ಆಧುನಿಕ ರಂಗಭೂಮಿಯಲ್ಲಿ ಸಂಚಲನವನ್ನು, ಬದಲಾವಣೆಯ ಬಿರುಗಾಳಿಯನ್ನು ತಂದ
ಏವಂ ಇಂದ್ರಜಿತ್,
ಪಗಲಾ ಘೋಡಾ
ಬಾಕಿ ಇತಿಹಾಸ್
ಮುಂತಾದ ನಾಟಕಗಳನ್ನು ಬರೆದು ನಿರ್ದೇಶಿಸಿ ಖ್ಯಾತರಾದ
ಬಾದಲ್ ಸರ್ಕಾರ್ (86) ಇನ್ನಿಲ್ಲ.
ಸಮಕಾಲೀನ ರಂಗ ದಿಗ್ಗಜನಿಗೆ ನಮನ
ನಿನ್ನೆ ಶುಕ್ರವಾರ 13-5-2011 ರ ರಾತ್ರಿ ತಮ್ಮ ಮನೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ.
ಬಾದಲ್ ಸರ್ಕಾರ್ ಬಗೆಗಿನ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ
–
ಸಮುದಾಯ ಶ್ರದ್ಧಾಂಜಲಿ
ಆಧುನಿಕ ಭಾರತೀಯ ರಂಗಭೂಮಿಯಲ್ಲಿ ಸಂಚಲನವನ್ನು, ಬದಲಾವಣೆಯ ಬಿರುಗಾಳಿಯನ್ನು ತಂದ
ಏವಂ ಇಂದ್ರಜಿತ್, ಪಗಲಾ ಘೋಡಾ (ಹುಚ್ಚು ಕುದುರೆ)
ಮಿಛಿಲ್ (ಮೆರವಣಿಗೆ)
ಬೋಮಾ, ಬಾಕಿ ಇತಿಹಾಸ್ ಮುಂತಾದ ನಾಟಕಗಳನ್ನು ಬರೆದು ನಿರ್ದೇಶಿಸಿ ಖ್ಯಾತರಾದ
ಬಾದಲ್ ಸರ್ಕಾರ್ (86) ಇನ್ನಿಲ್ಲ. ನಿನ್ನೆ ಶುಕ್ರವಾರ 13-5-2011 ರ ರಾತ್ರಿ ತಮ್ಮ ಮನೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ.
ಭಾರತೀಯ ರಂಗಭೂಮಿಯ ಹೊಸ ದಿಕ್ಕು ಎನ್ನಲಾಗುವ ಮೂರನೆಯ ರಂಗಭೂಮಿಯ ಹರಿಕಾರ.
ಜಾತ್ರಾ ನಾಟಕಗಳ ತಂತ್ರವನ್ನು ಬಳಸಿ ಕಡಿಮೆ ಖರ್ಚಿನ (ಬಡತನದಲ್ಲಿ) ರಂಗಭೂಮಿಯನ್ನು ಬೆಳೆಸಿದವರು ಇವರು.
70 ದಶಕದ ಅಂಚಿನಲ್ಲಿ ಬೆಂಗಳೂರಿಗೆ ಬಂದಿದ್ದ ಇವರು ಇಲ್ಲಿನ ಸಮುದಾಯದ ನಟರುಗಳಿಗೆ
ರಂಗ ತರಬೇತಿ ಕಾರ್ಯಾಗಾರವನ್ನು ನಡೆಸಿಕೊಟ್ಟಿದ್ದರು. ಸಮುದಾಯದ ಜಾಥಾ ಇವರ ಮೂರನೆಯ ರಂಗಭೂಮಿ ಕಲ್ಪನೆಯಿಂದ
ಪ್ರೇರಿತವಾಗಿದ್ದಿತು ಎಂದರೆ ತಪ್ಪಲ್ಲ. ಇವರ ಏವಂ ಇಂದ್ರಜಿತ್ ನಾಟಕವನ್ನು
ಕನ್ನಡಿಸಿ ನಿರ್ದೇಶಿದ್ದವರು ಬಿ.ವಿ.ಕಾರಂತರು. ಬೆಂಗಳೂರು ಮತ್ತು ಮೈಸೂರು ಸಮುದಾಯ ತಂಡಗಳು
ಇವರ ಬೋಮಾ ಮತ್ತು ಮೆರವಣಿಗೆ ನಾಟಕಗಳನ್ನು ಪ್ರಯೋಗಿಸಿವೆ. ಮೈಸೂರಿನಲ್ಲಿ ಗಂಗಾಧರಸ್ವಾಮಿ,
ಬೆಂಗಳೂರಿನಲ್ಲಿ ಶಶಿಧರ್ ಭಾರಿಘಾಟ್ ಅವರುಗಳು ಈ ನಾಟಕಗಳನ್ನು ನಿರ್ದೇಶಿಸಿದ್ದರು.
ಪ್ರೇಮಾಕಾರಂತ ಅವರು ಹುಚ್ಚುಕುದುರೆ (ಅನುವಾದ ಬಿ.ವಿ.ಕಾರಂತ) ನಾಟಕವನ್ನು ನಿರ್ದೇಶಿಸಿದ್ದಾರೆ.
ಕನ್ನಡ ರಂಗಭೂಮಿಗೆ ತೀರ ಹತ್ತಿರವಾಗಿದ್ದ ಈ ರಂಗ ದಿಗ್ಗಜನಿಗೆ ಸಮುದಾಯ ಆತ್ಮೀಯ ನಮನ ಹಾಗು ಶ್ರದ್ಧಾಂಜಲಿಯನ್ನು ಸಲ್ಲಿಸುತ್ತದೆ.
ರವೀಂದ್ರನಾಥ ಸಿರಿವರ
ಕಾರ್ಯದರ್ಶಿ
ಸಮುದಾಯ ಬೆಂಗಳೂರು








ಬಾದಲ್ ಸರ್ಕಾರ್ ಇನ್ನಿಲ್ಲ ಎಂಬ ಸುದ್ದಿ ಅಪ್ಪಳಿಸಿದಾಗ, ಅವರದೇ ನಾಟಕ ಮಾಡಲು ತಯಾರಿ ನಡೆಸಿದ್ದರು ವಿಜಯನಗರ ಬಿಂಬದ ಮಕ್ಕಳು. ನಿಜವಾಗಲೂ ಅವರಿಗೆ ಬಾದಲ್ ಸರ್ಕಾರ್ ಪರಿಚಯ ಆದದ್ದು ಹಂಬಲ್ಪುರ ನಾಟಕದಿಂದ . ಬಾದಲ್ ಸರ್ಕಾರ್ ರವರ ಹಟ್ಟಮಳರ್ ಒಪಾರೆ ನಾಟಕದ ಥೀಮ್ ಮಕಳ ಮುಗ್ಧ ಮನಸ್ಸಿಗೂ ವಹ್ ವಹ್ ಎನಿಸಿತ್ತು . ಮಕ್ಕಳು ತುಂಬ ಖುಶಿಯಿಂದ ಆ ನಾಟಕ ತಯರು ಮಾಡಿಕೊಂಡಿದ್ದರು , ನಾನೂ ಕೂಡ ಅವರ ಕಲ್ಪನೆಗೆ, ಸಮಾಜದ ಬಗೆಗಿನ ಅವರ ಕಾಳಜಿಗೆ ಮಾರು ಹೋಗಿದ್ದೆ. ಮನಸ್ಸು ಅವರ ನಾಟಕದ ಪ್ರದರ್ಶನಕ್ಕೆ ತಯಾರಗುತ್ತಿದ್ದಾಗ ಅವರ ನಿಧನದ ವಾರ್ತೆ ಬಂತು. ಆ ರಂಗ ದಿಗ್ಗಜನಿಗೆ ವಿಜಯನಗರಬಿಂಬದ ಪರವಾಗಿ ಹ್ರುತ್ಪೂರ್ವಕ ನಮನಗಳು ಮತ್ತು ಅಶೃತಪ್ತ ಶ್ರದ್ಧಾಂಜಲಿ.ನೆನ್ನೆ ಪ್ರದರ್ಶನ ಚೆನ್ನಾಗಿ ಮೂಡಿಬಂತು ..ಅದನ್ನು ಆ ರಂಗ ದಿಗ್ಗಜನಿಗೆ ಅರ್ಪಿಸುತ್ತಿದ್ದೇವೆ
ಡಾ. ಕಶ್ಯಪ್
ಕಾರ್ಯದರ್ಶಿ
ವಿಜಯನಗರ ಬಿಂಬ
ಮಕ್ಕಳ ರಂಗ ಶಾಲೆ