಡ ಆಗಾಗ ಹೇಳ್ತದ್ದ.
ಒಂದಿನ ರೈತ ಸಂಘದ ಮಿಟಿಂಗ ನಡೆತು. ಅದರಾಗ ಮಳಿ ಆಗಿ ಬಾಳ ನಷ್ಟ ಆದದ್ಕ ಸರಕಾರ ಇನ್ನೂ ತನಕ ಯಾವ ಸಹಾಯ ಮಾಡಾಕ ಬಂದಿಲ್ಲ. ನಾಂವು ಮೇಲಾದೀಕಾರಿಗಳಿಗೆ ಅರ್ಜಿದೂರು ನೀಡಿದ್ರ ನಮ್ಮ ಅರ್ಜಿಗಳ ಅವ್ರು ಕಶದ ಬುಟ್ಟಿಗೆ ಏಸದ ಕುಂದರ್ತಾರ, ಏಸ್ಟ ದಿನ ಹಸರ ಟಾವೆಲ ಹೆಗಲಮ್ಯಾಲ ಹಾಕ್ಕೊಂಡ ಅಡ್ಡಾಡೂದು. ಹೋರಾತ ಮಾಡೇ ಬಿಡೋಣ ಅಂತ ರೈತ ಸಂಘದ ಅದ್ಯಕ್ಷ “ಶರಣಪ್ಪ’ ಘೋಷಣೆ ಮಾಡಿದ. ಅದು ಎಲ್ಲ ರೈತರಿಗೆ ಸರಿ ಅನಿಸ್ತು.
ಕೆಲವು ರಾಜಕಿ ಮುಖಂಡ್ರು ನಿಂವ ಮಾಡುದು ಹೊರಾಟಕ್ಕ ಅರ್ಥ ಐತಿ ಅಂದ್ರು. ಏಲ್ಲ ರೈತ ಸಂಘದ ಸದಸ್ಯರು ಚುರುಕಾಗಿ ಊರಾಗಿರೋ ರೈತರ್ನ ಗ್ವಾಳಿ ಮಾಡಕೊಂಡು ಸಿದ್ದರಾದ್ರು. ಮುದ್ದಪ್ಪನೂ ಊರಿಗೆ ಬಂದ , ಮಿಟಿಂಗದಾಗ ಆದ ಚಚರ್ೆ ರೈತರಗೆ ಹೇಳಿದ, ಮ್ಯಾಲ ಜ್ಯಾತಿ ಮಂದಿಗೆ ಇಂವ ಹಿಂಗ ಹೇಳುವಾಗ ಚೂಜಿ ತಗೊಂಡ ಚುಚ್ಚಿದಾಂಗ ಆತು. ಅವ್ರು ಇಂವನ ಮಾತ ಕೇಳಿ ಕೇಳದಂಗ ದೂರತ ಹೋಗಿ ನಿಂತಕೊಂಡ್ರು.
ಊರಗೌಡ ದೇವಪ್ಪ ಆ ಹೋರಾಟದಾಗ ಬಾಗವಹಿಸಿದ್ರ ನೋಡ್ರಿ ಮಕ್ಕಳ, ಸರಕಾರ ಆಳೋನು ನಮ್ಮ ಜ್ಯಾತ್ಯಾಂವ ಅದಾನ , ನಿಮಗ ಗೊತ್ತಿರಲಿ. ನಿಮಗೇನಾರ ಕಡಿಮಿ ಚೋಟಾ ಬಿದ್ರ ಕೇಳ್ರಿ ನಾ ಕೊಡತೀನಿ ಅಂತ ತಮ್ಮ ಜ್ಯಾತಿ ಮಂದಿಗೆ ತಾಕೀತ ಮಾಡಿದ. ಗೌಡನ ಮಾತ ಕೇಳಿ ಮಂದಿ ಯಾರೂ ಹೋಗಾಕ ರೆಡಿ ಆಗಲಿಲ್ಲ. ಇಡೀ ಕೇರಿಗೆ ಕೇರೀನ ಮುದ್ದಪ್ಪನ ಹಿಂದ ನಡೆದು ಹೋತು. ಆಗ ದೇವರಹಳ್ಯಾಗ ದೇವ್ರ ಎಲ್ಲಾ ಈ ಹೊರಾಟದಾಗ ಬಂದಾಂಗ ಅನಿಸಿತು.
‘ಬೇಕೆ ಬೇಕು….. ನ್ಯಾಯಾ ಬೇಕು . ಮುಖ್ಯಮಂತ್ರಿಗಳಿಗೆ… ದಿಕ್ಕಾರಾ, ದುರ್ಬಲ ಸರಕಾರಕ್ಕೆ …ದಿಕ್ಕಾರಾ’ ಹಿಂಗೆ ನಗರದ ಬೀದಿಯುದ್ದಕ್ಕೂ ಜನಸಾಗರ ಹರಿದು ಹೊರಟಿತ್ತು. ಖಾದಿ ಬಟ್ಟೆ ತೊಟ್ಟ ಮುಖಂಡರು ಮುಂದಿನ ಸಾಲಲ್ಲಿ ಇದ್ರು , ಅವರ ಹಿಂದೆ ಅವಕಾಶ ಸಿಕ್ಕಾಗ ಬಿಳಿ ಬಟ್ಟಿ ಕದರ್ ತೋರಿಸುವ ಜನರ ದಂಡಿತ್ತು ಸಾಕಷ್ಟ ಯುವಕರು ಈ ಸ್ಟ್ರೈಕನಲ್ಲಿತೊಡಗಿದ್ದು ವಿಶೇಷ ,.
ಪ್ರತಿಭಟನಾಕಾರರನ್ನು ಹತ್ತಿಕಲು ಕಾಕಿಮಂದಿ ಹಾಜರಿದ್ರು. ವರದಿಗಾರರು ಟಿ.ವಿ.ಚಾನೆಲ್ಲದವರು ಎಲ್ಲಂದರಲ್ಲಿ ಕರಿಡಬ್ಬಿ ಮೊತಿಗೆ ಹಿಡಿದು ಟಕ್ ಅಂತ ಫೋಠೊ ತಗಿಯುತ್ತಿದ್ದರು. ಜನರ ಮೊತಿ ಮುಂದೆ ಟಿ.ವಿ.ಚಾನೆಲ್ಲದವರ ಕರಿಡಬ್ಬಿ ಹೋದಾಗಂತು ಏರುದನಿಯಲ್ಲಿ ದಿಕ್ಕಾರಾ….ದಿಕ್ಕಾರಾ ಅಂತ ಯುವಕರು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದರು.
ಖಾದಿ ಅಂಗಿ ಹಾಕಿದ ರಾಜಕೀಯ ಮಹಾಶಯರು ಹಂತಾ ಗದ್ದಲ , ಗಲಾಟೆಯಲ್ಲೂ ಸಾವಿರಾರು ರೂಪಾಯಿ ಬೆಲೆ ಬಾಳುವ ಮೈಬೈಲ್ ಫೋನನ್ನು ನಯವಾಗಿ ತಮ್ಮ ಕಿವಿಗೆ ಹಿಡಿದುಕೊಂಡು ಗುಣುಗುಣು ಗುಣುಗುತ್ತಿದ್ದರು. ಅವರ ಮಾತು ಪಕ್ಕದಲ್ಲಿರೂವ ವ್ಯಕ್ತಿಗೂ ಕೇಳತ್ತಿರಲ್ಲಿಲ ಅಷ್ಟೊಂದು ಸೂಕ್ಷ್ಮತೆ ಅವರು ಮಾತಾಡುವ ಗತ್ತಿನಲ್ಲಿತ್ತು.
ರಸ್ತೆಯ ಮೇಲೆ ಜನಸಾಗರ ಹರಿದು ಹೋಗುವದನ್ನು ರಸ್ತೆಯ ಅಕ್ಕಪಕ್ಕದಲ್ಲಿರುವ ಮನೆಯವರು ಕಿಡಕಿಯಿಂದ ಇನುಕಿ ನೋಡುತ್ತಿದ್ದರು, ರಸ್ತೆ ತಡೆಯಾದ್ದಕ್ಕೆ ವಾಹನ ಸಾಲುಸಾಲಾಗಿ ಕಿ.ಮಿ ದೂರದಷ್ಟು ನಿಂತಿದ್ದವು.ನಗರದಲ್ಲಿರುವ ಯಾವ ಅಂಗಡಿ ಬಾಗಿಲವೂ ಪೂತ್ರಿ ತೆರೆದಿರಲಿಲ್ಲ.ಪ್ರತಿಭಾಟನಕಾರರ ಭೀತಿಗೆ ಅರ್ಧಬಾಗಿಲು ಮಾತ್ರ ತೇರದಿದ್ದರು. ಬಸವೇಶ್ವರ ವೃತ್ತದಲ್ಲಿ ಮುಖ್ಯಮಂತ್ರಿಯ ಕೃತಕ ದೇಹಕ್ಕೆ ಬೆಂಕಿ ಹಚ್ಚಿ ‘ದಿಕ್ಕಾರಾ ದಿಕ್ಕಾರಾ’ ಅಂತ ಕೂಗಿದರು.
ಹೆಗಲ ಮೇಲೆ ಹಸಿರು ಬಣ್ಣದ ಟಾವೇಲ್ಲ ಹಾಕಿಕೊಂಡ ಒಬ್ಬ ರೈತ ‘ರೈತರ ವಿರುದ್ದ ಇರುವ ಆಡಳಿತ ಸರಕಾರಕ್ಕೆ’ ಎಂದು ದನಿ ಮುಗಿಲು ಮುಟ್ಟುವಂಗೆ ಕೂಗಿದ, ಅವನ ಹಿಂದ ಇದ್ದ ಮಂದಿ ‘ದಿಕ್ಕಾರ’ ಹೇಳಕೊಂತ ಕೇ ಕೇ ಹಾಕಿದ್ರು. ಈ ದರಣಿಯಲ್ಲಿ ಬಾಳ ಮಂದಿ ಪಾಲ್ಗೊಂಡದ್ದು ನೋಡಿ ಮುದ್ದಪ್ಪಗ ಆನಿ ಬಲ ಬಂದಾಂಗ ಆಗಿತ್ತು. ಈ ಪರಿ ಮಂದಿ ಸೇರೇತಂದ್ರ ಸರಕಾರ ತಂಡಾ ಹೊಡೋದು ನಿಕ್ಕಿ ಅಂದಕೊಂಡ.

ಈ ರೈತರ ಧರಣಿಯನ್ನು ತಡೆಯಲು ಡಿ.ಸಿ.ಸಾಹೇಬ್ರು ಬಂದ್ರು, ಅವರ ಹಿಂದೆ ಪೋಲಿಸ ಅಧಿಕಾರಿಗಳೂ ಇದ್ದರು. ನಂತರ ಜೀಪನಲ್ಲಿ ನಗರದ ಉಸ್ತುವಾರಿ ಸಚಿವರೂ ಬಂದ್ರು ರೈತರ ಧರಣಿಯ ಹಿನ್ನಲೆ ಅರಿತು . ಸಾದ್ಯವಾದಷ್ಟು ದೌಡ ಪರಿಹಾರ ಕಲ್ಪಿಸ್ತಿವಿ ಅಂತ ಡಿ.ಸಿ. ಮತ್ತು ಸಚಿವರು ಬರವಸೆ ಕೊಟ್ಟರು. ನಿಮ್ಮ ಬರವಸೆ ನಂಬುವಷ್ಟ ಮೂರ್ಖರ ನಾಂವಲ್ಲ, ರೈತರಿಗೆ ಬೇಲೆ ನಾಶ ಪರಿಹಾರ.ಆದಷ್ಟ ಬೇಗ ಕೊಡಬೇಕು , ಉಚಿತವಾಗಿ ಬೀಜಾ ಗೋಬ್ರಾ ಕೊಡಬೇಕು, ನಾಂವ ಬೆಳೆದ ಬೆಳೆಗೆ ತಕ್ಕ ಬೆಲೆ ಕೊಡಬೇಕ ಇಲ್ಲಂದ್ರ , ಇಲ್ಲಂದ್ರ ನಾಂವ ಸೀಮಿ ಎಣ್ಣಿ ಸುರಕೊಂಡ ನಿಮುಂದ ಬೆಂಕಿ ಹಚಗೋತಿವಿ. ಅಂತ ತನ್ನ ಸಂಕಟ ತೋಡ್ಕೋಂತ ಕರಿಯಪ್ಪ ಡಿ.ಸಿ ಮತ್ತ ಸಚಿವರಿಗೆ ಎಚ್ಚರಕೆ ಕೊಟ್ಟ. ಆಗ ಸಚಿವರ ಕಣ್ಣ ಅಗಲಾದು.
ಸಚಿವರಿಗೆ ಈ ರೈತರ ಧರಣಿ ಬಾಳ ಕಿರಿಕಿರಿ ಅನಸ್ತಿ, ಹಿಂಗಾದ್ರ ಈ ಮಂದಿ ಒಂದಕ್ಕೆರಡ ಮಾತಾಡ್ಕೋಂತ ಕುಂದ್ರತಾರ , ಹುಂ ಅಂದ ಕಡ್ಯಾಕಾಗಬೇಕು ಅಂದ ಅಂದಕೊಂಡ ಆದ್ರ ರೈತ್ರು ಬಾಳ ಸ್ತ್ರಾಂಗ್ ಆಗಿದ್ರು.
ನೋಡ ಸಚಿವಪ್ಪ ನಿನ್ನ ಆರಿಸಿ ತಂದಾಂವ್ರ ನಾಂವ ನೀ ಎಲ್ಲೆರ ಸುಳ್ಳ ಪಳ್ಳ ಆಶ್ವಾಸನೆ ಕೊಟ್ಟ ಜಿಗದೆಂದ್ರ , ನೀ ಎಲ್ಲಿದ್ರೂ ಬಿಡಾಂಗಿಲ್ಲ , ಜ್ಞಾಪಕಾದಾಗಿರಲಿ, ಅಂತ ಬಿಳಿಗಡ್ಡದ ಮುದುಕ ಕುಡದ ನಿಶೆದಾ ಸಚಿವನ ಮ್ಯಾಲ ವಾಂತಿ ಮಾಡಕೊಂಡ. ಥೂ ಡರಟಿ ಜನರು ಅಂತ ಅನಸ್ತಿ ಸಚಿವ್ಗ.
ಆಯ್ತು ಮಹಾಜನಗಳೇ ಈ ಸರಕಾರ ರೈತರ ಪರವಾಗಿರೋ ಸರಕಾರ , ಐವತ್ತ ಅರವತ್ತ ವರ್ಷದಿಂದ ರೈತರ ಕಲ್ಯಾಣಕ್ಕ ದುಡಕೊಂಡ ಬಂದಿವಿ. ಕೇವಲ ಬೆಳೆ ಹಾನಿ ಆದಾವರಗೆ ಪರಿಹಾರ ಕೊಡುದೇನ ದೊಟ್ಟ ಮಹಾ ಅಲ್ಲ. ನನ್ನ ಸುತ್ತ ಮುತ್ತ ಟಿ.ವಿ. ಚಾನಲ್ಲದಾರ ಅದಾರ , ನಿವ್ಸ ಪೇಪರದಾರ ಅದಾರ, ಪೋಲಿಸ್ರ ಅದಾರ ಅವರಮ್ಯಾಲ ಆನಿ ಮಾಡಿ ಹೇಳ್ತಿನಿ. ಒಂದ ತಿಂಗಳಾದಾಗ ಬೆಳಹಾನಿ ಪರಿಹಾರ ನಿಮ್ಮ ಕೈ ಸೇರಲಿಲ್ಲಂದ್ರ ಕೇಳ್ಳರಿ ಅಂತ ಸಚಿವರು ಗುಡುಗಿದರು. ಆಗೊಬ್ಬ ಯುವಕ ಸಚಿವರಿಗೆ ಜೈ ವಾಗ್ಲಿ, ಮುಖ್ಯಮಂತ್ರಿಗೆ ಜೈವಾಗ್ಲಿ ಅಂತ ಕೂಗಿದ. ಜನರಿಗೆ ಸಚಿವರ ನೀಡಿದ ಭರವಸೆ ಮನಸಿಗೆ ಆನಂದ ತಂದಿತ್ತು. ಸಚಿವರು ಜೀಪ ಹತ್ತಿ ಹೋದ್ರು.
ದೇವರ ಹಳ್ಳಿಯ ರೈತರ ಸ್ಥತಿಯ ತುಂಬಾ ಹದೆಗೆಟ್ಟಿತ್ತು, ಬ್ಯಾಂಕ ತುಂಬಾ ಸಾಲ ಸೋಲ ಮಾಡಿಕೊಂಡ ಜನರು ಸಾಲದ ಹೋರೆ ತಾಳಲಾರದೆ ಹೊಲ ಮನಿ ಮಾರಿ , ಮಕ್ಕಳ ಕರಕೊಂಡು ಮಂಗಳೂರಿಗೆ ದುಡ್ಯಾಕ ಹೋಗಿದ್ರು. ದೇವರ ಹಳ್ಳಿಯ ಗೌಡ್ರು ದೇವಪ್ಪ ತನ್ನಲ್ಲಿರುವ ದುಡ್ಡಿನಿಂದ ಊರಲ್ಲಿರುವ ಅನೇಕ ರೈತರ ಭೂಮಿಯನ್ನು ಅಗ್ಗದ ರೇಟಿಗೆ ಕರಿದಿ ಮಾಡ್ಕೊಂಡ.
‘ಮುಂದಿನ ಸಲ ಚುನಾವಣೆ ನಿಲ್ಲಬೇಕು ಗೌಡ್ರು ನಿಂವ’ ಅಂತ ಗೌಡರ ಹಿಂದಿರು ಹಿಂಬಾಲಕರು ಗೌಡರಿಗೆ ಹವಾ ಹಾಕತ್ತಿದ್ರು. ಗೌಡ್ರು ಅವರ ಹವಾಕ ಬುರುಬುರು ಉಬ್ಬಿ ಬಿಡ್ತಿದ್ದ. ನಿಮ್ಮ ಇಚ್ಚೆ ಇದ್ರ ಅದು ನಡೀಲಿ ಅಂತ ಮೀಸಿ ತಿರುತ್ತಿದ್ದ.
ದೇವರಹಳ್ಳಿ ರೈತರಿಗೆ ಸಿಟ್ಟನೆತ್ತಗಿತ್ತಿ , ಪ್ಯಾಟಿಗೆ ಹೋಗೆ ಸ್ರ್ತೈಕ ಮಾಡಿ ಬಂದದ್ದು ವೇಸ್ಟ ಅನಿಸ್ತು , ಸಚೀವ ಬೊಳಿ ಮಗ ತಿಂಗಳದಾಗ ಬೆಳೆಹಾನಿ ಪರಿಹಾರ ಕೊಡ್ತಿನಿ ಅಂತ ಹೇಳಿದ್ದ. ಮೂರ ತಿಂಗಳ ಮುಗಿದ ನಾಲ್ಕನೆ ತಿಂಗಳ ಮುಗಿಯಾಕ ಬಂತು ಆದ್ರೂ ಏನೂ ಇಲ್ಲ. ಸುಮ್ನ ಕುಂತ್ರ ಕುಂತ ಬಿಡುದಕ್ಕೈತಿ , ಮುಂದ ಹೋಗಿ ಕೇಳಿದ್ರ ವಿಷ್ಯ ಗೊತ್ತ ಆಕೈತಿ ಅಂತ ರೈತ ಸಂಘದ ಸದಸ್ಯ ಮುದ್ದಪ್ಪ ಅಂದ.
ನೀ ಹೇಳೂದು ಕರೇ ಐತೀ ಇಂದ ಡಿ.ಸಿ ಸಾಹೇಬ್ರುಗೆ ಬೆಟ್ಟಯಾಗಿ ಬರೋನ ಇಲ್ಲಂದ್ರ ನಾಂವು ಇದ್ದ ಮನಿ ಮಾರ್ಕೊಂಡು ಹೋಗುದಾದಿತು ಅಂತ ಪಕೀರಪ್ಪ ದ್ವನಿ ಗೂಡಿಸಿದ.
ಕೇಲವು ರೈತರ ಹೆಗಲ ಮ್ಯಾಲ ಹಸರ ಟಾವೆಲ ಹಾಕ್ಕೊಂಡ ಪ್ಯಾಟಿ ಕಡೆ ನಡುದ್ರು ದಾರ್ಯಾಗ ದೇವಪ್ಪ ಗೌಡ್ರು ಜೀಪ ಹತ್ತಿ ಶರವೇಗದಲ್ಲಿ ಹೋಗುದನ್ನು ಹನಿಮ್ಯಾಲ ಕೈ ಇಟಗೊಂಡ ಒಂದಿಬ್ರ ರೈತರ ನೋಡಿದ್ರು. ಜೀಪಿನ ವೇಗ್ಕ ದೂಳ ಎದ್ದು ಆಕಾಶದೆತ್ತರ ಬಹಬ್ಬಿಕೊಂಡಿತ್ತು, ಕಣ್ಣು ಉಜ್ಜಿಕೊಂಡು ರೈತರು ಮುಂದ ಸಾಗಿದ್ರು .
ಡಿ.ಸಿ ರೈತರ ಜೋತಿ ಸರಿಯಾಗಿ ವತರ್ಿಸಲಿಲ್ಲ. ರೈತ ಸಂಘದ ಸದಸ್ಯ ಮುದ್ದಪ್ಪನ ಕಣ್ಣು ಕೆಂಪೇರಿದವು , ಯಾಕ್ರೀ .. ರೈತರು ದೇಶದ ಬೆನ್ನುಲುಬು ಹಾಂಗ ಹಿಂಗ ಅಂತ ಎಲ್ಲಂದರಲ್ಲಿ ಹೇಳ್ತಿರಿ, ಆದ್ರ ಈಗ ರೈತನ ಬೆನ್ನ ಮುರುದ್ರು ವಂಚೂರು ಹೊಳ್ಳಿ ನೋಡವಲ್ಲರೆಲ್ಲ , ನೌಕರಿ ಸಾಕಾಗೇತೇನ ನಿಮಗೂ ಅಂತ ಅಬ್ಬರಿಸಿದ.
ನೋಡ್ರಿ ನೀವ ಹಿಂಗ ದಾಂದ್ಲಿ ಮಾಡಿದ್ರ ಪೋಲಿಸರ್ನ ಕರಸ್ಬೇಕಾ ಕ್ಕತಿ , ಹುಷಾರ ಇರಿ,ಇನ್ನ ಪರಿಹಾರ ಜಾರಿ ಮಾಡಿಲ್ಲ. ಜಾರಿ ಆದ್ರ ಅವ್ನ ನಾ ಮನಿಗಿ ವೈತೀನೇನ, ಹುಚ್ಚುಚ್ಚರಂಗ ಮಾತಾಡಬ್ಯಾಡ್ರೀ ಈಗ ಹ್ಯಾಂಗ ಬಂದಿರಿ ಹಾಂಗ ದಾರಿ .ಹಿಡದ ಸುಮ್ನ ಮನಿಕಾಣ್ರಿ ಇಲ್ಲಂದ್ರ, ಬ್ಯಾರೇನ ಆಕ್ಯೆತಿ ಅಂತ ಡಿ.ಸಿ ತನ್ನ ತಿರುಗು ಕುಚ್ರಿಮ್ಯಾಲ ಕುಂತ ದಿಮಾಕಿಲೆ ಮಾತಾಡಿದ.
ನಮ್ಮ ಕೈ ಎನನ್ನುದು ತೋರಸ್ತಿವಿ ಅಂತ ಸಡ್ಡ ಹೋಡೆದಂಗ ಪಕೀರಪ್ಪ ಹೇಳಿದಾಗ ಡಿ.ಸಿ. ಹನಿಮ್ಯಾಲ ಎರಡ ಹನಿ ಬೆವರ ಮೂಡಿತ್ತು. ನಡಿರ್ಲೆ ಇಂವಂಧ ಬಾಳ ಆಗೈತಿ ಅಂಥ ಹಸಿದ ಹುಲಿಮರಿ ಆಹಾರಕ್ಕ ಹಂವಸ್ಯಾಡುವಂಗ ರೈತ್ರು ಡಿ.ಸಿ ಆಪೀಸಿಂದ ಹೊರಗ ಬಂದ್ರು.
ಡಿ.ಸಿ.ಆಫೀಸದಾಗ ಕೆಲಸಾ ಮಾಡು ಪ್ಯೂವ್ನ ಓಡೋಡಿ ಬಂದು ರೈತರ್ನ ನಿಂತ್ಕೋರೀ ಯಣ್ಣಾ ನಿಮ್ಮ ಮುಂದ ಒಂದ ವಿಷ್ಯಾ ಹೇಳುದೈತಿ ಅಂತ ಸುತ್ತಮುತ್ತ ಕತ್ತ ತಿರುಗಿಸಿ ನೋಡಿ ಮುದ್ದಪ್ಪನ ಕಿವಿಯಾಗ ಬಾಯಿಟ್ಟು ಹೇಳಾಕ ಸುರುಮಾಡಿದ.
ನಿಮಗ ಬರಬೇಕಾದ ಬೆಳೆ ಹಾನಿ ದುಡ್ಡ ಯಾವಾಗೋ ಬಂದಾವ ಆದುಡ್ಡ ಸಚೀವ್ರು , ನಮ್ಮ ಡಿ.ಸಿ. ಸಾಹೇಬ್ರು ಮತ್ತ ನಿಮೂರಾಗಿರೋರ ತಿಂದ ಹೇತಾರ . ನಾ ಹಿಂಗ ಹೇಳಿನಂತ ಯಾರ ಮೂಂದು ಹೇಳ ಬ್ಯಾಡ್ರೀ ನಂದ ನೋಕ್ರೀ ಹ್ವಕ್ಕೈತಿ ಅಂತ ಪ್ಯೂನ ದೈನಾಸ ಬಿಟ್ಟ ಕೇಳಿದ. ಈ ವಿಷ್ಯಾ ಪೇಪರದಾಗ ಟಿ.ವಿ ಅವರ ಮುಂದ ಹೇಳ್ರಿ ಆಗೈತಿ ನೋಡ ಇವರ ಜಾತ್ರೆ ಅಂತ ಪ್ಯೂನ ಕದ್ದಿಲೆ ಮುದ್ದಗ ಅಂದ.
ಈ ವಿಷ್ಯಾ ಕೇಳಿ ದೇವರಹಳ್ಳಿ ರೈತರ ಮೈಯಾಗ ದೇವ್ವ ಹೊಕ್ಕಾಂಗ ಆತು. ರೈತ ಸಂಘದ ಸದಸ್ಯ ಇಡೀ ಜಿಲ್ಲಾ ತುಂಬ ಮಾಹಿತಿ ನೀಡಿದ. ರೈತ ಸಂಘದ ಅದೈಕ್ಷ ಶರಣಪ್ಪ ಗಾಯಾದ ಹುಲಿಗತೆ ಕೆರಳಿದ, ನಡಿರಿ ಮೊದಲ ಡಿ.ಸಿ ಆಫೀಸ ಕಿಲಿ ಹಾಕೂನು ಆಮ್ಯಾಲ ಆ ಸಚೀವ್ನ ಒಂದ ಕೈ ನೋಡಕೊಳ್ಳನ್ನು ಅಂತ ಸಿಡಿದೆದ್ದ.
ಈ ವಿಷ್ಯಾ ತಿಳುತಿದ್ದಾಂಗ ನಗರದಾಗಿರೋ ಮಂದಿ , ವ್ಯಾಪಾರಸ್ತರೂ ರೈತರಿಗೆ ಸಾತಕೊಟ್ರು. ಡಿ,ಸಿ.,ಗೆ ನಾಕ ಹಾಕೇ ಬಿಡೂನ ಅಂತ ನಿಧರ್ಾ ಮಾಡಿದ್ರು ಈ ಸುದ್ದಿ ತಿಳೂದ ತಡಾ ಡಿ,ಸಿ ಪರಾರಿ ಆಗಿ ಹೋಗಿದ್ದ. ಸಚಿವ ವಿದೇಶ ಪ್ರವಾಸದಾಗಿದ್ದ.
ದೇವರ ಹಳ್ಖಿ ರೈತರ ಕೂಗು ರಾಜದಾನಿ ವಳಗಿರೋ ಮಾಂತ್ರಿಗಳ ಕಿವಿಗೆ ತಾಗಿತು . ರಾಜದಾನಿ ಬಿಟ್ಟು ಕಿತಗೊಂಡು ಮಂತ್ರಿ ಕೆಂವ್ ಅಂತ ಓಡೋಡಿ ಬಂದ.ಅಂವ ಬರುದ್ರಾಗ ಕೆಲವು ರೈತರ ಮ್ಯಾಲ ಪೋಲಿಸ್ರು ಗೋಲಿಬಾರ ಮಾಡಿದ್ರು. ಕೆಲವು ರೈತರ ಮೈ ಹಣ್ಣಾಗುವಂಗ ಹಿಗ್ಗುಮುಗ್ಗಾ ತಳಿಸಿದ್ರು, ತಮ್ಮ ಜೈಲ ತುಂಬುವಷ್ಟು ರೈತರನ ಅದಾರಗ ತುರುಕಿದ್ರು. ಪೋಲಿಸರ ದೌರ್ಜನ್ಯ ರೈತರ ಮ್ಯಾಲ ಬಾಳ ನಡೀತು. ಈ ವಿಷ್ಯಾ ವಾರಗಟ್ಟಲೆ ಪೇಪರ ತುಂಬ ಸಿದ್ದಿ ಮಾಡಬಹುದ ಅಂತ ಪೇಪರ ಮಂದಿ ಕುಶಿಪಟ್ಟರು. ಟಿ ವಿ. ಮಂದಿ , ಸುದ್ದಿದೇ ಎಲ್ಲಿ ಅಲಿಬೇಕಿಲ್ಲ ನಾಕದಿನ ಹೊಳ್ಳಮುಳ್ಳೆ ಇದನ ತುರಕಿರಾತ ಅಮತ ಲೆಕ್ಕಾ ಹಾಕೊಂಡ್ರ.
ಕಡೆಗೂ ಮಂತ್ರಿಗಳೂ ನಗರಕ್ಕೆ ಬಂದ ತಲಪಿದ್ರ. ಅಟ್ಟೊತ್ತಿಗೆ ಸತ್ತ ರೈತರ ಸಂಖ್ಯೆ 16 , ಗಾಯಗೊಂಡವರ ಸಂಖ್ಯಡೆ 60 ವಟ್ಟು ಅಂತ ಪತ್ರಿಕೆಯವರು ನೀಡಿದ ಅಂದಾಜು ಸುದ್ದಿಮೇಲೆ ಮಂತ್ರಿಗಳು ತೀಳಕೊಂಡ ಹೀಮಗ ಆಗಬಾರದಾಗಿತ್ತ ಅಂತ ಲೊಚಗುಟ್ಟಿದ್ರು. ನೋಡ್ರಿ ನಿಮಗ ಹಿಂಗ ಆಗಬಾರ್ದು, ಇದೊಂದ ಸಾಲ ಆಗೇತಿ ದಯವಿಟ್ಟು ಕ್ಷಮೇ ಇರಲಿ . ನಮ್ಮ ಆಡಳಿತದಾಗ ಇದ ಮೊದಲ ಸಲ ಹಿಂಗಾದದ್ದು ರಂಬಸಿದ್ರು.
ಇದಾರಗ ಡಿ.ಸಿ .ಬಾಗಿ ಆಗ್ಯಾನ ಗೊತ್ತಾಗೈತಿ ಅಂವ್ನ ಬ್ಯಾರೆ ಕಡೆ ಟ್ರಾನ್ಸಫರ್ ಮಾಡಿಸ್ತಿನಿ, ಸಚೀವ್ರು ಇದರಾಗ ಭಾಗಿ ಆಗಿದ್ದ ಕರೇ ಆದ್ರ , ಅವರಿಗೆ ದೌಡ್ನ ಈ ಖಾತೆ ಬದಲಸ್ತಿನಿ, ದೇವಪ್ಪ ಗೌಡ್ರಗೆ 5 ಸಾವಿರೂ ದಂಡಾ ಹಾಕಸ್ತಿನಿ ಅಂತ ಬರವಸೆ ನೀಡಿದ.
ಮುಖ್ಯಮಂತ್ರಿ ಮಾತಾಡುವಾಗ ಎಲ್ಲ ಜನರು ಸಮಾಧಾನದಿಂದ ಇದ್ರು , ಸತ್ತ ರೈತರ ಕುಟುಂಬಕ್ಕೆ 50 ಸಾವಿರ ರೂಪಾಯಿ ಪರಿಹಾರ ನೀಡುವಾದಾಗಿ ಆಸ್ವಾಸನೆ ನೀಡಿದ್ರು . ಆದ್ರ ಮುಂದಿ ಸಲ ನನ್ನ ಹಾರಿಸಿ ತರೂದ ಮರಿಬ್ಯಾಡ್ರಿ . ನಿಂವ ನನ್ನ ತಂದಿ ತಾಯಿಗೋಳ ಅಂತ ಬೊಗಸ್ ಬಾಸನಾ ಮಾಡಿದಾಗ. ಮಂದಿ ಕುಶಿಯಾಗಿ ಕೇ ಕೇ ಹಾಕಿದ್ರ. ಆಗ ಮುದ್ದಪ್ಪನ ಕಣ್ಣಲ್ಲಿ ಕಣ್ಣೀರು ತುಂಬಿತುಳುಕುತ್ತಿದ್ದವು, ತನ್ನ ಹಸಿರು ಟಾವೆಲದಿಂದ ಕಣ್ಣೀರು ವರೆಸಿಕೊಂಡ.
ರಾಜಕರಣಿಗಳ ಕಣ್ಣಾಗ ರೈತರೂ ದಲಿತರ ತರಾ ಕಂಡಾಂಗ ಅನಿಸಿ ,ಮುದ್ದಪ್ಪ ಜನರ ಮದ್ಯದಿಂದ ಎದ್ದು ಮರೆಯಾಗಿ ಹೋದ. ಮಂತ್ರಿಗಳ ಭಾಷಣ ಮುಗಿದ ಮೇಲೆ ಜೋರಾಗಿ ಚಪ್ಪಾಳೆ ಶಬ್ದ ಕೇಳಿತು. ಮಂತ್ರಿಗಳೆ ಜೈ ವಾಗಲಿ , ಮಂತ್ರಿಗಳಿಗೆ ಜೈ ವಾಗಲಿ ಎಂಬ ಕೂಗು ಕೇಳುತ್ತಲೇ ಇತ್ತು.
 
 
 

‍ಲೇಖಕರು G

24 September, 2014

2 Comments

  1. Venkatesh K Janadri

    ಇಲ್ಲಿಯ ಕತೆಗಳು ತುಂಬಾ ಚೆನ್ನಾಗಿವೆ. ಹೊಸ ತಲೆಮಾರಿನವರ ಕತೆಗಳ ಜೊತೆಗೆ ಹಳೆಯ ತಲೆಮಾರಿನವರ ಮಾಗಿದ ಕತೆಗಳಿಗೂ ಸ್ಥಳವಕಾಶವಿದ್ದರೆ ಒಳ್ಳೆಯದು. ನಾನೂ ಒಂದೆರಡು ಕತೆಗಳನ್ನು ಬರೆದಿರುವೆ ಅವುಗಳನ್ನು ಸೇರ್ಪಡಿಸಲು ಏನು ಮಾಡಬೇಕು ತಿಳಿಸಿ. ಧನ್ಯವಾದಗಳು.

    • Tirupati Bhangi

      parvaagilla kalisi sir

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading